ನನ್ನ ಸಂಸ್ಥೆ ಅಸ್ತಿತ್ವ ಚಾರಿಟೇಬಲ್ ಟ್ರಸ್ಟ್ ಬಗ್ಗೆ ತಮಗೆ ತಿಳಿದಿರಬಹುದು. ಅಸಹಾಯಕ ಹೆಂಗಸರ ಮತ್ತು ಮಕ್ಕಳ ಸಂರಕ್ಷಣೆಗಾಗಿ ನಮ್ಮ ಕೈಲಾದಷ್ಟು ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಹೊಸ ಯೋಚನೆ-ಯೋಜನೆ ಹೀಗಿದೆ:
ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ವಿಡಿಯೋ ಡಾಕ್ಯುಮೆಂಟರಿ ಮಾಡಬೇಕೆಂದಿರುವುದು. ಇದಕ್ಕೋಸ್ಕರ ಭಾರತದ ಗಲ್ಲಿಗಲ್ಲಿಗಳಲ್ಲಿ ಜಾಗೃತಿ ಪ್ರಚಾರ ಮಾಡುವುದು. ಇದು ಯಾವುದೇ ಹಣಾಪೇಕ್ಷೆಯಿಲ್ಲದೆ ಮಾಡುತ್ತಿರುವ ಸಂಸ್ಥೆಯ ಕೆಲಸ.
ನಿಮಗೆ ಆಸಕ್ತಿಯಿದ್ದಲ್ಲಿ 3ರಿಂದ 5 ನಿಮಿಷಗಳ ನಿಮ್ಮ ವಿಡಿಯೋ ಕ್ಲಿಪ್ಪಿಂಗ್ಅನ್ನು ಈಮೇಲ್ ಮಾಡಿ astitvalegal@gmail.com. ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು, ಅಡುಗೆಮನೆಯಲ್ಲಿನ ನಿಮ್ಮ ಅಮ್ಮ, ನಿಮ್ಮ ಮನೆಯ ಕೆಲಸಕ್ಕೆ ಬರುವ ಪುಟ್ಟಮ್ಮ, ತಂಗಿ, ತಮ್ಮ, ಮಗಳು, ಅಪ್ಪ ಯಾರನ್ನು ಬೇಕಾದರೂ ಸೇರಿಸಿಕೊಳ್ಳಿ.
ಹೊರಗಾದರೂ ಸರಿ ಕಚೇರಿಯಲ್ಲಾದರೂ ಸರಿ ನಿಮ್ಮಿಷ್ಟವಾದ ಸ್ಥಳದಲ್ಲಿ ಚಿತ್ರೀಕರಿಸಿ. ನಿಮ್ಮ ಅಭಿಪ್ರಾಯದ ಧ್ವನಿ ಸ್ಪಷ್ಟವಾಗಿರಲಿ. ನಿಮ್ಮ ಕ್ರಿಯಾಶೀಲತೆಯನ್ನು ಒರೆಗೆಹಚ್ಚಿ ಉದ್ದೇಶ ಸಾಫಲ್ಯಕ್ಕೆ ನಮ್ಮೊಂದಿಗೆ ಕೈಜೋಡಿಸಿ. ಸ್ಪಷ್ಟವಾದ, ಕ್ರಿಯಾಶೀಲವಾದ ಮುದ್ರಿಕೆಗೆ ಆದ್ಯತೆ. ಜುಲೈ 20ರೊಳಗೆ ಕಳುಹಿಸಿಕೊಡಿ. ಹೆಚ್ಚಿನ ವಿವರ ಬೇಕಿದ್ದರೆ ಈಮೇಲ್ ಮಾಡಿ.
ಧನ್ಯವಾದಗಳು,
ಅಂಜಲಿ ರಾಮಣ್ಣ, ಬೆಂಗಳೂರು







nimma kakalige nanu krutagna,illi ella anyaya,mosa,kallatana,vanchane,ellavu iruvaga manusyana badukina bagge ,tayiyagi,hendatiyagi,tangiyagi,gelati agi irauva henninabagge,hengasare hortata madabeku nimmandige nanu iruve agatyavadare nannolagina hennu masannu balasikolli.d,ravi varma hospet 9902596614