ಸ್ಯಾಂಡಲ್ ವುಡ್ ನ ಡಿಫರೆಂಟ್ ಡೈರೆಕ್ಟರ್ ಸುಮಂತ್

ನಾನಿ ವೀಕ್ಷಿಸಿದವರೆಲ್ಲ ನಿರ್ದೇಶಕ ಸುಮಂತ್ ರ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.  ಚಿತ್ರದಲ್ಲಿ ನಿರ್ದೇಶಕನ ಜಾಣ್ಮೆ, ಕಲಾವಂತಿಕೆ, ಚುರುಕುತನ ಹೊಂದಿದ್ದಾರೆ ಎಂದು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾತು. ಮೂಲತಃ ಬೆಂಗಳೂರಿಗೆ ಹೊಂದಿಕೊಂಡಿರುವ ಹಳ್ಳಿಯೊಂದರ ಸುಮಂತ್ ನಿಂತರೂ ಕುಂತರೂ ಸಿನಿಮಾವನ್ನೇ ಕನವರಿಸಿ ಅದಕ್ಕೆ ಸಜ್ಜುಗೊಂಡು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ, ಅವರ ಶ್ರಮದ ಪ್ರತಿಫಲವಾಗಿ ಇಂದು ನಾನಿ ಹಿಟ್ ಆಗಿದೆ ಅನ್ನೋದು ಚಿತ್ರದ ನಾಯಕ ನಟ ಮನೀಶ್ ಮಾತು.

Naani_50ಈ ಚಿತ್ರದ ನಿರ್ದೇಶಕ ಸುಮಂತ್ ಎಂಬ ಚುರುಕಿನ ಹುಡುಗನ ಬಗ್ಗೆಯೂ ಕುತೂಹಲಗಳು ಸಹಜವಾಗಿಯೇ ಹುಟ್ಟಿಕೊಂಡಿವೆ. ರಾಘವೇಂದ್ರ ಗೊಲ್ಲಹಳ್ಳಿ ಎಂಬ ಒರಿಜಿನಲ್ ನಾಮಧೇಯವನ್ನು ಸುಮಂತ್ ಅಂತ ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆಗಿಳಿದಿದ್ದ ಇವರು ಈಗ ಅದ್ಭುತ ಅಂಕಗಳನ್ನು ಪಡೆದು  ಪಾಸ್ ಆಗಿದ್ದಾರೆ ಎನ್ನುತ್ತಾರೆ ಸ್ವತಃ ಚಿತ್ರ ತಂಡದವರು. ನಾನಿ ಸೂಪರ್ ಹಿಟ್ ಸಿನಿಮಾ ಆಗಿ ನೆಲೆ ನಿಂತಿರುವುದರಿಂದ ಸುಮಂತ್ ಭರವಸೆಯ ನಿರ್ದೇಶಕನಾಗಿ ಬೇರೂರುವುದು ಗ್ಯಾರೆಂಟಿ ಎಂಬುದು ಚಿತ್ರದ ನಿರ್ಮಾಪಕ ರಮೇಶ್ ಕುಮಾರ್ ಜೈನ್ ಅವರ ಅಭಿಪ್ರಾಯ.

ಸುಮಂತ್ ನ ಹಲವು ಇಂಟರೆಸ್ಟಿಂಗ್ ಸಂಗತಿಗಳು :

ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂದರೆ ಹತ್ತಾರು ಸಿನಿಮಾಗಳಲ್ಲಿ ಅಸಿಸ್ಟೆಂಟ್, ಅಸೋಸಿಯೇಟ್ ಗಳಾಗಿ ಕೆಲಸ ಮಾಡಿರಬೇಕೆಂಬ ಸಾಮಾನ್ಯ ಸಂಗತಿಯೊಂದಿದೆ, ಆದರೆ ಸುಮಂತ್ ಅದನ್ನು ಬ್ರೇಕ್ ಮಾಡಿದ್ದಾರೆ. ಬಹುಶಃ ಹೈಸ್ಕೂಲು ದಿನಗಳಲ್ಲಿಯೇ ಆಳವಾಗಿ ಬೇರೂರಿದ್ದ ನಿರ್ದೆಶಕನಾಗೋ ತುಡಿತ ಕನಸಿನ ಸಾಕಾರಕ್ಕಾಗಿ ಮತ್ತಷ್ಟು ವರ್ಷಗಳನ್ನು ಕಡಿತಗೊಳಿಸಲು ಒಪ್ಪಿಲ್ಲವೇನೋ. ಆದ್ದರಿಂದಲೇ ಓದನ್ನು ಪಿಯುಸಿಗೇ ಕಡಿತಗೊಳಿಸಿ ಕಥೆಯೊಂದನ್ನು ರೆಡಿ ಮಾಡಿದವರೇ ನೇರವಾಗಿ ಅಖಾಡಕ್ಕಿಳಿದಿದ್ದಾರೆ.

Naani50-Daysಜುಲೈ  ಒಂದರಂದು ತೆರೆ ಕಂಡಿದ್ದ ‘ನಾನಿ’  ಚಿತ್ರ ಯಶಸ್ವಿಯಾಗಿ  ಐವತ್ತು ದಿನಗಳನ್ನು ಪೂರೈಸಿದೆ. ಚಿತ್ರವನ್ನು ಪ್ರೇಕ್ಷಕರು ಅಪಾರವಾಗಿ ಮೆಚ್ಚಿದ್ದಾರೆ. ನಾನಿ ಚಿತ್ರ ತಂಡ ತನ್ನ ಐವತ್ತನೇ ದಿನದ ಸಮಾರಂಭವನ್ನು ಆಚರಿಸಿಕೊಂಡಿದೆ. ಚಿತ್ರಕ್ಕಾಗಿ ದುಡಿದ ಎಲ್ಲ ತಂತ್ರಜ್ಞರಿಗೆ ಐವತ್ತನೇ ದಿನದ ನೆನಪಿನ ಕಾಣಿಕೆ ನೀಡುವ ಮೂಲಕ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ರಾಜಸ್ತಾನದಿಂದ ಬಂದರೂ ಕನ್ನಡಭಿಮಾನ ಹೊಂದಿರುವ ನಿರ್ಮಾಪಕ ರಮೇಶ್ ಕುಮಾರ್ ಜೈನ್ ಅವರೇ ಈ ಚಿತ್ರಕ್ಕೆ ಕಥೆಗಾರರೂ ಆಗಿರುವುದು ವಿಶೇಷ. ಇನ್ನು ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣವಂತೂ ಅದ್ಭುತ. ಹೊಸಬರಿಗೂ ಹೆಚ್ಚಾಗಿ ಅವಕಾಶ ಕೊಟ್ಟಿರುವ ಕಾರಣದಿಂದಲೇ ಹೊಸತನದೊಂದಿಗೆ ಮೂಡಿ ಬಂದಿದೆ. ಈಗ ಐವತ್ತು ದಿನಗಳನ್ನು ಪೂರೈಸಿ ದಾಖಲೆ ಬರೆದಿದೆ.

‍ಲೇಖಕರು Admin

September 7, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: