ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಮಂಗಲಾ ಅವರಿಗೆ ಶಾಂತಾದೇವಿ ಕಣವಿ ಕಥಾ ಪುರಸ್ಕಾರ

ಭಾನುವಾರ(15 ಸೆಪ್ಟೆಂಬರ್) ರಂದು  ಉತ್ತರ ಕರ್ನಾಟಕದ ಲೇಖಕಿಯರ ಸಂಘವು ಶಾಂತದೇವಿ ಕಣವಿ ದತ್ತಿನಿಧಿಯಿಂದ ಈ ವರ್ಷದಿಂದ ಕೊಡುತ್ತಿರುವ ‘ಶಾಂತಾದೇವಿ ಕಣವಿ ಕಥಾ ಪುರಸ್ಕಾರ”ವನ್ನು ಸುಮಂಗಲಾ ಅವರಿಗೆ ನೀಡಿ ಗೌರವಿಸಿದೆ.

ಅವಧಿಯ ಅಭಿನಂದನೆಗಳು

ಈ ಸಂದರ್ಭದಲ್ಲಿ ಸುಮಂಗಲಾ ಹೇಳಿದ್ದು ಇಲ್ಲಿದೆ-
ನನ್ನ ಮಟ್ಟಿಗೆ ಭಾನುವಾರ(15 ಸೆಪ್ಟೆಂಬರ್) ಮರೆಯಲಾರದ ಸಂಭ್ರಮದ ದಿನ… ಅಂದು ನನಗೆ ಉತ್ತರ ಕರ್ನಾಟಕದ ಲೇಖಕಿಯರ ಸಂಘವು ಶಾಂತದೇವಿ ಕಣವಿ ದತ್ತಿನಿಧಿಯಿಂದ ಈ ವರ್ಷದಿಂದ ಕೊಡುತ್ತಿರುವ ‘ಶಾಂತಾದೇವಿ ಕಣವಿ ಕಥಾ ಪುರಸ್ಕಾರ”ವನ್ನು ನೀಡಿದರು… ನಾನು ಪುರಸ್ಕಾರಕ್ಕೆ ಎಷ್ಟರಮಟ್ಟಿಗೆ ಅರ್ಹಳೋ ಗೊತ್ತಿಲ್ಲ, ಆದರೆ ನಮ್ಮ ನಡುವಿನ ಹಿರಿಯ ಲೇಖಕಿಯ ಹೆಸರಿನ ಈ ಪುರಸ್ಕಾರ ನನಗೆ ದೊರೆತ ದೊಡ್ಡ ಗೌರವ…

ಆ ದಿನ ವೀಣಾ ಶಾಂತೇಶ್ವರ, ಹೇಮಾ ಪಟ್ಟಣಶೆಟ್ಟಿ, ಲತಾ ರಾಜಶೇಖರ್ ಹಾಗೂ ಲೇಖಕಿಯರ ಸಂಘದ ಸದಸ್ಯರ ಜೊತೆಗೆ ಚನ್ನವೀರ ಕಣವಿಯವರು, ಗಿರಡ್ಡಿ ಗೋವಿಂದರಾಜ್, ಗೋಕಾಕರ ಮಗಳಾದ ಯಶೋಧಾ ಮತ್ತು ಅವರ ಪತಿ, ಹೀಗೆ ಧಾರವಾಡದ ಹಲವಾರು ಸಾಹಿತ್ಯ ದಿಗ್ಗಜರೊಂದಿಗೆ ನನಗೆ ಸ್ವಲ್ಪ ಹೊತ್ತು ಇರುವ ಅವಕಾಶ ನನಗೆ ದಕ್ಕಿತು…


‍ಲೇಖಕರು avadhi

19 September, 2013

8 Comments

  1. ಅರುಣ್ ಜೋಳದಕೂಡ್ಲಿಗಿ

    ಮೇಡಂ ಅಭಿನಂದನೆ. ನಿಮ್ಮ ಕಥೆಗಳನ್ನು ಇಷ್ಟವಾಗುತ್ತೆ.

  2. ಅಹಲ್ಯಾ ಬಲ್ಲಾಳ

    ಖುಷಿಯಾಯ್ತು.ನೀವು ಬರೆದಿರೋ ಕಥೆಗಳಲ್ಲಿ ಕೆಲವನ್ನು ಓದಿ, ತುಂಬಾ ಇಷ್ಟಪಟ್ಟಿದ್ದೀನಿ.

  3. ಹನುಮಂತ ಹಾಲಿಗೇರಿ

    ಅಭಿನಂದನೆ ಮೇಡಂ ನಿಮ್ಮ ಕಥೆಗಳಲ್ಲಿನ ವಿಭಿನ್ನತೆ ತುಂಬ ಇಷ್ಟವಾಗುತ್ತೆ.

  4. Neela

    Abhinandane Sumangala avarige

  5. vidyarashmi pelathadka

    Congrats madam.
    -vidyarashmi pelathadka

  6. Manjula

    Abhinandane heege yashassu sada nimma jotegirali

  7. Sumangala

    ಎಲ್ರಿಗೂ ಧನ್ಯವಾದಗಳು… ಫೇಸ್ ಬುಕ್ ನಿಂದ ತೆಗೆದು ಪ್ರಕಟಿಸಿ, ಪ್ರಚುರಪಡಿಸಿ (ಫೋಟೋಗೀಟೋ ಹಾಕಿ!!) ನನಗೆ ಕೊಂಚ ಸಂಕೋಚವಾಗುವಂತೆ ಮಾಡಿದ ಅವಧಿ ಬಳಗದ ಮೆಚ್ಚಿಕೆಗೂ ಧನ್ಯವಾದಗಳು. – ಸುಮಂಗಲಾ

  8. Ananya

    ಸಂತೋಷವಾಯಿತು. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading