ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ʼಅಮ್ಮ ಪ್ರಶಸ್ತಿ’ ಪ್ರದಾನ ಫೋಟೋ ಆಲ್ಬಂ

22 ನೇ ವರ್ಷದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ ‘ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಸೇಡಂನಲ್ಲಿ ಮಾಜಿ ಸಚಿವರಾದ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರು ‘ಅಮ್ಮ ಪ್ರಶಸ್ತಿ’ ಪ್ರದಾನ ಮಾಡಿದರು.

ಮಧುರಾಣಿ ಎಚ್ ಎಸ್ (ನೀಲಿ ಚುಕ್ಕಿಯ ನೆರಳು-ಕವನ ಸಂಕಲನ), ಎಸ್.ಗಂಗಾಧರಯ್ಯ (ಮಣ್ಣಿಮ ಮುಚ್ಚಳ-ಕಥಾ ಸಂಕಲನ), ಆಶಾ ರಘು (ಮಾಯೆ-ಕಾದಂಬರಿ), ಸಬಿತಾ ಬನ್ನಾಡಿ (ಇದಿರು ನೋಟ- ಅಂಕಣ ಸಂಕಲನ), ಡಾ.ಅಪ್ಪಗೆರೆ ಸೋಮಶೇಖರ (ಬೆವರ ಬವಣೆ-ಲೇಖನಗಳ ಸಂಕಲನ) ಹಾಗೂ ಡಾ.ಎಂ ಬಿ ಕಟ್ಟಿ (ಆರೂಢ ಪಂಥ-ಲೇಖನಗಳ ಸಂಕಲನ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು, ಮಾಜಿ ಉಪಸಭಾತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ನಿವೃತ್ತ ಪ್ರಾಚಾರ್ಯ ಪ್ರೊ.ಹಾಶರೆಡ್ಡಿ ಮನ್ನೆ ಇದ್ದರು.

ಅಮ್ಮನ ಕುರಿತು ಯುವ ಗಾಯಕ ವೀರೇಂದ್ರ ಭಂಟನಳ್ಳಿ ಹಾಡು ಹಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಮೇಷ್ಟ್ರು ನಾಗಪ್ಪ ಮುನ್ನೂರ ಅವರ ಸ್ಮರಣಾರ್ಥ ಇಬ್ಬರು ಹೆಣ್ಣುಮಕ್ಕಳಿಗೆ ಸ್ವಾವಲಂಬಿ ಬದುಕಿಗಾಗಿ ಹೊಲಿಗೆ ಮಷಿನ್ ಗಳನ್ನು ವಿತರಿಸಲಾಯಿತು.

ಮುನ್ನೂರು ಪ್ರತಿಷ್ಠಾನ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಿದ್ದಪ್ರಸಾದರೆಡ್ಡಿ ಮುನ್ನೂರ ಸ್ವಾಗತಿಸಿದರು. ವಿಜಯಭಾಸ್ಕರ್‌ ರೆಡ್ಡಿ ಮುನ್ನೂರ ವಂದಿಸಿದರು.

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ

‍ಲೇಖಕರು Admin

28 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading