ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಮಿತಾ ಅಮೃತರಾಜ್ ರ ’ತುಟಿಯಂಚಲಿ ಉಲಿದ ಕವಿತೆಗಳು’

ಸಂಗೀತ ರವಿರಾಜ್

ಸ್ಮಿತಾ ಅಮೃತರಾಜ್ ರವರ ಎರಡನೇಯ ಕವನ ಸಂಕಲನ ‘ತುಟಿಯಂಚಲಿ ಉಲಿದ ಕವಿತೆಗಳು ಹೊಸ ಅನುಭೂತಿಯನ್ನು ನೀಡುವ ಹೊತ್ತಿಗೆ, ಆತ್ಮದೊಂದಿಗೆ ಅನುಸಂಧಾನಿಸುತ್ತಲೆ ಕವಿತೆ ಜನಿಸುವ ಪ್ರಕ್ರಿಯೆಯನ್ನು ಎಲ್ಲರು ನಿಬ್ಬೆರೆಗಾಗುವಂತೆ ರಚಿಸುವ ನೈಜ್ಯ ಪ್ರತಿಭೆ ಸ್ಮಿತಾ. ಇದಿರು ಸಿಕ್ಕ ದಾರಿಯಷ್ಟೆ ದಿಟ, ನದಿಗೆ ಎಲ್ಲವನ್ನು ದಾಟಿ ಹರಿವ ಹರ ನದಿಯ ಕವಿತೆಯ ಈ ಸಾಲುಗಳು ಬದುಕಿನೊಂದಿಗೆ ತಳುಕು ಹಾಕಿರುವ ಅವರ ಸಾಹಿತ್ಯ ಪ್ರೀತಿಯ ಸೆಲೆ ನದಿಯಂತೆ ಉಕ್ಕಿ ಹರಿಯುವುದು ನಮ್ಮ ಅನುಭವಕ್ಕೆ ಬರುತ್ತದೆ. ಜೀವನದ ಪ್ರತಿ ಸೂಕ್ಷ್ಮಗಳನ್ನು ತೀವ್ರವಾಗಿ ಅನುಭವಿಸುವ ಮತ್ತು ಊಟ, ನಿದ್ದೆ, ಮಕ್ಕಳಷ್ಟೆ ಜತನದಿಂದ ಕಾಪಿಟ್ಟುಕೊಂಡ ಅವರ ಜೀವನ ಪ್ರೀತಿ ಅವರ ಕವಿತೆಗಳಲ್ಲಿ ಕಂಡುಬರುತ್ತವೆ. ಹೊಸಿಲೋ/ಹೊಸಿಲಿಗೆ ಅವಳೋ/ ಯಾರಿಗೆ ಯಾರು ಕಾವಲು/ಅವಳಿಗೂ ಗೊತ್ತಿಲ್ಲ ದ್ವಂದತೆಯ ಬಗಲನ್ನು ನಿರಾಯಸವಾಗಿ ತಳ್ಳೀ ಹಾಕಿ ಅಚಲತೆಯ ಮೆರುಗನ್ನು ಆಹ್ವಾನಿಸಿಕೊಳ್ಳುತ್ತಾರೆ. ಇದೇ ಇವರ ಕವಿತೆಯ ಬಲ.

ಮೌನದ ಪದಗಳು ಕವಿತೆಯಲ್ಲಿ
ಹೊಚ್ಚ ಹೊಸ ಪದ ಕಟ್ಟಿ
ಜತನದಲ್ಲಿ ಸುತ್ತಿ,
ಮಾತಿನ ಸಂತೆಯಲಿ ಅರಳಲು ಬಿಟ್ಟರೆ
ಎದೆಗವಚಿಕೊಳ್ಳುವರಿಲ್ಲ
ಅವರಿವರ ಕೈ ದಾಟುತ್ತಾ
ಬಾಡುವ ಅನಾಥ ಕೂಸು ಮಾತು. . . ಎಷ್ಟೊಂದು ಅರ್ಥಗಭರ್ಿತ ಸಾಲುಗಳು, ಕವಿತೆಯ ಒಳಗಿನ ಹೂರಣ ಓದುಗರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಂತೆ ಮೂಡುವ ಸಾಲುಗಳು ಸ್ಮಿತರ ಕವನಗಳಲ್ಲಿವೆ.
ಕವಿತೆಗಳು ಅಂತಸ್ವರದಲ್ಲಿ ಪಳಗಿ ಮೊಳಕೆಯೊಡೆದು ಹೆಮ್ಮರವಾಗುವಂತಹ ಸೃಷ್ಟಿ. ಸೃಷ್ಟಿಗುಣದ ಅನೂಹ್ಯ ಬರಹದ ಪ್ರತಿಪಾದನೆಯನ್ನು ಸ್ಮಿತಾರವರು ನಿಧರ್ಿಷ್ಟವಾಗಿ ತಮ್ಮಲ್ಲಿ ಅವಗಾಹಿಸಿಕೊಂಡಿದ್ದಾರೆ. ಇಂತಹ ಸೃಷ್ಟಿಯ ಅದ್ಭುತ ಕ್ರಿಯೆ ಇಲ್ಲಿರುವ ಕವಿತೆಗಳು ಸೀತೆ, ಸಾವಿತ್ರಿ ದ್ರೌಪದಿ ಅಹಲೆಯರೆಲ್ಲಾ
ಈ ಕುದಿಯೊಲಗಿಂದಲೇ ಹದಗೊಂಡು
ಅಮರ ಪುಟಗಳ ಕತೆಗಳಾಗಿರಬೇಕು… .. ಅಮರರಾಗುವುದು ಸುಲಭ ಅಲ್ಲ. ಸಾಹಿತ್ಯಕ್ಕೆಂದು ಸಾವು ಇಲ್ಲ. ಪ್ರತಿಪಾದನೆ ಎಂದೂ ವಾದವಾಗಬಾರದು ಎಂದು ಪ್ರತಿಪಾದಿಸುತ್ತಲೆ ಕವಿತೆಯ ಸ್ವರೂಪಗಳನ್ನೆಲ್ಲಾ ಒಳಗೊಂಡಿರುವ, ಅದಕ್ಕೊಪ್ಪುವ ಪ್ರತಿಮೆಗಳ ಸುಂದರ ಕವಿತೆಗಳು ಇಲ್ಲಿವೆ. ‘ಮಿತಿಗಳಾಚೆ’ ಎಂಬ ಕವಿತೆಯಲ್ಲಿ ಮಿತಿಗಳನ್ನು ಹೇರಿ, ಎಲ್ಲೆಗಳನ್ನು ಮೀರಿ ಸಾಗಿದವರು.
ಪರಿಧಿಯತ್ತಲೆ ಚಿತ್ತನೆಟ್ಟು, ಕಣ್ಣಿಟ್ಟು ಪಹರೆ ಕಾಯುತ್ತಿದ್ದಾರೆ.
ಕಾಯುತ್ತಲೇ ಇರುತ್ತಾರೆ ಕೂಡಾ… ಮಾಮರ್ಿಕವಾದ ಈ ಸಾಲುಗಳು ಸರಳವಾಗಿ ತೋರಿದರು ಇದರೊಳಗಿನ ಮರ್ಮವನ್ನು ಚಿತ್ರಿಸಿದ ಪರಿ ಅಚ್ಚರಿಯನ್ನಂಟುಮಾಡುತ್ತದೆ.
ಇಲ್ಲಿನಾನೊಬ್ಬಳೆ ಸುರಕ್ಷಿತವೆಂದು ಹೇಗೆ ಭಾವಿಸಲಿ?
ಮೊನ್ನೆ ಮೊನ್ನೆಯವರೆಗು ಹಾಗೆ ಅಂದುಕೊಂಡಿದ್ದೆ.
ಅಲ್ಲೆ ಬಿದ್ದ ಬೆಂಕಿಯ ಉರಿ
ಇಲ್ಲಿ ತನಕ ತಟ್ಟುವವರೆಗೂ. . . . ..
ಹೆಣ್ಣಿನ ಮನದ ತುಮಲಗಳನ್ನು ಸಂಪೂರ್ಣ ಬರೆಗಲ್ಲಿಗೆ ಹಚ್ಚಿದಂತೆ ಚಿತ್ರಿಸಲು ಒಬ್ಬ ಹೆಣ್ಣಿನ ಬರಹಗಳಿಂದ ಮಾತ್ರ ಸಾಧ್ಯ. ಅಡುಗೆ ಮನೆಯ ಕವಿತೆಗಳನ್ನು ಹೆಣ್ಣೊಬ್ಬಳು ಬರೆದರೆ ಮಾತ್ರ ಅದು ಸತ್ವಯುತ ಎಂಬುದು ನನ್ನ ಭಾವನೆ. ಸ್ಮಿತಾರವರ ಕವಿತೆಗಳು ಹೀಗೆ ಅನುಭವದಿಂದ ಅದ್ದಿ ತೆಗೆದಂತಹ ಪ್ರಬುದ್ಧ ಬರಹಗಳು. ತುಂಬಾ ನವಿರು ಭಾವನೆಗಳಿಂದ ಕೂಡಿದ ಸರಳತೆಯೊಂದಿಗೆ ಕಠಿಣತೆಯ ಅರಿವು ನಮ್ಮೊಳಗೆ ತುಂಬಿಕೊಳ್ಳುತ್ತದೆ. ಎಲ್ಲೂ ವಾಚ್ಯಕ್ಕೆ ಆಸ್ಪದವೆ ಇಲ್ಲದ ಕವಿತೆಗಳೆಲ್ಲವು ಮನಸನ್ನು ತಟ್ಟುತ್ತದೆ. ಭಾವಗೀತೆಯ ಗುನುಗು ತುಟಿಯಂಚಲ್ಲಿ ಮೇರೆ ಮೀರಿ ನಿಲ್ಲುವಂತಹ ಪದಪುಂಜಗಳು ಇಲ್ಲಿವೆ. ಕನಸು ಮನಸಿನ ಕವಿತೆಗೆ ಯಾವ ಹಂಗು ನೀವೆ ಹೇಳಿ? ಇವರ ಬೆಟ್ಟದಷ್ಟು ಕನಸಿಗೆ ಕವನಗಳೆ ಸ್ಫೂತರ್ಿ ತುಂಬುತ್ತಿವೆ ವಿನಹ ವಾಸ್ತವ ಏನೂ ಮಾಡಲಿಲ್ಲ. ಕಾಲ ಯಾರಿಗೂ ಕಾಯುವುದಿಲ್ಲ ಎಂಬ ನಿಯಮವನ್ನು ಸಲೀಸಾಗಿ ಅಥರ್ೈಸಿಕೊಂಡು ಭಾವಪರವಶರಾಗುತ್ತಾರೆ.
ಹೂವಿನಂತಹ ಬೆಳಗು, ಎಸಳೆಸಲಾಗಿ ತೆರೆದುಕೊಳ್ಳುತಲಿದೆ
ಹೊಸಭರವಸೆಯ ಕಡೆಗೆ….
ಕರಿ ಇರುಳ ಚಾದರದೊಳಗೆ
ಮತ್ತೆ ಪಿಸುಗುಟ್ಟುತ್ತಿದೆ ಕನಸು
ಭರವಸೆಯ ಹೊಸ ನಾಳೆಗಾಗಿ
ತುಡಿಯುತ್ತಿದೆ ಮನಸ್ಸು. ಕಾಲದ ಅಧಿನಿಯಮವನ್ನು ನಿರ್ಲಕ್ಷ್ಯ ಮಾಡದೆ ಒಯಿನಾಗಿ ಹೊಂದಿಕೆ ಮಾಡುವುದೇ ಜೀವನದ ಪರಿಕಲ್ಪನೆ ಎಂಬುದು ಇವರ ಹೆಚ್ಚಿನ ಕವಿತೆಗಳ ಅಂತರ್ಯ. ಭಾವನೆಗಳೂ ಹಾಸುಹೊಕ್ಕಾದ ಸುಂದರ ಹೂವಿನಂತಹ ಗೀತೆಗಳು ಮನಸನ್ನು ಬಲು ಆಪ್ತವಾಗಿ ತಟ್ಟುತ್ತದೆ.
ಎಲೆಯ ತುದಿಯಲ್ಲಿ ಕೊನೆ ಹನಿ
ಇನ್ನೇನು ಬೀಳಬೇಕು
ನನ್ನೊಳಗೆ ತೀರದ ಸಂಕಟ
ಮೆಲ್ಲಗೆ ಬೆರಳ ತುದಿಗೆ
ಇಳಿಬಿಟ್ಟು ಕಣ್ಣ ಪಾಪೆಯೊಳಗೆ ಮುಚ್ಚಿಟ್ಟೆ
ನನಗು ಮಳೆಗು ಈಗ ತೀರದ ನಂಟು.
ಇಲ್ಲಿರುವ ಎಲ್ಲಾ ಕವಿತೆಗಳು ತುಟಿಯಂಚಲ್ಲಿ ಉಳಿಯುವ ಕವಿತೆಗಳಾಗಿವೆ. ಮನಸ್ಸಿನ ಪಿಸುನುಡಿಗೆ ಧ್ವನಿಯಾದಂತಿದೆ. ಹೃದಯದ ಭಾವನೆಗಳಿಗೆ ಭಾಷೆಯ ಬಾಷ್ಯ ಬರೆದಂತಹ ಪ್ರತಿ ಸಾಲುಗಳು ಇನ್ನೂ ವಿಶಾಲವಾದ ಕ್ಯಾನ್ವಾಸನ್ನು ಉಪಯೋಗಿಸಿಕೊಂಡರೆ ನಾಡು ಮೆಚ್ಚುವಂತಹ ಮಹಿಳಾ ಸಾಹಿತಿಗಳ ಸಾಲಲ್ಲಿ ನಿಲ್ಲಬಲ್ಲವರು ಸ್ಮಿತಾ ಅಮೃತರಾಜ್. ಅರಳಿಕೊಳ್ಳುವ ಕಲೆ ಗೊತ್ತಿದ್ದರೆ ಪರಿಮಳ ಅನಿವಾರ್ಯವೆ ಇಲ್ಲ. ಇವರದ್ದೆ ಕವಿತೆಯ ಸಾಲುಗಳು ಇವರ ಸಾಹಿತ್ಯ ಬದುಕಿನ ನೆಲೆ ಮತ್ತು ಸೆಲೆ. ಸಾಹಿತಿ ಅಬ್ದುಲ್ ರಶೀದ್ ರವರ ಮುನ್ನುಡಿ ಮತ್ತು ರೂಪ ಹಾಸನರ ಚಿನ್ನುಡಿಯು ಪುಸ್ತಕಕ್ಕೆ ಸೂಕ್ತ ಮನ್ನಣೆ ನೀಡೆದೆ.
 

‍ಲೇಖಕರು G

17 November, 2014

6 Comments

  1. satish javaregowda

    Nimma maathu aksharasha sathya.

  2. ಲಕ್ಷ್ಮೀಕಾಂತ ಇಟ್ನಾಳ

    ಕವನದ ಪುಸ್ತಕ, ‘ತುಟಿಯಂಚಲಿ ಉಲಿದ ಕವಿತೆಗಳು’ ಸ್ವಗತಗಳು, ಸ್ವಂತಿಕೆಗಳ ಕುರಿತು ತುಂಬ ಚನ್ನಾಗಿ ಬರೆದಿದ್ದಿರಿ ಸಂಗೀತಾ ಜಿ. ಸ್ಮಿತಾ ರವರಿಗೆ ಅಭಿನಂದನೆಗಳು

  3. ಪುರುಷೋತ್ತಮ ಬಿಳಿಮಲೆ

    ಸ್ಮಿತಾ ಅವರು ಚೆನ್ನಾಗಿ ಬರೆಯುತ್ತಾರೆ. ಅವರದು ಹೃ್ದಯದ ಭಾಷೆ. ಮಹಿಳೆಯ ಬೇಗುದಿಗಳನ್ನು ಅವರು ಹೊಸ ಸಂಕೇತಗಳ ಮೂಲಕ ದಾಖಲಿಸುವ ಕ್ರಮದಲ್ಲಿ ಹೊಸತನವಿದೆ. ಇಂಥ ಹೊಸತನವನ್ನು ಗುರುತಿಸಿ, ಓದುಗರಿಗೆ ಅದನ್ನು ದಾಟಿಸುವ ಕೆಲಸ ಮ಻ಡಿದ ಸಂಗೀತಾ ಅವರಿಗೆ ಅಭಿನಂದನೆಗಳು

  4. Anil Talikoti

    Loved your analysis succinct and apt.
    -Anil

  5. vasudeva nadig

    smitha avaraduu suukshma samvedaneya jeevamukhi saalugalu..

  6. anand rugvedi

    Smitha avaru thuti anchalli bhaava osaridanthe bhaashe balasaballaru. Hosa thalemarina bharavaseya dani avaru.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading