ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಷರ ಪ್ರೀತಿಯ ‘ಕನ್ನಡ ಟೈಮ್ಸ್’

kannadatimesposter-3f.jpg  kt11.jpg

ಒಂದು ಕನಸು ಹಿಡಿದು ನಡೆವವರ ದಾರಿಯ ಯಶಸ್ಸು ಎಲ್ಲರಿಗೂ ಖುಷಿಯನ್ನು, ಭರವಸೆಯನ್ನು ತುಂಬಿಕೊಡುತ್ತದೆ. ನಮ್ಮೆಲ್ಲರ ಪ್ರೀತಿಯ ಕನ್ನಡ ಟೈಮ್ಸ್ ವಾರಪತ್ರಿಕೆ ಒಂದು ವರ್ಷ ಪೂರೈಸಿರುವುದು ಅಂಥ ಭಾವನೆಯನ್ನು ತಂದಿದೆ.

ಕನ್ನಡ ಟೈಮ್ಸ್ ಒಂದು ಪುಟ್ಟ ಗುಂಪಿನ ಸಾಹಸ. ಆದರೆ ಇಡೀ ನಾಡಿನ ಜನತೆಯನ್ನು ಅತ್ಯಲ್ಪ ಸಮಯದಲ್ಲೇ ಗೆಲ್ಲುವಲ್ಲಿ ಮಾತ್ರ ಅದು ಹಿಂದುಳಿಯಲಿಲ್ಲ. ಇದಕ್ಕೆ ಕಾರಣವಾಗಿರುವುದು ಅದರ ನಿಲುವು ಮತ್ತು ಆರೋಗ್ಯಕರ ಚರ್ಚೆಯನ್ನು ನಡೆಸಿಕೊಂಡು ಹೋಗುವುದರ ಕಡೆಗಿನ ಬದ್ಧತೆ. 

kt2.jpgಟ್ಯಾಬ್ಲಾಯ್ಡ್ ಆಕಾರದಲ್ಲಿರುವ, ಆದರೆ ಮ್ಯಾಗಝಿನ್ ಸ್ವರೂಪದ ಪತ್ರಿಕೆ ಇದು. ಕ್ರೈಮು, ಹಿಂಸೆಯ ವಿಷಯಗಳ ಅತಿರಂಜಿತ ಬರಹಗಳ ಮೂಲಕ ಓದುಗರನ್ನು ಸೆಳೆಯುವ, ಅವರ ಮನಸ್ಸಿನ ಆರೋಗ್ಯವನ್ನೂ ಹಾಳುಗೆಡಹುವ ನಾಯಿಕೊಡೆಗಳಂಥ ಪತ್ರಿಕೆಗಳ ಹಾವಳಿಯೇ ಇರುವಾಗ ಇಂಥದೊಂದು ಸ್ವಚ್ಛ ಮನಸ್ಸಿನಿಂದ ಮಾರುಕಟ್ಟೆಗಿಳಿದು ಗೆಲ್ಲುವುದೇ ಒಂದು ದೊಡ್ಡ ಹೆಜ್ಜೆ. ಕನ್ನಡ ಟೈಮ್ಸ್ ಅಕ್ಷರ ಪ್ರೀತಿಯ ಮನಸ್ಸು ಉಳ್ಳದ್ದು. ಆ ಮನಸ್ಸೇ ಅದರ ಹೆಜ್ಜೆಗಳನ್ನು ಗಟ್ಟಿಗೊಳಿಸಿದೆ. ಕಿ ರಂ ನಾಗರಾಜ್, ಯು ಆರ್ ಅನಂತಮೂರ್ತಿ ಮೊದಲಾದ ಲೇಖಕರೆಲ್ಲರ ಬರಹಗಳೊಂದಿಗೆ, ಸಮಕಾಲಿನ ಜರೂರುಗಳ ಚರ್ಚೆಯೊಂದಿಗೆ ಬೆಳಗುತ್ತಿರುವ ಕನ್ನಡ ಟೈಮ್ಸ್ ಇದೀಗ ಒಂದು ವರ್ಷ ಪೂರೈಸುತ್ತಿದೆ. ವಾರ್ಷಿಕ ವಿಶೇಷವನ್ನು ಜನರೇಷನ್ ನೆಕ್ಸ್ಟ್ ಸಂಚಿಕೆಯೊಂದಿಗೆ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಕಳೆದ ಒಂದು ವರ್ಷದಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ಪ್ರಮುಖ ಬರಹಗಳನ್ನು ಒಟ್ಟಿಗೆ ಸಂಕಲಿಸಿ ಒಂದು ಪುಸ್ತಕವನ್ನೂ ಹೊರತರುತ್ತಿದೆ.

ಈ ಎಲ್ಲ ಸಾಹಸದ ಕನ್ನಡ ಟೈಮ್ಸಿಗೆ ಅವಧಿಯ ಅಭಿನಂದನೆಗಳು.  

‍ಲೇಖಕರು avadhi

27 February, 2008

3 Comments

  1. uniquesupri

    ಬಿಡುವಾದಾಗಲೆಲ್ಲ ನಾನು ಕನ್ನಡ ಟೈಮ್ಸ್ ಓದುತ್ತೇನೆ, ವರ್ಷ ಪೂರೈಸಿದ ಹರುಷಕ್ಕಾಗಿ ಟೈಮ್ಸ್ ಗೆ ನನ್ನ ಶುಭಾಶಯಗಳು. ಕಂಗ್ರಾಟ್ಸ್

  2. Naveed Ahamed Khan

    bahala anumaanadindale odalu prarambhisida kannada
    times patrike indu vaarada anivaryavagide.Vasthavakke
    hathiravagiruva,arthapoorna lekhanagalu manassannu
    praphullagolisuthive.Ella vayomanadavara achumemchina
    patrikeyagide.Pathrike yaavude reethiyalli nintha
    neeragade chalanasheela gunavannu alavadisikollali
    endu nanna hrudaya poorvaka abhilashe.- Tumkurnaveed
    vaas

  3. V R Carpenter

    priya Nataraj Sir nimma prayatnakke nammadoo sahakaaraviruttade
    ee praytna nirantara jeevantike ulisikollali

    T.S.Goravar
    V R Carpenter

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading