ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆಗೆ ವೇದಿಕೆ.
ಪ್ರಜಾವಾಣಿ ‘ಸಾಪ್ತಾಹಿಕ ಪುರವಣಿ’ಯಲ್ಲಿ ಕೆ ವಿ ಅಕ್ಷರ ಅವರ ‘ಹರಕೆ ಹರಾಜು’ ಲೇಖನ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ. ಅಕ್ಷರ ಬರೆದಿರುವ ಈ ಲೇಖನ ಯಾವ ದಿಕ್ಕಿನಲ್ಲಿದೆ ಎಂದು ಆಶ್ಚರ್ಯವಾಗುತ್ತಿದೆ. ಮಡೆ ಸ್ನಾನದಂತಹ ಆಚರಣೆಯನ್ನೂ, ಕ್ರಿಕೆಟ್ ಆಟಗಾರರ ಹರಾಜನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗಿದೆ.
ಈ ಲೇಖನ ಓದಿದವರು ಪರ ವಿರುದ್ಧ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದಾರೆ. (ಅ)ತ್ರಾಡಿ ಸುರೇಶ ಹೆಗ್ಡೆ ಮತ್ತು (ಆ)ದಿತ್ಯ ಭಾರದ್ವಾಜ್ ಅಭಿಪ್ರಾಯಗಳು ಇಲ್ಲಿವೆ.
ನಿಮ್ಮ ಅಭಿಪ್ರಾಯವನ್ನೂ ತಿಳಿಸಿ
++
ಇಲ್ಲಿ ನಾನು ಓರ್ವ ಸಾಮಾನ್ಯ ಓದುಗನಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಓರ್ವ ಬರಹಗಾರನಾಗಿ ಅಲ್ಲ.
ಏಕೆಂದರೆ, ಇವರೀರ್ವರ ಅನಿಸಿಕೆಗಳಿಗೆ ಪ್ರತಿಕ್ರಿಯಿಸಲು ಅವರ ಮಟ್ಟದ ಬರಹಗಾರ ನಾನಲ್ಲ.
ಮಕ್ಕಳನ್ನು ಮೇಲಿಂದ ಎಸೆಯುವುದು ಅಪಾಯಕಾರಿ ಎಂದ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಪುರಾವೆ ನೀಡಿದ್ದಾರಾ… ದುಷ್ಪರಿಣಾಮದ ಬಗ್ಗೆ ಅಧ್ಯಯನ ಮಾಡಿದ್ದಾರಾ ಅನ್ನುವ ಜೋಗಿಯವರ ಅನಿಸಿಕೆಗಳನ್ನು ಓದುವಾಗ ವಿಚಿತ್ರ ಅನಿಸ್ತಾ ಇದೆ.
ಇವರು ಅದೇ ಜೋಗಿಮನೆ ಜೋಗೀನಾ?!
“ಬಚ್ಚಲು ಮನೆಯಲ್ಲಿ ಜಾರುತ್ತೆ ಮಗೂ, ಜಾಗ್ರತೆ…” ಅನ್ನುವ ಅಪ್ಪನನ್ನೋ, ಅಮ್ಮನನ್ನೋ ಮಕ್ಕಳು “ಅಧ್ಯಯನ ಮಾಡಿದ್ದೀರಾ? ಇಲ್ಲಿ ಎಷ್ಟು ಮಂದಿ ಬಿದ್ದಿದ್ದಾರೆ? ಯಾವ ಯಾವ ಮೂಳೆ ಮುರಿದುಕೊಂಡಿದ್ದಾರೆ?” ಎಂದು ಮರು ಪ್ರಶ್ನೆ ಮಾಡಿದಂತಿದೆ ಇದು.
ಅಧ್ಯಯನದ ನಂತರವೇ ಬಡಿಸಿದ್ದನ್ನು ಊಟಮಾಡುವವರೇ ನಾವುಗಳೆಲ್ಲಾ?
ಮೇಲಿಂದ ಮಕ್ಕಳನ್ನು ಎಸೆಯುವಾಗ, ಹಿಡಿಯುವವರ ಕೈತಪ್ಪಿಹೋದರೆ ಮಗು ಬಿದ್ದು ತಲೆ ಒಡೆದುಕೊಳ್ಳಬಹುದು ಅನ್ನುವುದು ಸಾಮಾನ್ಯ ಜ್ಞಾನ ಅಥವಾ ದುರ್ಬಲ ಹೃದಯಿ ಮಕ್ಕಳು ಉಸಿರುಗಟ್ಟಿ ಸಾಯಬಹುದು ಅನ್ನುವುದಕ್ಕೂ ವಿಶೇಷ ಜ್ಞಾನವೇನೂ ಬೇಕಾಗಿಲ್ಲ.
ಅಪಾಯಕಾರಿ ಅಂದ ಕೂಡಲೇ ಎಲ್ಲಾ ಮಕ್ಕಳೂ ಅಪಾಯಕ್ಕೆ ಈಡಾಗುತ್ತರೆ ಎಂದೇನಿಲ್ಲ. ಅಪಾಯದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಅನ್ನುವುದಷ್ಟೇ ಸತ್ಯ.
ಉಪದೇಶಗಳು ಪತ್ರಿಕೆಗಳಿಂದ ಬರಬೇಕಿಲ್ಲ. ಘಟನೆ ಮುಖ್ಯ. ವರದಿ ಮಾಡುವವರು ಮುಖ್ಯರಲ್ಲ ಅನ್ನುವ ಧೋರಣೆ ಹೊಂದಿರುವವರು ಬರಹಗಾರರಾಗಿ, ವಿಮರ್ಶಕರಾಗಿ ಹೊರ ಹೊಮ್ಮುವುದು ಹೇಗೆ ಸಾಧ್ಯವಾಯಿತು?
ವರದಿ ಮಾಡುವವರು ಮುಖ್ಯರಲ್ಲ ಎಂದು ಒಪ್ಪಿಕೊಳ್ಳುವವನಿಗೂ, ವರದಿಯಲ್ಲಿನ ಸತ್ಯಾಂಶ ಎಷ್ಟು ಅನ್ನುವುದು ಮುಖ್ಯವಾಗಿರುತ್ತದೆ, ಒಂದು ಘಟನೆ ಹೇಗೆ ವರದಿಯಾಗಿದೆ ಅನ್ನುವುದೂ ಮುಖ್ಯವಾಗುತ್ತದೆ. ಹಾಗಾಗಿ ವರದಿಗಾರನೂ ಮುಖ್ಯನಾಗುತ್ತಾನೆ.
ಒಂದು ನಿರ್ದಿಷ್ಟ ಪತ್ರಿಕೆಗೆ ಅಥವಾ ಸುದ್ದಿ ವಾಹಿನಿಗೆ ಆಕರ್ಷಿತನಾಗುವ ಓದುಗ ಅಥವಾ ವೀಕ್ಷಕ ಅಲ್ಲಿನ ವರದಿಗಾರರನ್ನು ಅವಲಂಬಿಸಿಯೇ ಆಕರ್ಷಿತನಾಗಿರುತ್ತಾನೆ ಅನ್ನುವುದು ಸತ್ಯ. ಪತಿಕೆಗಳಲ್ಲಿನ ಬರಹಗಳು ಓದುಗನಲ್ಲಿ ಬದಲಾವಣೆ ತರಲಾರದು ಎನ್ನುವುದನ್ನು ಒಪ್ಪಲಾಗದು.
ಸ್ವಾತಂತ್ರ್ಯಹೋರಾಟದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿನ ಬರಹಗಳ ಮುಖಾಂತರ ಜನರಲ್ಲಿ ಬದಲಾವಣೆ ತರಲು ಸಾಧ್ಯವಾಗಿರಲಿಲ್ಲವೇ?
ಹಾಗೊಂದು ವೇಳೆ ಪತ್ರಿಕೆಗಳಲ್ಲಿನ ಬರಹಗಳು, ತನ್ನೊಳಗೆ ಬದಲಾವಣೆ ತರಲು ಬಯಸುವ ಮಾನವನಲ್ಲಿ ಬದಲಾವಣೆ ತರಲಾರವು ಎನ್ನುವುದಾದರೆ, ಪತ್ರಿಕೆಗಳಲ್ಲಿನ ಸುದ್ದಿ ವರದಿಗಳನ್ನುಳಿದು ಪ್ರಕಟವಾಗುವ ಎಲ್ಲಾ ಅಂಕಣ ಬರಹಗಳ ಬರಹಗಾರರೆಲ್ಲಾ ತಮ್ಮ ತೆವಲಿಗಷ್ಟೇ ಬರೆಯುತ್ತಿದ್ದಾರೆ ಎನ್ನಬಹುದೇ?
ತಮ್ಮ ಅಂಕಣಗಳನ್ನು ಓದುವ ಓದುಗರಲ್ಲಿ ಎಳ್ಳಷ್ಟೂ ಬದಲಾವಣೆಯನ್ನು ನಿರೀಕ್ಷಿಸುವುದಿಲ್ಲವೇ?
ಅಕ್ಷರ ಅವರ ನಂತರ ಜೋಗಿಯವರೂ ಎಡವಟ್ಟು ಮಾಡಿಕೊಂಡಿದ್ದಾರೆ ಅಂತ ಅನಿಸುತ್ತಿದೆ, ನನಗೆ
– ಆತ್ರಾಡಿ ಸುರೇಶ್ ಹೆಗ್ಡೆ
ಅಕ್ಷರ ಅವರ ತರ್ಕವನ್ನೇ ವಿಸ್ತರಿಸುವುದಾದರೆ, ಹರಾಜಿಗೆ ನಿಂತ ಆಟಗಾರರೂ ಕೂಡ ಅವರು ಅವಮಾನಿತರಾಗುತ್ತಿದ್ದಾರೆ ಎಂದು ಭಾವಿಸಬೇಕಿತ್ತಲ್ಲವೇ? ಅದನ್ನು ಮಾತ್ರ ಹೇಗೆ ಅಕ್ಷರ ಅವರು ನಮ್ಮ ಕಾಲಘಟ್ಟ ಮತ್ತು ಸಮಾಜದ larger canvas ನಲ್ಲಿಟ್ಟು ಅದನ್ನು ಅವಮಾನ ಎಂದು ಭಾವಿಸುತ್ತಾರೆ?
ಹಾಗಾದರೆ ಅಸ್ಪ್ರುಷ್ಯತೆಯೂ ಅವಮಾನವಲ್ಲವೇ? ಈಗ ತಲೆತಲಾಂತರದಿಂದ ಅಸ್ಪ್ರುಷ್ಯತೆಯಲ್ಲಿ ಬೆಂದವರಿಗೆ ಅದೊಂದು ಜೀವನ ಕ್ರಮ. ಅವರಿಗೆ ಅದು ಅವಮಾನ ಅನ್ನಿಸುವುದೇ ಇಲ್ಲ. ಅಕ್ಷರ ಅವರ ಪ್ರಕಾರ ಅದು ಈಗ ಅವಮಾನವೇ ಅಲ್ಲ. ಆದರೆ ಅದೇ ದಲಿತ ದೊಡ್ಡಿಯಲ್ಲಿ ಒಬ್ಬ ಓದಿಕೊಳ್ತಾನೆ. ಅವನಿಗೆ ನಿರಂತರ ಆಗುತ್ತಿರುವ ಅವಮಾನ ಅರಿವಿಗೆ ಬರುತ್ತದೆ. ಆಗ ಮಾತ್ರವೇ ಅದು ಅವಮಾನವೇ? so it is relative! ಅವಮಾನ ಅವಮಾನಿತನ ಅರಿವು ಬೌದ್ಧಿಕತೆಗೆ ಸಂಬಂಧ ಪಟ್ಟದ್ದೋ? ಒಟ್ಟಾರೆ ಬೌದ್ಧಿಕವಾಗಿ ಅದು ಮಾನವತೆಗೆ ನಾವು ಮಾಡುತ್ತಿರುವ ಅವಮಾನವಲ್ಲವೇ?
ಒಂದು ಕಡೆ ದಲಿತರು ಪರಿಗಣಿಸಿದರೆ ಮಾತ್ರ ಅದು ಅವಮಾನ, ಆದರೆ ಯಾರು ಎಷ್ಟಕ್ಕೆ ಹರಾಜಾದರು ಎಂಬ celebration ನಲ್ಲಿ ಮುಳುಗಿರುವ ಆಟಗಾರರಿಗೆ ಅವಮಾನವಾಗಿದೆಯೆಂದು ಅಕ್ಷರ ಅವರು ನಿರ್ಧರಿಸುತ್ತಾರೆ. ಇದು ಕುತರ್ಕವೇ ಸರಿ. IPL ಹರಾಜನ್ನು ಅಕ್ಷರ ಅವರ ನೆಲೆಯಲ್ಲಿಯೇ ವಿರೋಧಿಸುವವ ನಾನು. talent ಅನ್ನು ಹರಾಜು ಹಾಕುವುದು ಪ್ರಾಚೀನ ರೋಮನ್ ವಿಕಾರದ ಪಳೆಯುಳಿಕೆಯೂ ಇಂದಿನ ಜಾಗತೀಕರಣದ ಎಲ್ಲವನ್ನೂ quanitify ಮಾಡಿ ಅದಕ್ಕೊಂದು price tag ನೇತು ಹಾಕುವ ಕಬಂಧ ಬಾಹು ಎಂಬುದನ್ನು ನಾನು ಬಲ್ಲೆ.
ಆದರೆ `ಅವಮಾನಿತನ’ ಅರಿವು ಎಂಬುದನ್ನು ಹಿಡಿದು ipl ಮತ್ತು ಎಂಜಲೆಲೆಯ ಮಡೆಸ್ನಾನವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಆ ಮುಖೇನ ಮಡೆಸ್ನಾನದಂತಹ ಬ್ರಾಹ್ಮಣತ್ವದ ದಮನಿಕೆಯನ್ನು ಸಮರ್ಥಿಸುವುದಿದೆಯಲ್ಲ, ಅದು ಸರ್ವಥಾ ಖಂಡನೀಯ. ಅದ್ಯಾವ ಚಿಕಿತ್ಸೆ? ಯಾವ ಆಚರಣೆ? ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಹೊರಳಾಡುವುದು ಶ್ರೇಷ್ಠ ಎಂಬುದು ಜೀವ ವಿರೋಧಿ ಚಿಂತನೆಯೇ. ಅದು ಸರ್ವಥಾ ಖಂಡನೀಯ. ಇಡೀ ಲೇಖನ ಒಂದು ಕುತರ್ಕದಿಂದ ಕೂಡಿದುದೆ ಆಗಿದೆ. an attempt to re-inforce the status quo by a rabid ಕುತರ್ಕ born out of either the brahminical mindset involuntarily or worse still an intentional attempt to mislead the readers to believe in the ಕುತರ್ಕ catered in the article, which would amount to intellectual corruption.
ಈ ಲೇಖನದ ಮನಸ್ಥಿತಿಯ ಸುತ್ತಲೂ ಇಂಥದೊಂದು ಚರ್ಚೆಯನ್ನು ಹುಟ್ಟು ಹಾಕಿದ ಅವಧಿಗೆ ಕೃತಜ್ಞತೆಗಳು.
-ಆದಿತ್ಯ ಭಾರದ್ವಾಜ್ ]]>
ಅಕ್ಷರ, ಆ ಮತ್ತು ಆ..




Athradi Suresh Hegade avaru abhiprayapaduvante maguvannu melinda kelage eseyuvaga apaayada saadhyathe ide, oppikollona. Aadare jaagruthi moodisuvavaru vastunistatheyannadharisi prayogikavagirbeku. Jogiyavara abhiprayada tirule idu. Sampradayagalu, aacharanegalu upayuktavagiddare avugalannu ulisikollabeku endu tilisodikke horata avaru makkalannu etti eseyuva example tegedukondaddu swalpa edavattennestide.
Aaditya Bharadwaj abhiprayakke pratikriyisuvudadare, manaveeyate iddavaru manaveeyatege endu avamanavannu maduvudilla. Aadare manaveeyate mattu manapamana emba parialpaneya godavege hogade kelavu aacharanegalannu nadesuttaralla, Alli melu- keelu anta gurutisikondavaru tamma tamma padige nemmdiyagiye iruttare. Avamana yavudu, gourava yavudu embudannu eradane vyakti nirdharisuvudakkinta ghataneyalli bhagiyada vyakti swataha nirdharisbeku. So idu bhouddhikathege sambandhisiddu. Yarado hotte novige matyaro oushadhi tinnokagutta?
IPL haraju ondu shuddha aarhika vidyamana. Illi Akshara avaru maana mattu avamaana emba parikalpanegala artha vivaraneyannu vishleshisalu horatagale avara kaige IPL sikku biddiddu ondu pramada.
ಮಕ್ಕಳನ್ನು ಮೇಲಿಂದ ಎಸೆವುದನ್ನು ಅಪಾಯಕಾರಿ ಎಂದ ವೈದ್ಯರುಗಳನ್ನು, ಅದು ಹೇಗೆ ಅಪಾಯಕಾರಿ ಅದರ ಹಿಂದೆ ಅಧ್ಯಯನ ಇದೆಯೇ ಎಂದು ಕೇಳುವುದು, ಮಕ್ಕಳು ಬಚ್ಚಲು ಮನೆಯಲ್ಲಿ ಬೀಳುವುದರ ಹಿಂದೆ ಅಧ್ಯಯನ ನಡೆದಿದೆಯೇ ಎಂದುಕೇಳುವುದೂ ಎರಡೂ ಒಂದೇ ಅಂದಿದ್ದೆ ನಾನು.
ಆದರೆ, ಡಾ. ಸಾಗರ್ ಅವರು ನನ್ನ ಮಾತುಗಳನ್ನು ಆಂಶಿಕವಾಗಿ ಎತ್ತಿಕೊಂಡು ಪ್ರತಿಕ್ರಿಯಿಸಿದ್ದಾರೆ. “ಹಾಗೂ ಇದು ವಿಚಾರ-ವಿಕ್ರಮಮನ್ನು ಎದುರಿಸಲಾಗದ ಬೆತಾಳವೊಂದು ಉದಾಹರಣೆ/ಪ್ರತಿಮೆಗಳ ಬಿಳಿಲಿಗೆ ಜೋತು ಬಿದ್ದ ಹಾಗಿದೆ!” ಅಂದಿದ್ದಾರೆ.
ಉದಾಹರಣೆ/ಪ್ರತಿಮೆಗಳ ಬಿಳಲಿಗೆ ಜೋತುಬೀಳಬಾರದೆನ್ನುವವರೇ, ವಿಕ್ರಮ ಮತ್ತು ಬೇತಾಳರ ಉದಾಹರಣೆ ಕೊಡುತ್ತಿದ್ದಾರೆ. ವಿಚಿತ್ರ.
ವಿಚಾರ ವಿಕ್ರಮರು! ಬೇತಾಳ! ಬಹಳ ಚೆನ್ನಾಗಿದೆ.
ನನಗೆ ಶೀ ಕೆ.ವಿ. ಅಕ್ಷರ ಅವರ ಮೂಲ ಲೇಖನದಲ್ಲಿ ಒಟ್ಟಾರೆ ಕಂಡುದು “ಅವಮಾನಿತರೇ ಅವಮಾನವನ್ನು ಅವಮಾನ ಎಂದು ಹೇಳಬೇಕು” ಅನ್ನುವುದು. ಅದನ್ನು ಒಪ್ಪುವಾಗ ಅವಮಾನದ ಬಗೆಗಿನ ಅವರ ಪೂರ್ತಿ ಲೇಖನ ತನ್ನ ಔಚಿತ್ಯವನ್ನೇ ಕಳೆದುಕೊಳ್ಳುತ್ತದೆ, ಹಾಗಾಗಿ ಅವರು ಉಲ್ಲೇಖಿಸಿರುವ ಎರಡೂ ಘಟನೆಗಳ ಬಗ್ಗೆ ನಾವ್ಯಾರೂ ಮಾತಾಡಬಾರದು, ಎಂದು ಆ ಮೂಲ ಬರಹಕ್ಕೆ ನಾ ನೀಡಿದ ಮೊದಲ ಪ್ರತಿಕ್ರಿಯೆಯಾಗಿತ್ತು.
ಇನ್ನು ಜೋಗಿಯವರ ಮಾತುಗಳನ್ನು ಓರ್ವ ಸಾಮಾನ್ಯ ಓದುಗನಾಗಿ ಓದಿದಾಗ ನನಗನಿಸಿದ್ದನ್ನು ನನ್ನದೇ ಮಾಮೂಲು ಧಾಟಿಯಲ್ಲಿ ಬರೆದೆ ಅಷ್ಟೇ.
ನಾನೇನೂ ಪರಿಣತ ಪತ್ರಕರ್ತನಲ್ಲ, ಅಂಕಣ ಬರಹಗಾರನೂ ಅಲ್ಲ, ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವನೂ ಅಲ್ಲ.
ವೈದ್ಯರುಗಳು ಮಕ್ಕಳನ್ನು ಎಸೆಯುವುದು ಅಪಾಯಕಾರಿ ಎನ್ನುವುದಕ್ಕೆ ವೈದ್ಯಕೀಯ ಕಾರಣಗಳನ್ನಷ್ಟೇ ನೀಡಬಲ್ಲರು. ಆ ಆಚರಣೆಯ ಹಿಂದೆ ಅಧ್ಯಯನ ನಡೆಸಿ ಕಾರಣ ನೀಡಲಾರರು. ಅಲ್ಲಿ ವೈದ್ಯರುಗಳನ್ನು ಪ್ರಶ್ನಿಸುವುದು, ಮಕ್ಕಳು ಬಚ್ಚಲು ಮನೆಯಲ್ಲಿ ಪ್ರಶ್ನೆ ಕೇಳಿದಂತೆ ಅಂತ ನನಗೆ ಅನಿಸಿತ್ತು.
ನನಗೆ ನನ್ನ ಮನೆ, ಚಾವಡಿ, ಅಂಗಳ, ನನ್ನ ದಿನಚರಿ, ಇಲ್ಲೇ ಉದಾಹರಣೆಗಳು ಸಿಗುವವು.
ಹಾಗಾಗಿ ಆ ಉದಾಹರಣೆಗಳನ್ನೇ ನೀಡಿದೆ. ಅಷ್ಟೇ.
ಯಾರನ್ನೇ ಅವಮಾನಿಸುವ ಉದ್ದೇಶ ನನಗಿರಲಲ್ಲ. ಈಗಲೂ ಇಲ್ಲ.
IPL ಆಟಗಾರರ ಹರಾಜು ಹಾಗೂ ಕುಕ್ಕೆಯ ಮಡೆ ಸ್ನಾನ ಇವೆರಡನ್ನೂ ಆಧಾರವಾಗಿಟ್ಟುಕೊಂಡು ಅಕ್ಷರ ಅವರು ಹೇಳಲು ಯತ್ನಿಸಿರುವುದು “ಮಾನಾವಮಾನಗಳನ್ನು ಯಾವ ಮಾಪನದಲ್ಲಿ ನೋಡಬೇಕು, ಸಾಮ್ಸ್ಕ್ರುತಿಕವಾಗೆ, ಅಥವಾ ಅಂದಿನಿಂದ ಬೆಳೆದುಬಂದ ಜಾತಿ ಆಧಾರಿತ ನೆಲೆಯಲ್ಲೇ, ಅಥವಾ ವಯಕ್ತಿಕ ನೆಲೆಯಲ್ಲೇ?” . ಈ ಬಗೆಯ ಚಿಂತನೆ ಅಗತ್ಯ. ಚಿಂತನೆಯೇ ಇಲ್ಲದಿದ್ದರೆ ಮೂಲಭೂತವಾದ definition ಮೂಡಿ ಬರುವುದಿಲ್ಲ, ಅದಿಲ್ಲದೆ ಯಾವ ಚರ್ಚೆಯೂ converge ಆಗುವುದಿಲ್ಲ. ಇಲ್ಲಿ ಬಹಳಷ್ಟು ಓದುಗರ/ಪ್ರತಿಕ್ರಿಯಿಸಿದವರ ಸಮಸ್ಯೆ – ಪ್ರತಿಮೆಗಳ ಹಿಂದೆ ಬೀಳುವುದು, ಉದಾಹರಣೆಗಳನ್ನು ಹಿಡಿದುಕೊಂಡು ವಾದ ವಿವಾದ ನಡೆಸುವುದು.
ಉದಾಹರಣೆಗಳು ಹಾಗೂ ಪ್ರತಿಮೆಗಳು ಇಲ್ಲದೆ ಮಾತಾಡಿದರೆ ಅದೊಂದು ಪತ್ರಿಕಾ ವರದಿ ಅಥವಾ ಚುನಾವಣಾ ಭಾಷಣವಾಗುತ್ತದೆ, ಹಾಗೆಂದು ಉದಾಹರಣೆಗಳನ್ನು ಬಳಸಿದರೆ, ಓದುಗ ವೃಂದ ವಿಷಯವನ್ನು ಬಿಟ್ಟು ಉದಾಹರಣೆಗಳ ಹಿಂದೆ ಬಿದ್ದು ಪುಟ ತುಮ್ಬಿಸುವನ್ತಾಗುತ್ತದೆ. ಆದ್ದರಿಂದ , ಉದಾಹರಣೆ/ಪ್ರತಿಮೆಗಳನ್ನು ಆಧರಿಸಿಕೊಂಡು ವಿಷಯದ ಕುರಿತು ಚರ್ಚಿಸುವುದು/ಮಥಿಸುವುದು ಸೂಕ್ತ.
ಇನ್ನು, ಅಕ್ಷರ ಅವರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಓರ್ವ ಬೀಗಿ ಸಿಂಹಾಸನದ ಮೇಲೆ ಕುಳಿತಿದ್ದಾನೆ, ಮತ್ತೋರ್ವ ಬಾಗಿ ನಿಂತಿದ್ದಾನೆ, ಬಾಗಿಲ ಬಳಿಯಲ್ಲಿ ನಿಂತವ , ಬಾಗಿದವನಿಗೆ ಅದು ಅವಮಾನ ಎಂದು ಸೂಚಿಸುತ್ತಿದ್ದಾನೆ. ಬಾಗಿ ನಿಂತವನಿಗೆ ಬಾಗಿಲ ಬಳಿಯವ, “ಇದು ಅವಮಾನ” ಎಂದು ಒಂದು ಎಚ್ಚರವನ್ನು ಮೂಡಿಸುವುದು ಸಹಜ ಹಾಗೂ ಆಕ್ಷೆಪಾರ್ಹವಲ್ಲ, ಏಕೆಂದರೆ , ಬಾಗಿದವನಿಗೆ ಬಾಗುವಿಕೆಯ ಅನೇಕ ಸಾಧ್ಯತೆಗಳ ಅರಿವಿರಬೇಕು. ಆ ಸಾಧ್ಯತೆಗಳಲ್ಲಿ ಅವಮಾನವೂ ಒಂದು. ಬಾಗಿದವನಿಗೆ ಅವಮಾನದ ಸಾಧ್ಯತೆಯನ್ನು ಹಾಗೂ ಕ್ರಿಯೆಯ ಎಚ್ಚರವನ್ನು ಬಾಗಿಲ ಬಳಿಯವ ತಿಳಿಸದೇ ಇರುವುದು ತಪ್ಪು. ಏಕೆಂದರೆ ಅದು ಮೂಲಭೂತವಾದ ಅರಿವನ್ನು/ಎಚ್ಚರವನ್ನು ಕಸಿದುಕೊಂಡ ಹಾಗೆ.
ಹಾಗೆಂದು, ಬಾಗಿಲ ಬಳಿಯವ ಈ ಬಾಗಿದವನನ್ನು ಒತ್ತಾಯಪೂರ್ವಕವಾಗಿ ಬಲವಂತ ಮಾಡುವುದು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ., ಇದು ತಿರುಗಿ ಮತ್ತೆ ತಥಾಕಥಿತ ಪ್ರಗತಿ-ಶೀಲ ಚಿಂತನೆಗೆ ಮಾರಕ. ಹೀಗೆ ವರ್ತಮಾನದ ಎಚ್ಚರವನ್ನೂ ಜೊತೆಗೆ ಆಯ್ಕೆಯ ಸ್ವಾತಂತ್ರ್ಯವನ್ನೂ ಸಮನ್ವಯಗೊಳಿಸಿದರೆ ವೈಚಾರಿಕ ನೆಲೆಯಲ್ಲಿ ಒಂದು ಪರಿಹಾರ ಸಾದ್ಯ.
ಇನ್ನು ಈ ವಿಷಯಕ್ಕೆ ಸಾಂಸ್ಕೃತಿಕ, ಸಾಮಾಜಿಕ, ಶುದ್ದ ವೈಜ್ಞಾನಿಕ, ಆರ್ಥಿಕ ಅಥವಾ ಸಮಾಜ-ವಿಜ್ಞಾನದ ಹಲವು ಆಯಾಮಗಳು ಇವೆ. ಇವೆಲ್ಲದರ ಕುರಿತಾದ ಒಂದು ಸಮಗ್ರ ಅಧ್ಯಯನ/ಅನ್ವೇಷಣ ಅಗತ್ಯ ಎನ್ನುವುದು ಜೋಗಿಯವರ ಅಭಿಮತ. ಒಪ್ಪುವನ್ತದ್ದೆ.
ಶ್ರೀ ಅತ್ರಾಡಿಯವರು ““ಬಚ್ಚಲು ಮನೆಯಲ್ಲಿ ಜಾರುತ್ತೆ ಮಗೂ, ಜಾಗ್ರತೆ…” ಅನ್ನುವ ಅಪ್ಪನನ್ನೋ, ಅಮ್ಮನನ್ನೋ ಮಕ್ಕಳು “ಅಧ್ಯಯನ ಮಾಡಿದ್ದೀರಾ? ಇಲ್ಲಿ ಎಷ್ಟು ಮಂದಿ ಬಿದ್ದಿದ್ದಾರೆ? ಯಾವ ಯಾವ ಮೂಳೆ ಮುರಿದುಕೊಂಡಿದ್ದಾರೆ?” ಎಂದು ಮರು ಪ್ರಶ್ನೆ ಮಾಡಿದಂತಿದೆ ಇದು.” ಎಂದು ಬಹುಶ ಇದು ‘ಕೊನೆಯ ಮೊಳೆ’ ಎಂದು ಭಾವಿಸಿ ಎಸೆದಿದ್ದಾರೆ, ಇಲ್ಲಿ ಗಮನಿಸಬೇಕಾದ ಅಂಶ, ಬಚ್ಚಲು ಮೆನಯಲ್ಲಿ ಬಿದ್ದು ಸೊಂಟ ಮುರಿದುಕೊಳ್ಳುವುದು ಒಂದು ಭೌತಿಕ ಅಪಘಾತ, ಮಡೆ ಸ್ನಾನದ ಹಾಗೆ ಧಾರ್ಮಿಕ-ಸಾಮಾಜಿಕ ಆಯಮವಿರುವ ಆಚರಣೆಯಲ್ಲ , ಅದೊಂದು ಭೌತಿಕ ಅಪಘಾತ. ಅದರ ಕುರಿತಾಗಿ ಅಧ್ಯಯನ ಬಹುಷಃ ಅನಗತ್ಯ. ಇದು ವಿಚಾರ-ವಿಕ್ರಮಮನ್ನು ಎದುರಿಸಲಾಗದ ಬೆತಾಳವೊಂದು ಉದಾಹರಣೆ/ಪ್ರತಿಮೆಗಳ ಬಿಳಿಲಿಗೆ ಜೋತು ಬಿದ್ದ ಹಾಗಿದೆ!.
In essence, ಇಲ್ಲಿ ಚರ್ಚೆಯ ವಿಷಯ, ಅವಮಾನವನ್ನು ಯಾವ ಯಾವ ನಲಗಟ್ಟಿನಲ್ಲಿ ನೋಡಬೇಕು, ಹಾಗೂ ನೋಡಬಹುದು?, ಎನ್ನುವುದು, ಉಳಿದೆಲ್ಲವೂ ಪ್ರತಿಮೆಗಳು, ಉದಾಹರಣೆಗಳು. ನಾವು ಮಾತು ಸೋತು, ವಿಷಯವನ್ನು ವಿಭಜಿಸಿ ಆಳಕ್ಕಿಳಿದು ನೋಡುವ ಸಾಮರ್ಥ್ಯ ಕಳೆದುಕೊಂಡಾಗ ಉದಾಹರಣೆಗಳ/ಪ್ರತಿಮೆಗಳಿಗೆ ಜೋತು ಬೀಳುತ್ತೇವೆ. ಇನ್ನು ಮೂಲ ಬರಹದಲ್ಲಿ ಅಕ್ಷರ ಕೂಡ ತಾವು ಕಂಡುಕೊಂಡ ಪ್ರತಿಮೆಗಳ ಹಿಂದೆ ಬಹುಷಃ ತಮಗರಿವಿಲ್ಲದೆಯೀ ಬಿದ್ದಿದ್ದಾರೆ. ಹಿಂದೆ ರೋಮ್ ನಲ್ಲಿ ಗುಲಾಮರನ್ನು ಹರಾಜು ಹಾಕುವುದನ್ನು IPL ಆಟಗಾರರ ಹರಾಜಿಗೆ ನೇರ correlation ಕಲ್ಪಿಸಿದ್ದಾರೆ. ಇಲ್ಲಿ ಆಳದಲ್ಲಿ ಗಮನಿಸಬೇಕಾದ ಅಂಶ, ಗುಲಾಮರನ್ನು ಹರಾಜು ಹಾಕುವಾಗ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದು ಸ್ಪಷ್ಟ, ಆದರೆ IPL ನಲ್ಲಿ ಕೇವಲ ಆಟಗಾರರ ತಾಂತ್ರಿಕ ಕೌಶಲ ಮಾತ್ರ ಹರಾಜಿಗೆ ಒಳಪಟ್ಟಿರುತ್ತದೆ. ಬಹುಷಃ ವಿಷಯದ ನಾಟಕೀಯ ವೈಭವೀಕರಣಕ್ಕೆ ಇಂತಹ ಅಸಂಗತವಾದ ಉದಾಹರಣೆ ಬೇಕೇನೋ!.
ಕೊನೆಯಲ್ಲಿ, ನಾನು ಮಡೆ ಸ್ನಾನದ ಪರವೂ ಅಲ್ಲ, ವಿರೋಧಿಯೂ ಅಲ್ಲ. ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದರ ವಿರೋದಿ.
ಜೋಗಿಯವರ ಅನಿಸಿಕೆಗಳಿಗೆ ಪ್ರತಿಕ್ರಿಯಿಸುವಾಗ ನಾನು ಎಲ್ಲೂ ಮಡೆಸ್ನಾನದ ಬಗ್ಗೆ ಪ್ರಸ್ತಾಪಿಸಿಲ್ಲ.
ನಾನು ಪ್ರಸ್ತಾಪಿಸಿದ್ದು ಮಕ್ಕಳನ್ನು ಮೇಲಿಂದ ಕೆಳಗೆ ಎಸೆಯುವ ಆಚರಣೆಯನ್ನು ಅಪಾಯಕಾರಿ ಎಂದ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮಾತ್ರ.
ಆದರೆ ಡಾ. ಸಾಗರ್ ಅವರು ನನ್ನ ಬಚ್ಚಲು ಮನೆಯ ಉದಾಹರಣೆಯನ್ನು ಮಡೆಸ್ನಾನಕ್ಕೆ ಗಂಟು ಹಾಕಲು ನೋಡಿದ್ದು ವಿಚಿತ್ರ ಅನಿಸುತ್ತಾ ಇದೆ.