ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಧಾ ಚಿದಾನಂದಗೌಡ ನೆನಪು: ರಾಮಚಂದ್ರ ದೇವ ಇದ್ದೇ ಇರ್ತಾರೆ..

ಡಾ. ದೇವ ಸರ್ ನೆನಪಿನಲ್ಲಿ..

ಸುಧಾ ಚಿದಾನಂದಗೌಡ

ನನ್ನ ಶೇಕ್ಸ ಪಿಯರ್-ಎರಡು ಸಂಸ್ಕೃತಿಗಳಲ್ಲಿ ಪುಸ್ತಕ ಮತ್ತೆ ಪ್ರಕಟವಾಗುತ್ತಿದೆ. ಅದರಲ್ಲಿ “taming of the shrew” ನಾಟಕದ ವಿಮಶರ್ೆಯನ್ನು ಓದಿ ನೋಡಿ ಸುಧಾ ,. ಅದನ್ನು feministic point of view ಇಟ್ಟುಕೊಂಡು ಬರೆದಿದೇನೆ. ನಿಮಗೆ ಉಪಯೋಗವಾಗಬಹುದು
ಇದು ಡಾ. ರಾಮಚಂದ್ರ ದೇವ ಸರ್ ಇತ್ತೀಚೆಗೆ ಮೇಲ್ ಮಾಡಿದ್ದ ಕೆಲವು ಸಾಲುಗಳು. ಅವರು ಹೇಳಿದ ಸಂಶೋಧನಾ ಪ್ರಬಂಧದ ಆ ಭಾಗವನ್ನು ನಾನು ಎಂ.ಎ. ಓದುವಾಗಲೇ ಓದಿ ಮುಗಿಸಿದ್ದೆ. ಆದರೆ ಆ ಹಿರಿಯರು ಅಷ್ಟು ಆತ್ಮೀಯತೆಯಿಂದ ಅಂಥದೊಂದು ಓದಿಗೆ ಸ್ವತ: ಸಲಹೆ ಕೊಟ್ಟರಲ್ಲ.. .. ಆಗ ನಾ ಅನುಭವಿಸಿದ ಧನ್ಯತಾಭಾವ, ಖುಷಿ, ಸಡಗರ ಹೇಗಿತ್ತೆಂದರೆ ನಾನು ಆ ಸ್ರ್ತೀವಾದಿ ವಿಮಶರ್ೆಯ ಭಾಗವನ್ನು ಮತ್ತೆ ಮತ್ತೆ ಓದಿದೆ ಮತ್ತು ಫೊನ್ ಮಾಡಿ ಹೇಳುತ್ತಿದ್ದೆ ನನ್ನ ಅಭಿಪ್ರಾಯವನ್ನು. ಎಷ್ಟು ಗಂಭೀರ ಬರವಣಿಗೆಯೋ ಅಷ್ಟೇ ಆತ್ಮೀಯ ಮಾತುಗಳು, ಅಪ್ಯಾಯವಾಗಿ ಅಭಿಪ್ರಾಯ ಹಂಚಿಕೊಳ್ಳುವ ಹೃದಯವೈಶಾಲ್ಯತೆ..ಹೇಗೆ ವಣರ್ಿಸಲಿ..ಬರೆಯಲಿ.. ನನಗಾಗುತ್ತಿರುವ ದು:ಖ, ವ್ಯಥೆ, ಖಾಲಿತನವನ್ನ.. ..?! ಎಷ್ಟುಬೇಗ ಇಲ್ಲವಾಗಿಬಿಟ್ಟಿರಲ್ಲ ಸರ್..?

ಡಾ.ದೇವ ಅವರನ್ನು ಕನ್ನಡ ಸಾಹಿತ್ಯಲೋಕ ಕವಿ, ನಾಟಕಕಾರ, ಕಥೆಗಾರ, ಅನುವಾದಕ, ವಿಮರ್ಶಕ, ಸಂಶೋಧಕ ಎಂದೆಲ್ಲ ಗುರುತಿಸುತ್ತಿದೆ. ಅವರು ಅದೆಲ್ಲವೂ ಹೌದು ಕೂಡ. ಅವೆಲ್ಲವುಗಳಲ್ಲಿ ಅವರನ್ನು ಶೇಕ್ಸ ಪಿಯರ್ ಸಂಶೋಧನೆ ಮತ್ತು ವಿಮಶರ್ೆಯ ಗುರುವಾಗಿಯೇ ಒಪ್ಪಿಕೊಳ್ಳಬಯಸುತ್ತೇನೆ. ಶೇಕ್ಸಪಿಯರ್ನನ್ನು ಅನೇಕರು ಕನ್ನಡಕ್ಕೆ ತಂದಿದ್ದಾರೆ. ಡಾ. ದೇವರಿಗಿಂತ ಉತ್ತಮವಾಗಿ ಅನುವಾದಿಸಿದವರೂ, ಅವರಿಗಿಂತ ಉತ್ತಮವಾಗಿ ಕಥೆ, ಕವನ ಬರೆದವರೂ ಕನ್ನಡದಲ್ಲಿ ಇದ್ದಾರೆ..
ಆದರೆ ಶೇಕ್ಸಪಿಯರ್ ಸಂಶೋಧನೆ-ವಿಮಶರ್ೆಯಲ್ಲಿ ಅವರನ್ನು ಬಿಟ್ಟರಿಲ್ಲ.
ಶೇಕ್ಸಪಿಯರ್ -ಎರಡು ಸಂಸ್ಕೃತಿಗಳಲ್ಲಿ ಸಂಶೋಧನಾ ಪ್ರಬಂಧವು ಯಾ ಹೊತ್ತಿಗೂ ಸಲ್ಲಬಲ್ಲ ಒಂದು ಅಪರೂಪದ ಅಧ್ಯಯನಕೃತಿ- ಎಂದು ಹೇಳಲಡ್ಡಿಯಿಲ್ಲ. (ಡಾ. ಕರೀಗೌಡ ಬೀಚನಹಳ್ಳಿಯವರ ಕನ್ನಡದಲ್ಲಿ ಶೇಕ್ಸ ಪಿಯರ್ ಮತ್ತೊಂದು ಸಮಗ್ರ ಕೃತಿಯಾದರೂ ಪಿ.ಹೆಚ್.ಡಿ ಗಾಗಿ ಬರೆದದ್ದಲ್ಲ ಮತ್ತು ಇತ್ತೀಚೆಗೆ, ಅಂದರೆ, 2004ರ ಆಸುಪಾಸಿನಲ್ಲಿ ಪ್ರಕಟವಾಗಿರುವುದು. ಡಾ.ದೇವರ ಕೃತಿ ಇದಕ್ಕಿಂತ ಎಷ್ಟೋ ಮುಂಚೆಯೇ ಬಂದಾಗಿದೆ ಮತ್ತು ಡಾ. ಕರಿಗೌಡ ಕೂಡಾ ದೇವರನ್ನು ತಮ್ಮ ಕೃತಿಯಲ್ಲಿ ಪ್ರಶಂಸಿಸಿದ್ದಾರೆ.)
ಕನ್ನಡದಲ್ಲಿ ಮೊಟ್ಟಮೊದಲು ಶೇಕ್ಸಪಿಯರ್ ಸಮಗ್ರ ನಾಟಕಗಳ ತೌಲನಿಕ ಅಧ್ಯಯನ ಮಾಡಿದವರು ಡಾ. ದೇವ. ಸಂಶೋಧನಾಕ್ಷೇತ್ರದಲ್ಲಿ ಅವರು ಅದ್ವಿತೀಯರೆಂಬುದರಲ್ಲಿ ಸಂಶಯ ಪಡಬೇಕಿಲ್ಲವೆಂದೇ ಭಾವಿಸಬಹುದು. ಲಭ್ಯವಿಲ್ಲ ಎಂದೇ ಭಾವಿಸಲಾಗಿದ್ದ ಶ್ರೀಕಂಠೇಶಗೌಡರ ಪ್ರತಾಪರುದ್ರದೇವ (ಮ್ಯಾಕ್ಬೆತ್ ಕೃತಿಯ ರೂಪಾಂತರ) ದ ಸ್ಕ್ರಿಪ್ಟನ್ನು, ಬಸವಪ್ಪ ಶಾಸ್ತ್ರಿಗಳ ಕೃತಿಯನ್ನು, ಇನ್ನೂ ಹಲವು ಹಸ್ತಪ್ರತಿಗಳಂಥಾ ಅಪರೂಪದ ಕೃತಿಗಳನ್ನೂ ಕೂಡಾ ಡಾ. ದೇವ ತಮ್ಮ ಪಿ.ಹೆಚ್.ಡಿ. ಸಂಶೋಧನೆಯ ಸಂದರ್ಭದಲ್ಲಿ ಹೆಕ್ಕಿತೆಗೆದಿದ್ದಾರೆ. ಮತ್ತು ಸಂಪೂರ್ಣ ಮಾಹಿತಿಯನ್ನೊಳಗೊಂಡ ವಿಮಶರ್ೆಯನ್ನು ನಮ್ಮೆದುರಿಗೆ ಹರಡಿದ್ದಾರೆ. ಆ ಆಸಕ್ತಿಯನ್ನು ಅವರು ಕೊನೆಯವರೆಗೂ ಉಳಿಸಿಕೊಂಡಿದ್ದರು ಎಂಬುದಕ್ಕೆ ನನ್ನ ಪರಿಷ್ಕೃತೆ ಪುಸ್ತಕದ ಪ್ರಕಟಣೆಯ ಸಂದರ್ಭದಲ್ಲಿ ಬೆನ್ನುಡಿ ಕೇಳಿದಾಗ ಅವರು ಪೂರ್ಣ ಗೈಡ್ ನಂತೆಯೇ ತೊಡಗಿಸಿಕೊಂಡರು ಎಂಬುದೇ ಸಾಕ್ಷಿ ಎಂಬುದು ವೈಯಕ್ತಿಕವಾಗಿ ಕಂಡುಕೊಂಡಿದ್ದು.. ಬೆನ್ನುಡಿಯ ಹೊರತಾಗಿಯೂ ಅವರು ನನ್ನ ಕೃತಿಯನ್ನು ಮೆಚ್ಚಿಕೊಂಡರು ಎಂಬ ಹೆಮ್ಮೆ ಮತ್ತು ಧನ್ಯತೆ ನನಗೆ. ತಮ್ಮ ದೇವಸಾಹಿತ್ಯ ಬ್ಲಾಗ್ನ ಅಪ್ ಡೇಟ್ ಗಳ ಲಿಂಕ್ ನ್ನು ಮೇಲ್ ಮಾಡಿದಾಗಲೆಲ್ಲ ಚಚರ್ೆ ಮುಂದುವರಿಯುತ್ತಿತ್ತು. ಯುರೊಪಿಯನ್ ರಂಗಭೂಮಿಯನ್ನು ಕುರಿತಾದ ಪರಿಷ್ಕೃತೆಯ ಒಂದು ಅಧ್ಯಾಯ ಅವರ ಮೆಚ್ಚಿನದಾಗಿತ್ತು. ಇನ್ನೂ ಚಚರ್ಿಸುವುದು ಎಷ್ಟೆಲ್ಲಾ ಇತ್ತಲ್ಲ ಸರ್..? ಏಕೆ ಅರ್ಧದಲ್ಲೆ ಎದ್ದುಹೋಗಿಬಿಟ್ಟಿರಿ? ಎಂದು ಕೇಳಬೇಕೆನಿಸುತ್ತಿದೆ.

ಡಾ. ದೇವ ಕುರಿತಾಗಿ ಅನೇಕ ವಿಷಯಗಳು ಇತ್ತೀಚೆಗೆ ಅವರನ್ನು ಹತ್ತಿರದಿಂದ ಬಲ್ಲವರಿಂದ ತಿಳಿದುಬಂದಿದ್ದು- ಅವರಿಗೆ ಪತ್ರಿಕೋದ್ಯಮದಲ್ಲಿ ಆಸಕ್ತಿಯಿತ್ತು. ಆದರೆ ಒಗ್ಗಿಕೊಳ್ಳಲಾಗಲಿಲ್ಲ. ಅಧ್ಯಾಪಕರಾಗಿ ಮುಮದುವರಿಯಬಯಸಿದ್ದರು, ಆದರೆ ನಿಭಾಯಿಸಲಾಗಲಿಲ್ಲ. ಇದೆಲ್ಲಕ್ಕೆ ಅವರ ಮಾನಸಿಕ, ದೈಹಿಕ ಸೂಕ್ಷ್ಮಜ್ಞತೆಗಳೇ ಕಾರಣವಿದ್ದಿರಬಹುದು. ತಮ್ಮ ಹಳ್ಳಿಯಲ್ಲಿ, ತಮ್ಮ ಓದು-ಬರವಣಿಗೆಯಲ್ಲಿ ಅವರಿದ್ದಷ್ಟು comfortable ಆಗಿ ಬೇರಾವ ಕ್ಷೇತ್ರದಲ್ಲಿಯು ಅವರಿಗೆ ಇರಲಾಗಿರಲಿಕ್ಕಿಲ್ಲ. ತಮಗಿದ್ದ ಹೃದಯದ ಖಾಯಿಲೆಯನ್ನೂ ಅವರು sportive ಆಗಿಯೇ ತೆಗೆದುಕೊಂಡಿದ್ದರು. ವಿಟಮಿನ್ ಸಿ ಬಳಸುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಎಂಬ ವಿಷಯ ಕುರಿತು ಈಗ್ಗೆ ಸುಮಾರು ಎಂಟು ತಿಂಗಳ ಹಿಂದೆ ಅವರು ದೇವಸಾಹಿತ್ಯ ಬ್ಲಾಗ್ ನಲ್ಲೊಂದು ಲೇಖನವನ್ನು ಅಪ್ ಲೋಡ್ ಮಾಡಿದ್ದರು. ತಕ್ಷಣ ಫೋನಾಯಿಸಿದೆ, ಹೇಗಿದೀರಿ ಸರ್?. ಎಂದು ಫೈನ್ ಎಂಬ ಒಂದೇ ಮಾತಿನ ಉತ್ತರ. ನಂತರ ಮತ್ತೆ ಶೇಕ್ಸಪಿಯರನದೇ ಧ್ಯಾನ-ಅವರಿಗೂ, ಮತ್ತು ನನಗೂ..!
ಡಾ.ದೇವ ಮತ್ತೊಂದು ಲೇಖನ ಬರೆದಿದ್ದರು- ಲಕ್ಷ್ಮೀ ಚಂದ್ರಶೇಖರ್ ಅವರು ಲೇಡಿ ಮೈನಸ್ ಮ್ಯಾಕ್ ಬೆತ್ ನ್ನು ರೂಪಿಸಿ, ಅಭಿನಯಿಸುತ್ತಿರುವುದರ ಕುರಿತು. ಅವರದನ್ನು ತುಂಬ ಮೆಚ್ಚಿಕೊಂಡಿದ್ದರು.

ಪರಿಷ್ಕೃತೆ ಸಕರ್ಾರಿ ಲೆಕ್ಕದಲ್ಲಿ ಸತ್ತಾಕಿ ಮತ್ತು ನಂದಭೂಪತಿಗಳನ್ನು ಅವರೇ ಬಿಡುಗಡೆ ಮಾಡ್ತಿರೋದು. ಬನ್ನಿ ಸರ್ ಬೆಂಗಳೂರಿಗೆ ಎಂದು ಆಹ್ವಾನ ಪತ್ರಿಕೆ ಸಮೇತ ಮೇಲ್ ಮಾಡಿದ್ದೆ. ಅರ್ಧಗಂಟೆಯಲ್ಲಿ ಉತ್ತರ ಬಂದಿತ್ತು.
“Very good. I wish I could come sudha but I cant. Carry on. Good luck” ಎಂದು.
ಸರಿ, ಇನ್ನೊಮ್ಮೆ ಅವರನ್ನೆ ಮುಖ್ಯ ಅತಿಥಿಯಾಗಿಯೇ ಕರೆದರಾಯ್ತು ಎಂದುಕೊಂಡು ಸುಮ್ಮನಾಗಿದ್ದೆನಲ್ಲಾ ಸರ್.. ನಿಮ್ಮನ್ನು ವೇದಿಕೆಗೆ ಅಹ್ವಾನಿಸುವ ಅವಕಾಶವೊಂದನ್ನು ನೀವು ನನಗೆ ಕೊಡಬೇಕಿತ್ತು ಸರ್.. ಎಷ್ಟು ಸಂಕಟವಾಗುತ್ತಿದೆ..
ಗೆಳತಿ ಮಮತಾ ದೇವ, ನಿಮ್ಮ ಸೊಸೆ, ಈಗಷ್ಟೇ ಹೇಳಿದರು.. ನೀವು ಅವರ ಮನೆಗೆ ಹೋಗಿದ್ದಾಗ ನನ್ನ ಪ್ರಸ್ತಾಪ ಬಂದಿತ್ತಂತೆ, ತುಂಬ ಒಳ್ಳೆಯ ಮಾತುಗಳನ್ನು ನನ್ನ ಕುರಿತು ಹೇಳಿದಿರಂತೆ. ಖುಷಿಪಡಲೋ, ಸಂಕಟಪಡಲೋ ಈಗ..?!
ಚಂಪಾ ಬರೆದ ಸಾಲುಗಳು ನೆನಪಾಗುತ್ತಿವೆ..
ಸತ್ತವರು ಎಲ್ಲಿ ಹೋಗುತ್ತಾರೆ..?
ಅವರೆಲ್ಲಿಯೂ ಹೋಗುವುದಿಲ್ಲ..
ಇದ್ದವರ ನೆನಪುಗಳಲ್ಲಿ ಹಾವಾಗಿ ಹರಿದಾಡುತ್ತಾರೆ..
ಡಾ. ದೇವ ಸರ್ ಕೂಡಾ ಎಲ್ಲಿ ತಾನೆ ಹೋಗಿದ್ದಾರೆ..? ಭೌತಿಕವಾಗಿ ಮಾತ್ರ ಇಲ್ಲವಾಗಿದ್ದಾರೆ, ಅಷ್ಟೇ..
ಅವರಿದ್ದಾರೆ- ಹ್ಯಾಮ್ಲೆಟ್ ನಲ್ಲಿ, ಮ್ಯಾಕ್ ಬೆತ್ ನಲ್ಲಿ, ರಥಮುಸಲದಲ್ಲಿ..
ನನ್ನಂಥಾ ಏಕಲವ್ಯ/ವ್ಯೆ ಯರ ಮನಸು, ಬುದ್ಧಿ, ಆಲೋಚನೆಗಳಲ್ಲಿ, ಎಂದೂ ಹೆಬ್ಬೆರಳ ಬಲಿ ಕೇಳದ ಸಹೃದಯಿ ಗುರುಗಳಾಗಿ,
ಡಾ. ರಾಮಚಂದ್ರ ದೇವ ಇದ್ದೇ ಇರ್ತಾರೆ.

‍ಲೇಖಕರು G

12 September, 2013

3 Comments

  1. Gopaal Wajapeyi

    …….. 🙁

  2. vasudeva nadig

    ರಾಮಚಂದ್ರದೇವ ಅವರು ನಾನು ಕುವೆಂಪು ವಿ ವಿ ಲಿ ಓದುತಾ ಇದ್ದಾಗ ಅನೇಕ ಬಾರಿ ಭೇಟಿ ಮಾಡುತಿದ್ದೆ..ದೂರದಿಂದಲೇ ಅವರ ಮಾತು ಭಾಷಣ ಕೇಳುತಿದ್ದೆ..ಶಿವಮೊಗ್ಗ ಕರ್ಣಾಟಕ ಸಂಘ ಆಗೆಲ್ಲ ಲಂಕೇಶ್-ಟಿ.ಪಿ ಅಶೋಕ್-ಕೆ.ವಿ ಸುಬ್ಬಣ್ಣ-ನಿಸಾರ ಅಹಮದ್-ಎಚ್ ಎಸ್.ಸ್ವಿ -ರಾಮಚಂದ್ರ ಶರ್ಮ-ಮುಶ್ತಾಕ್-ಅಬೂಬಕರ್-ಡಿಸೋಜಾ-ಬೊಳುವಾರ್-ಅಂಥವರು ಪದೇ ಪದೇ ಬಂದು ಹೋಗುತಿದ್ದ ತೀರಾ ಖಾಸಾ ವೇದಿಕೆಯಾಗಿತ್ತು..
    ಅಮೇಲೆ ದೇವ ಅವರನ್ನು ಕಂಡು ನೆನಪಿಲ್ಲ..ಓದಿ ಅನುಭವವಿದೆ..ಡಾ.ರಾಜೇಂದ್ರ ಚೆನ್ನಿ ಅವರ ಕೂಡ ಆಗಾಗ ಡಿಪಾರ್ಟ್ ಮೆಂಟ್ ಗೆ ಬಂದು ಹೋಗುತಿದ್ದ ನೆನಪು
    ಈಗ ಅಚಾನಕಾಗಿ ಅವರ ಸಾವಿನ ಸುದ್ಧಿ! ಇತ್ತಿಚಿನ ಸ್ವರತಿ ಸಂಪ್ರೀತ-ಲಾಬಿ-ಗುಂಪುಗಾರಿಕೆ-ಜಾತಿಮತಪಂಗಡ-ಗಳ ಪೂರ್ವಾಗ್ರಹಿತ ಹೇಶಾರವಗಳ ಮಧ್ಯೆ ರಾಮಚಂದ್ರ ದೇವ ಅವರ ಮೌನ ನಿಜಕ್ಕೂ ಬೋಧಿ ಯ ಸಂತತನವೇ ಸರಿ// ಹಾಗೇ ಇದ್ದು ಸಾಧಿಸಿ ಮೌನವಾಗಿ ಹೋಗಬೇಕಾದುದು ಈಗಿನ ಅನಿವಾರ್ಯ ಹಾಗು ಮ್ಪುಲಿಕವೂ ಹೌದು..ಕಣ್ಣಂಚಿನಲಿ ತುಳುಕಿ ನಿಂತೂ ಹೊರಬಾರದ ಕಂಬನಿಯ ಮಸುಕು ನೋಟದಲ್ಲಿ ದೇವ್ ಸರ್ ಅವರಿಗೆ ನಮನ..ನೆನಪು.
    ವಾಸುದೇವ ನಾಡಿಗ್

  3. mahantesh navalkal

    nanu mechchuva kathegara dev. lankesh dalli prakatavaada avarakatheyondu igalu nannannu kaduttade
    mahantesh navalkal

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading