ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುವರ್ಣ ಬರೆದ ಸಣ್ಣಕಥೆ ’ಬೆಡ್‍ಲೈಟ್’

ಸುವರ್ಣ ಸಿ

ಧೂಳು ಸಂಜೆ ದನಕರು ಬರೋ ಹೊತ್ತಿನಲ್ಲಿ ದಾರಿ ನೋಡತ್ತಾ ಕೂತಿದ್ದ ಸೋಮವ್ವನಿಗೆ ತಲೆ ಒಳಗೆ ಕೆಂಪಮ್ಮನ ಸ್ಥಿತಿ ವಿಚಿತ್ರವಾಗಿ ಕಾಣತೊಡಗಿತು. ಕೆಂಪಮ್ಮ ಕಾಫಿ ತೋಟದ ಕೆಲಸಕ್ಕೆ ಹೋದಾಗ ಸಾಹುಕಾರನ ಮಗನ ಕೆಂಗಣ್ಣಿಗೆ ಗುರಿಯಾಗಿ ಅಪ್ಪ ಅವ್ವ್ಮನಿಗೆ ಅವಳು ದೊಡ್ಡ ಹೊರೆಯಾದಳು. ಮಂಗಳೂರಿನಲ್ಲಿ ಬಿಎ ಫೇಲ್ ಮಾಡಿಕೊಂಡು ಊರಿಗೆ ಬಂದ ಕೆಂಪಮ್ಮ ಒಂದಿಷ್ಟು ಕಾಸು ಮಾಡ್ಕಂಡು ಪರೀಕ್ಷೆ ಪಾಸ್ ಮಾಡಿ ಎಂ.ಎ ಓದಿ ಲೆಕ್ಚರ್ ಆಗಬೇಕು ಎಂಬುದು ಅವಳ ಬಹುದೊಡ್ಡ ಆಸೆ. ಈ ಆಸೆಯ ಹಿಂದೆ ಅವರ ಮನೆಯಲ್ಲಿ ಬಾಲ್ಯದಿಂದಲೂ ತಾನು ಕಂಡ ಅನುಭವಿಸಿದ ಬಡತನ. ಅರೇ ಹೊಟ್ಟೆಯಲ್ಲಿ ಚಿಕ್ಕ ವಯಸ್ಸಿನಿಂದಲೂ ಜೀವನ ಸಾಗಿಸುತ್ತಾ ಬಂದ ಕೆಂಪವ್ವನಿಗೆ ಏನಾದರೂ ಮಾಡಿ ಈ ಬಡತನದಿಂದ ಮುಕ್ತಿ ಪಡೆಯಬೇಕು ಅದಕ್ಕೆ ನಾನು ಕೆಲಸಕ್ಕೆ ಸೇರಲೇ ಬೇಕು ಎಂಬುದು ಅವಳ ಗುರಿ. ಮನೆಯಲ್ಲಿ ಕೈಕಟ್ಟಿ ಕುಳಿತರೆ ನನ್ನ ಗುರಿ ಸಾಧಿಸಲು ಆಗುವುದಿಲ್ಲ ಎಂದು ಮನಗಂಡು ಕಾಫಿ ತೋಟದ ಕೆಲಸಕ್ಕೆ ಹೋಗಲು ನಿರ್ಧರಿಸಿದಳು. ಕೆಂಪವ್ವನ ತಂದೆತಾಯಿಗೆ ಅವಳು ತೋಟದ ಕೆಲಸಕ್ಕೆ ಹೋಗುವುದು ಇಷ್ಟವಿರುವುದಿಲ್ಲ. ಅವಳು ಕಾಫಿತೋಟದ ಕೆಲಸಕ್ಕೆ ಹೋಗುತ್ತೇನೆ ಎಂದು ಅವ್ವಅಪ್ಪನನ್ನು ಕೇಳಿದಾಗ ಅವರು ಬ್ಯಾಡ ನೀನು ಓದುತ್ತಿರುವ ಮಗಳು ಅಲ್ಲಿಗೆಲ್ಲಾ ಬ್ಯಾಡ.. . . . ಮಗಳೇ , ನಿನ್ನಷ್ಟಕ್ಕೆ ನೀನು ಕೆಲಸ ಮಾಡುತ್ತಿದ್ದರು ದೊಡ್ಡವರು ನಿನ್ನ ಬಿಡಲ್ಲ ಬ್ಯಾಡ ಮಗಳೆ ಕಾಲ ಸರಿ ಇಲ್ಲ . ನಿನ್ನ ಅಣ್ಣ ಬೆಂಗಳೂರಿನಿಂದ ದುಡ್ಕಂಡು ಬರೋದೆ ಸಾಕು ನಾವು ಕುರಿಮಾಂಸ ತಿನ್ನದಿದ್ದರೂ ದನದ ಮಾಂಸ ತಿಂದೆ ಬದುಕೋನ ನಮಗೆ ಇರುವುದು ನೀನೊಬ್ಬಳೆ ಮಗಳು ನಿನ್ನ ಕಳಕೊಂಡು ನಾವು ಬದುಕಲಾರೆವು . ಪರೀಕ್ಷೆ ಕಟ್ಟಿಕೊಂಡು ಮನೆಯಲ್ಲೇ ಕೂತು ಓದು ಮುಂದಿನ ವರ್ಷ ಮತ್ತೆ ಕಾಲೇಜಿಗೆ ಹೋಗುವೆಯಂತೆ ಎಂದು ಪರಿಪರಿಯಾಗಿ ಕೇಳಿಕೊಂಡು ಅಲ್ಲಿನ ಪರಿಸರದ ವಾಸ್ತವತೆಯ ಬಗ್ಗೆ ಎಳೆಎಳೆಯಾಗಿ ಅವಳ ಮುಂದೆ ತೆರೆದಿಟ್ಟರು ಅವಳು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ . ಅವಳ ಒಂದೇ ಹಠ ನಾನು. . . . ದುಡಿಯಬೇಕು . ಕೊನೆಗೆ ಅವ್ವಅಪ್ಪ ಎಲ್ಲರೂ ಅವಳಿಗೆ ಹೆಂಗ್ಯಾದರೂ,.. . . . ಎಲ್ಲಿಗಾದರೂ . . . . ಹೋಗಿ ಸಾಯಿ ನಾವು ನಿನಗೆ ಹೇಳಲು ಆಗೋದಿಲ್ಲ ಅಂತಹ ಹೇಳಿ ಅವಳಿಚ್ಚೆಗೆ ಬಿಟ್ಟರು.
ಕೆಂಪವ್ವನದು ಯಸಳೂರು ಅಲ್ಲಿ ಇವರ ಪುಟ್ಟಗುಡಿಸಲು ಇದ್ದಿದ್ದು ಕಾಲೋನಿಯಲ್ಲಿ. ಅಪ್ಪ ಪಕ್ಕದ ಊರಿನ ಸಾಹುಕಾರನ ಮನೆಯಲ್ಲಿ ಜೀತಕ್ಕಿದ್ದರೆ ಅವ್ವ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಊರಿನಿಂದ ಸುಮಾರು ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿ ಅಂದರೆ ಸಕಲೇಶಪುರ-ಹಾಸನಕ್ಕೆ ಹೋಗುವ ಮಾರ್ಗಮಧ್ಯೆದಲ್ಲಿ ಕೇರಳ ಕಡೆಯವರೊಬ್ಬರು ಸುಮಾರು ಐನೂರು ಎಕರೆ ಗಿಂತಲೂ ಹೆಚ್ಚು ವಿಸ್ತೀರ್ಣ ಹೊಂದಿದ್ದ ಕಾಫಿತೋಟವನ್ನು ಮಾಡಿರುತ್ತಾರೆ. ಈ ತೋಟಕ್ಕೆ ಹೊರ ಜಿಲ್ಲೆಗಳಿಂದ ಕೂಲಿಕೆಲಸಕ್ಕೆ ಗುಳೆ ಬಂದರೆ , ಸಕಲೇಶಪುರ ದ ಸುತ್ತಮುತ್ತಲ ಹಳ್ಳಿಗಳಿಂದಲೂ ಕೂಲಿಕಾಮರ್ಿಕರು ತೋಟದ ಕೆಲಸಕ್ಕೆ ಬರುತ್ತಿರುತ್ತಾರೆ. ಈ ತೋಟದಲ್ಲಿ ಬೇರೆ ತೋಟಕ್ಕೆ ಹೋಲಿಸಿದರೆ ಈ ತೋಟದಲ್ಲಿ ಕಾಮರ್ಿಕರಿಗೆ ಕೂಲಿ ಹೆಚ್ಚು. ಆದ್ದರಿಂದ ಬಹುತೇಕ ಕೂಲಿಗಾರರು ಈ ತೋಟಕ್ಕೆ ಕೆಲಸಕ್ಕೆ ಹೋಗಲು ಹೆಚ್ಚು ಇಷ್ಟಪಡುತ್ತಿದ್ದರು. ಕೆಂಪಮ್ಮನು ಕೂಡ ಈ ತೋಟಕ್ಕೆ ಕೆಲಸಕ್ಕೆ ಹೋಗಲು ನಿರ್ಧರಿಸಿದಳು. ಈಗಾಗಲೇ ಕಾಲೋನಿಯ ಬಹುತೇಕ ಮಹಿಳೆಯರು, ಯುವತಿಯರು ಕೆಲಸಕ್ಕೆ ಹೋಗುತ್ತಿರುವುದು ನೋಡಿದ್ದಳು. ಪಕ್ಕದ ಗುಡಸಲಿನ ಸಿದ್ದಯ್ಯನ ಮಗಳು ಸಾವಿತ್ರಿ ಇದೇ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರಿಂದ ಆ ಹುಡುಗಿಯ ಜೊತೆ ಮಾತನಾಡಿ ಅವಳ ಜೊತೆಯಲ್ಲಿಯೇ ತೋಟದ ಕೆಲಸಕ್ಕೆ ಹೊರಟೆ ಬಿಟ್ಟಳು.
ತೋಟಕ್ಕೆ ಹೋಗುವ ದಾರಿಯ ಇಕ್ಕೆಲೆಗಳಲ್ಲಿ ದಡ್ಡವಾದ ಮರಗಳು , ಹಕ್ಕಿಪಕ್ಷಿಗಳ ಕಲರವ, ಮಧ್ಯೆಮಧ್ಯೆ ಜರಿಯಲ್ಲಿ ಹರಿಯುತ್ತಿದ್ದ ನೀರು ಎತ್ತ ಕಣ್ಣು ಹಾಯಿಸಿದರು ಹಸಿರೇ. . . ಹಸಿರು ಆಹಾ. . .ಪ್ರಕೃತಿಯ ಮಡಿಲಿನಲ್ಲಿ ಕೆಲಸ ಮಾಡುವುದು ಒಂದು ಸೊಗಸು ಎಂದು ಒಂದು ಕ್ಷಣ ತನ್ನ ಒಡಲಿನಲ್ಲಿ ಇದ್ದ ಬೆಂಕಿಉಂಡೆಯಂತೆ ಇದ್ದ ನೋವು , ಸಂಕಟ , ಹಸಿವು, ಬಡತನವನ್ನು ಒಂದು ಕ್ಷಣ ಮರೆತು ಆ ಪ್ರಕೃತಿಯ ವಿಹಂಗಮ ನೋಟದಲ್ಲಿ ತನ್ನ ತನವನ್ನೆ ಮರೆತು ಪ್ರಕೃತಿಯ ಒಡಲೊಳಗೆ ದುಂಬಿಯಂತೆ ಅರೆಕ್ಷಣ ವಿಹರಿಸುತ್ತಾಳೆ. ಉದ್ದನೆ ಲಂಗ ಅದರ ಮೇಲೆ ಒಂದು ಕುಪ್ಪಸ ತೊಟ್ಟು ಕೈಯಲ್ಲಿ ತಿಂಡಿ ಡಬ್ಬ ಹಿಡಿದು ಪಕ್ಕದ ಮನೆ ಸಾವಿತ್ರಿಯ ಜೊತೆ ಹೆಜ್ಜೆ ಹಾಕಿದಳು. ತೋಟದ ಗೇಟು ಹತ್ರ ಹೋಗುತ್ತಿದ್ದಂಗೆ ಅಲ್ಲೆ ಖಾಕಿ ಪ್ಯಾಂಟ್ , ಖಾಕಿ ಷಟರ್್ ತಲೆಗೆ ಟೋಪಿ, ಕೈಯಲ್ಲಿ ದೊಣ್ಣೆ ಹಿಡಿದು ನಿಂತಿದ್ದ ಮಧ್ಯವಯಸ್ಸಿನ ವ್ಯಕ್ತಿ ಸಾವಿತ್ರಿಗೆ ಒಳಗೆ ಬಿಟ್ಟ ಆದರೆ ಕೆಂಪವ್ವನನ್ನು ಗೇಟಿನ ಹತ್ರವೇ ತಡೆದ.

ತಕ್ಷಣ ಕೆಂಪಮ್ಮ ಆತನಿಗೆ ನಾನು. . .. ತೋಟದ ಕೆಲಸಕ್ಕೆ ಬಂದಿದ್ದು , ನನಗೆ ಕೆಲಸ ಇದೆಯಾ ಎಂದು ಕೇಳುತ್ತಾಳೆ . ವಾಚ್ ಮೆನ್ ಬೋರಪ್ಪ ಅವಳನ್ನ ಒಮ್ಮೆ ಮೇಲಿನಿಂದ ಕೆಳಗಿನವರೆಗೆ ಒಂದು ಸಾರಿ ಅವಳನ್ನು ದಿಟ್ಟಿಸಿ ನೋಡಿ ನೀನು. . . . ಇಲ್ಲಿ. . . . ತೋಟದಲ್ಲಿ . . . . .ಕೆಲಸ ಮಾಡ್ತೀಯಾ. . . .. ಹುಡಗೀ. .. . .ಎಂದು ಉಸಿನಗೆ ಬೀರುತ್ತಾ ಇಲ್ಲೆ ವಸಿ ನಿಂತ್ಕ ಒಳಕ್ಕೆ ಅಂಗೆಲ್ಲಾ ಅಪರಿಚಿತರು, ಹೊಸಬರು, ಬರೋ ಹಂಗಿಲ್ಲ ಕಣವ್ವ. . . .! ಬೇಜಾರಮಾಡಕೋ ಬ್ಯಾಡ ನಮ್ಮ ರೈಟರುನ್ನ ವಸಿ ಇಚಾರಿಸಿಕೊಂಡು ಬರತ್ತೀನಿ ಅಂತಹ ಹೇಳಿ ಅವಳನ್ನ ಅಲ್ಲೆ ನಿಲ್ಲಿಸಿ ರೈಟರ್ಗೆ ವಿಷಯ ತಿಳಿಸಲು ಹೋಗುತ್ತಾನೆ. ಕೆಂಪವ್ವ ಅಯ್ಯೋ . . . .ಈ ಸಾವಿತ್ರಿ ಒಳ್ಳೆ ದಡ್ಡಿ ಅವಳು ಆ ರೈಟರಿಗೆ ಮೊದಲು ಹೇಳಿ ಆ ಮೇಲೆ ನನಗೆ ಕರ್ಕಂಡು ಬರೋದಲ್ಲವಾ ತಾನೇ ಈ ತೋಟದ ಓನರ್ ಅನ್ನೋ ಹಂಗೆ ಬಾರಕ್ಕ ಅಂತಹ ಕರ್ಕಂಡು ಬಂದಬಿಟ್ಟಳು ಇವಳು ಮುಖಕ್ಕೆ ಒಂದಿಷ್ಟು ನಮ್ಮ ಕಡೆಯವರು ಕಣಯ್ಯ ಒಳಕ್ಕೆ ಬಿಡು ಅಂತಹ ಹೇಳೋಕು ದಮ್ಮು ಇಲ್ಲ . ಇನ್ನೂ ಎಷ್ಟು ವರ್ಷ ಅಂತಹ ಹೆದರತ್ತವೋ ಏನೋ ಈ ಹುಡಗಿರು . . . .. . .. ಆ ನಮ್ಮ ಅಪ್ಪ ಸಂವಿಧಾನ ಬರದು ಹೋದರು ಇವಕ್ಕೆ ಇನ್ನೂ ಧೈರ್ಯನೇ ಬಂದಿಲ್ಲ ಯಾರು ಏನ್ ಮಾಡಿದ್ದರು ಮಾಡುಸ್ಕಂಡು ಸುಮ್ನೆ ಇರತ್ತಾವೆ ಅಂತಹ ಮನಸ್ಸಲ್ಲೆ ಶಪಿಸಿಕೊಂಡು ಗೇಟು ಬಳಿಯೇ ನಿಂತು ತೋಟದ ಸುತ್ತಲೂ ಒಮ್ಮೆ ದೃಷ್ಠಿ ಆಯಿಸಿದಳು. ಉಸ್ ಅಬ್ಬಾ. . .! ತೋಟದ ಕೂಲಿ ಕೆಲಸಕ್ಕೆ ಇಷ್ಟು ಸಿಸ್ಟಮ್ ಐತಲ್ಲ ಇನ್ನೂ ಗೌರ್ನಮೆಂಟ್ ಕೆಲಸಕ್ಕೆ ಇನ್ನೆಷ್ಟು ಸಿಸ್ಟಮ್ ಐತೆ. . . .! ನಮ್ಮಂತವ್ವರು ಸಕರ್ಾರಿ ನೌಕರಿ ತಗೊಂಡ ಆಯತಾ . . .. ಅಂತಹ ಹೇಳತ್ತಾ ತಲೆ ಮೇಲೆ ಕೈ ಇಟ್ಟುಕೊಂಡು ಅಲ್ಲೆ ಕೂತಕತ್ತಾಳೆ. ಅಷ್ಟರಲ್ಲಿ ಅವಳ ಹಿಂದಿನಿಂದ ಬುರ್ರ . .ಬುರ್ರ ಅಂತ ಜೀಪ್ವೊಂದು ತೋಟದ ಒಳಕ್ಕೆ ನುಗ್ಗಿತು. ಬೆಳ್ಳನೆಯ ಆರು ಅಡಿ ಇದ್ದ ಯುವಕನೋರ್ವ ಕೆಂಪು ಟೀ ಷಟರ್್ , ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ತೊಟ್ಟು ಕಣ್ಣಿಗೆ ಗಾಗಲ್ಸ್ , ಕಿವಿಗೆ ಮೊಬೈಲ್ ಹಿಡಿದು ಏನೋ ಇವನ ಕೈಯಲ್ಲೆ ಜಗತ್ತೇ ಇದೆಯೇನೋ ಎನ್ನುವಂತೆ ಠಾಕುಠೀಕಿನಿಂದ ಕಾಡು ಹರಟೆ ಹೊಡೆಯುತ್ತಾ ಜೀಪ್ ಓಡಿಸುತ್ತಿದ್ದ. ಕೆಂಪವ್ವ ನಿಂತಿರುವುದನ್ನು ಕಂಡು ಗಿರ್ಕ ಎಂದು ಬ್ರೇಕ್ ಹೊಡೆದ. ಜೀಪು ಹೋಗಿ ಮಾರುದ್ದ ದೂರದಲ್ಲಿ ನಿಲ್ಲುತ್ತದೆ. ತಕ್ಷಣ ಆತ ಕಿಟಕಿಯಿಂದ ಹೊರಕ್ಕೆ ಕತ್ತು ಹಾಕಿ ನಿಂತಿದ್ದ ಕೆಂಪವ್ವನನ್ನ ಒಮ್ಮೆ ದಿಟ್ಟಿಸಿ ನೋಡಿ ನಸುನಕ್ಕು ಪುನಃ ಏರ್ ಜಟ್ಟ್ ನಂತೆ ಬುರ್ರನೇ ಹಾರುತ್ತಾನೆ ಅವನು ಹೋದ ವೇಗಕ್ಕೆ ಮುಗಿಲಿನೆತ್ತರಕ್ಕೆ ಮಣ್ಣಿನ ಧೂಳು.ಏಳುತ್ತದೆ.
ಅತ್ತಲಿನಿಂದ ಗಾಬರಿಯಾಗಿ ವಾಚ್ಮೆನ್ ಬೂಟು ಕಾಲಿನ ಅಸಡಾ ಬಸಡಾ ಹೆಜ್ಜೆ ಇಟ್ಟುಕೊಂಡು ಬರುತ್ತೀರೋದು ನೋಡಿದ ಸಾಹುಕಾರನ ಮಗ ಸಚ್ಚಿನ್ ಗರ್ರಕ್ಕನೇ ್ರಜೀಪು ನಿಲ್ಲಿಸಿ ಏನೋ ಬೋರಪ್ಪ ಆ ಹುಡುಗಿ ಯಾರೋ . . . . ಯಾಕೆ ಅಲ್ಲಿ ನಿಂತ್ವಳೆ ಏನ್ ಕೆಲಸ ಇಲ್ಲಿ ಅವಳಿಗೆ ಎಂದು ಏರುದನಿಯಲ್ಲಿ ಕೇಳಿದ. ಅವನಒಳಕ್ಕೆ ಬರೋಕೆ ಹೇಳೋದಲ್ಲವೇನೋ ಅಂತಿದ್ದಂಗೆ ಬೋರಪ್ಪ ತಲೆ ಕೆರ್ಕಂಡು ಆ ಹುಡುಗಿ ಹೊಸಬಳು ಬುದ್ಧಿ ಕೂಲಿ ಕೆಲಸಕ್ಕೆ ಕೇಳಕ್ಕಂಡು ಬಂದವ್ವಳೆ ಅದುಕ್ಕೆ ಅಲ್ಲೆ ನಿಲ್ಲಸಿ ರೈಟರುನ್ನ ಕೇಳೋಕೆ ಹೋಗಿದ್ದೆ .
ಸಚ್ಚಿನ್ ಜೊಲ್ಲು ಸುರಿಸುತ್ತಾ ಅಬ್ಬಾ. . ! ಚಂದುಳ್ಳಿ ಚಲುವೆ ಆ ಹುಡುಗಿ ಒಳ್ಳೆ ಹಂಗೆ ಮೈ ಕೈ ತುಂಬ್ಕಂಡು ಗಟ್ಟಿಮುಟ್ಟಾಗಿ ಮಸ್ಕತ್ ಆಗವ್ವಳೆ ಬಿಸಲಲ್ಲಿ ನಿಲ್ಲಸಿ ಮುಖ ಎಲ್ಲಾ ಬಾಡುಸತ್ತೀದ್ದಿಯಲ್ಲ ಬೋರ ಅವನೇನು ಕೇಳತ್ತಿಯಾ ಸೇರುಸ್ಕಳೋ ಒಂದು ಕೈ ನೋಡನಾ ಅಂತ ಹೇಳಿದ್ದೆ ತಡ ಸೀದಾ ತೋಟದ ಮನೆಹತ್ರ ಜೀಪು ತಿರುಗಿಸಿದ.
ಬೋರ ಓಹೋ ಈ ಸಾಹುಕಾರನ ಮಗನ ಕೆಂಗಣ್ಣಿಗೆ ಇವಳೂ. . .. . ಬಿದ್ದಲು. ಈಗಾಗಲೇ ಇವನ ಕೈಗೆ ಎಷ್ಟು ಹೆಣ್ಣುಮಕ್ಕಳು ಆದವೋ ಏನೋ ನಾನು ಇಲ್ಲಿಗೆ ಬಂದಾಗಿನಿಂದಲು ಇವರ ಆಟ ನೋಡಿ . . . . .ನೋಡಿ ಸಾಕಾಗ್ ಹೋದೆ. ಹೆಣ್ಣುಮಕ್ಕಳು ಅಂದ್ರೆ ಸಾಕು ಜೊಲ್ಲು ಸುರಸತ್ತಾನೆ ಇವನ ಜನ್ಮಕ್ಕೆ ಒಂದಿಷ್ಟು ಬೆಂಕಿ ಹಾಕೋಗ ಅಂತ ಬೈಯುತ್ತಾ ನರನರ ಹಲ್ಲುಕಡಿತ್ತಾ ಓಹೋ. . .ಓಹೋ ಬೆಳಗಾದರೇ ಸಾಕು ಸೆಂಟು, ಬಡ್ಕಂಡು, ಠಾಕುಟೀಕು ಅಂತಹ ಬಂದಬಿಡತ್ತಾನೆ . ತೋಟದಲ್ಲಿ ಕಿಸ್ದು ಏನೋ ಕಡದು ಕೆತ್ತ ಬಿಡೋನಂಗೆ . ಇಲ್ಲಿ ಇವನ ಕೇಮೆನೇ ಬೇರೆ ಅಪ್ಪದಿರು ಕರಗದಷ್ಟು ಗಂಟು ಮಾಡ ಬಿಡತ್ತಾರೆ ಇನ್ನೇನು ಮಾಡತ್ತಾವೆ ಇವು ಮೋಜುಮಸ್ತಿ ಮಾಡತ್ತಾ ತಿರಗತ್ತಾವೆೆ . ಆ ಬಡಹೆಣ್ಣುಮಕ್ಕಳು ಇವರಿಗೆ ಬಲಿ ಹಾಕತ್ತಾವೆ.ೆ ಛೇ ಆ ಸಾಹುಕಾರ ಅವ್ವನೆ ಮುದಕ ಮಗನಿಗೆ ಒಂದಿಷ್ಟು ಬುದ್ಧಿ ಹೇಳನಾ ಅನ್ನಂಗಿಲ್ಲ ಅವನೂ ವಯಸ್ಸನಲ್ಲಿ ಹಿಂಗೆ ಮಾಡಿದ್ದನೇನೋ ಅದುಕ್ಕೆ ಬಿಟ್ಟಕಂಡವ್ವನೇ . ಕಳೆದ ವರ್ಷ ಆ ಶಂಕರಪ್ಪನ ಮಗಳುನ್ನ ಈ ಅಸಾಮಿ ಸ್ನೇಹಿತರ ಜೊತೆ ಸೇರ್ಕಂಡು ಬಸುರು ಮಾಡಿ ಅವಳನ್ನ ಇಲ್ಲದಂಗೆ ಮಾಡದ . ಈ ಹುಡುಗಿ ಗತಿ ಏನಾಗುತ್ತೋ ಏನೋ. . .! ಮುಗಿಲು ಒಂದು ಸಾರಿ ನೋಡಿ ಸೀದಾ ಕೆಂಪವ್ವನ ಹತ್ರ ಹೋದ. ಒಳಗೆ ರೈಟರು ಕರಿತ್ತಾವ್ವರೇ ಹೋಗವ್ವ ಅಂತಹ ಹೇಳಿ ಗೇಟ್ ಹತ್ರ ಇದ್ದ ಕುಚರ್ಿ ಮೇಲೆ ಉಸ್. . .! ಅಂತಹ ನಿಟ್ಟುಸ್ಸಿರು ಬಿಡುತ್ತಾ ಕೂಕ್ಕರಿಸಿಕೊಂಡ.
ಕೆಂಪವ್ವ ಸೀದಾ ರೈಟರು ವೆಂಕಣ್ಣ ಇರೋ ರೂಮಿಗೆ ಹೋಗುತ್ತಾಳೆ. ಅವನು ನೋಡೋದಕ್ಕೆ ಎತ್ತರವಾಗಿ , ದಪ್ಪ ಮೀಸೆ ಬಿಟ್ಟುಕೊಂಡು ಒಳ್ಳೆ ಭೀಮನಂಗೆ ಕೂತಕ್ಕಂಡು ಕೆಲಸಗಾರರ ಹಾಜರಾತಿ ಪುಸ್ತಕ ನೋಡುತ್ತಾ ಕೂಲಿ ಲೆಕ್ಕಾಚಾರ ಹಾಕುತ್ತಾ ಕೂತಿರುತ್ತಾನೆ. ಅವಳು ಬಾಗಿಲಲ್ಲಿ ನಿಂತಿರೋದು ನೋಡಿ ಕಣ್ಣಲ್ಲೇ ಒಳಕ್ಕೆ ಬಾ ಅಂತಹ ಸನ್ನೆ ಮಾಡಿ ಪುಸ್ತಕ ಮುಚ್ಚಿಡುತ್ತಾನೆ. ಅವಳನ್ನ ಪರಿಚಯ ಮಾಡಿಕೊಂಡು ನಿಧಾನವಾಗಿ ಅವಳ ಮೇಲೆ ಒಂದೊಂದೆ ರಾಮ ಬಾಣದಂತೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ಅವಳ ಬಗ್ಗೆ ಎಲ್ಲಾ ಮಾಹಿತಿಯನ್ನ ಪಡೆದುಕೊಳ್ಳುತ್ತಾನೆ. ನಂತರ ತೋಟದ ವಿಷಯ ಹೇಳಿ ದಿನಕ್ಕೆ ಹೆಣ್ಣಾಳಿಗೆ ಐವತ್ತು ರೂಪಾಯಿ ಕೂಡತ್ತೀವಿ ಬೆಳಗ್ಗೆ 8 ಗಂಟೆಯಿಂದ ಸಂಜೆ 6-30ರ ವರೆಗೆ ಕೆಲಸ ಮಾಡಬೇಕಾಗುತ್ತೇ ಅಪರೂಪಕ್ಕೆ ಏನಾದರೂ ಒಂದೊಂದು ಸಾರಿ ಹೆಚ್ಚುವರಿ ಕೆಲಸ ಇದ್ದರ್ರೆ ತಡ ಆಗುತ್ತೇ ಆಗ ಒಂದೊಂದು ದಿನ ಇಲ್ಲೆ ಉಳಿದುಕೋಬೇಕಾಗುತ್ತೆ ನಿಮಗಾಗಿ ಉಳ್ಕಳ್ಳೋಕೆ ಇಲ್ಲೆ ಲೈನ್ ಮನೆ ಐತೆ ಭಯ ಪಡೋ ಆಗಿಲ್ಲ ನಿನ್ನಂತಹ ಹುಡುಗಿರು ಸುಮಾರು ಜನ ಇಲ್ಲೇ ಅವ್ವರೇ ಅಂತಹ ಹೇಳತ್ತಾನೆ .
ಕೆಂಪವ್ವನಿಗೆ ಕೆಲಸ ಏನಾದರೂ ಆಗಲಿ ಬಿಎ ಪರೀಕ್ಷೆ ಕಟ್ಟಿ ಎಂಎ ಓದೋಕೆ ದುಡ್ಡು ಬೇಕಾಗಿದ್ದರಿಂದ ಅವನು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿ ಒಪ್ಪಿಕೊಳ್ಳತ್ತಾಳೆ. ರೈಟರು ಕೂಡ ಸರಿ ಅಂತಹ ಹೇಳಿ ಕೆಲಸ ಕೊಟ್ಟು ಕಳುಹಿಸುತ್ತಾನೆ. ಅವಳು ಹೊರಗಡೆೆ ಬಂದು ಒಂದು ಸಾರಿ ತೋಟದ ಸುತ್ತ ದಿಟ್ಟಕಣ್ಣನ್ನು ಬಿಟ್ಟು ನೋಡುತ್ತಾಳೆ. ಕಾಫಿಗಿಡದ ಸಾಲಿನಲ್ಲಿ ಹುಡುಗಿಯರು, ಹೆಂಗಸರು , ಸೀರೆ ಮೇಲೆ ಉದ್ದ ನಿಲುವಂಗಿ ತೊಟ್ಟು ತಲೆಗೆ ಬಟ್ಟೆ ಸೊಂಟಕ್ಕೆ ಚೀಲಕಟ್ಟಿಕೊಂಡು ಕಾಫಿಹಣ್ಣನ್ನ ಬಿಡಿಸುತ್ತಿರೋ ದೃಷ್ಯವನ್ನ ಒಮ್ಮೆ ನೋಡುತ್ತಾಳೆ. ಇತ್ತ ಸಾಹುಕಾರನ ಮಗ ಸಚ್ಚಿನ್ ತೋಟದ ಮನೆ ಅಂಗಳದಲ್ಲಿ ಸ್ನೇಹಿತರ ಜೊತೆ ಏನೋ ಗಾಢ ಚಚರ್ೆಯಲ್ಲಿರುತ್ತಾನೆ. ಹೊಸ ಕೆಲಸ ಹೊಸ ಜಾಗ ಆಗಿದ್ದರಿಂದ ಕೆಂಪವ್ವಗೆ ಏನ್ ಕೆಲಸ ಮಾಡಬೇಕು ಏನ್ ಮಾಡಬಾರದುಮ ಅನ್ನೋದೆ ತಿಳಿಯಕ್ಕಿಲ್ಲ ಅತ್ತ . . . .ಇತ್ತ ನೋಡುತ್ತಾ ಜೋಲು ಮೋರೆ ಹಾಕಿಕೊಂಡು ನಿಂತಿರತ್ತಾಳೆ. ರೂಮಿನಿಂದ ರೈಟರ್ ಹೊರಕ್ಕೆ ಬಂದು ಕೆಂಪವ್ವನ ಕರೆದು ಸೀದಾ ಸಚ್ಚಿನ್ ಹತ್ರ ಕರೆದ್ಯೊಯುತ್ತಾನೆ.
ಸಚ್ಚಿನ್ ಒಮ್ಮೆ ಕೆಂಪವ್ವನನ್ನು ತಲೆಯಿಂದ ಕಾಲುವರೆಗೆ ಮೇಲಿನಿಂದ ಕೆಳಕ್ಕೆ ಕೆಕ್ಕರಿಸಿಕೊಂಡು ನೋಡತ್ತಾನೆ. ಸೇಬಿನಂತೆ ಇದ್ದ ಕೆನ್ನೆ . ಕಮಲದಂತಿದ್ದ ಕಣ್ಣು , ಉಬ್ಬಿದ್ದ ಎದೆ ಬಳುಕುತ್ತಿದ್ದ ಸೊಂಟ ನೋಡಿ ಒಂದು ಕ್ಷಣ ಅವನಿಗೆ ಅವಳನ್ನೊಮ್ಮೆ ಬಾಚಿ ತಬ್ಬಿ ತುಂಟಿಯನ್ನ ಚುಂಬಿಸಬೇಕನ್ನಿಸುತ್ತದೆ ಕೂತಲ್ಲೆ ಕಾಲನ್ನು ಅಲ್ಲಾಡಿಸುತ್ತಾ ಅವಳನ್ನ ದಿಟ್ಟಿಸಿ ನೋಡುತ್ತಾನೆ. ಅವನ ಕಣ್ಣಿನ ಕಾಮದ ನೋಟಕ್ಕೆ ಕೆಂಪವ್ವನ ಮೈ ಒಂದು ಕ್ಷಣ ನಡುಗಿತು. ಆದರೂ ಅವನ ಮುಂದೆ ಎದೆಗುಂದದೆ ಎದೆಸೆಟೆದು ನಿಲ್ಲುತ್ತಾಳೆ. ಸಚ್ಚಿನ್ ಅವಳ ಹಾಗೂ ಕುಟುಂಬದ ಕುರಿತು ಸಂಪೂರ್ಣ ಮಾಹಿತಿ ಪಡೆದು ಕೆಲಸ ಮಾಡುವಂತೆ ಹೇಳತ್ತಾನೆ. ಕೆಂಪವ್ವ ಕತ್ತು ಅಲ್ಲಾಡಿಸುತ್ತಾ ಕಾಫಿ ಹಣ್ಣು ಬಿಡಿಸಲು ಹುಡುಗಿಯರ ಜೊತೆ ಸೇರುತ್ತಾಳೆ ಹಣ್ಣು ಬಿಡಿಸುತ್ತಿದ್ದರು ಸಚ್ಚಿನನ್ನೇ ಅವಳ ಮುಂದೆ ಕಣ್ಣುಕಟ್ಟಿದ್ದಂಗೆ ನಿಲ್ಲುತ್ತಾನೆೆ ಅವನ ಯೌವನದ ಮದ ಇವಳ ಹೃದಯದ ಬಡಿತ ಹೆಚ್ಚಿಸಿರುತ್ತದೆ. ತನ್ನ ಪಾಡಿಗೆ ತಾನು ಹಣ್ಣನ್ನು ಬಿಡಿಸುತ್ತಿದ್ದಾಗ ಸಚ್ಚಿನ ಇವಳತ್ತ ನೋಡುತ್ತ ಒಂದು ಸಾರಿ ಕೆಮ್ಮುತ್ತಾನೆ ಆದರೂ ನೋಡುವುದಿಲ್ಲ ಬೇಕಂತಲೆ ಅಲ್ಲೆ ಕುಚರ್ಿ ಹಾಕಿಕೊಂಡು ಕೂತಿರತ್ತಾನೆ . ಕೆಂಪವ್ವ ಇವನತ್ತ ನೋಡೋದೆ ಇಲ್ಲ. ಸರಸರ ಹಣ್ಣನ್ನು ಬಿಡಿಸಿ ಬ್ಯಾಗಿಗೆ ತುಂಬಿ ಮುಗಿಲನ್ನು ಒಮ್ಮೆ ನೋಡತ್ತಾಳೆ ಆಗಲೆ ಸೂರ್ಯ ಮುಳುಗೋ ಹೊತ್ತು ಆದ್ದರಿಂದ ಸಾವಿತ್ರಿ ಹಾಗೂ ಕಾಲೋನಿಯ ಹುಡುಗಿಯರ ಜೊತೆ ಮನೆಗೆ ಹೋಗೋಕೆ ಅಣಿ ಆಗತ್ತಾಳೆ. ರೈಟರ್ ವೆಂಕಣ್ಣ ಕೆಂಪವ್ವನಿಗೆ ಹೇ ಕೆಂಪಿ ಇವತ್ತು ನಿಂದು ಮೊದಲನೆ ದಿನ ಅದಕ್ಕೆ ಸುಮ್ಮನಾಗಿದ್ದೀನಿ ನಾಳೆ ಯಿಂದ ಕಾಫಿ ಹಣ್ಣು ಜಾಸ್ತಿ ಬಿಡುಸಬೇಕು ಇಷ್ಟು ಬಿಡಿಸಿದರೆ ಸಾಲದು ಅಂತಹ ಎಚ್ಚರಿಕೆ ಹೇಳಿ ಕಳುಹಿಸತ್ತಾನೆ.
ಸಚ್ಚಿನ್ ರಾತ್ರಿ ಮನೆಗೆ ಹೋಗಿ ಮಲಗಿದರು ಅವನ ಕಣ್ಣುಮುಂದೆ ಕೆಂಪವ್ವನೇ ಹಾದು ಹೋಗುತ್ತಿರುತ್ತಾಳೆ ಮಂಚದ ಮೇಲೆ ಅತ್ತಲಿನಿಂದ ಇತ್ತ ಇತ್ತಿಲಿನಿಂದ ಅತ್ತ ಹೊರಳಾಡಿದರೂ ಎಷ್ಟೊತ್ತಾದರೂ ನಿದ್ದೆ ಬರುವುದೇ ಇಲ್ಲ ಮೇಲೆದ್ದು ಲೈಟ್ ಹಾಕಿಕೊಂಡು ಒಂದು ಕ್ಷಣ ಗೋಡೆಗೆ ಹೊರಗಿ ಅರೇ. .. . . ಆ ಹುಡುಗಿ ಯಾಕೆ ನನಗೆ ಇಷ್ಟೊಂದು ಕಾಡುತ್ತಿದ್ದಾಳೆ ಅವಳನ್ನು ನೋಡಿದ್ದು ಬರೀ ಮೂರು ಗಂಟೆಯಷ್ಟೇ ಯಾಕೆ ಇಷ್ಟೊಂದು ಕಾಡುತ್ತಿದ್ದಾಳೆ ನನ್ನ ನಿದ್ರೆಯನ್ನೆ ಕೆಡಿಸುತ್ತಿದ್ದಾಳಲ್ಲ ಎಂದು ಕೊಂಡು ಸಿಗರೇಟನ್ನು ಹಚ್ಚಿಕೊಂಡು ತುಟಿಮೇಲೆ ಇಟ್ಟುಕೊಂಡು ತೋಟದಲ್ಲಿ ಕೆಂಪವ್ವ ಅವನನ್ನು ಕಾಫಿ ಹಣ್ಣು ಬಿಡಿಸುತ್ತಲೇ. . . .ಕದ್ದುಮುಚ್ಚಿ ನೋಡುತ್ತಿದ್ದ ಪರಿಯನ್ನು ನೆನಪಿಸಿಕೊಳ್ಳುತ್ತಾ ಹಾಗೆಯೇ ದಿಬ್ಬಿಗೆ ತಲೆಕೊಡುತ್ತಾನೆ.
ಬೆಳಗ್ಗೆ ಎದ್ದಾಗ ಆಗಲೇ ಗಂಟೆ ಒಂಬತ್ತಾಗಿರುತ್ತೆ. ದಡಬಡ ಮೇಲೆ ಎದ್ದು ಸ್ನಾನ ಮಾಡಿ ಅಮ್ಮ ಮಾಡಿದ್ದ ಕಡುಬು ಚಟ್ನಿ ತಿಂದ ಎಸ್ಟೇಟ್ ಹತ್ತಿರ ಚೀಪು ಓಡಿಸುತ್ತಾನೆ. ಎಸ್ಟೇಟ್ ನಲ್ಲಿ ಅವನ ಕಣ್ಣು ಕೆಂಪವ್ವನನ್ನು ಹುಡುಕುತ್ತಿರುತ್ತೆ ಎಲ್ಲಿ ನೋಡಿದರು ಅವಳು ಕಾಣುವುದಿಲ್ಲ, ರೈಟರ್ ಕೇಳಿದರೆ ಏನಂದು ಕೊಂಡಾನೋ ಎಂದು ಕೇಳದೆ ಸೀಗರೇಟ್ ತುಟಿಗೆ ಇಟ್ಟುಕೊಂಡು ಸೇದುತ್ತಾ ಕುಳಿತಿರುತ್ತಾನೆ . ಅತ್ತಲಿನಿಂದ ಕಾಫಿ ಹಣ್ಣು ತಲೆಯ ಮೇಲೆ ಹೊತ್ತುಕೊಂಡು ಸೊಂಟ ಒಳುಕಿಸುತ್ತಾ ಎದೆ ಕುಣಿಸುತ್ತಾ ಹೆಜ್ಜೆ ಮೇಲೆ ಹೆಜ್ಜೆ ಇಟ್ಟುಕೊಂಡು ಬರುತ್ತಿದ್ದನ್ನು ಕಂಡು ಸಚ್ಚಿನ್ ಮುಗುಳು ನಗೆ ಬೀರುತ್ತಾನೆ. ಕೆಂಪವ್ವ ಅವನ ನಗುವನ್ನು ಕಂಡು ನಾಚಿ ನೀರಾಗಿ ಎದೆಯನ್ನು ಮತ್ತಷ್ಟು ಕುಣಿಸುತ್ತಾ ಓಡುತ್ತಾಳೆ. ಮಧ್ಯಾಹ್ನದ ಹೊತ್ತಿಗೆ ಇದ್ದಕ್ಕಿದ್ದಂಗೆ ಮೋಡ ಕವಿದು ಥೋ. . .ಅಂತಹ ಆಕಾಶವೇ ತುತಾಗಿದೆೆಯೇನೋ ಅನ್ನುವಂಗೆ ಒಂದೇ ಸಮನೆ ಗುಡುಗು , ಮಳೆ ಜರ್ರ್ ಅಂತ ಸುರಿಯುತ್ತದೆ. ಗುಡಗಿನ ಶಬ್ಧಕ್ಕೆ ಕೆಂಪವ್ವ ನಿಗೆ ಹೃದಯವೇ ಹೊಡೆದು ಹೋಗುತ್ತದೆಯೇನು ಎನ್ನುವಂಗೆ ಭಯ ಉಂಟಾಗಿ ಕಾಫಿ ಹಣ್ಣು ಬಿಡಿಸುತ್ತಿದ್ದವಳು ಮಕ್ಕರಿಯನ್ನು ಅಲ್ಲೆ ಎಸೆದು ಓಡಿ ಹೋಗಿ ತೋಟದಮನೆಯ ಸೂರಿನ ಕೆಳಗೆ ನಿಲ್ಲುತ್ತಾಳೆ ಅದರ ಪಕ್ಕದಲ್ಲೆ ಇದ್ದ ರೈಟರ ಮನೆಯಿಂದ ಹಂದಿ ಮಾಂಸದ ರೊಸ್ಟ್ ಘಮ್. . .ಘಮ್ ಸುವಾಸನೆ ಮೂಗಿಗೆ ಬಡಿಯುತ್ತಿರುತ್ತದೆ ಮಳೆಗೂ ಆ ಚಳಿಗೂ ಬಾಯಿಂದ ಜೊಲ್ಲು ಸುರಿಸುತ್ತಾ ಮಳೆಯನ್ನು ನೋಡುತ್ತಾ ನಿಂತಿರುತ್ತಾಳೆ. ಅತ್ತಲಿನಿಂದ ವಾಚ್ ಮೆನ್ ವಿಸ್ಕಿ ಬಾಟಲ್ ಹಿಡಿದು ರೈಟರ್ ಮನೆಯತ್ತ ದಾಪುಗಾಲು ಇಡುತ್ತಿದ್ದ. ಕೆಂಪವ್ವ ನಿಂತಿರುವುದನ್ನ ಕಂಡು ಕೆಂಪವ್ವ ಯಾಕಿಲ್ಲ್ಲಿ ಒಬ್ಬಳೆ ನಿಂತಿದ್ದಿಯಾ ಹುಡುಗಿರೆಲ್ಲಾ ಎಲ್ಲಿ ಅಂತಿದ್ದಂಗೆ ಕೆಂಪವ್ವ ಅವರೆಲ್ಲಾ ಮ್ಯಾಗಳ ತೋಟದಲ್ಲಿ ಹಣ್ಣು ಬಿಡಿಸತ್ತಿದ್ದರು, ನಂಗೆ ರೈಟರು ಇಲ್ಲಿ ಬಿಡಸಕ್ಕೆ ಹೇಳಿದ್ದರು ಅದಕ್ಕೆ ನಾನೊಬ್ಬಳೆ ಆಗಿದ್ದಿನಿ ಮಳೆ ಬಂತಲ್ಲ ಅದುಕ್ಕೆ ನಿಂತ್ಕಂಡೆ ಅಂದ್ಲು.
ಹೌದ ರೈಟರು ಮನೆಗೆ ಹೋಗದಲ್ಲವಾ ಅವರ ಹೆಂಗಸ್ರು ಇದ್ದರು
ಪರವಾಗಿಲ್ಲ ಇನ್ನೇನು ಮಳೆ ಬಿಡುತ್ತೆ ಇನ್ನೊಂದಿಷ್ಟು ಐತೆ ಆ ಮೇಲೆ ಊಟ ಮಾಡಿ ಬಿಡಸತ್ತೀನಿ ಅಂದ್ಲು.
ಬೋರಪ್ಪ ಸರಿ ಅಂದ್ಕಂಡು ಬಾಟಲು ಹಿಡ್ಕಂಡು ರೈಟರು ಮನೆಗೆ ಹೋದ. ರೈಟರು ಹೆಂಡತಿ ಸಾಹುಕಾರನ ಮಗನಿಗೆ ಆಗಲೆ ಹಂದಿ ಮಾಂಸದ ರೋಸ್ಟ್ , ಬಿಸಿಬಿಸಿ ಅಕ್ಕಿ ರೊಟ್ಟಿ ಮಾಡಿ ಟಿಫನ್ ಬಾಕ್ಸ್ ಹಾಕಿ ರೆಡಿ ಮಾಡಿದ್ದಲು ಅದುನ್ನ ತಗೊಂಡು ಸಚ್ಚಿನ್ ಗೆ ಕೊಡೋಕೆ ಹೋದ. ಸಚ್ಚಿನ್ ಬಾಗಿಲು ತೆಗೆದು ಇಣುಕಿ ನೋಡಿದ ಕೆಂಪವ್ವ ಒದ್ದೆ ಬಟ್ಟೆಯಲ್ಲಿ ನಡುಗುತ್ತಾ ನಿಂತಿದ್ದಲು. ಆವಳನ್ನ ನೋಡಿ ಅವನ ದೇಹದ ರಕ್ತ ಬಿಸಿ ಆಯಿತು. ಹೋಗಿ ಅವಳನ್ನ ತಬ್ಬಿ ಚುಂಬಿಸಿ ಬಿಡಲೆ ಎನ್ನುವ ಮನಸ್ಸು ಆಯಿತು ಒಂದು ಸಾರಿ ಅವಳನ್ನ ದುರುಗುಟ್ಟುಕೊಂಡು ನೋಡಿ ಕಣ್ಣೊಡೆದು ಒಳ ನಡೆದ.
ಕೆಂಪವ್ವ ಕಳ್ಳಗಣ್ಣಿನಲ್ಲಿಯೇ ಅವನನ್ನೊಮ್ಮೆ ನೋಡಿ ಮುಗುಳು ನಗೆ ಬೀರಿ ಮುಖತಿರುಗಿಸಿಕೊಂಡಳು.
ಸಚ್ಚಿನ್ ಬೋರಪ್ಪ ತಂದು ಕೊಟ್ಟ ವಿಸ್ಕಿ ಯನ್ನ ಹಂದಿ ಮಾಂಸದೊಂದಿಗೆ ಕುಡಿದು ಅಲ್ಲೆ ಇದ್ದ ಮಂಚದ ಮೇಲೆ ಹೊರಳಿದ . ಕೆಂಪವ್ವನ ಸೊಂಟವನ್ನ ಬಿಗಿಯಾಗಿ ಅಪ್ಪಿದ . ತೊಡೆಯನ್ನು ಸವರುತ್ತಾ ಅವಳ ಕಿವಿಯಲ್ಲಿ ಇವತ್ತು ನಾನು ನಿನ್ನ ಅನುಭವಿಸಲೇಬೇಕು ನನಗೆ ಸುಖ ಕೊಡು ನಿನ್ನ ನೋಡಿದಾಗಿನಿಂದಲೂ ನನ್ನ ಮನಸ್ಸಿನಲ್ಲಿ ಅದೇನೋ ತಳಮಳ ಇಲ್ಲ ಎನ್ನಬೇಡ ಎಂದು ಪಿಸುಗುಟ್ಟುತ್ತಾ ಅವಳನ್ನು ಬರಸೆಳೆದು ತುಟಿಗೆ ತುಟಿ ಒತ್ತಿದ್ದ. ಕೆಂಪವ್ವ ಅವನ ಅಪ್ಪುಗೆಯಿಂದ ಬಿಡಿಸಿಕೊಳ್ಳಲು ಎಷ್ಟೇ ಕೊಸರಾಡಿದರೂ ಬೇಡ ಎಂದು ಅಂಗಲಾಚಿದರೂ ಬಿಡಲಿಲ್ಲ. ಸೀಗರೇಟು ಹೊಗೆ ಅವಳ ಮೇಲೆ ಬಿಡುತ್ತಾ ನಾನು ಈ ಕ್ಷಣವನ್ನ ಕಳೆದು ಕೊಳ್ಳಲಾರೆ ಅಬ್ಬಾ ! ಎನ್ನುತ್ತಾ ಅವಳನ್ನು ಅಲಂಗಿಸಿ ಕಾಮದ ಮದದಿಂದ ದುಂಬಿ ಮಧುವನ್ನು ಹಿರಿದಂತೆ ಅವಳನ್ನ ಹಿರಿಬಿಟ್ಟ. ಕೆನ್ನೆ ಸವರಿ ಸಿಹಿಮುತ್ತನಿಟ್ಟು ಈ ಕ್ಷಣವನ್ನ ಯಾರಿಗೂ ನೀನು ಹೇಳ ಬೇಡ ನಿನ್ನ ಎಂ.ಎ ಪಾಸುಮಾಡಿಸುವ ಜವಾಬ್ದಾರಿ ನನ್ನದು ಇದೇ ರೀತಿಯ ಸುಖವನ್ನು ನನ್ನೊಂದಿಗೆ ನೀನು ಹಂಚಿಕೊಳ್ಳಬೇಕು ಎಂದು ಕಾಮದ ಮದದಲ್ಲಿ ಹೇಳಿದ .
ಕೆಂಪವ್ವನ ಮುಖದಲ್ಲಿ ಆಕ್ರೋಶ, ಆಕ್ರಂದನ ಹೆಪ್ಪುಗಟ್ಟುತ್ತದೆ. ಅವ್ವಅಪ್ಪ ಹೇಳಿದ ಮಾತುಗಳು ಕಿವಿಯಲ್ಲೆ ಗುಂಗುಟ್ಟಿ ದುಃಖ ಮಡುಗಟ್ಟುತ್ತದೆ. ದಯವಿಟ್ಟು ನನ್ನ ಬಿಟ್ಟು ಬಿಡು ಎಂದು ಕೈಮುಗಿದು ಬೇಡಿದರೂ . . . . . ಎಷ್ಟೇ ವಿರೋಧಿಸಿದರು ಸಚ್ಚಿನ್ ಅದನ್ನೇನೂ ಲೆಕ್ಕಿಸದೆ ಬಲವಂತವಾಗಿ ಅವಳನ್ನ ಮಂಚದ ಮೇಲಕ್ಕೆ ಎಳೆದುಕೊಂಡು ಕಾಮದತೃಷೆಯನ್ನು ತೀರಿಸಿಕೊಳ್ಳಲು ಹವಣಿಸುತ್ತಾನೆ
ಕೆಂಪವ್ವ ದುಗರ್ಿಯಂಗೆ ಅವತಾರ ತಾಳಿ ಅವಳು ಮೆಟ್ಟಿದ್ದ ಚಪ್ಪಲಿಯನ್ನು ಕೈಗೆ ಎತ್ತಿಕೊಂಡು ಬೇವಸರ್ಿ ನನ್ನ ಮಕ್ಕಳ ಬಡವರ ಹೆಣ್ಣು ಮಕ್ಕಳು ಅಂದ್ರೆ ಮಾನಮಯರ್ಾದೆ ಇಲ್ಲ ಅಂದ್ಕಡಿದ್ದೀರಾ ಅವರ ದೇಹ ಮಾರಿಕೊಳ್ಳಲು ಸಿದ್ದರಿದ್ದಾರೆ ಎಂದು ಕೊಂಡಿದ್ದೀರ ಲೋಫರ್ ನನ್ನ ಮಗನೇ ಎಂದು ಕಿರುಚುತ್ತಾ ಪಟಪಟನೆ ರಪ್ಪನೆ ಆ ಚಪ್ಪಲಿಯಲ್ಲಿ ಎರಡು ಕೆನ್ನೆಗೆ ಬಾರಿಸುತ್ತಾಳೆ. ನಮಗೆ ಬಡತನ ವಿರಬಹುದು ಹಸಿವೂ ಇರಬಹುದು ಆದರೆ ನಾವು ಸ್ವಾಭಿಮಾನಿಗಳು ನಾವು ಯಾವತ್ತೂ ನಮ್ಮ ಮಯರ್ಾದೆಯನ್ನು ಮಾರಿಕೊಳ್ಳುವುದಿಲ್ಲ ಇನ್ನೋಮ್ಮೆ ಈ ರೀತಿ ನಮ್ಮ ಹೆಣ್ಣುಮಕ್ಕಳ ಮೈ ಮುಟ್ಟಿದ್ದರೆ ನಿನ್ನ ಗತಿ ನೆಟ್ಟಗಿರುವುದಿಲ್ಲ ಹುಷಾರ್. . . .!
ಏನೇ ನಿನ್ನ ಧೀಮಾಕು ಜಬ್ಬರದಸ್ತು ಇದು ಕಾಫಿ ತೋಟ ಇಲ್ಲಿ ಯಾರು ಇಲ್ಲ ಎನ್ನುತ್ತಾ ಕೆಂಪವ್ವನ ತಲೆಯನ್ನು ಸವರುತ್ತಾ ನೀನು ಈಗ ಏನೂ ಹೇಳಿದರು ನಾನು ಬಿಡಲಾರೆ ನಿನ್ನ ದುಗರ್ಿ ಅವತಾರಕ್ಕೆ ನಾನು ಹೆದರುವುದಿಲ್ಲ ನೀನು ನನ್ನ ಕೆನ್ನೆಗೆ ಒಡೆದಿರುವ ಏಟು ನೀನು ಕೊಟ್ಟಿರುವ ಮುತ್ತು ಎಂದು ಹೇಳುತ್ತಾ . . . . . .ಕಣ್ಣು ತೆರೆಯುತ್ತಾನೆ. ಧಾರಕಾರವಾಗಿ ಸುರಿಯುತ್ತಿದ್ದ ಮಳೆ ಅರೆಕ್ಷಣದಲ್ಲಿ ನಿಶಬ್ಧ ಆಗಲೆ ಸೂರ್ಯ ಮುಳುಗುತ್ತಿರುತ್ತಾನೆ. . . . ಕಿಟಕಿಯಿಂದ ತಕ್ಷಣ ಇಣುಕಿ ನೋಡುತ್ತಾನೆ ಕೆಂಪವ್ವ ಅವಳ ಸ್ನೇಹಿತರು ಹಾಡು ಹೇಳಿಕೊಂಡು ಕಾಫಿ ಹಣ್ಣು ಬಿಡಿಸುತ್ತಿರುತ್ತಾರೆ. ಥೂ. . . .ಛೀ. . . . . ನನ್ನ ಭ್ರಮೆಯೇ ಅಂದುಕೊಂಡು ಅವಳನ್ನೋಮ್ಮೆ ದಿಟ್ಟಿಸಿ ನೋಡಿ ಸಚ್ಚಿನ್ ಮುಗುಳು ನಗೆ ಬೀರಿ ನಿಟ್ಟುಸ್ಸಿರು ಬಿಡುತ್ತಾನೆ.
 

‍ಲೇಖಕರು G

2 March, 2015

2 Comments

  1. ನಾಗರಾಜ್ ಹೆತ್ತೂರ್

    ತುಂಬಾ ಚೆನ್ನಾಗಿದೆ…..

  2. ವೆಂಕಟೇಶ್ ಬ್ಯಾಕರವಳ್ಳಿ

    ಚೆನ್ನಾಗಿದೆ….ಮೇಡಂ.. ಓದಲು ತುಂಬಾ ಕುತೂಹಲಕಾರಿಯಾಗಿದೆ ಓದುತ್ತಿದ್ದರೆ…ಓದುಸುತ್ತಾ ಹೋಗುತ್ತದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading