‘ಒಬ್ಬಳು’ ಮತ್ತೆ ಯಾವಾಗ? ಅಂತ ಕೇಳುತ್ತಿರುವಾಗಲೇ ನಾನು ಮತ್ತೊಂದು ಹೊಸ ಪ್ರಯೋಗಕ್ಕೆ ತಲೆ ಕೆಡಿಸಿಕೊಂಡೇ ಬಿಟ್ಟೆ ….
ಹಾಗಾಗಿ ‘ಒಬ್ಬಳು’ ಪ್ರದರ್ಶನದ ಕಡೆ ಹೆಚ್ಚು ಗಮನ ಕೊಡದೆ ಅಡುಗೆ ಮನೆಯಲ್ಲಿನ ನನ್ನ ಸ್ವಗತವನ್ನು ಅಡುಗೆ ಮಾತಾಗಿ ಪ್ರಯೋಗಿಸುತ್ತಿದ್ದೇನೆ. ಇದೇ 26ರಂದು ಸೋಮವಾರ ನಾ ಹುಟ್ಟಿ ಬೆಳೆದ ಊರಾದ ಹಾರೋಹಳ್ಳಿಯಲ್ಲಿ ಮೊದಲ ಪ್ರಯೋಗ ಮಾಡ್ತಾ ಇದ್ದೀನಿ.
ಇಲ್ಲಿ ನನ್ನ ಜೊತೆ ಮತ್ತಿಬ್ಬರು ಇರುತ್ತಾರೆ. ಅವರ ಜೊತೆ ನೀವುಗಳು ಇರ್ತೀರ, ನಮ್ಮೂರಿನ ಮಾದರಿ ರೈತ ಧನ್ಯ ಕುಮಾರ್ ಈ ಹೊಸ ನಾಟಕವನ್ನು ಉದ್ಘಾಟನೆ ಮಾಡುವುದರ ಮೂಲಕ ಲೋಕಾರ್ಪಣೆ ಮಾಡ್ತಾ ಇದ್ದಾರೆ ….
ನಿಮ್ಮ ಪ್ರೋತ್ಸಾಹ ನನಗೆ ಮತ್ತು ನಮ್ಮ ತಂಡಕ್ಕೆ ಅತಿ ಮುಖ್ಯ …ಆ ದಿನ ನೀವೆಲ್ಲ ಬರ್ತೀರಲ್ಲಾ……….
-ಅಕ್ಷತಾ ಪಾಂಡವಪುರ







0 Comments