
ಲಿವ್ಯಾ ಕುಕ್ಕುನೂರ್
ದಿನವೆಲ್ಲ ಕನಸು ,
ನಡುವೊಂದು ನಿಷ್ಠುರ ಮೂನಿಸು ।
ನಗು ಒಂದು ಗಳಿಗೆಯಷ್ಟೇ , ಮತ್ತೆ ಮೂವತ್ತಕ್ಕೆ
ಬಂತದು ಆ ಅವಧಿ ಪೂರ್ಣವಿರಾಮದಂತೆ ।।
ಮೈ ಎಲ್ಲಾ ಕಿತ್ತು ತಿನ್ನುವ ನೋವು
ಬಟ್ಟೆಯ ಚಿಕ್ಕ ತುಂಡು ಸಾಕಾಗದು ।
ಮೊಗದಲ್ಲಿ ಮೊಡವೆ !
ನಾ ಹೋಗಬೇಕು ಆಫೀಸಿಗೆ ।।
ಈ ನವಯುಗದ ಸ್ವಾಭಿಮಾನಿ, ನಾ ಹೆಣ್ಣು;
ಗಂಡನ ಹೆಸರ ಹೇಳುಲು ನನಗಿಲ್ಲ ಅಂಜಿಕೆ ।
ಆದರೂ, ನನ್ನ ಬದುಕ ವಿರಾಮದ ಜೊತೆಗಾರ,
ನಿನ್ನ ಹೆಸರ ಹೇಳಲೆಷ್ಟು ಮುಜುಗರ !
ಆರ್ಡಿಯಕ್ಸ್ ಬಾಂಬಿನಂತೆ ನನ್ನ ಬ್ಯಾಗೊಳು ಬಚ್ಚಿಟ್ಟುಕೊಳಲು
ಯಾವ ದೇಶ ನಾಶಕಲ್ಲ; ನನ್ನ ಸ್ವಾಭಿಮಾನ ಉಳಿಸಲು ।
ನಿನ್ನ ಹೆಸರು ಹೇಳಲಿನ್ನಿಲ್ಲ, ಅನುಮಾನ – ಮುಜುಗರ
ಟಾಂಫೊನ್(Tampon), ನೀ ನನ್ನ ಅವಧಿಯ ಜೊತೆಗಾರ ।।






Very realistic poem… Proud u turned reality in form of poem. Let it reach more people and men should understand the sufferings what women go through every month.
Brilliant livya….way to go
Thanks Amulya 🙂