ಬೆಳಗಾವಿ ಪ್ರಾಂತದ ಸುರಕೋಡ್ ಅವರ ಉರ್ದು ಜ್ಞಾನದ ಬಗ್ಗೆ ಅನುಮಾನಿಸುವ ಅಗತ್ಯವಿಲ್ಲ. ಮುಂಬೈ ಕರ್ನಾಟಕ ಪ್ರದೇಶದಲ್ಲಿ ಉರ್ದು ಸಹಜ ಭಾಷೆ. ಈ ಕರಾವಳಿಯ ಮುಸ್ಲಿಂ ಹೆಸರಿನ “ಪ್ರತಿಭಾವಂತ” ಲೇಖಕರಿಗೆ ಬ್ಯಾರಿ ಬಿಟ್ಟರೆ, ತುಳು ಗೊತ್ತಿರಬೇಕಷ್ಟೇ. ಈ ಎರಡೂ ಭಾಷೆಯ ಲಿಪಿಯ ಸಮಸ್ಯೆಯಿಂದಾಗಿ ಕನ್ನಡ ಅಕ್ಷರಗಳನ್ನು ಕಲಿತು ಓದುವ ಮೂಲಕ ಅರೆಬರೆ ಭಾಷೆಗಳ ಜ್ಞಾನ ಹೊಂದಿದ್ದು ಅವರ ಅನಿವಾರ್ಯತೆಗಳಲ್ಲಿ ಒಂದು. (ಅವರೂ ಉರ್ದು ಕಲಿಯಲಿ ಪಾಪ) ಹೀಗಾಗಿ ಕಟ್ಪಾಡಿ ಅಂಥವರು ಉರ್ದು ಸಾಹಿತ್ಯದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿ ಕಾಣಿಸುತ್ತದೆ. ಈ ಮುಸ್ಲಿಂ ಹೆಸರಿನ ಉರ್ದು ಗಂಧ ಗಾಳಿ ಇಲ್ಲದವರು ನಜ್ಮ್ ಎಂದು ಮಾತು ಶುರುವಿಟ್ಟುಕೊಳ್ಳುವುದು ಇನ್ನೂ ಹಾಸ್ಯಾಸ್ಪದ. ನಕಲಿ ಭಾಷಾ ಜ್ಞಾನಿಗಳಿಂದಾಗಿ ಒಂದು ಭಾಷೆ ಕಲಾತ್ಮಕ ಗುಣ ಮತ್ತು ಅದರೊಳಗೇ ಮಿಸುಕಾಡುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವಜಲ ಸ್ಪಿರಿಚ್ವ್ಯಾಲಿಟಿಯನ್ನೇ ಕಳೆದುಕೊಂಡುಬಿಡುತ್ತದೆ. ಫೈಜ್ ಕಾವ್ಯ ಸುಮ್ಮನೇ ಟ್ರಾನ್ಸ್ಲೇಷನ್ ಗೆ ಒಗ್ಗುವಷ್ಟು ಪೊಳ್ಳಲ್ಲ. ಕ್ರಾಂತಿಕಾರಕ ಪ್ರಜ್ಞೆಯ ಆ ಕವಿಯ ಕಾವ್ಯ ಕಾವು ಸುಮ್ಮನೇ ಉಪಖಂಡಕ್ಕೆ ಹಬ್ಬಿದ್ದಲ್ಲ. ಹಾಗೆ ನೋಡಿದರೆ ಫೈಜ್ ಇಲ್ಲಿಗೆ ಬಂದು ಬಹುವರ್ಷಗಳೇ ಸಂದಿವೆ. ಕಾರ್ಮಿಕರ ಹಾಡಾಗಿ ಮನೆಮಾತಾದ ಫೈಜ್ ಅರೆಬರೆ ಭಾಷಾಜ್ಞಾನಿಗಳ, ವಿಕಿಪೀಡಿಯಾ ಪಂಡಿತರ ಮತ್ತು ಕೋಟ್ ಮಾಡುವ ತೆವಲಿನವರ ದೆಸೆಯಿಂದ ಸ್ಪೋಟದ ಕಿಚ್ಚನ್ನು ಕಳೆದುಕೊಳ್ಳದಿರಲಿ…