ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುರೇಶ್ ಸೋಗಲಾಡಿಯಲ್ಲ, ಅಮೀರ್ ಖಾನ್ ಕೂಡ ಅಲ್ಲ! – ದಿನೇಶ್ ಕುಮಾರ್

ಸುರೇಶ್ ಸೋಗಲಾಡಿಯಲ್ಲ, ಅಮೀರ್ ಖಾನ್ ಕೂಡ ಅಲ್ಲ! ಹಿರಿಯರಾದ ಟಿ.ಎನ್.ಸೀತಾರಾಂ, ಬಿ.ಸುರೇಶ್ ಅವರ ಎರಡು ಪ್ರತಿಕ್ರಿಯೆಗಳಿಗೆ ಒಟ್ಟಿಗೆ ಉತ್ತರ ನೀಡಲು ಪ್ರಯತ್ನಿಸುತ್ತಿದ್ದೇನೆ. ಈ ಇಬ್ಬರ ಅಭಿಪ್ರಾಯಗಳೂ ಸಹ ಚಚರ್ೆಯ ಈ ಹಂತದಲ್ಲಿ ಒಂದು ಒಮ್ಮತದ ನಿಲುವಿಗೆ ಹತ್ತಿರವಾಗಲು ಸಹಕರಿಸುತ್ತಿರುವುದು ಸಂತೋಷದ ವಿಷಯ. ಸೀತಾರಾಂ ಅವರಂತೂ ಅಮೀರ್ ಖಾನ್ ಕಾರ್ಯಕ್ರಮ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಲೆಂದು ಮನಸಾರೆ ಹರಸಿದ್ದಾರೆ. ಒಬ್ಬ ಸೃಜನಶೀಲ ಕಲಾವಿದನಿಗೆ ಮತ್ತೊಬ್ಬ ಸೃಜನಶೀಲ ಕಲಾವಿದ ನೀಡುವ ಗೌರವ, ಪ್ರೀತಿ ಇದು. ಅದಕ್ಕಾಗಿ ಟಿ ಎನ್ ಎಸ್ರಿಗೆ ನನ್ನ ಅಭಿನಂದನೆಗಳು. ಬಿ.ಸುರೇಶರ ಪ್ರತಿಕ್ರಿಯೆ ಸಹ ಒಂದರ್ಥದಲ್ಲಿ ನಾನು, ಅಶೋಕ್ ಶೆಟ್ಟರ್, ಹರ್ಷ ಕುಗ್ವೆ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೆವೋ ಅದಕ್ಕೆ ಪೂರಕವಾಗಿಯೇ ಒದಗಿಬಂದಿದೆ. ಅದಕ್ಕಾಗಿ ಅವರಿಗೆ ಥ್ಯಾಂಕ್ಸ್. ಈ ಹಿಂದಿನ ಪ್ರತಿಕ್ರಿಯೆಯಲ್ಲಿ ನಾನು ಕೆಲವು ಸಿನಿಕ ಮಾತುಗಳು ಎಂದು ಹೇಳಿಯೇ ಸುರೇಶರ ಸಾಮಾಜಿಕ ಕಾಳಜಿಗಳ ಕುರಿತಾದ ಒಂದೆರಡು ಕೆಣಕು ಮಾತುಗಳನ್ನು ಆಡಿದ್ದೆ. ಅದನ್ನು ಮುಗಿಸುವಾಗಲೂ ಇಂಥ ಪ್ರಶ್ನೆಗಳಿಗೇನು ಬರ ಇವತ್ತಿನ ಪ್ರಶ್ನೆಗಳ ಜಗತ್ತಿನಲ್ಲಿ ಎಂದೂ ಸಹ ಹೇಳಿದ್ದೆ. ಅದರ ಉದ್ದೇಶ ಟೀಕೆಗಾಗಿ ಟೀಕೆಯಾದರೆ ಯಾರನ್ನು ಬೇಕಾದರೂ ಯಾವ ಸಂದರ್ಭದಲ್ಲೂ ಟೀಕಿಸುತ್ತಾ ಕೂರಬಹುದು ಎಂಬುದನ್ನು ಹೇಳುವುದಷ್ಟೇ ಆಗಿತ್ತು. ಸುರೇಶರು ನನ್ನ ಮಾತುಗಳನ್ನು ಗಂಭೀರವಾಗಿಯೇ ಪರಿಗಣಿಸಿ ಬೇರೆ ಬೇರೆ ಚಳವಳಿಗಳಿಗೆ ತಾವು ನೀಡಿದ ನೈತಿಕ ಬೆಂಬಲ, ಸಹಾನುಭೂತಿಯ ವಿವರಗಳ ಪಟ್ಟಿಯನ್ನೇ ಒದಗಿಸಿದ್ದಾರೆ. ಇದೆಲ್ಲವೂ ಸುರೇಶರ ಬಗ್ಗೆ ನಮಗಿರುವ ಗೌರವವನ್ನು ಹೆಚ್ಚಿಸುವ ಮಾಹಿತಿಗಳು. ಅಸಂವಿಧಾನಿಕ, ಅನೈತಿಕ, ಅತಾಕರ್ಿಕ, ಅನ್ಯಾಯ-ಅಸಹನೆಯ ಡಬ್ಬಿಂಗ್ ನಿಷೇಧ ಎಂಬ ಪಿಡುಗಿನ ಪರವಾಗಿ ಅವರು ಕತ್ತಿ ಕಠಾರಿಗಳನ್ನು ಹಿಡಿದು ವಾದಿಸುತ್ತಿರುವುದನ್ನು ಹೊರತುಪಡಿಸಿ, ಅವರ ಉಳಿದೆಲ್ಲ ಬದುಕಿನ ಸಾಧನೆಗಳ ಕುರಿತು ನನಗೆ ಗೌರವವಿದೆ. ಹೇಗೆ ಅಮೀರ್ ಕುರಿತು ನಿರುಪಯೋಗಿ ಪ್ರಶ್ನೆಗಳನ್ನು ಕೇಳಲು ಸಾಧ್ಯವೋ ಅಂಥವೇ ಪ್ರಶ್ನೆಗಳನ್ನೂ ಸುರೇಶ್, ಸೀತಾರಾಂ ಅಂಥವರನ್ನೂ ಕೇಳಲು ಸಾಧ್ಯವಿದೆ ಎಂದು ಹೇಳಲು ನಾನು ಪ್ರಯತ್ನಪಟ್ಟಿದ್ದೆ. ಸುರೇಶ್ ನನ್ನ ಸಿನಿಕ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ. ಇಂಥ ಉತ್ತರಗಳು ಅಮೀರ್ ಬಳಿಯಲ್ಲೂ ಇರಬಹುದು, ಇರುತ್ತವೆ. ಅಮೀರ್ ಮೇಧಾ ಪಾಟ್ಕರ್ ಜತೆ ಚಳವಳಿಯಲ್ಲಿ ಕುಳಿತವರು, ಅಣ್ಣಾ ಹಜಾರೆ ಆಂದೋಲನದಲ್ಲೂ ಭಾಗವಹಿಸಿದವರು. ಇದು ಸುರೇಶರಿಗೆ ಗೊತ್ತಿರಲಾರದ ವಿಷಯವೇನೂ ಅಲ್ಲ. ಸುರೇಶ್ ಅವರನ್ನು ನಾನು ಸೋಗಲಾಡಿ ಎನ್ನಲಾರೆ, ಯಾರೇ ಹೇಳಿದರೂ ಅದು ಅನ್ಯಾಯ. ಹಾಗೆಯೇ ತನ್ನಂತೆಯೇ ಸೃಜನಶೀಲ ಕಲಾವಿದರಾದ ಅಮೀರ್ ಅವರನ್ನು ಸೋಗಲಾಡಿ ಎನ್ನುವ ಮುನ್ನ ಸುರೇಶ್ ಕೊಂಚ ಯೋಚಿಸಬಹುದಿತ್ತು. ಅದು ನ್ಯಾಯವಲ್ಲ. ಸುರೇಶ್ ಸತ್ಯಮೇವ ಜಯತೆಯ ಕುರಿತು ಬರೆದ `ಜನಪರತೆಯ ಸೋಗು ಹಾಗು ಜನಪ್ರಿಯ ಮುಖ ಹೊತ್ತ ಸೋಗಲಾಡಿಗಳು’ ಲೇಖನದಲ್ಲಿ ಯಾಕೆ ಆ ಪಾಟಿ ಹರಿಹಾಯ್ದಿದ್ದಾರೆ ಅನ್ನೋದೇ ಆಶ್ಚರ್ಯಕರ. ಶೀಷರ್ಿಕೆಯೇ ಅಸಹನೆಯನ್ನು ಕಾರುತ್ತಿದೆ, ಸುರೇಶ್ ಪ್ರಸ್ತಾಪಿಸಿರುವ ವಿಷಯಗಳು ತನ್ನಂತೆಯೇ ಇರುವ ಒಬ್ಬ ಸೃಜನಶೀಲ ಕಲಾವಿದ ನಡೆಸುತ್ತಿರುವ ಸಾಮಾಜಿಕ ಕಾಳಜಿಯ ಕಾರ್ಯಕ್ರಮದ ಕುರಿತು ಓದುಗರಲ್ಲಿ ಸಂಶಯ ಮೂಡಿಸುವ, ದಾರಿಪತಪ್ಪಿಸುವ ಹಾಗೆ ಇವೆ. ತನ್ನ ಮನೆಯನ್ನೇ ಸ್ವಚ್ಛಗೊಳಿಸಿಕೊಳ್ಳದೆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಕುರಿತು ಮಾತನಾಡುವುದು ನಗೆಪಾಟಲಿನ ವಿಷಯ ಎಂದು ಮುಗುಮ್ಮಾಗಿ ಹೇಳುತ್ತಲೇ ಅಮೀರ್ ನ ವೈಯಕ್ತಿಕ ಜೀವನದ ಮೇಲೇ ಪ್ರಹಾರ ಮಾಡಲಾಗಿದೆ. ಇದು ಬೇಕಿತ್ತಾ? ವಿವಾಹ ವಿಚ್ಛೇದನಕ್ಕೆ ಸಾವಿರಾರು ಕಾರಣಗಳಿರುತ್ತವೆ. ಅದು ತೀರಾ ಖಾಸಗಿ ಮಾತ್ರವಲ್ಲ, ಕಾನೂನುಬದ್ಧ. ಅದನ್ನು ಕಾರಣವಾಗಿಟ್ಟುಕೊಂಡು ಸಾಮಾಜಿಕ ಅನಿಷ್ಠಗಳ ಕುರಿತು ಮಾತನಾಡಬೇಡಿ ಎನ್ನುವುದು ನಗೆಪಾಟಲು ಮಾತ್ರವಲ್ಲ, ಅಮಾನವೀಯ. ಸಾ.ರಾ.ಗೋವಿಂದು, ಎಂ.ಎಸ್.ರಮೇಶ್ ಅಂಥವರಿಂದ ಇಂತ ಮಾತುಗಳನ್ನು ನಿರೀಕ್ಷಿಸಬಹುದು, ಆದರೆ ಸುರೇಶ್? ಜಾಗತೀಕರಣ, ರಿಲಯೆನ್ಸ್, ಅಂಬಾನಿ ಇತ್ಯಾದಿಗಳನ್ನು ಥಳುಕು ಹಾಕುವ ಮುನ್ನ ಒಂದನ್ನು ಗಮನಿಸಬೇಕು. ಅಮಿತಾಬ್, ಶಾರೂಖ್, ಸಲ್ಮಾನ್, ಅಕ್ಷಯ್ ರಂಥ ಬಾಲಿವುಡ್ ನಟರನ್ನೂ ಅವರ ಜನಪ್ರಿಯತೆಯ ಹಿನ್ನೆಲೆಯಲ್ಲಿ ಮಾರುಕಟ್ಟೆ ಶಕ್ತಿಗಳು ಬಳಸಿಕೊಂಡಿವೆ. ಮನೋರಂಜನೆಯನ್ನಷ್ಟೇ ಉದ್ದೇಶವಾಗಿಟ್ಟುಕೊಂಡ, ಟಿಆರ್ ಪಿಯನ್ನಷ್ಟೆ ಗುರಿಯಾಗಿಟ್ಟುಕೊಂಡ ಹಲವು ಬಗೆಯ ರಿಯಾಲಿಟಿ ಶೋಗಳು ಬಂದುಹೋಗಿವೆ. ಅಮೀರ್ ಇದೇ ಮಾರುಕಟ್ಟೆ ಶಕ್ತಿಗಳನ್ನು ಜನಪರವಾದ, ಸಾಮಾಜಿಕ ಕಳಕಳಿಯ ರಿಲಾಯಿಟಿ ಶೋಗೆ ಒಗ್ಗಿಸಿಕೊಂಡಿದ್ದಾನೆ, ಇದನ್ನು ಹೀಗೆ ಸಕಾರಾತ್ಮಕವಾಗಿ ಯಾಕೆ ತೆಗೆದುಕೊಳ್ಳಬಾರದು? ಒಂದು ವಿಷಯವಂತೂ ಖಾತ್ರಿ. ಒಂದು ವೇಳೆ ಸತ್ಯಮೇವ ಜಯತೆ ಕನರ್ಾಟಕದಲ್ಲಿ ಡಬ್ಬಿಂಗ್ ಕುರಿತಾದ ಚಚರ್ೆಯನ್ನು ಮುನ್ನೆಲೆಗೆ ತರದೇ ಹೋಗಿದ್ದರೆ ಬಿ.ಸುರೇಶರು ಈ ಲೇಖನ ಬರೆಯುತ್ತಿರಲಿಲ್ಲ. ಡಬ್ಬಿಂಗ್ ಕುರಿತಾದ ಚಚರ್ೆಯ ಸಂದರ್ಭದಲ್ಲಿ ಎದ್ದುನಿಂತ ಸತ್ಯಮೇವ ಜಯತೆಯ ಗುಣಗಾನವನ್ನು ಸಹಿಸಲಾಗದೇ ಸುರೇಶ್ ಈ ಲೇಖನವನ್ನು ತಮ್ಮ ಸಹಜ ವ್ಯಕ್ತಿತ್ವವನ್ನು ಬಿಟ್ಟುಕೊಟ್ಟೇ ಬರೆದಿದ್ದಾರೆ. ಇಲ್ಲವಾದಲ್ಲಿ ಒಂದು ಜನಪರ ಕಾಳಜಿಯ ಕಾರ್ಯಕ್ರಮವನ್ನು ಅವರು ಸೋಗಲಾಡಿ ಎಂದು ಬಿಂಬಿಸುವ ತರ್ಕಕ್ಕೆ ಇಳಿಯುತ್ತಿರಲಿಲ್ಲ. ಡಬ್ಬಿಂಗ್ ವಿಷಯ ಅಂತಜರ್ಾಲದಲ್ಲಿ ಚಚರ್ೆಗೆ ಬಂದಾಗಲೆಲ್ಲ ಬಿ.ಸುರೇಶರು ತಮ್ಮ ವ್ಯಕ್ತಿತ್ವವನ್ನೇ ಪಣಕ್ಕಿಟ್ಟು ಹೋರಾಟಕ್ಕೆ ಇಳಿಯುವುದನ್ನು ನಾವೆಲ್ಲ ಗಮನಿಸಿದ್ದೇವೆ. ಡಬ್ಬಿಂಗ್ ಪರವಾಗಿ ಯಾರಾದರೂ ಬಲವಾದ ವಾದ ಮುಂದಿಟ್ಟ ಕೂಡಲೇ ಸುರೇಶ್ ಕ್ಷಣಕಾಲವೂ ವಿಳಂಬ ಮಾಡದೆ ಪ್ರತಿಕ್ರಿಯಿಸಿಬಿಡುತ್ತಾರೆ, ಎಳೇ ಮಕ್ಕಳಂತೆ ಹಠಕ್ಕೆ ಬೀಳುತ್ತಾರೆ. ಅಮೀರ್ ಖಾನ್ ಕನರ್ಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬರೆದ ಪತ್ರವನ್ನು ನಾನು ನನ್ನ ಫೇಸ್ ಬುಕ್ ವಾಲ್ ನಲ್ಲಿ ಬಹಿರಂಗಪಡಿಸಿದಾಗ ಸುರೇಶ್ ಎಷ್ಟು ಕಿಡಿಕಿಡಿಯಾಗಿದ್ದರೆಂದರೆ ಈ ಪತ್ರ ಬಹಿರಂಗ ಮಾಡಿದವರು ಲಂಚಕೋರ ಬಂಗಾರು ಲಕ್ಷ್ಮಣ್ ಗೆ ಸಮ, ಅವರಿಗಾದ ಶಿಕ್ಷೆಯೂ ಇವರಿಗೂ ಆಗಬೇಕು ಎಂದು ಗುಡುಗಿದ್ದರು. ತದನಂತರ ಈ ಪತ್ರವೇ ಸುಳ್ಳು ಎಂಬುದನ್ನು ಸಾಬೀತುಮಾಡಲು ಹೋಗಿ ಅಮೀರ್ ಖಾನ್ ಸಹಿ ಇರುವ ಇನ್ನೊಂದು ಖಾಸಗಿ ಪತ್ರವನ್ನು ತಮ್ಮ ಫೇಸ್ ಬುಕ್ ಗೋಡೆಯ ಮೇಲೆ ತರಾತುರಿಯಲ್ಲಿ ಅಂಟಿಸಿದರು. ಅವರ ದುರದೃಷ್ಟಕ್ಕೆ ಎರಡೂ ಸಹಿ ಒಂದೇ ಆಗಿದ್ದವು. ಇದಲ್ಲದೆ ಕನ್ನಡದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತ ಬಂದಿರುವ ಬನವಾಸಿ ಬಳಗದ ಗೆಳೆಯರೊಂದಿಗೆ ಚಚರ್ಿಸುವಾಗ ಡಬ್ಬಿಂಗ್ ಪರವಾಗಿರೋದು ಅಮೀರ್ ಖಾನ್ ಏಜೆಂಟರು, ಜಾಗತೀಕರಣದ ಏಜೆಂಟರು, ಅಮೆರಿಕ ಏಜೆಂಟರು ಎಂದೆಲ್ಲ ಹಣೆಪಟ್ಟಿ ಹಚ್ಚಿಬಿಟ್ಟರು. ಡಬ್ಬಿಂಗ್ ವಿಷಯ ಬಂದಾಗೆಲ್ಲ ಸುರೇಶರು impulsive ಆಗಿ ಪ್ರತಿಕ್ರಿಯಿಸುವುದನ್ನು ನೋಡಿದ್ದೇವೆ; ರಚ್ಚೆ ಹಿಡಿದ ಮಕ್ಕಳ ಹಾಗೆ. ಹೀಗೆ impulsive ಆಗಿ ಕೊಟ್ಟ ಪ್ರತಿಕ್ರಿಯೆಗಳು insensitive ಆಗಿರುತ್ತದೆ ಮತ್ತು ಸಂವಾದದಲ್ಲಿ ತೊಡಗಿಕೊಂಡ ತಮ್ಮನ್ನು ಪ್ರೀತಿಸುವ, ಗೌರವಿಸುವವರಲ್ಲಿ ಕಿರಿಕಿರಿ ಮೂಡಿಸುತ್ತವೆ ಎಂಬುದನ್ನೂ ಅವರು ಗಮನಿಸಬೇಕಿತ್ತು. ಈ ಥರದ ಬೌದ್ಧಿಕ ಚಚರ್ೆಗಳಲ್ಲಿ ವಕೀಲಿಕೆಯ ಧಾಟಿಯ ವಾದ ಯಾರಿಗೂ ಇಷ್ಟವಾಗುವುದಿಲ್ಲ ಎಂಬುದನ್ನೂ ಮರೆಯಬಾರದಿತ್ತು. ಸುರೇಶರಿಗೆ ಡಬ್ಬಿಂಗ್ ಬೇಡವೇ ಬೇಡ. ಅದಕ್ಕಾಗಿ ಅವರು ಅಮೀರ್ ನನ್ನು ಸೋಗಲಾಡಿ ಎನ್ನಲೂ ತಯಾರು, ಕನ್ನಡ ಕಾಯಕ ಮಾಡುತ್ತಿರುವವರನ್ನು ಅಮೆರಿಕ ಏಜೆಂಟರೆನ್ನಲೂ ತಯಾರು, ಪತ್ರಕರ್ತನಾಗಿ ಒಂದು ಸಾರ್ವಜನಿಕ ಮಹತ್ವದ ಪತ್ರ ಬಹಿರಂಗಪಡಿಸಿದವನನ್ನು ಬಂಗಾರು ಲಕ್ಷ್ಮಣ್ ಗೆ ಹೋಲಿಸಲೂ ತಯಾರು. ಸುರೇಶ್ ಅವರ ಸಮಸ್ಯೆಗಳು ನಮಗೆ ಅರ್ಥವಾಗುತ್ತೆ. ಅವರು ಯಾಕೆ ಈ ಥರ ಬೀಸು ಮಾತುಗಳನ್ನಾಡಿದರು ಅನ್ನುವುದೂ ಅರ್ಥವಾಗುತ್ತದೆ. ಅವರಿಗೆ ಸದ್ಯಕ್ಕೆ ಕನ್ನಡ ಸಿನಿಮಾ-ಟಿವಿ ಇಂಡಸ್ಟ್ರಿಯನ್ನು ಉಳಿಸಿಕೊಳ್ಳಬೇಕಿದೆ. ಅದಕ್ಕೆ ಅವರಿಗೆ ನೂರೆಂಟು ಕಾರಣಗಳೂ ಇರಬಹುದು. ಆದರೆ ಅವರು ಅಮೀರ್ ನನ್ನು ಶಾಶ್ವತವಾಗಿ ದ್ವೇಷಿಸಲಾರರು. ಸೋಗಲಾಡಿ ಎಂದು ಹೇಳಿದ್ದರೂ ಅದನ್ನು ಮನಃಪೂರ್ವಕವಾಗಿ ಹೇಳಿರಲಾರರು. ಅಮೀರ್ ಹೇಳುತ್ತಿರುವ ಸಾಮಾಜಿಕ ಕ್ರೌರ್ಯಗಳ ಕುರಿತಾದ ಕಥೆಗಳನ್ನೂ ತಳ್ಳಿಹಾಕಲಾರರು-ಯಾಕೆಂದರೆ ಇಂಥ ನಿಲುವು ಅಮೀರ್ ಪ್ರಸ್ತಾಪಿಸುತ್ತಿರುವ ಸಾಮಾಜಿಕ ಕಳಕಳಿಗಳಿಗೆ ಸುರೇಶ್ ವಿರುದ್ಧವಾಗಿ ನಿಂತಿದ್ದಾರೆ ಎಂಬ ಅಪನಂಬಿಕೆಗಳನ್ನೂ ಮೂಡಿಸಲ್ಲದು. ಅಂತಿಮವಾಗಿ ಸುರೇಶ್, ಅಮೀರ್ ಎಲ್ಲರೂ ಕಲಾಜಗತ್ತಿನ ಒಂದು ಸಮೂಹಕ್ಕೆ ಸೇರಿದವರು. ಅದನ್ನು ಅವರು ಮರೆಯುವಂತಿಲ್ಲ. ಟೀಕೆ ಆತ್ಮನಿಂದನೆಯೂ ಆಗಿಬಿಡಬಹುದಾದ ಅಪಾಯವೂ ಇರುತ್ತದಲ್ಲವೇ? ಅಮೀರ್ ಒಬ್ಬನೇ ದೇಶಭಕ್ತ ಎಂದು ಬಿಂಬಿಸುವುದನ್ನು ನಾನು ಒಪ್ಪಲಾರೆ, ಅದಕ್ಕೇ ನನ್ನ ಅಭಿಮತ ಬರೆದಿದ್ದೇನೆ ಎಂದು ಸುರೇಶ್ ಒಂದೆಡೆ ಬರೆದಿದ್ದಾರೆ. ಅಮೀರ್ ಒಬ್ಬನೇ ದೇಶಭಕ್ತ ಎಂದು ಯಾರಾದರೂ ಹೇಳಿದ್ದರೆ ನೀವು ಆ ಮೂರ್ಖನನ್ನೇ ಟಾಗರ್ೆಟ್ ಮಾಡಿ, ಅಮೀರ್ ಯಾಕೆ ಶಿಕಾರಿಯಾಗಬೇಕು ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಸೀತಾರಾಂ ಅವರು ಹೇಳಿದಂತೆ ಒಲ್ಲದ ವೇದಿಕೆಗಳು, ಸಲ್ಲದ ಭ್ರಮೆಗಳು, ಎದುರಿಸಲು ಆಗದ ಶಕ್ತಿಗಳು, ಇವುಗಳನ್ನು ಸುತ್ತ ಕಟ್ಟಿಕೊಂಡು ಬದುಕು -ವೃತ್ತಿಗಳನ್ನು ಕಟ್ಟಿಕೊಳ್ಳುವ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಇದೇ ಈ ಹೊತ್ತಿನ ಹಸಿಹಸಿ ಸತ್ಯ. ಇದು ಸೀತಾರಾಂ, ಸುರೇಶರಿಗೂ ಅನ್ವಯಿಸುತ್ತದೆ, ಅಮೀರ್ ಗೂ ಅನ್ವಯಿಸುತ್ತದೆ, ಎಲ್ಲರಿಗೂ ಅನ್ವಯಿಸುತ್ತದೆ. ಇಷ್ಟನ್ನು ಅರ್ಥ ಮಾಡಿಕೊಂಡರೆ ನಮ್ಮ ಸಿನಿಕತನದಿಂದ ಹೊರಗೆ ನಿಂತು ನಿರ್ಮಲ ಮನಸ್ಸಿನಿಂದ ಎಲ್ಲದಕ್ಕೂ ತೆರೆದುಕೊಳ್ಳುವುದು ಸಾಧ್ಯ. ಈ ಚಚರ್ೆ ಇಲ್ಲಿಗೆ ಮುಗಿಯಬಹುದು ಅಥವಾ ಮುಂದುವರೆಯಬಹುದು. ಗೂಂಡಾಗಿರಿ ಮಾಡಿಯಾದರೂ, ಇನ್ನೊಬ್ಬರನ್ನು ಮುಗಿಸಿಯಾದರೂ ಡಬ್ಬಿಂಗ್ ತಡೆಯುತ್ತೇವೆ ಎಂದು ಮಚ್ಚು ಲಾಂಗು ಹೀರೋಗಳು ಆರ್ಭಟಿಸುತ್ತಿರುವಾಗ ಸೀತಾರಾಂ, ಸುರೇಶ್ ರಂಥವರು ಆರೋಗ್ಕಕರವಾಗಿ ಚಚರ್ೆಗೆ ಒಡ್ಡಿಕೊಂಡಿರುವುದಕ್ಕಾಗಿ ಅವರನ್ನು ಅಭಿನಂದಿಸಿ ವಿರಮಿಸುತ್ತೇನೆ. ಹಾಗೆಯೇ ಈ ಚಚರ್ೆಗೊಂದು ವೇದಿಕೆ ಕಲ್ಪಿಸಿದ ಜಿ.ಎನ್.ಮೋಹನ್, ಅವಧಿ ತಂಡ ಹಾಗು ಚಚರ್ೆಯಲ್ಲಿ ಪಾಲ್ಗೊಂಡ ಎಲ್ಲ ಓದುಗರಿಗೂ ನನ್ನ ಪ್ರೀತಿ ಸಲ್ಲುತ್ತದೆ. ಅಗತ್ಯ ಬಿದ್ದರೆ ಮತ್ತೆ ಮಾತನಾಡೋಣ, ಅದೊಂದೇ ಅಲ್ಲವೇ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಒಪ್ಪಿ, ನಂಬಿದವರಿಗೆ ಇರುವ ದಾರಿ?    ]]>

‍ಲೇಖಕರು G

2 June, 2012

5 Comments

  1. ಈಶ್ವರ ಕಿರಣ

    ಒಳ್ಳೆಯ ಪ್ರತಿಕ್ರಿಯೆ ದಿನೇಶ್ ಜೀ . ಚರ್ಚೆಗೆ ವಿಮುಖರಾಗಿ ವಾದಕ್ಕೋಸ್ಕರ ವಾದವನ್ನು ಮಂಡಿಸುವವರ ಜೊತೆ ಚರ್ಚಿಸಿ ಫಲವಿಲ್ಲ.

  2. ರಾಘವೇಂದ್ರ ತೆಕ್ಕಾರ್

    ಡಬ್ಬಿಂಗ್ ಕುರಿತಾಗಿ ಒಂದು ಪ್ರೌಢ ಚರ್ಚೆ ಮೂಡಿ ಬಂದಿರುವದು ಅವಧಿಯಲ್ಲಿ, ವ್ಯಾಪಕವಾಗಿ ಈ ವಿಷಯ ಹೆಚ್ಚಿನೆಲ್ಲಾ ಸುದ್ದಿ ಹಾಗೂ ದೃಶ್ಯ ಮಾಧ್ಯಮದಲ್ಲಿ ಮೂಡಿಬಂದಿದ್ದರೂ ಒಂದು ಅಭಿಪ್ರಾಯಕ್ಕೆ ಬರುವಲ್ಲಿ ವಿಫಲಗೊಂಡಿತ್ತು, ಚರ್ಚೆಗಳು ಬರಿಯ ಹೀಯಾಳಿಕೆಗೆ ಸೀಮಿತಗೊಳ್ಳುತ್ತಿದೆಯಲ್ಲ ಎಂಭ ಆತಂಕದ ದಿನಗಳಲ್ಲೆ ಅವಧಿ ಈ ವಿಷಯವನ್ನು ಕೈಗೆತ್ತಿಕೊಂಡು ಉತ್ತಮ ಚರ್ಚೆಗೆ ವೇದಿಕೆಯೊದಗಿಸಿ ಪರಿಣಾಮಕಾರಿ ಚರ್ಚೆ ರೂಪಿಸಿದ್ದು ಮೆಚ್ಚುವಂತದ್ದು.ಈ ಚರ್ಚೆ ಚರ್ಚೆಗೆ ಮಾತ್ರ ಸೀಮಿತವಾಗದೆ ಒಂದು ಒಟ್ಟಾಭಿಪ್ರಾಯ ರೂಪಿಸುವಲ್ಲಿ ಸಹಕಾರಿಯಾಗಲಿ ಆ ನಿಟ್ಟಿನಲ್ಲಿ ಈ ಚರ್ಚೆ ಮುಂದುವರಿಯಲಿ ಎಂಬುದು ನನ್ನ ಆಶಯ.

  3. ಗಿರೀಶ್

    ನಿಮ್ಮ ತೀಕ್ಷ್ಣ ಪ್ರತಿಕ್ರಿಯೆಗಳು ತುಂಬಾನೇ ಚೆನ್ನಾಗಿರುತ್ತೆ ದಿನೇಶ್ ಸಾರ್ ಇಂತಹ ಆರೋಗ್ಯಕರವಾದ ಚೆರ್ಚೆಗಳನ್ನು ಓದುವುದೇ ಮನಸ್ಸಿಗೆ ತುಂಬಾ ಮುದ ನೀಡುತ್ತೆ. ನಿಮ್ಮ ಡಬ್ಬಿಂಗ್ ಪರ ವಾದ ಈಗೆ ಮುಂದುವರೆಯಲಿ ಮೊಂದೊಂದು ದಿನ ಜಯ ಎಂದಿದ್ದರು ನಮ್ಮದೇ. ನಿಮ್ಮೊಂದಿಗೆ ಡಬ್ಬಿಂಗ್ ಪರ ನಿಂತಿರುವ ಲಕ್ಷಾಂತರ ಕನ್ನಡಿಗರಿದ್ದೇವೆ. ನಿಮ್ಮೀ ಶ್ರಮಕ್ಕೆ ಅಭಿನಂದನೆಗಳು.

  4. ವಿಜಯಕುಮಾರ ನರಗುಂದ

    ಒಂದು ಚರ್ಚೆಯನ್ನು ಯಾವುದೇ ತಾರ್ಕಿಕ ಅಂತ್ಯ ಕಾಣೀಸದೆ ಎಷ್ಟು ಶತಮಾನಗಳವರೆಗೆಯಾದರು ಎಳೆದುಕೊಂಡು ಹೋಗಬಹುದು. ಏಕೆಂದರೆ ಚರ್ಚೆ ದಿನಕಳೆದಂತೆ ವಾದಕ್ಕೆ ತಿರುಗುತ್ತೆ. ಅದರ ಜೊತೆಗೆ ಒಣ ಅಹಂಗಳು ಜನ್ಮ ತಾಳುತ್ತವೆ. ಇದಮಿತ್ಥಂ ಎಂದು ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತವನನ್ನು ಜಪ್ಪಯ್ಯ ಅಂದರು ಮನವೊಲಿಸಲು ಸಾಧ್ಯವಿಲ್ಲ. ಹೀಗಾಗಿಯೇ ಇಂದು ನಮ್ಮಲ್ಲಿ ಹಲವು ಮಹತ್ವದ ನಿಲುವುಗಳು ಯಾವ ಪರಿಹಾರ ಕಾಣದೆ ಪ್ರಶ್ನಾರ್ಥಕವಾಗಿ ಉಳಿದು ಹೋಗಿವೆ. ಅವುಗಳ ನಡುವೆ ಡಬ್ಬಿಂಗ್ ವಾದ ಕೂಡಾ ಒಂದು.
    ಮೊದಲೆ ತಿಳಿಸಿ ಬಿಡುತ್ತೇನೆ ಈ ನೆಲದ ಸಂಸ್ಕೃತಿ ಮತ್ತು ಭಾಷೆಗೆ ಹಾನಿಯಾಗದಂತೆ ಡಬ್ಬಿಂಗ್ ಮಾಡುವುದು ಯಾವುದೇ ಅಪರಾಧವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಮತ. ಈ ನಿಟ್ಟಿನಲ್ಲಿ ನಾನು ಕೂಡಾ ಡಬ್ಬಿಂಗ್ ಪರವಾಗಿಯೇ ಇದ್ದೇನೆ. ಅದಕ್ಕೆ ಯಾರದೋ ಏಜೆಂಟ್ ಎಂಬ ಹಣೆಪಟ್ಟಿ ಹಚ್ಚಿದರು ಚಿಂತೆಯಿಲ್ಲ. ಇನ್ನು ಅವಧಿಯಲ್ಲಿ ಸತತವಾಗಿ ಈ ಚರ್ಚೆಯನ್ನು ಗಮನಿಸುತ್ತಾ ಬಂದಿದ್ದೇನೆ. ದಿನೇಶ್ ಮತ್ತು ಹರ್ಷ ಅವರು ಮುಂದಿಟ್ಟ ವಾದದಲ್ಲಿ ನಿಚ್ಚಳವಾಗಿ ಯಾವುದು ಪೂರ್ವಾಗ್ರಹಗಳಿರಲಿಲ್ಲ ಮತ್ತು ವಿತ್ತಂಡವಾದದ ಘಮಲು ಕಾಣಿಸುವುದಿಲ್ಲ. ಹೀಗಿರುವಾಗ ಸುರೇಶ್ ಸರ್ ಅವರು ವಾದವನ್ನು ಆ ನಿಟ್ಟಿನಲ್ಲಿ ಸಮರ್ಥಿಸಿ ಕೊಳ್ಳದೆ ತಮ್ಮದೆ ನೆಲೆಗಟ್ಟಿನಲ್ಲಿ ಮಂಥಿಸಿದ್ದು ಏಕ ಪಕ್ಷೀಯವೆಂದೆನಿಸುವದರಲ್ಲಿ ಯಾವ ಸಂಶಯವಿಲ್ಲ. ಇನ್ನೂ ಚರ್ಚೆಯೊಳಗೆ ನುಸುಳೆನು ಎನ್ನುತ್ತಾ ನುಸುಳಿದ ಸೀತಾರಾಂ ಸರ್ ಕೂಡಾ ಹೇಳಿದರು ಹೇಳದಂತೆ ಇರುವ ಹಾಗೆ ಕೊನೆಗೆ ಅಮೀರ್ ನಡೆಸಿ ಕೊಡುವ ಸತ್ಯ ಮೇವ ಜಯತೆಯ ಬಡ್ಜೆಟ್ ಕುರಿತು ಪ್ರಸ್ತಾಪಿಸಿದ್ದಾರೆ. ಒಂದು ವಿಷಯ ಇಲ್ಲಿ ಗಮನಿಸ ಬೇಕು ಈ ಇಬ್ಬರು ಒಂದೊಂದು ವಾಹಿನಿಯಲ್ಲಿ ಧಾರಾವಾಹಿಗಳನ್ನು ಪ್ರಸಾರ ಮಾಡುವ ಅತೀ ಪ್ರಭಾವಿ ನಿರ್ದೇಶಕರುಗಳು (ನಿರ್ಮಾಪಕರು ಕೂಡಾ ಇವರೇ). ಈ ಧಾರಾವಾಹಿ ಪ್ರಪಂಚದಲ್ಲಿ ಸುಮಾರು ಆರು ವರ್ಷ ಮಿಂದೆದ್ದು ಬಂದ ನನಗೆ ಇದರ ಆಳ ಅಗಲದ ಸಂಪೂರ್ಣ ಅರಿವು ಇದೆ. ಹೀಗಾಗಿ ನಾನು ಈ ವಿಷಯದಲ್ಲಿ ಕೂದಲು ಬಿಡಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಆದರೆ ಸೀತಾರಾಂ ಸರ್ ಮತ್ತು ಸುರೇಶ್ ಸರ್, ಅಮೀರ್ ನ SJM ಬಗ್ಗೆ ಎತ್ತಿದ ಅಪಸ್ವರ ನಿಜಕ್ಕು ನನ್ನಲ್ಲಿ ಅನೇಕ ಅಚ್ಚರಿಗಳನ್ನು ಉಂಟು ಮಾಡಿದೆ.
    ಮೊದಲು ಸುರೇಶ್ ಸರ್ ಪತ್ರಿಕೆಗೆ ಬರೆದ ಲೇಖನ ಓದಿದ ದಿನ ನನಗೆ ನಿಜಕ್ಕು ಶಾಕ್ ಆಗಿದ್ದು, ಸುರೇಶ್ ಸರ್ ಏಕೆ ಈ ರೀತಿ ವ್ಯರ್ಥ ಪ್ರಲಾಪಕ್ಕೆ ಕೈ ಹಾಕಿದ್ದಾರೆ ಎಂಬುದು. ಯಾಕೆಂದರೆ ಇದೇ ಟೆಲಿವಿಷನ್ ಜಗತ್ತಿನಲ್ಲಿ ಅಪಾರ ಅನುಭವವುಳ್ಳ ಅವರಿಗೆ ಒಂದು ಕಾರ್ಯಕ್ರಮದ ಹಿಂದಿನ ವ್ಯಾಪಾರಿ ಮನೋಭಾವದ ವಿವಿಧ ಸ್ಥರಗಳ ಸಂಪೂರ್ಣ ಅರಿವು ಇಲ್ಲದಿಲ್ಲ. ಹೀಗಾಗಿ ಮೊದಲು ಈ “ಸೋಗಲಾಡಿ” ಎಂಬ ಪದ ಬಳಕೆಯ ಅನಿವಾರ್ಯತೆ ಬೇಕಿತ್ತೆ ಎಂಬುದು. ಅವರೇ ನಿರ್ಮಿಸಿ, ನಿರ್ದೇಶಿಸಿದ ತಕಧಿಮಿತಾ ಮತ್ತು ನಾಕುತಂತಿ ಧಾರಾವಾಹಿಗಳ ಅನೇಕ ಸಂಚಿಕೆಗಳನ್ನು ನಾನು ವೀಕ್ಷಿಸಿದ್ದೇನೆ. ಅವುಗಳ ಮೂಲಕ ಹಲವು ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸುವ ಸಾಧ್ಯತೆಯನ್ನು ಅವರು ನಿರೂಪಿಸಿದ್ದಾರೆ. ಹೀಗಿರುವಾಗ ಅಮೀರ್ ಮಾಡಿದ್ದು ಸೋಗಲಾಡಿತನ ಎಂದು ಬಣ್ಣಿಸುವುದಾರೆ, ನಿಮ್ಮ ಕಾಳಜಿಯಲ್ಲು ಅದೇ ಅನುಮಾನ ಕಾಡಬಹುದಲ್ಲವೇ?
    ಸರ್ ನಿಮ್ಮಿಬ್ಬರ ಸಾಮಾಜಿಕ ಕಾಳಜಿ ಮತ್ತು ಈ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ನಿಮಗಿರುವ ಅಪಾರ ಅಧ್ಯಯನದ ಕುರಿತು ಮಾತಾನಾಡುವ ದಾಷ್ಟ್ಯ ಖಂಡಿತ ನನಗಿಲ್ಲ. ಏಕೆಂದರೆ ನಿಮ್ಮ ಧಾರಾವಾಹಿಗಳ ಮೂಲಕವೇ ನಾನು ನನ್ನ ಜ್ಞಾನ ಸಂಪತ್ತನ್ನು ವೃದ್ಧಿಸಿ ಕೊಂಡಿದ್ದು. ಹೀಗಾಗಿ ವಿನಮ್ರವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ. ಪ್ರಸ್ತುತ ಎಲ್ಲಾ ವಾಹಿನಿಗಳ ಏಕಮೇವ ಗುರಿ ಏನಾದರು ಮಾಡಿ ಟಿಆರ್ ಪಿ ತರುವ ಕಾರ್ಯಕ್ರಮ ರೂಪಿಸಿ ಎಂಬುದು. ಸುರೇಶ್ ಸರ್ ಗೆ ಇದರ ಪ್ರಾಮುಖ್ಯತೆ ನಾನು ವಿವರಿಸ ಬೇಕಿಲ್ಲ. ಏಕೆಂದರೆ 3.30 ಮತ್ತು 4.00 ಗಂಟೆಯಂತಹ very low viewership ಇರುವಂತಹ Time Band ನಲ್ಲಿ ಅವರು ಸುಮಾರು 8 ಹಾಗೂ 9ಕ್ಕಿಂತ ಹೆಚ್ಚು (Total Market 4+) ಟಿಆರ್ ಪಿ ಸಾಧಿಸಿದ್ದಾರೆ. ಕೇವಲ 3, 4 ಬಂದರೆ ಹೆಚ್ಚೆನ್ನುವ ಇಂತಹ ಸಮಯದಲ್ಲಿ ಅದರ ಮೂರ್ನಾಕು ಪಟ್ಟು ಅಧಿಕ ಸಂಖ್ಯೆಗಳನ್ನು(Weekdays) ಸಾಧಿಸಿದ್ದು ಅದು ಕೇವಲ ಸುರೇಶ್ ಸರ್ ಮಾತ್ರ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಅಂತಹವರಿಗೆ ಒಂದು ಕಾರ್ಯಕ್ರಮವನ್ನು ಹೇಗೆ ಮಾರ್ಕೆಟ್ ಮಾಡಬೇಕಾಗುತ್ತದೆ ಎಂಬುದನ್ನು ವಿವರಿಸುವುದು ಮೂರ್ಖತನದ ಕೆಲಸ. ಹೀಗಿರುವಾಗ ಅಮೀರ್ ಮಾಡಿದ್ದು ಕೂಡಾ ಅದನ್ನೆ ಅಲ್ಲವೇ! ಆದರೆ ಈ ನೆಲದ ಜ್ವಲಂತ ಸಮಸ್ಯೆಗಳ ಗಂಭೀರತೆಯನ್ನು ಪರಿಚಯಿಸುವ ಧೈರ್ಯವನ್ನು ಎಲ್ಲಿಯೂ ಕೃತಕವಾಗದಂತೆ ರೂಪಿಸಿದ ಹೆಗ್ಗಳಿಕೆಯನ್ನು ನಿಮ್ಮಂತಹ ಸಹೃದಯಿಗಳು ಸ್ವಾಗತಿಸದೆ, ಅದನ್ನು ಕನ್ನಡದಲ್ಲಿ ಬಂದ ಬೀದಿ ಜಗಳವನ್ನು ಮೀರಿಸುವ ಕಾರ್ಯಕ್ರಮದ ಜೊತೆ ಹೋಲಿಸುವ ಅನಿವಾರ್ಯತೆ ನಿಜಕ್ಕೂ ನನಗೆ ಅರ್ಥವಾಗಲಿಲ್ಲ. ಒಂದು ಹೆಂಗಸು ತನಗೆ ಗಂಡ ನಾಲ್ಕೈದು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದರೆ ನಮ್ಮ, ನಿಮ್ಮಂತಹವರ ಕಣ್ಣು ತೇವವಾಗುವುದು ಸಹಜವಲ್ಲವೇ. ನೀವು ಅದನ್ನು ನಾಟಕೀಯವೆನ್ನುವುದಾದರೆ ನಾವೆಲ್ಲ ಸಹಜ ಸ್ಪಂದನೆಯನ್ನೆ ಕಳೆದು ಕೊಂಡಿದ್ದೇವೆ ಎಂದೆನಿಸುವುದಲ್ಲವೇ? ಇನ್ನು ನೀವು ಬ್ರ್ಯಾಂಡರ್ ಬಗ್ಗೆ ಮಾತನಾಡಿದ್ದೀರಿ, ಅಮೀರ್ ನ ಕೊಕೊಕೋಲಾ, ಟೈಟಾನ್ ವಾಚ್ ಜಾಹೀರಾತಿಗೂ ಈ ಕಾರ್ಯಕ್ರಮಕ್ಕು ಥಳಕೂ ಹಾಕಿದ್ದೀರಿ, ಕ್ಷಮೆ ಇರಲಿ ನಿಮ್ಮ “ಪುಟ್ಟಕ್ಕನ ಹೈವೇ” ಬಿಡುಗಡೆಗೊಂಡಿದ್ದು, ಈ ದೇಶಕ್ಕೆ ಮಾಲ್ ಸಂಸ್ಕೃತಿಯ ಪರಿಚಯದೊಂದಿಗೆ ಉದಯಿಸಿದ ಪಿವಿಆರ್ ಮತ್ತು ಐನಾಕ್ಸನಂತಹ ಸಿನಿಮಾ ಮಂದಿರಗಳಲ್ಲಿ ಅಲ್ಲವೇ! ನೀವು ಕೂಡಾ ಅಪಾರ ಕಾಳಜಿಯೊಂದಿಗೆ ನಿರ್ಮಿಸಿದ ಚಿತ್ರವನ್ನು ಸಮಾಜಕ್ಕೆ ಮುಟ್ಟಿಸಲು ಆಯ್ದುಕೊಂಡ ಮಾರ್ಗ ಇದು ಅಷ್ಟೇ! ಅದರಲ್ಲಿ ಸಿನಿಕತನ ಹುಡುಕುವುದು ನ್ಯಾಯಸಮ್ಮತವಲ್ಲ ಅಲ್ಲವೇ? ಹಾಗೆಯೇ ನೀವು ನಿರ್ಮಿಸುವ, ನಿರ್ದೇಶಿಸುವ ಟಿವಿ ಕಾರ್ಯಕ್ರಮಗಳಿಗೆ ಜಾಹೀರಾತನ್ನು ನಿಗದಿ ಪಡಿಸುವುದು ಚಾನೆಲ್ ಗೆ ಬಿಟ್ಟ ವಿಷಯ ಅದು ಅದರ ವ್ಯಾಪಾರಿ ತಂತ್ರವನ್ನು ಅವಲಂಭಿಸಿರುತ್ತದೆ. ಅದಕ್ಕೆ ಅಮೀರ್ ಹೇಗೆ ಜವಾಬ್ದಾರಿಯುತನಾಗುತ್ತಾನೆ. ಇನ್ನು ಅವನು ಸತ್ಯಸಂಧನಂತೆ ಎಲ್ಲು ಫೋಸು ಕೊಟ್ಟಿಲ್ಲ. ಹೊಟ್ಟೆ ಪಾಡಿಗೆ ಮಾಡುವ ಅನೇಕ ನ್ಯಾಯ ಸಮ್ಮತ ಹಾದಿಯಲ್ಲಿಯೇ ಜಾಹೀರಾತು ಆಯ್ದುಕೊಂಡಿದ್ದಾನೆ. ಇದರಲ್ಲಿ ಅದ್ಯಾವ ಅಪರಾಧ ಅಡಗಿದೆ. ಅಮೀರ್ ತನ್ನ ಇತ್ತೀಚಿನ ಹಲವು ಚಿತ್ರಗಳ ಮೂಲಕ ಸಾಮಾಜಿಕ ಸ್ಪಂದನೆ ಹಾಗೂ ಜವಾಬ್ದಾರಿ ತನಗೂ ಇದೆ ಎಂಬುದನ್ನು ಸ್ಪಷ್ಟವಾಗಿ ತೆರೆದಿಟ್ಟ ಏಕೈಕ ನಟ. ಹೀಗಿರುವಾಗ ಅಮೀರ್ ನ ನೈತಿಕತೆಯನ್ನು ಅದ್ಯಾಕಾಗಿ ಪ್ರಶ್ನಿಸುವುದು ಅರ್ಥವಾಗುತ್ತಿಲ್ಲ. ಸೀತಾರಾಂ ಸರ್ ಬಡ್ಜೆಟ್ ವಿಷಯಕ್ಕೆ ಈಗಾಗಲೇ ಒಬ್ಬರು ಕಾಮೆಂಟ್ ಬರೆದಿದ್ದ ನೆನಪು.ಅದಕ್ಕೆ ಅದರ ಚರ್ಚೆ ಅಗತ್ಯವೆನಿಸುವದಿಲ್ಲ.
    ಕೊನೆಯ ಮಾತು ನನ್ನ ಅಲ್ಪ ಬುದ್ಧಿಗೆ ಹೊಳೆದಂತೆ ಸುರೇಶ್ ಸರ್ ಡಬ್ಬಿಂಗ್ ವಿರೋಧಿಸುವ ಧಾವಂತದಲ್ಲಿ ಅಮೀರ್ ನ SJM ನಲ್ಲಿ ಕೂದಲು ಬಿಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದೆನಿಸುತ್ತದೆ. ಏಕೆಂದರೆ ಡಬ್ಬಿಂಗ್ ಟೆಲಿವಿಷನ್ ಗೆ ಕಾಲಿಟ್ಟರೆ ಇಲ್ಲಿನ ಹಲವು ಪ್ರತಿಭಾವಂತ ನಿರ್ದೇಶಕರು ಅಸ್ತಿತ್ವದ ಬಗ್ಗೆ ಯೋಚಿಸ ಬೇಕಾಗುತ್ತದೆ. ಏಕೆಂದರೆ ಚಲನಚತ್ರ ನಿರ್ಮಿಸಲು ಯಾರ ಮುಲಾಜಿಗು ಕಾಯಬೇಕಿಲ್ಲ, ಆದರೆ ಧಾರಾವಾಹಿಗಳನ್ನು ನಿರ್ಮಿಸಬೇಕೆಂದರೆ ಅದಕ್ಕೆ ಚಾನೆಲ್ ನವರ ಮರ್ಜಿ ಕಾಯಲೇ ಬೇಕು. ಏಕೆಂದರೆ ಈಗ ಕನ್ನಡದ ಎಲ್ಲಾ ಚಾನೆಲ್ (ಕಸ್ತೂರಿ ಹೊರತು ಪಡಿಸಿ)ಪರ ಭಾಷೆಯವರ ಸ್ವತ್ತು ಎಂಬುದು ಇಲ್ಲಿ ಗಮನಾರ್ಹ.

  5. ತಿಪ್ಪೇಸ್ವಾಮಿ ಹೊಸೂರು

    ವಿಜಯಕುಮಾರ್ ನರಗುಂದರವರು ತುಂಬಾ ಚೆನ್ನಾಗಿ ಸುರೇಶ/ಟಿಎನ್ನೆಸ್-ರ ಪ್ರತಿಕ್ರಿಯೆಗಳ ಹಿಂದಿರುವ ಜಾಣತನವನ್ನ ಬಿಚ್ಚಿಟ್ಟಿದ್ದಾರೆ. ಅಭಿನಂದನೆಗಳು. ಪುಟ್ಟಕ್ಕನ ಹೈವೇಗೆ ರಾಜ್ಯ ಪ್ರಶಸ್ತಿ ಬರದೇ ಇದ್ದುದಕ್ಕೆ ಖೇಣಿ ಕಾರಣ ಅಂತನ್ನೋ ಮಟ್ಟದ ಬುದ್ದಿಜೀವಿಗಳ ಮಾತುಗಳನ್ನ ಗಂಭೀರವಾಗಿ ತೆಗೆದುಕೋಬೇಕಾದ ಅವಶ್ಯಕತೆ ಇಲ್ಲಾ ಅಂತ ಇದರಿಂದ ಗೊತ್ತಾಗತ್ತೆ.
    ಇವ್ರೆಲ್ಲಾ “Prevention is better than cure” ಅನ್ನೋ ತತ್ತ್ವವನ್ನ ಡಬ್ಬಿಂಗ್ ವಿಷಯದಲ್ಲಿ ಬಹಳ ಒಗ್ಗಟ್ಟಿನಿಂದ ಕ್ರಮಬದ್ಧವಾಗಿ ಅಳವಡಿಸಿಕೊಳ್ತಾ ಇದ್ದಾರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading