ಸುಶ್ರುತ ದೊಡ್ಡೇರಿ
ಒಂದೊಂದ್ಸಲ ಎಂಥಾ ಭ್ರಮೆಯಾಗುತ್ತೆ ಅಂದ್ರೆ, ಈ ನ್ಯೂಸ್ ಅವರ್ ಡಿಬೇಟುಗಳು, ಪತ್ರಿಕೆ-ಟ್ಯಾಬೊಲಾಯ್ಡುಗಳ ತನಿಖಾ ವರದಿಗಳು, ಸೋಶಿಯಲ್ ನೆಟ್ವರ್ಕುಗಳಲ್ಲಿನ ಪ್ರತಿಕ್ರಿಯಾ ಯುದ್ಧಗಳು –ಇವನ್ನೆಲ್ಲಾ ನೋಡುವಾಗ, ಇವೆಲ್ಲಾ ಬರೋದಕ್ಕೆ ಮುಂಚೆ ಜಗತ್ತು ಹೆಂಗಿತ್ತು ಅಂತ… ಆಗೆಲ್ಲ ಭ್ರಷ್ಟರು, ಮೋಸಗಾರರು, ತಪ್ಪಿತಸ್ತರು ಎಲ್ಲಾ ಆರಾಮಾಗಿ ಓಡಾಡಿಕೊಂಡಿದ್ರಾ?
ತಪ್ಪೆಸಗಿಯೂ ಸುಲಭವಾಗಿ ನುಣುಚಿಕೊಂಡು ಹೋಗಿಬಿಡ್ತಿದ್ರಾ?
ವಿವಾದಾತ್ಮಕ ಘಟನೆಗಳು ನಡೆದಾಗ ಬಲಿಷ್ಟರ ಪರವಾಗಿಯೇ ತೀರ್ಪಾಗುತ್ತಿತ್ತಾ?
ಯಾರಾದ್ರೂ ಏನಾದ್ರೂ ಹೇಳಿಕೆ ಕೊಟ್ಟಾಗ ಜನ ತಲೇನೆ ಕೆಡಿಸ್ಕೊಳ್ತಿರಲಿಲ್ವಾ?

ಅಥವಾ… ಆಗೆಲ್ಲ ಜನ ಇಷ್ಟೆಲ್ಲ ಭ್ರಷ್ಟರೂ, ಕೆಟ್ಟವರೂ, ಧನಪಿಪಾಸುಗಳೂ, ಸ್ವಪ್ರತಿಷ್ಟೆಯವರೂ ಆಗಿರಲಿಲ್ವಾ?
ಪ್ರತಿದಿನ, ಇಡೀ ದಿನ ಚರ್ಚಿಸಿದರೂ ಮುಗಿಯದಷ್ಟು ’ಚರ್ಚೆ’ ಸೃಷ್ಟಿಯಾಗುವಷ್ಟು ಜಗತ್ತು ಹಾಳಾಗಿಹೋಯಿತಾ?
ಅಥವಾ, ನಡೆಯೋ ಪ್ರತಿ ಘಟನೆಯ ಬಗ್ಗೆಯೂ ಜನ ಸಕ್ರಿಯವಾಗಿ ಪ್ರತಿಕ್ರಿಯಿಸ್ತಿರೋದು-ಚರ್ಚಿಸ್ತಿರೋದು ಈ ಕಾಲದ ಒಳ್ಳೆಯ ಲಕ್ಷಣವಾ?
ಈ ಚರ್ಚೆಗಳಲ್ಲಿ ಕಂಪಲ್ಸರೀ ಭಾಗವಹಿಸೋದು ನಮ್ಮ ಜವಾಬ್ದಾರಿಯಾ?
ಹೋಗಲಿ ಈ ಚರ್ಚೆಗಳಿಂದ ನಿಜವಾಗಿಯೂ ಉಪಯೋಗ ಆಗ್ತಿದೆಯಾ?
ಏನೋಪ್ಪಾ…






Houdu maaraaya!!