ಅನ್ನ ಭಾಗ್ಯ : ಹಸಿದವನ ತುತ್ತಿನ ಮೇಲೇಕೆ ಉಳ್ಳವರ ಕಣ್ಣು?
-ವೆಂಕಟೇಶ ಕೆ ಜನಾದ್ರಿ
ಸಕರ್ಾರದ ಅನ್ನ ಭಾಗ್ಯ ಯೋಜನೆಯ ಮೇಲೆ ಇತ್ತೀಚಿಗೆ ಉಳ್ಳವರೊಂದಿಗೆ ಹಸಿವು, ಬಡತನದ ಬಗ್ಗೆ ನೊಂದು ಕತೆ ಕವಿತೆ ಬರೆದ ಸಾಹಿತಿಗಳೂ ಸಹ ಕೊಂಕಿನ ಮಾತನಾಡುತ್ತಿರುವುದನ್ನು ಲೇವಡಿ ಮಾಡುತ್ತಿರುವುದನ್ನು ನೋಡಿ ಮನಸ್ಸಿಗೆ ಹಿಂಸೆಯೆನಿಸುತ್ತದೆ. ಹಸಿವಿನಿಂದ ಬಳಲುತ್ತಿರುವವರಿಗೆ ಒಂತುತ್ತು ಅನ್ನ ನೀಡುವ ಈ ಅನ್ನಭಾಗ್ಯ ಯೋಜನೆಯು ನಿಜಕ್ಕೂ ಒಂದೊಳ್ಳೆಯ ಯೋಜನೆಯಾಗಿದೆ. ಹಸಿವಿನ ಬೇಗೆಯಲ್ಲಿದ್ದವರಿಗೆ ಒಂದಿಷ್ಟು ಅಕ್ಕಿ ಕೊಡುವುದರಿಂದ ಅವರು ಸೋಮಾರಿಗಳಾಗುತ್ತಾರೆ. ಅಕ್ಕಿ ಉಚಿತವಾಗಿ ಸಿಗುವುದರಿಂದ ಅಕ್ಕಿ ಖರೀದಿಸಿದ್ದರೆ ವ್ಯಯವಾಗಬಹುದಾದ ಉಳಿಕೆ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಒಟ್ಟಾರೆ ದುಡಿಯದೇ ಕುಳಿತು ಉಣ್ಣುತ್ತಾರೆ ಇವರಿಗೇಕೆ ಉಚಿತವಾಗಿ ಅನ್ನ ಕೊಡಬೇಕು? ಇದು ಸಕರ್ಾರದ ಮೂರ್ಖ ನಿರ್ಧರವೆನ್ನುವ ರೀತಿಯಲ್ಲಿ ಈ ಯೋಜನೆ ವಿಮರ್ಶೆಗೊಳಗಾಗುತ್ತಿದೆ.

ಈ ರೀತಿ ವಾದಿಸುವವರಿಗೆ ನನ್ನ ಕೆಲವು ಪ್ರಶ್ನೆಗಳು: ಒಂದು ವೇಳೆ ನಿಮಗೂ ಈ ಯೋಜನೆ ಅನ್ವಯವಾಗುತ್ತಿದ್ದರೆ ಎಲ್ಲರಿಗಿಂತ ಮುಂಚೆ ಕೈಚೀಲ ಹಿಡಿದುಕೊಂಡು ಸರದಿಯಲ್ಲಿ ನೀವು ನಿಲ್ಲುತ್ತಿರಲಿಲ್ಲವೇ? ಕೈಗೆ ಸಿಗದ ದ್ರಾಕ್ಷಿ ಹುಳಿ ಎಂಬಂತೆ ನೀವು ಈ ಯೋಜನೆಯ ಫಲನಾಭವಿಗಳಲ್ಲದ ಕಾರಣ ಈ ಕೊಂಕೇ? ಒಂದು ವೇಳೆ ನೀವು ಸರ್ಕಾರಿ ನೌಕರರಾಗಿದ್ದರೆ ನಿಮಗೆ ಆರ್ಥಿಕವಾಗಿ ಅವಶ್ಯವಿರಲಿ ಇಲ್ಲದಿರಲಿ ಪ್ರತಿ ಆರು ತಿಂಗಳಿಗೊಮ್ಮೆ ಸರ್ಕಾರ ಕೊಡುವ ತುಟ್ಟಿ ಭತ್ಯೆಯನ್ನು ವರ್ಷಕ್ಕೊಮ್ಮೆ ಕೊಡುವ ವೇತನ ಬಡ್ತಿಯನ್ನು ಸದ್ದಿಲ್ಲದೇ ಪಡೆಯುತ್ತೀರಲ್ಲ ಒಂದಾದರೂ ತುಟ್ಟಿಭತ್ಯೆ/ವೇತನಬಡ್ತಿಯನ್ನು ಉದಾರ ಮನಸ್ಸಿನಿಂದ ಬಿಟ್ಟಿದ್ದೀರಾ? ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯ ಪ್ರತಿವರ್ಷಕ್ಕೊಮ್ಮೆ ವೇತನ ಬಡ್ತಿಯನ್ನು ಪಡೆಯುವ ನೀವು ಸೋಮಾರಿಗಳಾಗುವುದಿಲ್ಲವೇ? ಅವಶ್ಯಕತೆಗಿಂತ ಹೆಚ್ಚಿಗೆ ದೊರೆಯಬಹುದಾದ ಈ ಅಧಿಕ ಮೊತ್ತವನ್ನು ನೀವೂ ದುರುಪಯೋಗಪಡಿಸಿಕೊಳ್ಳುವುದಿಲ್ಲವೇ? ಹಸಿದವರಿಗೆ ನೀಡುವ ಅನ್ನದ ಬಗ್ಗೆ ಏಕೀ ಆಕ್ರೋಶ ನನಗೆ ತಿಳಿಯುತ್ತಿಲ್ಲ.
ತೀರಾ ಬಡವರಿಗಿಂತ ಒಂಚೂರು ಆರ್ಥಿಕವಾಗಿ ಉಳ್ಳವರು (ನನ್ನನ್ನೊಳಗೊಂಡು) ಯೋಚಿಸಬೇಕಾದ ವಿಷಯವೆಂದರೆ, ಪ್ರದಾನ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿಯವರು ಇತ್ತೀಚಿಗೆ ಅಡುಗೆ ಅನಿಲದ ಮೇಲೆ ನೀಡುವ ರಿಯಾಯ್ತಿಯನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಬಿಡಲು ಒಂದು ಅವಕಾಶ ನೀಡಿದ್ದಾರಲ್ಲ ನಾವೆಷ್ಟು ಜನ ಸ್ವಯಂಪ್ರೇರಣೆಯಿಂದ ಈ ರಿಯಾಯ್ತಿಯನ್ನು ಬಿಟ್ಟುಕೊಟ್ಟಿದ್ದೇವೆ? ಹಾಗೆ ಬಿಟ್ಟುಕೊಡುವ ಮೂಲಕ ನಾವೂ ಒಂದಿಷ್ಟು ಉದಾರತನ ತೋರುವ ಮನಸ್ಸೇಕೆ ಮಾಡುವುದಿಲ್ಲ?
ಸರ್ಕಾರದ ಹಲವಾರು ಯೋಜನೆಗಳು ಮೂಲತಃ ಚೆನ್ನಾಗಿಯೇ ಇರುತ್ತವೆ, ಆದರೆ ಅವುಗಳ ಅನುಷ್ಠಾನದಲ್ಲಿ ಸಮಸ್ಯೆಗಳಿರುತ್ತವೆ ಹಾಗಂತ ಸಾರಾಸಗಟಾಗಿ ಯೋಜನೆಯನ್ನೇ ಅಲ್ಲಗೆಳೆಯುವುದಲ್ಲ. ಯೋಜನೆಗಳು ವಿಫಲವಾಗಲು ನಾವೆಷ್ಟರ ಮಟ್ಟಿಗೆ ಕಾರಣರೆಂಬುದನ್ನು ಯೋಚಿಸಬೇಕು. ಅಲ್ಲಿ ನಮ್ಮ ಪಾತ್ರ ಏನೆಂಬುದನ್ನು ಚಿಂತಿಸಬೇಕಲ್ಲವೇ? ವ್ಯಕ್ತಿ ಸದಾ ತನ್ನ ಹಸಿವಿನ ಬಗ್ಗೆ ಚಿಂತಿಸುವವ ಕೇವಲ ಒಬ್ಬ ಸ್ವಾರ್ಥಿಯಾಗಿರುತ್ತಾನೆ, ತನ್ನ ಹಸಿವಿನೊಂದಿಗೆ ಇನ್ನೊಬ್ಬರ ಹಸಿವಿನ ಕುರಿತು ಚಿಂತಿಸುವವ ಮಾನವನಾಗುತ್ತಾನೆ, ಇನ್ನೊಬ್ಬರ ಹಸಿವನ್ನೇ ತನ್ನ ಹಸಿವೆಂದು ಸಂಕಟಪಡುವವ ಮಹಾತ್ಮನಾಗುತ್ತಾನೆ, ಸಂತ, ಶರಣನಾಗುತ್ತಾನೆ ಎಂಬಂತೆ ಶರಣರು ನುಡಿದ ನಡೆದಾಡಿದ ಈ ಕಲ್ಯಾಣದ ನಾಡಿನಲ್ಲಿ ಒಂಚೂರು ತಿಳಿದವರೆನಿಸಿಕೊಂಡವರಾದರೂ ಈ ಕುರಿತು ಯೋಚಿಸಿ, ಕನಿಷ್ಠ ನಾವು ಇನ್ನೊಬ್ಬರ ಹಸಿವಿನ ಕುರಿತು ಚಿಂತಿಸುವ ಮಾನವರಾದರೂ ಆಗಬೇಕಲ್ಲವೇ?






A good question indeed.
ಒಳ್ಳೆಯ ಪ್ರಶಸ್ತಿಯನ್ನೇ ಹಾಕಿದ್ದೀರಿ.
“ಸರ್ಕಾರದ ಹಲವಾರು ಯೋಜನೆಗಳು ಮೂಲತಃ ಚೆನ್ನಾಗಿಯೇ ಇರುತ್ತವೆ, ಆದರೆ ಅವುಗಳ ಅನುಷ್ಠಾನದಲ್ಲಿ ಸಮಸ್ಯೆಗಳಿರುತ್ತವೆ” ಎಂಬ ಮಾತಿನಲ್ಲಿ ನಿಮ್ಮ ಪ್ರಶ್ನೆಗೆ ನೀವೇ ಉತ್ತರ ಕೊಟ್ಟಿದ್ದೀರಿ!
ಕನಸು ಕಂಡರೆ ಸಾಕೇ? ಯೋಜನೆಗಲಿಗಿಂತಾ ಅವುಗಳ ಅನುಷ್ಥಾನ ಮುಖ್ಯವಲ್ಲವೆ?
ಎಲ್ಲಾ ಕಡೆ ಖೋಟಾ ಬಿ.ಪಿ.ಎಲ್. ಕಾರ್ಡ್ ಗಳು!
ಐದು ಸಾವಿರ ಬೆಲೆಯ ಬೂಟು ಧರಿಸುವ ಮನುಷ್ಯ ಹಳದಿ ಕಾರ್ಡ್ ಹಿಡಿದು ಬರುತ್ತಾನೆ! ಅವನ ಬಗ್ಗೆ ದೂರನ್ನು ಯಾರಿಗೆ ಹೇಳಬೇಕೆಂಬ ಬಗ್ಗೆ ಸರ್ಕಾರ ಏನಾದರೂ ವ್ಯವಸ್ಥೆ ಮಾಡಿದೆಯೇ?
ನಿಜವಾದ ಬಡವರು, ಹಸಿದವರು, ಗತಿ ಇಲ್ಲದವರಿಗೆ ರೇಶನ್ ಕಾರ್ಡ್ ಗಳ ಬಗ್ಗೆ ಗೊತ್ತೂ ಇರುವುದಿಲ್ಲ! ಇನ್ನು ಪುಗಸಟ್ಟೆ ಅಕ್ಕಿಯಂತೂ ಅವರಿಗೆ ಕನಸೇ!
ಇದು ನಮ್ಮ ತೆರಿಗೆ ಹಣ ಸಾರ್! ಇದು ಅನ್ಯಾಯವಾಗಿ ಉಳ್ಳವರ ಪಾಲಾಗುತ್ತಿದ್ದರೆ ಹೊಟ್ಟೆ ಉರಿಯುತ್ತದೆ. ನಿಜವಾದ ಬಡವ ಫಲಾನುಭವಿ ಆದರೆ ಅದು ಬೇರೆ ಮಾತು. ಆಗ ಯಾರೂ ಪ್ರತಿ ಹೇಳುವುದಿಲ್ಲ.
ದುಡಿಯುವ ಅರ್ಹತೆ ಇರುವ ಯಾರಿಗೂ ಯಾವುದನ್ನೂ ಪುಗಸಟ್ಟೆ ಕೊಡಬಾರದು. ತೀರಾ ಕೈಲಾಗದ ಮುದುಕರು, ರೋಗಿಗಳು, ನಿಶ್ಶಕ್ತರು ಇಂತಹವರಿಗೆ ಮಾತ್ರ ಈ ವ್ಯವಸ್ಥೆ ಇರಬೇಕು.
ಬಡವನಿಗೆ ಬೇಕಾದದ್ದು ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಡುವ ಕೆಲಸ; ಅದರಿಂದ ಬರಬೇಕಾದ ಪ್ರಾಮಾಣಿಕ ಆದಾಯ.
ಭಾಗ್ಯದ ಹೆಸರಿನ ಸರ್ಕಾರಿ ಭಿಕ್ಷೆ ದುಡಿಯುವ ತ್ರಾಣ ಇರುವ ಯಾರಿಗೂ ಬೇಕಾಗಿಲ್ಲ.
ಸರ್ಕಾರ ಇದನ್ನು ಮಾಡೀತೆ? Vote bank ರಾಜಕೀಯಕ್ಕಿಂತ ಸರ್ಕಾರದ ದೃಷ್ಟಿ ಬೇರೆಡೆ ಹರಿದೀತೆ? ಸಂಭವ ಕಡಿಮೆ!
akrama nadeyuvudannu nodiyu summaniruvudu tappallave, dooru needi akrama tadeyabahudallave kiran
ಕಿರಣ್ನಲ್ಲಿ ಕಿಚ್ಚಿದೆ. ಇದೇ ನಮ್ಮ ಹೋರಾಟ.
ಅನಿರುಧ್
ಯಾವುದೇ ಯೋಜನೆ ತಲುಪಬೇಕಾದವರಿಗೆ ತಲುಪಿದಲ್ಲಿ ಯಾವುದೇ ಆಕ್ಷೇಪಣೆಗಳಿರುವುದಿಲ್ಲ. ಉಚಿತವಾಗಿ ಸಿಗುವುದಾದಲ್ಲಿ ‘ಅಹ ‘ರಲ್ಲದವರೂ ಅಹತೆ ದಕ್ಕಿಸಿಕೊಂಡು ಕೈಯೊಡ್ಡುವವವರ ಮಧ್ಯೆ ಅಹವುಳ್ಳವರು ಕಳೆದುಹೋಗುವ ಪರಿಸ್ಥಿತಿಯುಂಟಾಗಬಾರದೆಂಬ ಕಳಕಳಿಯಷ್ಟೆ. ಇಂತಹ ಪರಿಸ್ಥಿತಿಯುಂಟಾಗದಂತೆ ನಿಭಾಯಿಸುವ ತಾಕತ್ತಿಲ್ಲದ ಮೇಲೆ ಎಷ್ಟು ‘ಭಾಗ್ಯ’ಗಳನ್ನು ಘೋಷಣೆ ಮಾಡಿದರೂ ಅಷ್ಟೆ. ಬಡವ ಬಡವನೇ!