ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಕನಸು…

– ಹನುಮಂತ ಹಾಲಿಗೇರಿ

ಇಲ್ಲಿ ನಾನು “ಮಡೆಸ್ನಾನ ಎಂಬ ಅಸಹ್ಯವನ್ನು ಮೆಳುಜಾತಿಯವರೇ ವಿರೋಧಿಸುವನ್ತಿದ್ದರೆ ‘ ಎಂಬ ನನ್ನ ಮೊದಲಿನ  ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದೇನೆ.

ಹೀಗೊಂದು ಕನಸು: ಮಡೆಸ್ನಾನ ಎಂಬ ಅಸಹ್ಯವನ್ನು ಮೇಲ್ಜಾತಿಯವರೆ ಪ್ರತಿಭಟಿಸುವಂತಿದ್ದರೆ….

`ಹಾಡ ಹಾಡೋ ಅಂದ್ರ ಹಾಡಿದ್ದ ಹಾಡತಾನ ಕಿಸಬಾಯಿದಾಸ’ ಅಂತ ಬೇಸರ ಮಾಡ್ಕೋಬೇಡಿ. ನಾನು ಏನು ಆಗಬಾರದು ಅಂತ ಆಶಿಸಿ ಮಡೆಸ್ನಾನದ ಬಗ್ಗೆ ಲೇಖನ ಬರೆದಿದ್ದೇನೋ ನನ್ನ ಲೇಖನಕ್ಕೂ ಅದೆ ಗತಿಯಾಗಿದೆ. ಲೇಖನಕ್ಕೆ ಪರ-ವಿರೋಧಗಳ ಪ್ರತಿಕ್ರಿಯೆಗಳು ಬಂದಿವೆಯಾದರೂ ಅದರಲ್ಲಿ ಬಹುತೇಕ ಮೇಲ್ವರ್ಗದವರು ಮಡೆಸ್ನಾನದ ಪರವಾಗಿಯೂ ಕೆಳವರ್ಗದವರು ವಿರೋಧವಾಗಿ ಬರೆದಿದ್ದಾರೆ. ಇದು ತಿರುಗುಮುರುಗಾಗಿದ್ದರೆ ಎಷ್ಟೊಂದು ಚಂದವಿರುತ್ತತ್ತಲ್ಲವೇ?

ಲೇಖನ ಪ್ರಕಟವಾದ ದಿನ ಪೇಸ್ಬುಕ್ನಲ್ಲಿ ಕೆಲವರಂತೂ ನಿನಗೆ ಒಂದೆರಡು ಪ್ರಶಸ್ತಿಗಳು ಬಂದಿದ್ದು, ಅವು ನಿನ್ನನ್ನು ಹೀಗೆ ಬರೆಸುತ್ತವೆ. ದೇವರ ಸಮಾನವಾದ ಗೋವು ಕಡಿದು ಗೋಮಾಂಸ ತಿನ್ನುವ ಅಸಹ್ಯ ಎನಿಸದ ನಿಮ್ಮಂಥ ವಿಕೃತ ಮನಸ್ಸಿನವರಿಗೆ ಮಡೆಸ್ನಾನದಂತಹ ಆಚರಣೆಗಳು ಮಾತ್ರ ಅಸಹ್ಯ ಎನಿಸುತ್ತವೆ ಎಂದು ನನ್ನ ವಯಕ್ತಿಕ ನಿಂಧನೆಗೆ ಇಳಿದುಬಿಟ್ಟರು.

ನಮ್ಮ ಮನೆಯಲ್ಲಿ ಕೂಡ ಆಕಳು, ಎಮ್ಮೆ, ಕುರಿ, ಕೋಳಿ, ಮೇಕೆ, ನಾಯಿ, ಬೆಕ್ಕುಗಳಿವೆ. ಈಗಲೂ ಕೂಡ ನಾನು ಊರಿಗೆ ಹೋದಾಗ ಎಮ್ಮೆ-ಆಕಳಗಳ ಮೈದಡವಿ ಮೈತೊಳೆದು, ಸಗಣಿ ಬಾಚಿ, ಮೇವು ಹಾಕುವ ಕೆಲಸವನ್ನು ಖುಷಿಯಿಂದ ಮಾಡುತ್ತೇನೆ. ಆದರೆ ಅವೆಲ್ಲ ನಮಗೆ ದೇವರು ಎನ್ನುವುದಕ್ಕಿಂತಲೂ ನಮ್ಮ ತೋಟ ಎಂಬ ಮೀನಿ ವಿಶ್ವದ ಜೀವ ಸದಸ್ಯರು. ಒಮ್ಮೊಮ್ಮೆ ನಾಯಿ ಮೇಕೆ ಮರಿಯನ್ನು, ಬೆಕ್ಕು ಕೋಳಿಮರಿಯನ್ನು ಬೇಟೆಯಾಡುವುದು ಇರುತ್ತದೆ. ಹಾಗಂತ ನಮ್ಮ ತೋಟದ ಮಾಲಿಕ ನಮ್ಮಪ್ಪ ಬೆಕ್ಕು ಅಥವಾ ನಾಯಿಯ ಜೀವ ತೆಗೆಯುವಂಥ ಕ್ರಮ ತೆಗೆದುಕೊಂಡಿದ್ದಿಲ್ಲ. ಹಣದ ಅಗತ್ಯಕ್ಕೆ ಅನುಗುಣವಾಗಿ ಈ ಜೀವ ಸದಸ್ಯರನ್ನು ಮಾರಾಟ ಮಾಡೊದು ಅಥವಾ ಮುದಿಯಾದ ಆಕಳು, ಎತ್ತು ಅಥವಾ ಎಮ್ಮೆಗಳನ್ನು ಕಟುಕರಿಗೆ ಮಾರುವುದು ಇದೆ. ಕೆಲವೊಮ್ಮೆ ಮನೆಗೆ ನೆಂಟರು ಬಂದ ಖುಷಿಯಲ್ಲಿ ಘಮಘಮಿಸುವ ಕೋಳಿ ಸಾರು ಸಿದ್ದವಾಗುತ್ತದೆ.

ಇದನ್ನೆಲ್ಲ ಯಾಕೆ ಹೇಳಬೇಕಾಗಿ ಬಂತೆಂದರೆ ಮಾಂಸಾಹಾರ ನಿಸರ್ಗದ ನಿಯಮದಲ್ಲಿಯೆ ಮಿಳಿತವಾಗಿರುವಾಗ ಅದನ್ನು ಅಸಹ್ಯ ಎಂದರೆ ಏನು ಹೇಳುವುದು. ಒಂದು ಜೀವಿಯಲ್ಲಿಯೆ ಇನ್ನೊಂದು ಜೀವಿಯ ಆಹಾರವಿದೆ. ಹಾಲು ಕೊಡುವ ಆಕಳು, ಕರು, ಹೊಲ ಉಳುಮೆ ಮಾಡಲು ಅರ್ಹವಿರುವ ಎತ್ತನ್ನು ಹತ್ಯೆ ಮಾಡಬಾರದು, ಇನ್ನುಳಿದಂತೆ ಮುದಿಯಾದ ಗೋವನ್ನು ಮಾಂಸಕ್ಕೆ ಬಳಸಬಹುದು ಎಂದು ದೇಶದ ಕಾನೂನೆ ಹೇಳುತ್ತೆ. ಅಷ್ಟಕ್ಕೂ ಗೋವು ಒಂದನ್ನೆ ಮಾತ್ರ ಹತ್ಯೆ ಮಾಡಬಾರದು ಎಂದು ಪಟ್ಟು ಹಿಡಿಯುವ ಇಬ್ಬಂದಿತನದ ಹಿಂದಿನ ಹುನ್ನಾರವೇನು? ಒಂದು ವೇಳೆ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇದಿಸಿದರೆ ಮಂಸಾಹಾರವನ್ನು ಅವಲಂಭಿಸಿರುವ ಶೆ.35ರಷ್ಟು ಜನರು ಪಯರ್ಾಯ ವ್ಯವಸ್ಥೆ ಏನು. ಹಾಗೆ ನೋಡಿದರೆ ನಮ್ಮೂರ ಉತ್ತರ ಕನರ್ಾಟಕದ ಕಡೆ ಹೈನುಗಾರಿಕೆಗೆ ಸೂಕ್ತವಾದ ಪ್ರಾಣಿ ಎಮ್ಮೆ. ನಮ್ಮೂರಿನ ಹುಡುಗರು ಈಗಲೂ ಕೂಡ ಎಮ್ಮೆ ಹಾಲು, ಮೊಸರು, ಬೆಣ್ಣೆ ತಿಂದುಕೊಂಡೆ ಗರಡಿ ಮನೆ ಸಾಥ್ ಮಾಡುವುದು. ಔಷದಿಗೆ ಹೆಚ್ಚು ಬಳಕೆಯಾಗುವುದು ಮೇಕೆ ಹಾಲು. ಆದರೆ ಗೋಹತ್ಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳಂತೆ ಎಮ್ಮೆ-ಮೇಕೆಗಳ ಹತ್ಯೆ ವಿರೋಧಿಸಿ ಪ್ರತಿಭಟನೆಗಳು ನಡೆದದ್ದನ್ನು ನಾನು ಎಲ್ಲಿಯೂ ಕೇಳಿಲ್ಲ.

ಅಷ್ಟಕ್ಕೂ ಪ್ರಾಣಿ ಬಲಿಯನ್ನು ಸಾರ್ವಜನಿಕವಾಗಿ ಹಬ್ಬದಂತೆ (ಮಡೆಸ್ನಾನದಂತೆ) ಆಚರಿಸುವುದನ್ನು ನಾನು ವಿರೋಧಿಸುತ್ತೇನೆ. ಸರಕಾರವೇ ಪ್ರಾಣಿಬಲಿಯನ್ನು ನಿಷೇದಿಸಿದೆಯಲ್ಲ. ಆದರೂ ಕೆಲವು ದಲಿತ ಸಮುದಾಯಗಳು ಕದ್ದುಮುಚ್ಚಿ ತಮ್ಮ ದೇವರುಗಳಿಗೆ ಪ್ರಾಣಿಬಲಿ ಕೊಡುವುದು ಮತ್ತು ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲುಪಾಲಾಗುವುದು ಆಗಾಗ ನಡೆಯುತ್ತಲೆ ಇರುತ್ತದೆ.

ಆದರೆ ಈ ಮಡೆಸ್ನಾನ ಎಂಬ ಘನ ಆಚರಣೆಗೆ ಸರಕಾರ ಮತ್ತು ಕೆಲವು ಮಠಾಧಿಪತಿಗಳೆ ಬೆಂಬಲ ಸೂಚಿಸಿದ್ದಾರೆ. ಅದರಲ್ಲೂ ವಿ.ಎಸ್.ಆಚಾರ್ಯ ಎಂಬ ಮಾನ್ಯ ಸಚಿವರಂತೂ `ಜನರ ನಂಬಿಕೆಗಳನ್ನು ನಾವು ಮುಟ್ಟುವುದಿಲ್ಲ. ಈ ಮಡೆಸ್ನಾನದಿಂದ ಅವರ ಚರ್ಮವ್ಯಾದಿಗಳು ಕಡಿಮೆಯಾಗುವುದಿದ್ದರೆ ಅದಕ್ಕೆ ನಾವೇಕೆ ಅಡ್ಡಬರುವುದು ಎಂದು ತಿಪ್ಪೆ ಸಾರಿದ್ದಾರೆ. ಅವರು ಈ ಹಿಂದೆ ಡಾಕ್ಟರಿಕೆಯನ್ನು ಓದಿ ವೈದ್ಯರು ಆಗಿದ್ದುದರಿಂದ ಅವರ ಹೇಳಿಕೆ ವಿಶೆಷ ಕಳೆಯಿಂದ ಕೂಡಿದೆ.

ಪ್ರಾಣಿಬಲಿಯಂಥ ಆಚರಣೆಗಳನ್ನು ದಲಿತರು ಆಚರಿಸಿದರೆ ಅವರನ್ನು ಒದ್ದು ಜೈಲಿಗೆ ಹಾಕುವ ಸರಕಾರ, ಇನ್ನೊಂದೆಡೆ ಮೇಲ್ವರ್ಗದವರು ದಲಿತರ ಮೇಲೆ ವಿಜಯೋತ್ಸವದಂತೆ ಆಚರಿಸುವ ಮಡೆಸ್ನಾನದಂತಹ ಅನಾಗರಿಕ ಆಚರಣೆಗೆ ಬೆಂಬಲ ಘೋಷಿಸುತ್ತದೆ. ಕೆಲವರು ಎಂಜಲೆಲೆಯ ಮೇಲೆ ಕೇವಲ ದಲಿತರಷ್ಟೆ, ಎಲ್ಲ ವರ್ಗದವರು ಉರುಳುತ್ತಾರೆ ಎಂದು ಸಮಥರ್ಿಸಿಕೊಳ್ಳುತ್ತಾರೆ. ಆದರೆ ಉಂಡು ಎಂಜಲು ಮಾಡುವವರು ಬ್ರಾಹ್ಮಣರು ಮಾತ್ರವಲ್ಲವೆ. ಇಷ್ಟಕ್ಕೂ ಯಾರೆ ಉರುಳಾಡಲಿ. ದೇವರ ಹೆಸರಿನಲ್ಲಿ ಹೀಗೆ ಎಂಜಲಿನ ಮೇಲೆ ಉರುಳಾಡುವುದು ಸರಿಯೆ?. ದೇವರು ದೈರ್ಯ ವಹಿಸಿ ಪ್ರತ್ಯಕ್ಷವಾಗುವಂತಿದ್ದರೆ ಈ ಅಸಹ್ಯವನ್ನು ಸಹಿಸಿಕೊಳ್ಳುತ್ತಿದ್ದನೆ?

ಮಡೆಸ್ನಾನ ತಪ್ಪು ಅಂತ ಗೊತ್ತಿದ್ದೂ ಸಮಥರ್ಿಸಿಕೊಳ್ಳುವುದರ ಬಗ್ಗೆ ನಗೆ ಅತೀವ ಬೇಸರವಾಗಿದೆ. ಹೀಗೆ ಸಮಥರ್ಿಸಿಕೊಳ್ಳವವರಲ್ಲಿ ಬಹುತೇಕ ಮೇಲ್ವರ್ಗದವರೆ ಅಗಿರುವುದು ಕಾಕತಾಳಿಯವೆಂದೆನೂ ಅನಿಸುವುದಿಲ್ಲ. ಅಥವಾ ಅವರಿಗೆ ಮಡೆಸ್ನಾನ ತಪ್ಪು ಎಂದು ಎನಿಸುತ್ತಿಲ್ಲವೆಂದರೆ ಅದು ನಮ್ಮ ದೇಶದ ಮಾಹನ್ ಸಂಸ್ಕೃತಿಯ ದೌರ್ಭಗ್ಯ.

ಅಸ್ಪಶ್ಯತೆಯಂತಹ ನೆನಪಿಸಿಕೊಳ್ಳಲಿಕ್ಕೂ ಅಸಹ್ಯವೆನಿಸುವಂಥ ದೌರ್ಜನ್ಯಗಳನ್ನು ಸಾವಿರಾರು ವರ್ಷಗಳಿಂದಲೂ ದಲಿತರ ಮೇಲೆ ಮಾಡಿಕೊಂಡು ಬಂದಿರುವ ಮೇಲ್ಜಾತಿಯವರು ಈಗಲೂ ಏಕೆ ತಮ್ಮ ಹಟವನ್ನೆ ಸಾಧಿಸಲೆತ್ನಿಸುತ್ತಾರೆಯೋ ತಿಳಿಯದು. ಈಗಷ್ಟೆ ಗತ ಅವಮಾನಗಳಿಂದ ಚೇತರಿಸಿಕೊಳ್ಳುತ್ತಿರುವ ದಲಿತರ ಮೇಲೆ ಮಡೆಸ್ನಾನದಂತಹ ಆಯುಧಗಳನ್ನು ಸೃಷ್ಟಿಸಿ ಪ್ರಯೋಗಿಸುವುದು ಸರಿಯೆ? ದಲಿತರೆ ಆಯುಧ, ದಲಿತರೆ ವೈರಿ.

ಮೇಲ್ಜಾತಿಯವರೆ ನೇತೃತವವಹಿಸಿಕೊಂಡು ಮಡೆಸ್ನಾನವನ್ನು ವಿರೋಧಿಸುತ್ತಿದ್ದರೆ ಎಷ್ಟೊಂದು ಚಂದವಾಗಿರುತ್ತಿತ್ತು. ಶಿವರಾಮು ಅವರ ಸಂಘಟನೆಯ ಬದಲಿಗೆ ಬ್ರಾಹ್ಮಣರ ಸಂಘಟನೆಯೊಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಪ್ರತಿಭಟಿಸಿದ್ದರೆ ಎಷ್ಟೊಂದು ಅರ್ಥಪೂರ್ಣವಾಗಿರುತ್ತಿತ್ತು. ದಲಿತ ಸಂತ ದೇವನೂರು ಮಹಾದೇವ ಅವರು ಬಯಸುವಂತೆ ಈ ದೇಶದಲ್ಲಿನ ಎಲ್ಲ ಮನುಷ್ಯರು ಪರಸ್ಪರ ಭವ-ಮೈದುನರಾಗುವ, ನೆಂಟಸ್ಥರಾಗಿ ತೊಡೆಗೆ ತೊಡೆ ತಾಗಿಸಿಕೊಂಡು ಕುಳಿತು ಸಹಪಂಕ್ತಿ ಭೋಜನ ಮಾಡುವಂತಾಗಿದ್ದರೆ ಎಷ್ಟೊಂದು ಚಂದ ಅನಿಸುತ್ತಿತ್ತಲ್ಲವೇ? ಆ ದಿನ ನಮ್ಮ ತಲೆಮಾರಿನವರ ಆಯುಷ್ಯದಲ್ಲಿಯೆ ಬರಲಿ ಆಶಿಸುತ್ತೇನೆ. ಕಾಯುತ್ತೇನೆ ಕೂಡ!

ಚಿತ್ರ ಕೃಪೆ- ದ ಹಿಂದು.

‍ಲೇಖಕರು sreejavn

4 December, 2011

7 Comments

  1. sudha chidanandagowda

    very good thoughts. perfect writing.

  2. Gubbachchi Sathish

    priya geleyarae, nimma kanasu adastu bega nanasagali.
    adu namma talemarinalliye agali.

  3. subbanna mattihalli

    priyare naanu Huttinalli meel vargadava
    naagi nimmondigiddeene. Aham bhaavadindalla. Aaptateinda. dayavittu
    hatasharaagadiri. Intha Moodha kriyeyannu hodedoodisalu chinthane mattu chaluvali maatra parihaaraveeno.

  4. shreeram

    ಲೋಕದ ಡೊಂಕ ನೀವೇಕೆ ತಿದ್ದುವಿರಿ
    ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
    ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
    ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
    ನಮ್ಮ ಕೂಡಲಸಂಗಮದೇವಾ.

  5. ಗಿರೀಶ್

    ಮಾಂಸಾಹಾರ ನಿಸರ್ಗ ನಿಯಮವೆಂದು ಒಪ್ಪುವುದಾದರೆ, ಅಸಹಾಯಕ ಮೇಲಿನ ದೌರ್ಜನ್ಯವೂ ನಿಸರ್ಗವೇ, ಅದನ್ನೇಕೆ ಒಪ್ಪುವುದಿಲ್ಲ. ಮಾಂಸಾಹಾರದಲ್ಲಿಯೂ ದೌರ್ಜನ್ಯವಿದೆ. ವಯಸ್ಸಾದ ಗೋವುಗಳೂ ನಿಸ್ಸಹಾಯಕವೇ? ನಿಸ್ಸಹಾಯಕರಿಗೆ ಸಹಾಯ ಮಾಡುವುದೇ ಮಾನವತ್ವ ಎಂದು ಭಾಷಣ ಬಿಗಿಯುವುದಾದರೆ, ಮಾಂಸಾಹಾರವು ದೌರ್ಜನ್ಯ ಮತ್ತು ಅಸಹಾಯಕತೆಯ ದುರುಪಯೋಗವೇ ಅಲ್ಲವೆ? (ಇಲ್ಲಿ ನಾನು ಮಾಂಸಾಹಾರವನ್ನು ವಿರೋಧಿಸುತ್ತಿಲ್ಲ. ಮಾಂಸಾಹಾರ ಸಸ್ಯಾಹಾರಗಳ ಮಧ್ಯೆ ವ್ಯತ್ಯಾಸವೇನೂ ಇಲ್ಲ.ಎರಡೂ ಕೂಡ ಅಸಹಾಯಕರ ಮೇಲೆ ದೌರ್ಜನ್ಯವೇ ಎಂದು ಪ್ರತಿಪಾದಿಸುತ್ತಿದ್ದೇನೆ) ಅಸಹಾಯಕ ಮನುಷ್ಯನ ಮೇಲಿನ ದೌರ್ಜನ್ಯ ಖಂಡನೀಯವಾದರೆ ಅಸಹಾಯಕ ನಮ್ಮನ್ನು(ಸಾಕಿದವನೆ) ಮಾಲಿಕನೆಂದು ಪ್ರೀತಿ ಪಡೆದುಕೊಂಡವನೇ ಕಡಿದು ತಿನ್ನುವುದು ಶೋಷಣೆಯಲ್ಲವೆ?
    ತತ್ವ ಆದರ್ಶಗಳು ನಾವು ಮಾಡುವ ಸಣ್ಣದಾದರೂ ದೊಡ್ಡದಾದರೂ ಸರಿ ಬೇರೆಯವರದ್ದು ತಪ್ಪು ಎನ್ನುವ ಧೋರಣೆ ಸರಿಯೆ?

  6. girish

    ಅಲ್ರೀ ಸ್ವಾಮಿ ನಿಮ್ಗೆ ಪ್ರತಿಕ್ರಿಯೆಗಳನ್ನೆ ಸಹಿಸಿಕೊಳ್ಳಲಾಗುತ್ತಿಲ್ಲ ಇನ್ನು ಬ್ರಾಹ್ಮಣರು ನಿಮ್ಮ ಇಲ್ಲ ಸಲ್ಲದ ಆರೋಪಗಳನ್ನು ಹೇಗೆ ಮತ್ತು ಏಕೆ ಸಹಿಸಿಕೊಳ್ಳುತ್ತಾರೆ.

    ನಿಮ್ಮ ಉದ್ದೇಶ ಬರಿ ಲೇಖನ ಗೀಚುವುದಾದರೆ ಧಾರಾಳವಾಗಿ ಗೀಚಿಕೊಳ್ಳಿ……..

  7. vijayaraghavan

    ನನ್ನ ಮನಸ್ಸಿಗೆ ಮಡೆ ಸ್ನಾನದ ಬಗ್ಗೆ ಬರುತ್ತಿರುವ ಪ್ರತಿಕ್ರಿಯೆಗಳಿಗೂ ಆವರಣ ಕುರಿತು ಬಂದ ಪ್ರತಿಕ್ರಿಯೆಗಳಿಗೂ ಅಂತಹ ವ್ಯತ್ಯಾಸವೇನೂ ಕಾಣುವುದಿಲ್ಲ. ಹಾಗೆಯೇ ಕೋಣ, ಕುರಿ ಇತ್ಯಾದಿಗಳನ್ನು ಬಲಿಕೊಡುವ ನಮ್ಮವರಿಗೂ ಮಡೆ ಸ್ನಾನ ಆಚರಿಸುವವರಿಗೂ ಸಹ ಬಹಳ ವ್ಯತ್ಯಾಸಗಳಿಲ್ಲ. ಇಲ್ಲಿ ಮೇಲ್ವರ್ಗದವರ ಎಂಜಲೆಲೆಯ ಮೇಲೆ ಉರುಳುವ ಕೆಳ ವರ್ಗದವರಿಗೂ(?).. ರ ನಡುವೆಯೂ, ಕೆಲವು ಎಡೆಗಳಲ್ಲಿ ನಡೆಯುವ ದ್ಯಾವರಗಳಿಗೂ ನಡುವೆಯೂ ಬೇಜಾನು ವ್ಯತ್ಯಾಸವೂ ಇಲ್ಲ. ಇಂತಹ ಅವೈಜ್ಞಾನಿಕ ಆಚರಣೆಗಳು ಸತಿ ಪದ್ದತಿಯಲ್ಲಿ, ಬೆತ್ತಲೆ ಸೇವೆಯಲ್ಲಿ, ದೇವದಾಸಿ ಪದ್ದತಿಯಲ್ಲಿ ನೆನಪಿಗೂ ದೂರದ ಕಾಲದಿಂದ ನಮಗೆ ಕಂಡು ಬರುತ್ತಲೇ ಇವೆ. ಹಿಂದೆ ಅವರವರ ಪಾಡು ಎನ್ನಿಸಿಕೊಳ್ಳುತ್ತಿದ್ದುದು ಈಗ ನವನಾಗರಿಕತೆಯ ವಿಚಾರದ ಮೂಸೆಯಲ್ಲಿ ಕರಗಿ ಇದು ತಪ್ಪು ಎನ್ನುವ ಅಭಿಪ್ರಾಯಗಳು ಕ್ಷೀಣವಾಗಿ ಆದರೂ ಕೇಳಿಬರುತ್ತಿದೆಯಷ್ಟೆ. ಆದರೆ ಇವು ಬಹುಜನದ ನಿಲುವಿನಲ್ಲಿ ಸೇರಲಿಲ್ಲವಾದ್ದರಿಂದಲೇ ಈ ಎಲ್ಲ ಆಯ್ಕೆ ಪ್ರತಿರೋಧಗಳು ಸಂಭವಿಸುತ್ತಿವೆ. ಹನುಮಂತ ಅವರು ಒಂದೇ ಕಡೆ ನೆಟ್ಟ ನೋಟವನ್ನು ಹೊಂದಿದ್ದಾರೆ ಎಂದು ಹೇಳಲಾಗದು. ಆದರೆ ಈ ವಿಚಾರವನ್ನು ನಾವೆಲ್ಲ ಗ್ರಹಿಸುತ್ತಿರುವ ಇವತ್ತಿನ ರೀತಿಯಲ್ಲಿ ಮೂಲಭೂತವಾದದ್ದನ್ನು ಜನರಿಗೆ ದಾಟಿಸುವ ವಿದ್ಯಾವಂತರ ಸಾಮರ್ಥ್ಯದಲ್ಲಿಯೇ ಏನೋ ಕೊರತೆಯಿದೆ ಅನ್ನಿಸುತ್ತಿದೆ. ಇದು ಸಮೂಹ -ಕಮ್ಯೂನ್‌ಗಳ ಒಳಗಣ್ಣನ್ನು ತೆರೆಸುವಲ್ಲಿ ಯಾಕೆ ಸೋಲುತ್ತಿದೆ. ಸಮಾಜವನ್ನು ರೂಪಿಸುವ ಶಕ್ತಿಗಳನ್ನು ಬದಲಿಸಲು ನಮಗೇಕೆ ಸಾಧ್ಯವಾಗುತ್ತಿಲ್ಲ? ವಿಚಾರ ಪ್ರಸರಣದ ಮಾರ್ಗಗಳು ಏಕೆ ದಿನೇ ದಿನೇ ಇಕ್ಕಟ್ಟಾಗುತ್ತಿವೆ? ಇವನ್ನೆಲ್ಲ ಕುರಿತು ಯೋಚಿಸುವ ಅಗತ್ಯಗಳು ಸಮುದಾಯ ಪ್ರಜ್ಞೆಯ ಭಾಗವಾಗಿ ಏಕೆ ರೂಪುಗೊಳ್ಳುತ್ತಿಲ್ಲ?

    ಚರ್ಚೆ ಮುಂದುವರಿಯಲಿ ಎಂದು ಆಶಿಸುತ್ತೇನೆ. ಮತ್ತು ಈ ಚರ್ಚೆ ಬಲ್ಲಿದರನ್ನು ದಾಟಿ ಮುಂದೆ ಹೋಗಲಿ ಎಂದೂ. ಕೊಂಡೊಯ್ಯುವವರು?
    ಆರ್‌ ವಿಜಯರಾಘವನ್‌

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading