ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹಾಗಲಕಾಯಿ ಹಲ್ವಾ'ನಾ ಒಮ್ಮೆ ಟೇಸ್ಟ್ ಮಾಡಿ..

naveen kumar

ಕೆ ನವೀನ ಕುಮಾರ್ 

ಬ್ಯಾಡ್ ಬ್ಯಾಡ ಅಂತಿದ್ರೂ ಮಾಡಿ ಮಾಡಿ ಕೊಡ್ತಿದ್ದೆ, ಹಲ್ವಾ ಹಲ್ವಾ ಹಾಗಲಕಾಯಿ ಹಲ್ವಾ……
hagalakai1ಅರೇ ಹಾಗಲಕಾಯಿ ಹಲ್ವಾನಾ ಅಂತ ಕೇಳ್ಬೇಡಿ. ಯಾಕಂದ್ರೆ ಇಲ್ಲಿರೋದು ಅಪ್ಪಟ ಹಾಗಲಕಾಯಿ ಹಲ್ವಾನೇ. ಇದು ಯುವ ಮನಸುಗಳೇ ಸೇರಿ ಮಾಡಿರೋ ಹಾಗಲಕಾಯಿ ಹಲ್ವಾ. ಆದ್ರೆ, ಕಹಿಯಾಗಿಲ್ಲ, ತುಂಬಾ ಸಿಹಿಯಾಗಿದೆ. ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಕಿಶನ್ ಹಾಗೂ ಶ್ವೇತಾ ಅಭಿನಯದ ಎರಡೇ ಪಾತ್ರಗಳಿರುವ ಹಾಸ್ಯ ನಾಟಕ ಹಾಗಲಕಾಯಿ ಹಲ್ವಾ.
ಈ ಹಿಂದೆ ಎರಡು ಬಾರಿ ನೋಡೋಕಾಗದೇ, ಕೊನೆಗೆ ಈ ಬಾರಿಯ ಪ್ರದರ್ಶನ ಮಿಸ್ ಮಾಡ್ಕೋಬಾರ್ದು ಅಂತ ಸ್ನೇಹಿತರೊಂದಿಗೆ ಹೋಗಿದ್ದೆ. And it was a nice experience. ಕೊಟ್ಟ 100 ರೂಪಾಯಿಗಂತೂ ಮೋಸ ಆಗಲಿಲ್ಲ.
ಗಂಡ ಹೆಂಡತಿ ನಡುವೆ ಬರುವ ಸಣ್ಣಪುಟ್ಟ ವಿಷಯಗಳನ್ನಿಟ್ಟುಕೊಂಡೇ ಈ ನಾಟಕವನ್ನ ಹೆಣೆಯಲಾಗಿದೆ. ರಂಗಪ್ರತಿಭಾ ತಂಡದಿಂದ ಇದು ನಾಲ್ಕನೇ ಪ್ರದರ್ಶನ. ಇವತ್ತಿನ ಟ್ರೆಂಡ್, ಯುವಜನರ ಆಲೋಚನೆಗಳು ಬದಲಾಗಿದ್ರೂ, ಎಲ್ಲೋ ಒಂದು ಕಡೆ ನನಗೆ ಸತಿ ಸಾವಿತ್ರಿಯಂಥ ಹೆಂಡತಿ ಸಿಗಲಿ, ಹೃತಿಕ್ ರೋಷನ್, ಸಲ್ಮಾನ್ ಖಾನ್ ಥರದ ಹ್ಯಾಂಡ್ಸಮ್ ಹಂಕ್ ಗಳು ಗಂಡನಾಗಿ ಬರಲಿ ಅನ್ನೋದು ಮನಸಲ್ಲಿ ಇದ್ದೇ ಇರುತ್ತೆ. ಇಂಥಾ ಆಸೆಗಳಿದ್ರೂ ನಿತ್ಯ (ಶ್ವೇತಾ) ಹಾಗೂ ಅಭಿ(ಕಿಶನ್) ಅರೇಂಜ್ಡ್ ಮ್ಯಾರೇಜ್ ಆಗಿರ್ತಾರೆ. ಇಬ್ಬರಲ್ಲೂ ಸಣ್ಣ ಪುಟ್ಟ ಜಗಳಗಳು, ಅತೃಪ್ತಿಗಳು ಇದ್ದೇ ಇರುತ್ತೆ.
hagalakai3ಸಾಮಾನ್ಯವಾಗಿ ಮನೆಗಳಲ್ಲಿ ಗಂಡ ಹೆಂಡತಿ ಹೆಚ್ಚಾಗಿ ಕಿತ್ತಾಡೋದು ಅಪ್ಪ, ಅಮ್ಮನ ವಿಚಾರದಲ್ಲಿ. ಕುಟುಂಬ/ವಂಶಗಳ ಹೆಸರಲ್ಲಿ. ಇದನ್ನೇ ತಮ್ಮ ಸಂಭಾಷಣೆಗಳಲ್ಲಿ ರಸವತ್ತಾಗಿ ಹಾಗೂ ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾರೆ. ಹಾಗೇ, ನಮ್ಮ ಕನಸಿನಂತೆ ಸತಿ ಸಾವಿತ್ರಿಯಂಥಾ ಹೆಂಡತಿ ಸಿಕ್ರೆ, ಇವತ್ತಿನ ಯುವಕರ ಲೈಫ್ ಹೇಗಿರುತ್ತೆ, ಹಾಗೇ ಎಲ್ಲರೂ ಸೆಲೆಬ್ರಿಟಿಗಳನ್ನೇ ಗಂಡನನ್ನಾಗಿ ಪಡೆಯೋಕಾಗಲ್ಲ. ಒಂದ್ವೇಳೆ ಸಿಕ್ರೂ, ಅವರ ಜೀವನದ ಕಷ್ಟನಷ್ಟಗಳೇನು ಅನ್ನೋದನ್ನ ಹಾಸ್ಯದ ಮೂಲಕವೇ ನಿರೂಪಿಸುತ್ತಾ ಹೋಗಿರೋದು ಸೂಪರ್.
ನಾಟಕದ ಮೊದಲ ಡೈಲಾಗ್ನಿಂದ ಹಿಡಿದು ಕಡೇ ತನಕ ಮುಖದಲ್ಲಿರೋ ನಗು ಮಾಸೋದಿಲ್ಲ. ಕೆಲವಡೆ ನಕ್ಕೂ ನಕ್ಕೂ ಕಣ್ಣಲ್ಲಿ ನೀರು ಬರೋದೂ ಗ್ಯಾರಂಟಿ. ಇನ್ನು, ಕಿಶನ್ ಹಾಗೂ ಶ್ವೇತ ನಟನೆ ಕೂಡ ಸೂಪರ್ಬ್.
ನಾಟಕವನ್ನ ರಚಿಸಿರೋದು ಕೂಡ ಇದರ ಮುಖ್ಯ ಪಾತ್ರಧಾರಿಗಳೇ, ನಿರ್ದೇಶನವೂ ಅವರದ್ದೇ. ಇನ್ನು, ನಾಟಕಕ್ಕಾಗಿ ಕೆಲಸ ಮಾಡಿರೋದು ಕೂಡ ಅದ್ಭುತವಾದ ಯಂಗ್ ಟೀಮ್. ಒಳ್ಳೇ ಸಂಗೀತ, ಬೆಳಕಿನಾಟ ಎಲ್ಲವೂ ಸೂಪರ್. ನಾನು ಎಕ್ಸ್ಪೆಕ್ಟ್ ಮಾಡಿ ಹೋಗಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದ ನಾಟಕ. ಫುಲ್ ಪೈಸಾ ವಸೂಲ್. ಮುಂದಿನ ಬಾರಿ ಚಾನ್ಸ್ ಸಿಕ್ರೆ ಟೈಮ್ ಮಾಡ್ಕೊಂಡು ಈ ಸ್ವೀಟ್ ಸ್ವೀಟ್ ಹಾಗಲಕಾಯಿ ಹಲ್ವಾನಾ ಒಮ್ಮೆ ಟೇಸ್ಟ್ ಮಾಡಿ.

‍ಲೇಖಕರು Avadhi

16 May, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading