ಒಡನಾಟ
ಎಸ್ ಅರ್ ವಿಜಯಶಂಕರ
ವ್ಯಕ್ತಿಚಿತ್ರಗಳು
ಆನಂದ ಕಂದ ಗ್ರಂಥಮಾಲೆ
ಮಲ್ಲಾಡಿಹಳ್ಳಿ -೫೭೭೫೫೧
ಚಿತ್ರದುರ್ಗ
ಈ ಬರಹಗಳನ್ನು ಓದುವಾಗ ನನಗೆ ಆತ್ಮೀಯವಾಗಿ ಕಂಡದ್ದು ವಿಜಯಶಂಕರ ಅವರ ವಿಸ್ತಾರ ಓದು ಮತ್ತು ಸೂಕ್ಷ್ಮ ಗ್ರಹಿಕೆ. ಸಣ್ಣ ಪ್ರಸಂಗಗಳನ್ನೂ ಅನೂಹ್ಯವಾದ ಎತ್ತರದಲ್ಲಿ ಚಿಂತಿಸಬಲ್ಲಂತೆ ಮಾಡುವ ಅವರ ವಿಶ್ಲೇಷಣೆಯಿಂದಾಗಿ ಒಂದು ಬೌದ್ಧಿಕ ಮತ್ತು ಮಾನವೀಯ ನೆಲೆಗಳು ಇಲ್ಲಿನ ಬರಹಗಳಿಗೆ ತಾನೇ ತಾನಾಗಿ ಒದಗಿ ಬಂದಿವೆ.
ಇಲ್ಲಿ ರೂಪುಗೊಂಡ ಹಲವು ವ್ಯಕ್ತಿತ್ವಗಳು ಸಾಹಿತ್ಯ-ಸಂಸ್ಕೃತಿ ವಲಯದವು, ಇನ್ನೂ ಹಲವು ಸಂಶೋಧನಾ ವಲಯಕ್ಕೆ ಸೇರಿದವು: ಇನ್ನಷ್ಟು ಲೋಕದ ಇನ್ನು ಹಲವು ಜ್ಞಾನ ವಲಯಕ್ಕೆ ಸೇರಿದವು. ಇದಲ್ಲದೇ ಸಂಭಂದಗಳನ್ನೇ ನೆಮ್ಮಿ ಬದುಕುವ, ಆದ್ದರಿಂದಲೇ ಹೃದಯದ ಬಾಗಿಲು ಬಡಿಯುವ ಚೇತನಗಳು ಹಲವಾರು ಇಲ್ಲಿವೆ. ಆದರೆ ಒಂದು ಇನ್ನೊಂದಕ್ಕೆ ಹೆಚ್ಚು ಕಡಿಮೆ ಇಲ್ಲದಂತೆ ವ್ಯಕ್ತಿತ್ವಗಳ ವೈವಿಧ್ಯತೆಯನ್ನೂ, ಸೂಕ್ಷ್ಮಗಳನ್ನೂ ಹಿಡಿದ ವೈಶಿಷ್ಟ್ಯ ವಿಜಯಶಂಕರ ಅವರ ಭಾಷೆಗೆ ಸಲ್ಲುತ್ತದೆ.
-ಡಾ. ಬಸವರಾಜ ಕಲ್ಗುಡಿ






0 Comments