“ಸ್ಲಂ ಬಾಲ ಪಿಚ್ಚರ್ ನೋಡಿದ್ರಾ?” ಅಂತ ನಾಗೇಗೌಡ್ರು ಕೇಳಿದಾಗ, “ಹುಂ, ನಿನ್ನೆ ತಾನೇ ನೋಡಿದ್ನಲ್ಲ? ಯಾಕೆ?” ಅಂದೆ. “ಅದ್ರಲ್ಲಿ ನಾನೂ ಯಾಕ್ಟ್ ಮಾಡಿದೀನಿ, ನೋಡ್ಲಿಲ್ವಾ?” ಅಂದರು. “ನೀವಾ?! ಎಲ್ಲಿ? ಯಾವ ಸೀನಲ್ಲಿ?” ಆಶ್ಚರ್ಯದಿಂದ ಕೇಳಿದೆ. ಅವರಂದ್ರು, “ಅದೇ, ಪೋಲೀಸ್ ಕಮಿಷನರ್ ಮೀಟಿಂಗ್ ಕರೆದಿರ್ತಾರಲ್ಲ, ಆಗ ಸುತ್ಲೂ ಸುಮಾರ್ ಪೋಲೀಸ್ರು ಕೂತಿರ್ತಾರೆ.. ಅವ್ರಲ್ಲಿ ಒಬ್ಬ ಪೋಲೀಸ್ ನಾನಾಗಿದ್ದೆ!” “ಓಹ್, ಹೌದಾ? ನಾನು ಗಮನಿಸ್ಲೇ ಇಲ್ಲ.. ಛೇ, ಸುಮ್ನೇ ದುಡ್ಡು ಕೊಟ್ಟು ಹೋದ್ವಲ್ರೀ ನಿನ್ನೆ ನಾವು.. ನೀವು ಯಾಕ್ಟ್ ಮಾಡಿದೀರ ಅಂದ್ಮೇಲೆ ನಮ್ಗೆ ಫ್ರೀ ಟಿಕೇಟ್ ಕೊಡಿಸ್ತಿದ್ರಿ.. ಮಿಸ್ ಮಾಡ್ಕೊಂಡ್ಬಿಟ್ವಿ!” ನಗುತ್ತಾ ಹೇಳಿದೆ. “ಹೆಹ್ಹೆ! ಅದ್ಕೇನಂತೆ, ಮತ್ತೊಂದ್ಸಲ ಹೋಗ್ಬನ್ನಿ. ಕೊಡಿಸ್ತೀನಿ ಟಿಕೇಟು.. ನನ್ನನ್ನೇ ನೋಡ್ಲಿಲ್ಲ ನೀವು ಅಂದ್ಮೇಲೆ ಮತ್ತೊಂದ್ಸಲ ನೋಡೋದು ಸರಿ ಇದೆ..” ಎಂದು ನಗುತ್ತಾ ಖುರ್ಚಿಯಿಂದ ಎದ್ದರು ನಾಗೇಗೌಡ್ರು.
ಸಂಪೂರ್ಣ ಓದಿಗೆ ಭೇಟಿ ಕೊಡಿ: ಮೌನಗಾಳ
ನನಗೆ ಬರ್ಕ್ ವೈಟ್ ಕಂಡ ಭಾರತದಲ್ಲಿ ಪ್ರಮುಖವಾಗಿ ಮೂರು ವ್ಯಕ್ತಿತ್ವಗಳ ಬಗ್ಗೆ ಹೇಳಬೇಕೆನ್ನಿಸುತ್ತಿದೆ. ಒಂದು ಮಹಾತ್ಮಗಾಂಧಿ ಎರಡು ನೆಹರು, ಮೂರನೆಯದು ವ್ಯಕ್ತಿಯಲ್ಲದಿದ್ದರು ಸಾಮಾನ್ಯ ಭಾರತೀಯನ ಮನಸ್ಸುಗಳಲ್ಲಿ ವಿಭಿನ್ನ ಸಂಚಲನೆ ಮೂಡಿದ ಆರ್.ಎಸ್.ಎಸ್. ಬಗ್ಗೆ.
ಸಂಪೂರ್ಣ ಓದಿಗೆ ಭೇಟಿ ಕೊಡಿ: ಹಳ್ಳಿಕನ್ನಡ




0 Comments