
ಉದಯ ಗಾಂವಕರ್
ಕಾರ್ಕಳದ ಮೊರಾರ್ಜಿ ಶಾಲೆಯಲ್ಲಿ ಆಗ ಒಂಬತ್ತನೇ ತರಗತಿ ಓದುತ್ತಿದ್ದ ಶರಧಿ ಎನ್ನುವಾಕೆ ತನ್ನ ಮಾದರಿಗಾಗಿ ರಾಷ್ಟ ಮಟ್ಟದ ‘Inspire’ ಪ್ರಶಸ್ತಿ ಪಡೆದಿದ್ದಳು. ಹೊರಗೆ ಒಣಗಿಸಲು ಹಾಕಿದ ಬಟ್ಟೆ ಮಳೆ ಬರುವ ಮುಂಚೆ ತಾನಾಗೇ ಮಾಡಿನ ಒಳಸೇರುವ ಮಾದರಿಯದು. ಸಮುದಾಯದ ರಂಗರಂಗು ರಜಾಮೇಳಕ್ಕೆ ನಾವು ಶರಧಿಯನ್ನು ಆಹ್ವಾನಿಸಿದ್ದೆವು.
ಕುತೂಹಲದಿಂದ ನಾನಾಕೆಯಲ್ಲಿ ಕೇಳಿದೆ- ‘ಇಂತದ್ದೊಂದು ಮಾದರಿ ಮಾಡುವ ಯೋಚನೆ ಹೇಗೆ ಬಂತು?’ ‘ಹಾಸ್ಟೆಲ್ ನಲ್ಲಿ ವಾಸವಾಗಿರೋ ನಂಗೆ ಶಾಲೆಗೆ ಬಂದಾಗಲೂ ಹೊರಗೆ ಒಣಗಿಸಲು ಹಾಕಿ ಬಂದ ಬಟ್ಟಯದೇ ಚಿಂತೆಯಾಗುತಿತ್ತು. ಮೋಡ ಮುಚ್ಚಿ ಕಪ್ಪಾಗುತ್ತಲೇ ಆತಂಕ ಆಗುತಿತ್ತು. ತಾನಾಗೇ ಬಟ್ಟೆ ಒಳಸರಿದು ಮತ್ತೆ ಬಿಸಿಲು ಬಂದಾಗ ಹೊರಬಂದರೆ ಎಷ್ಟು ಚೆನ್ನಾಗಿರ್ತಿತ್ತು ಅನ್ನಿಸುತಿತ್ತು’ ಎಂದಳು.
ಇಂತಹ ಯೋಚನೆ ಮಕ್ಕಳಿಗೆ ಬರುತ್ತದೆ. ಆದರೆ, ಯೋಚನೆಗಳೆಲ್ಲ ಕಾರ್ಯರೂಪಗೊಳಿಸಲು ಸಾಧ್ಯವಾಗುವುದಿಲ್ಲ. ಶರಧಿಯನ್ನೇ ಕೇಳಿದೆ- ‘ಈ ಯೋಚನೆ ಬಂದದ್ದೇ ಮಾಡೆಲ್ ಮಾಡಿದೆಯಾ?’ ‘ಇಲ್ಲ ಸರ್, ನನ್ನ ಯೋಚನೆಯನ್ನು ನಮ್ಮ ವಿಜ್ಞಾನ ಶಿಕ್ಷಕರಲ್ಲಿ ಹೇಳಿದೆ. ಅವರು ಖುಷಿಗೊಂಡರು. ಇದೇ ಐಡಿಯಾ ಬಳಸಿ ಮಾಡೆಲ್ ಮಾಡಲು ತಾಂತ್ರಿಕ ಸಹಾಯ ಮಾಡಿದರು.

ಮಾದರಿ ಕೆಲಸ ಮಾಡುವ ತತ್ವವನ್ನು ತಿಳಿಸಿದರು. ಯೋಚನೆಯಷ್ಟೇ ನಂದು.. ಮತ್ತೆಲ್ಲ ಸರ್ ಸಹಾಯದಿಂದ ಮಾಡಿದೆ. ಎಂದಳು. ಅವರ ನಂಬರ್ ಕೊಡು ಅಂದೆ. ಸುಧೀರ್ ಸರ್ ಅವರಿಗೆ ಅಭಿನಂದಿಸಿದೆ. ನಿಮ್ಮಂತಹ ಶಿಕ್ಷಕರು ಎಲ್ಲರಿಗೂ ಸಿಗಬೇಕು ಎಂದೆ. ತುಂಬಾ ವಿನಯದ ಮನುಷ್ಯ. ನಕ್ಕರಷ್ಟೇ!!
ಆ ನಂತರ ಕಾರ್ಕಳಕ್ಕೆ ವರ್ಗವಾದಾಗ ಅವರನ್ನು ಭೇಟಿಯಾಗಿದ್ದೆ. ನೂರಾರು ಸಾವಿರಾರು ಮಕ್ಕಳ, ಪಾಲಕರ ಹೃದಯ ಗೆದ್ದವರು ಸುಧೀರ್. ಕೋವಿಡನ್ನು ಗೆಲ್ಲಲಾಗಲಿಲ್ಲ. ಕುಟುಂಬದ ದುಃಖವನ್ನು ಕಾಲವೇ ಸಂಭಾಳಿಸಬೇಕು. ನಮನಗಳು ಸುಧೀರ ಸರ್.






ಸಂತಾಪಗಳು ಸುಧೀರ್ ಸರ್…