ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಡ್ಲಹಳ್ಳಿ ನಾಗರಾಜ್ ಅವರ ‘ದಟ್ಟಾರಣ್ಯದೊಳಗೆ ಬಾಡಿಗೆ ಬಂಟರು’

ಹಾಡ್ಲಹಳ್ಳಿ ನಾಗರಾಜ್. ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಅವರ ಕೃತಿಗಳ ಉದ್ದಗಲಕ್ಕೂ ಮಲೆನಾಡಿನ ಸಂಗತಿಗಳು ಮಾತನಾಡುತ್ತವೆ.

ಇವರೆ “ನಿಲುವಂಗಿಯ ಕನಸು” ಕೃತಿ ಮಲೆನಾಡಿನ ರೈತಸಮಸ್ಯೆಯನ್ನು ಸಶಕ್ತವಾಗಿ ಹಿಡಿದಿಟ್ಟಿರುವ ಕೃತಿ.
ಹಾಡ್ಲಹಳ್ಳಿ ಅವರ ಇನ್ನೊಂದು ಪ್ರಮುಖ ಪ್ರಬಂಧ ಸರಣಿ “ಕಾಡು ಕಣಿವೆಯ ಸಾಹಿತ್ಯ” ಈ ಸರಣಿಯಲ್ಲಿ ಇದೂವರೆಗೂ ಎರಡು ಪುಸ್ತಕಗಳು ಪ್ರಕಟವಾಗಿದ್ದು “ಕಾಡುಹಕ್ಕಿಯ ಹಾದಿನೋಟ” ಮೊದಲು ಪ್ರಕಟವಾದರೇ “ದಟ್ಟಾರಣ್ಯದೊಳಗೆ ಬಾಡಿಗೆ ಬಂಟರು” ಪುಸ್ತಕ ನಂತರದಲ್ಲಿ ಪ್ರಕಟವಾಯಿತು.

ಹಾಡ್ಲಹಳ್ಳಿ ನಾಗರಾಜ್ ಅವರ ಆತ್ಮಕಥಾನಕ ಸ್ವರೂಪದ ಈ ಪ್ರಬಂಧಗಳು ಮಲೆನಾಡಿನಲ್ಲಿ ಸಾಮಾನ್ಯರ ಜತೆಗೆ ಪ್ರವಹಿಸಿದ ಸಾಹಿತ್ಯದ ಬಗ್ಗೆ ಮಾತಾನಾಡುತ್ತವೆ.

ಇದೀಗ ಹಾಡ್ಲಹಳ್ಳಿ ನಾಗರಾಜ್ ಅವರ “ದಟ್ಟಾರಣ್ಯದೊಳಗೆ ಬಾಡಿಗೆ ಬಂಟರು” ಪುಸ್ತಕ ವಿಡಿಯೋ ರೂಪದಲ್ಲಿ ಲಭ್ಯವಿದೆ. ಈ ಪುಸ್ತಕದ ಇಪ್ಪತ್ತು ಅಧ್ಯಾಯಗಳನ್ನು ಇಪ್ಪತ್ತು ಜನ ಸಾಹಿತ್ಯಾಸಕ್ತರು ಓದಿದ್ದಾರೆ. ವಿಭಿನ್ನ ರೀತಿಯಲ್ಲಿ 6 ನೇ ತಾರೀಖು ಬಿಡುಗಡೆಯಾದ ಈ ಪುಸ್ತಕವನ್ನು ನೋಡಲು ಕೆಳಗಿನ ಕೊಂಡಿಯನ್ನು ಬಳಸಿ.

‍ಲೇಖಕರು Avadhi

30 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading