ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂದ ಹಾಗೆ ಮೈಸೂರಿನಲ್ಲಿ ಇಂದಿನಿಂದ ’ಸಾಂಝಿ’ ಲೋಕ

ಎಸ್.ಎಫ್.ಹುಸೇನಿ ಮೈಸೂರುರವರ ಪರಿಕಲ್ಪನೆಯಲ್ಲಿ  ಮುಖವಾಡ ಪ್ರದರ್ಶನ ಮತ್ತು ಕಾರ್ಯಗಾರ

 

ಸೃಜನಶೀಲತೆ ಎನ್ನುವುದು ಯಾರೊಬ್ಬರ ಆಸ್ತಿಯೂ ಅಲ್ಲ.  ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಅದು ಘೋಚರವಾಗುತ್ತಲೇ ಇರುತ್ತದೆ.  ಅದನ್ನು ಗುರುತಿಸುವ ಕಾರ್ಯ ಸಮುದಾಯದ್ದು.  ನೋಡುವವರ ಕಣ್ಣು ಮತ್ತು ಮನಸ್ಸಿನದ್ದು.   ಕತ್ತರಿ, ಕರ, ಕಾಗದ ಮತ್ತು ಕಲ್ಪನೆಗಳಿಂದ ರೂಪಗೊಂಡಿರುವ ಇಲ್ಲಿನ ಕಲಾಕೃತಿಗಳು ನಾಲ್ಕು ‘ಕ’ಗಳ ಸಂಗಮ.  ಸಾಮಾನ್ಯವಾಗಿ ಮುಖವಾಡ ಎಂದರೆ ನಿಜಮುಖವನ್ನು ಮರೆಮಾಚಿ ಬೇರೊಂದು ಮುಖದ ಅನಾವರಣ ಎನ್ನಬಹುದು.  ಒಂದು ಮುಖವಾಡವನ್ನು ಮಾಡಬೇಕಾದರೆ ಅದಕ್ಕೆ ಕಾಗದ ಬಟ್ಟೆ, ಅಂಟು, ಬಣ್ಣ, ಕತ್ತರಿ ದಾರ, ರಬ್ಬರ್ ಹೀಗೆ ಹಲವಾರು ವಸ್ತುಗಳು ಬೇಕಾಗುತ್ತದೆ.  ಆದರೆ ಇಲ್ಲಿನ ಮುಖವಾಡಗಳು ಬೇರೆ ರೂಪದಲ್ಲಿದ್ದು, ಗಮನಸೆಳೆಯುತ್ತದೆ.  ಈ ಮುಖವಾಡಗಳು ಮುಖಕ್ಕೆ  ಧರಿಸುವುದಲ್ಲ.  ಒಂದೊಂದು ಮುಖವಾಡವೂ ನೂರಾರು ಭಾವನೆಗಳ ಸಂಗಮದಂತೆ ಕಂಗೊಳಿಸುತ್ತಿವುದಂತೂ ಸತ್ಯ. ಒಂದು ಮುಖವಾಡದಲ್ಲೇ ಹಲವಾರು ಮುಖಗಳನ್ನು ಹೊತ್ತಿರುವ ಕಾರಣ,  ಕಾಣುವ ಕಣ್ಣಿನ ಭಾವಸಂಗಮದ ಸಾಗರದಂತೆ ಮನೋಲ್ಲಾಸದ ಕಾಣ್ಕೆಯ ಸವಿಯನ್ನು ಇಲ್ಲಿ ಸವಿಯುಬಹುದಾಗಿದೆ.  ಪ್ರತಿ ಮುಖವಾಡದಲ್ಲೂ ಒಂದೊಂದು ಕಲಾ ವೈಶಿಷ್ಠ್ಯವನ್ನು ನೋಡುಗ ಗುರುತಿಸಬಹುದು.

ಒಂದಿಷ್ಟು ಸಮಯವಿದ್ದರೆ, ಮನದಲ್ಲಿ ಕಲ್ಪನೆಯಿದ್ದರೆ, ಆಸಕ್ತಿಯಿದ್ದರೆ ವೀಕ್ಷಕನೇ ಕಲಾವಿದನಾಗಬಹುದು.     ಪ್ರತಿ ಮುಖವಾಡದಲ್ಲೂ ಮತ್ತಷ್ಟು ಮುಖಗಳು,  ಅದು ಮಾನವ, ಹಕ್ಕಿ, ಪಶು, ಗಂಡಬೇರುಂಡ, ಹೆಣ್ಣು ಗಂಡು, ವಿವಿಧ ಚಿತ್ತಾರಗಳು ಕಾಣಸಿಗುತ್ತವೆ.  ನಾಜೂಕಾದ ಕತ್ತರಿ ಕೆಲಸದ ಜೊತೆ ನವಿರಾದ ಕಲ್ಪನೆ ಸೇರಿ ಕಣ್ಮನ ಸೆಳೆಯುವ ಈ ಮುಖವಾಡಗಳ ರೂವಾರಿ ಮೈಸೂರಿನ ಎಸ್.ಎಫ್. ಹುಸೇನಿ.  ಸಾಂಝಿ ಕಲಾವಿದ. ಹಲವಾರು ಪ್ರಶಸ್ತಿಗಳ ಒಡೆಯನಾದ ಈತ ಹಲವಾರು ಕಲಾ ಪ್ರದರ್ಶನಗಳನ್ನು  ಮಾಡಿದ್ದು ಇಂತಹ ಮುಖವಾಡಗಳ ಪ್ರದರ್ಶನದಲ್ಲಿ ಹತ್ತನೇ ಏಕವ್ಯಕ್ತಿ ಪ್ರದರ್ಶನ ಇದಾಗಿದೆ. ಸಾಂಝಿ ಕಲೆಯ ಮಾದರಿಯಲ್ಲಿನ ಈ ಮುಖವಾಡಗಳು ಇಲ್ಲಿ ಪ್ರದರ್ಶನಕ್ಕಿದ್ದು ಕಲಾವಿದನ ಆಸೆಯಂತೆ ಪ್ರತಿಯೊಬ್ಬ ನೋಡುಗನೂ ಕಲಾವಿಧನಾಗಿ ಕಲೆಯ ಬಲೆಯಲ್ಲಿ ಸಿಲುಕಿ ಕಲಾಕೃತಿಗಳನ್ನು ವಯೋಮಿತಿಯ ಅಂತರವಿಲ್ಲದೆ ಅಬಾಲವೃದ್ಧರಾಗಿ ರಚಿಸುವ ಆಶಯಕ್ಕೆ ನಾವು ಜೊತೆಯಾಗೋಣ. ಧ್ವನಿಯಾಗೋಣ.

ಕಲಾವಿದ ಎಸ್.ಎಫ್. ಹುಸೇನಿ ಅವರು ಕಲಾವಲಯದಲ್ಲಿ ಮೈಸೂರು ಹುಸೇನಿ ಎಂದೇ ಚಿರಪರಿಚಿತರು. ತಂದೆ ಸಯ್ಯದ್ ಫೀರ್, ತಾಯಿ ಜೀನಾತ್ವುನ್ನಿಸಾ ಬೀ ರವರ ಮಗನಾಗಿ ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂ (ಬ್ಲಫ್) ನಲ್ಲಿ ಜನಿಸಿದ ಇವರು ಬಾಲ್ಯದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತರಾಗಿ ಕಲೆಯಲ್ಲಿಯೇ ಜೀವನ ರೂಪಿಸುವಂತಾಯಿತು. ಇವರು ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಪೈನ್ ಆರ್ಟ್ ಡಿಪ್ಲೊಮ ಮತ್ತು ಆರ್ಟ್ ಮಾಸ್ಟರ್ ಶಿಕ್ಷಣ ಪಡೆದು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿಯನ್ನು ಪಡೆದಿದ್ದಾರೆ. ಹುಸೇನಿಯವರು ಸದಾ ಪ್ರಯೋಗಶೀಲ ಪ್ರಯತ್ನಗಳಿಗೆ, ನಿರಂತರ ಹೊಸತನಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಅವರು ರಚಿಸಿರುವ ಕಲಾಕೃತಿಗಳನ್ನು ಗಮನಿಸುತ್ತಾ ಬಂದಲ್ಲಿ ತಿಳಿಯುತ್ತದೆ. ಒಂದೇ ಬಗೆಯ ಕಲಾಕೃತಿಗಳಿಗೆ ಸೀಮಿತವಾಗದೆ ಹಲವಾರು ಪ್ರಯೋಗಾತ್ಮಕ ಕೆಲಸಗಳಲ್ಲಿ ತೊಡಗಿದ್ದಾರೆ. ಅವರ ವಿಶಿಷ್ಟ ಬಗೆಯ ಕಾಗದ ಭಿತ್ತಿಶಿಲ್ಪಗಳು, ಏಕರೇಖಾಚಿತ್ರಗಳು ಪ್ರಯೋಗಾತ್ಮಕ ಅಮೂರ್ತ ಛಾಯಾಚಿತ್ರಗಳು ಮತ್ತು ಸಾಂಝಿಜನಪದ ಕಾಗದಕತ್ತರಿಕಲೆ ಕಲಾಕೃತಿಗಳು ಇವರಕಲಾಪ್ರತಿಭೆಗೆ ಸಾಕ್ಷಿಯಾಗಿವೆ.

ಸಿಡಿಯನ್ನು ಬಳಸಿ ತೆಗೆದಿರುವ ಅಮೂರ್ತಛಾಯಾಚಿತ್ರಗಳು ಸುಮಾರು ಐದುಸಾವಿರಕ್ಕೂ ಹೆಚ್ಚು. ಇದು ಅವರ ಸೃಜನಶೀಲತೆ ಮತ್ತು ಕಲಾತ್ಮಕ ಪ್ರಯೋಗಗಳಿಗೆ ಒಂದುಉದಾಹರಣೆ. ಹುಸೇನಿ ಚಿತ್ರಕಲೆಯನ್ನು ಮೈಸೂರು, ಬೆಂಗಳೂರು, ಧಾರವಾಡ, ಗುಲ್ಬರ್ಗ, ಉಡುಪಿ ಹೀಗೆ ಅನೇಕ ಕಡೆಗಳಲ್ಲಿ 9 ಏಕವ್ಯಕ್ತಿ ಚಿತ್ರಕಲಾಪ್ರದರ್ಶನಗಳು, ಸುಮಾರು 70ಕ್ಕೂ ಹೆಚ್ಚು ಸಮೂಹಕಲಾಪ್ರದರ್ಶನ ಕಾರ್ಯಗಾರಗಳಲ್ಲಿ ಭಾಗವಹಿಸಿ ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಾದ ಮುಂಬೈ, ದೆಹಲಿ, ಚೆನ್ನೈ ನಗರಗಳಲ್ಲಿ ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಹುಸೇನಿಯವರ ವಿಶೇಷತೆ ಎಂದರೆ ಗ್ರಾಮೀಣ ಭಾಗದ ಜನರಿಗೆ ಕಲೆ ತಲುಪುವ ಉದ್ದೇಶದಿಂದ ತಮ್ಮದೇ ಸಾಂಝಿ ಕಲಾಲೋಕ ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತುವರ್ಷಗಳಿಂದ ಚಿತ್ರಕಲಾಪ್ರದರ್ಶನ, ಕಾರ್ಯಗಾರಗಳನ್ನು ನಡೆಸುತ್ತಾ ಬಂದಿದ್ದಾರೆ. ಇವರ ಅನೇಕ ಕಲಾಕೃತಿಗಳು ದೇಶ ಮತ್ತು ವಿದೇಶಗಳ (ಆಸ್ಟ್ರೇಲಿಯ, ಫಿನ್ಲ್ಯಾಂಡ್, ಜರ್ಮನ್, ಸೌತ್ ಆಫ್ರಿಕ, ದೋಹ) ಖಾಸಗಿ ಸಂಗ್ರಹಕಾರರಲ್ಲಿ ಸಂಗ್ರಹಗೊಂಡಿವೆ. ಎಸ್.ಎಫ್.ಹುಸೇನಿಯವರ ಕಲಾಪ್ರತಿಭೆಗೆ ಅನೇಕ ಪ್ರಶಸ್ತಿ ಸನ್ಮಾನಗಳು ಸಂದಿವೆ.

ಅವುಗಳಲ್ಲಿ ಮುಖ್ಯವಾಗಿ 1999 ರಲ್ಲಿ ಮೈಸೂರು ದಸರಕಲಾಪ್ರದರ್ಶನಪ್ರಶಸ್ತಿ, 2001-ರಲ್ಲಿ ಮೈಸೂರಿನ ಕನ್ನಡಸಂಸ್ಕೃತಿ ಇಲಾಖೆಯಿಂದ ಯುವಸಂಭ್ರಮ ಪ್ರಶಸ್ತಿ, ಧಮಸ್ಥಳದ ಶಾಂತಿವನಟ್ರಸ್ಟ್ ವತಿಯಿಂದ ನಡೆಯುವ ರಾಜ್ಯ ಮಟ್ಟದ ಅಂಚೆಕುಂಚ ಸ್ಪರ್ಧೆಯಲ್ಲಿ 2001ರಿಂದ ಸತತ ನಾಲ್ಕು ಹಾಗು 2007ರಲ್ಲಿ ಪ್ರಶಸ್ತಿ ಒಟ್ಟು ಐದು ಬಾರಿ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಜಪಾನ್ಹಬ್ಬದಲ್ಲಿ 2009 ರಿಂದ ನಾಲ್ಕು ಬಾರಿ, ಕಿರಿಗಾಮಿ ಪೇಪರ್ ಕಟ್ಟಿಂಗ್ಸ್ ಕಾಗದ ಕಲೆಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, 1999ರಲ್ಲಿ ಮೈಸೂರಿನ ರಾಮನ್ಸ್ ಕಂಪ್ಯೂಟರ್ಸ್ರವರ ರಾಕೊಫೇಸ್ಟ್ ಪ್ರಶಸ್ತಿ, ಕರ್ನಾಟಕಲಲಿತ ಕಲಾ ಅಕಾಡೆಮಿಯಿಂದ ಎರಡು ಬಾರಿ ಸ್ಕಾಲರ್ಶಿಪ್ 1999 ಮತ್ತು 2000. ವೈಜಯಂತಿಚಿತ್ರಕಲಾಶಾಲೆಯಿಂದ ಬೆಸ್ಟ್ ಮ್ಯೂರಲ್ ಪ್ರಶಸ್ತಿ, 2001-ರಲ್ಲಿ ಮೈಸೂರಿನ ಮಾನಸಗಂಗ್ರೋತಿಯ ಮಹಿಳಾಅಧ್ಯಯನಕೇಂದ್ರದಿಂದ ಪೋಸ್ಟರ್ರಚನಗೆಪ್ರಶಸ್ತಿ, ಇವುಗಳ ಜೊತೆಗೆ ಅನೇಕ ಸಂಘಸಂಸ್ಥೆಗಳಿಂದ ಸನ್ಮಾನಗಳು ಸಾಂಝಿಕಲಾಸಾಮ್ರಾಟ್, ಚಿತ್ರರತ್ನ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಇವರ ಕಲಾಯಾತ್ರೆ ಹೀಗೆ ನಿರಂತರವಾಗಿ ಸಾಗಲಿ ಎಂದು ಹಾರೈಸೋಣ.

ಜನಪದ ಸಾಂಝಿ ಕಾಗದ ಕತ್ತರಿ ಕಲೆಈ ಕಲೆಯಿಂದ ಮಕ್ಕಳ ಬೆಳವಣಿಗೆಗೆ ಹೇಗೆ ಸಹಾಯಕ?ಬನ್ನಿ ಈ ಬಗ್ಗೆ ತಿಳಿಯೋಣ. . . . !

1. ಸೃಜನ ಶೀಲತೆ, ಕ್ರಿಯಾಶೀಲತೆ ಹೊರಹೊಮ್ಮಲು ಉತ್ತಮ ಮಾಧ್ಯಮ2. ಕಲೆಯ ಬಗ್ಗೆ ಆಸಕ್ತಿ ಏಕಾಗ್ರತೆ ಮತ್ತು ಸ್ಮರಣ ಶಕ್ತಿ ವೃದ್ಧಿಸುತ್ತದೆ.3. ಕಾಗದ ಕತ್ತರಿ ಕಲೆಯಿಂದ ತಾಳ್ಮೆ, ಒತ್ತಡ ನಿವಾರಣೆಗೆ ಸಹಕಾರಿ4. ಕಾಗದ ಕತ್ತರಿ ಕಲೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಬೆರಳ ತುದಿಯನ್ನು ಫಿಸಿಯೋಥೆರಪಿ ಚಿಕಿತ್ಸೆಯಂತೆ ಬಳಸಿಕೊಳ್ಳಲಾಗುತ್ತಿದೆಯಂತೆ ಇದರಿಂದ ಮಿದುಳು ಚುರುಕಾಗುತ್ತದೆ.5. ಕತ್ತರಿಯನ್ನು ಸುರಕ್ಷಿತವಾಗಿ ಬಳಸುವ ಕಲಿಕೆ.6. ಕಾಗದ ಮಡಚಿ ಕತ್ತರಿಸುವುದರಿಂದ ಜ್ಯಾಮಿತಿಯ ವಿವಿಧ ಆಕಾರಗಳ ಪರಿಚಯ ಚೌಕಾಕಾರ, ತ್ರಿಭುಜ, ಆಯತಾಕಾರ ಮುಂತಾದವುಗಳ ಬಗ್ಗೆ ಅರಿವು.7. ಕಾಗದವನ್ನು ಒಂದಕ್ಕಿಂತ ಹೆಚ್ಚು ಬಾರಿ ಮಡಚಿ ಕತ್ತರಿಸುವುದರಿಂದ ಸಮರೂಪದ (ಸೆಮಿಟ್ಟಿಕಲ್)ಅನೇಕ ಮಾದರಿಗಳು ದೊರೆಯುತ್ತದೆ.8. ಹಬ್ಬಗಳ ಸಂದರ್ಭದಲ್ಲಿ ಗೃಹ ಅಲಂಕಾರ, ಶಾಲೆ, ಕಛೇರಿಗಳ ಅಲಂಕಾರಕ್ಕೆ ಬೇಕಾಗುವ ರಂಗೋಲಿ ವಿನ್ಯಾಸ, ತೋರಣ, ಮಂಟಪಗಳ ಅಲಂಕಾರ, ಪ್ರಭಾವಳಿ ವಿನ್ಯಾಸಗಳ ರಚನೆ ಇನ್ನೂ ಹಲವಾರು ಕಾರ್ಯಕ್ರಮಗಳಿಗೆ ಬಹು ಉಪಯೋಗಿ.9. ಕಾಗದ ಕಲೆಯು ಪಠ್ಯದಿಂದ ಪಠ್ಯೇತರ ವಿಷಯಕ್ಕೆ ವಿಜ್ಞಾನ ಗಣಿತದ ಮಾದರಿ ತಯಾರಿಸಲು ಮತ್ತು ಸ್ಥಧರ್ೆಯಲ್ಲಿ ಭಾಗವಹಿಸಲು ಉಪಯುಕ್ತವಾಗಿದೆ.10. ಕಾಗದ ಕತ್ತರಿಕಲೆಯ ವಿನ್ಯಾಸಗಳನ್ನು ಬಟ್ಟೆ ಹಾಗು ವಸ್ತುಗಳ ಮೇಲೆ ಮುದ್ರಿಸಲು ಒತ್ತುಕಲೆಯಾಗಿ (ಖಿಜಟಿಟಜ)ಬಳಸಬಹುದು

ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಲ್ಲಿ ಕಾಗದ ಕತ್ತರಿ ಕಲೆಯಿಂದ ಬಿಡುವಿನ ಸಮಯದ ಸದುಪಯೋಗ, ಕಲೆಯ ಬಗ್ಗೆ ಆಸಕ್ತಿ. ಮಕ್ಕಳು ತಮ್ಮದೇಯಾದ ವಿಭಿನ್ನ ವಿನ್ಯಾಸಗಳ ಕಲ್ಪನೆ-ರಚನೆ, ಏಕಾಗ್ರತೆ, ತಾಳ್ಮೆಯಿಂದ ಕಲಾಕೃತಿಗಳ ರಚನೆ, ಕರಕುಶಲ ಕಲೆಗಳ ಬಗ್ಗೆ ಅರಿವು-ಮಾಹಿತಿ, ಕಾಗದ ಕತ್ತರಿಕಲೆಯು ಮಕ್ಕಳ ಕ್ರಿಯಾಶೀಲ ಮನಸ್ಸಿಗೆ ಉತ್ತಮ ವೇದಿಕೆ.
ಕಾಗದ ಕತ್ತರಿಕಲೆಯು ಕೇವಲ ಮಕ್ಕಳಿಗಾಗಿ ಸೀಮಿತವಾಗಿರದೆ ಎಲ್ಲಾವಯೋಮಾನದವರನ್ನು ಚುಂಬಕದ ರೀತಿ ಆಕಷರ್ಿಸುವ ಕಲೆ. ಈ ಕಲೆಯಿಂದ ಸೃಜನಶೀಲತೆ ಹೆಚ್ಚಿಸುವ ಧ್ಯಾನದಂತೆ, ಒತ್ತಡ ನಿವಾರಣೆಯಂತೆ, ಚಿಕಿತ್ಸೆಯಂತೆ ಬಳಸುವ ಕಲೆಯಾಗಿದೆ.

ಒತ್ತಡವೇ ತುಂಬಿರುವ ಈ ಜಗತ್ತಿನಲ್ಲಿ ಕಲೆಯೇ ಒತ್ತಡವನ್ನು ಕಳೆಯುವ ಸಾಧನ –

ಮೈಸೂರು ಆರ್ಟ್ ಗ್ಯಾಲರಿಮತ್ತುಸಾಂಝಿ ಕಲಾಲೋಕ ಸಂಯುಕ್ತ ಆಶ್ರಯದಲ್ಲಿಎಸ್.ಎಫ್.ಹುಸೇನಿ ಮೈಸೂರುರವರ ಪರಿಕಲ್ಪನೆಯಲ್ಲಿ ಸಾಂಝಿ ಮಾಸ್ಕ್ಜನಪದ ಕಾಗದ ಕತ್ತರಿ ಕಲೆಯಲ್ಲಿ ಮುಖವಾಡಪ್ರದರ್ಶನ ಮತ್ತು ಕಾರ್ಯಾಗಾರಸ್ಥಳ:- ಮೈಸೂರು ಆರ್ಟ್ ಗ್ಯಾಲರಿ 12ನೇ ಕ್ರಾಸ್, ರಾಮಾನುಜರಸ್ತೆ, ಮೈಸೂರು-04.ದಿನಾಂಕ:- 01.02.2014 ಬೆಳಿಗ್ಗೆ 11 ಗಂಟೆಗೆಉದ್ಘಾಟನೆ:- ಶ್ರೀ ಡಿ.ಮಹದೇವಪ್ಪ, ಪ್ರಧಾನ ಸಂಪಾದಕರು, ಪ್ರಜಾನುಡಿ ದಿನಪತ್ರಿಕೆ.ಮುಖ್ಯ ಅತಿಥಿ:-ಶ್ರೀಮತಿ ನಿರ್ಮಲ ಮಠಪತಿ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಜಿಲ್ಲೆ.      ಶ್ರೀ.ಪಿ.ಎಂ.ಸುಬ್ರಮ್ಮಣ್ಯ, ಸಾಹಿತಿಗಳು, ಕನಕಪುರ.

 

 

‍ಲೇಖಕರು avadhi

1 February, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading