ಈ ಸಿನಿಮಾಗಳಲ್ಲಿ ಎಲ್ಲೋ ಒಂದೊಂದು ಸಮುದಾಯ, ಪ್ರಾಂತ್ಯಗಳ ಸಬ್ಜೆಕ್ಟ್ ಬಿಟ್ರೆ ಉಳಿದವುಗಳಲ್ಲಿ ತೋರಿಸೋ ಬಹುಪಾಲು ಆಚರಣೆಗಳು, ಜೀವನಶೈಲಿ ಎಲ್ಲಾ ನಗರ ಕೇಂದ್ರಿತ ಮತ್ತು ಬ್ರಾಹ್ಮಣ ಪದ್ಧತಿಯೇ ಆಗಿರುತ್ವೆ. ಊಟಕ್ಕೆ ಅನ್ನಸಾಂಬಾರ್, ಅಂತ್ಯಕ್ರಿಯೆ ಅಂದ್ರೆ ಚಿತೆಯಲ್ಲಿ ಮಲಗಿಸಿ ಸುಡೋದು, ಮದುವೆ ಅಂದ್ರೆ ಅದೇ ಧಾರೆ ಸ್ಟೈಲ್, ದೇವರಕೋಣೆಯಲಿ ಅದೇ ಆಳೆತ್ತರದ ಮಂಟಪ…. !!!
ಎಷ್ಟೊಂದು ಕಲರ್ ಫುಲ್ ದೇಶ ನಮ್ಮದು.. ತೋರಿಸೋಕೆ ಎಷ್ಟೊಂದು ಕಲ್ಚರ್, ಟ್ರೆಡಿಷನ್ ಇದೆ..
‘ವಿವಿಧತೆಯಲ್ಲಿ ಏಕತೆ’ ಅನ್ನೋದನ್ನ ಹೀಗೆ ಅರ್ಥಮಾಡಿಕೊಳ್ಳೋದೇ…







ಸಿನೆಮಾದಲ್ಲಿ ಬರೀ ಲವ್ ಸ್ಟೋರಿ, ಮಚ್ಚು ಲಾ೦ಗು, ನಾಲ್ಕು ಗ್ರೂಪ್ ಡ್ಯಾನ್ಸ್, ಒ೦ದು ಸಭ್ಯತೆ ಮೀರಿದ ಲಿರಿಕ್ಸ್ ನ ಐಟಮ್ ಡ್ಯಾನ್ಸ್ ಇರುತ್ತೆ.
ಸಿನೆಮಾಕ್ಕೂ ನಿಜಕ್ಕೂ ಅಜಗಜಾ೦ತರವಿದೆ!! ನಿರ್ದೇಶಕನ ತಲೆ ಖಾಲಿಯ ಸ೦ಕೇತ
ಕರ್ಮಷಿಯಲ್ ಸಿನೆಮಾವನ್ನು ಇಷ್ಟೊ೦ದು ಸೀರಿಯಸ್ ತಗೊಳ್ಬಾರ್ದು ಅ೦ತ ನನ್ನ ಅಭಿಪ್ರಾಯ
ಕ್ಷಮಿಸಿ
“ತೋರಿಸೋ ಬಹುಪಾಲು ಆಚರಣೆಗಳು, ಜೀವನಶೈಲಿ ಎಲ್ಲಾ ನಗರ ಕೇಂದ್ರಿತ ಮತ್ತು ಬ್ರಾಹ್ಮಣ ಪದ್ಧತಿಯೇ ಆಗಿರುತ್ವೆ” madam, looks like you are mistaken about ‘ಬ್ರಾಹ್ಮಣ ಪದ್ಧತಿ’.
ಅನ್ಯ ಜನಾಂಗದವರನ್ನು ಅಕ್ಷರ ಸಮೀಪ ಬರಬಾರದೆಂದು ನಿಷೇದ ಹೇರಿದ್ದರಿಂದ ಬೇರೆ ಜನಾಂಗದ ಸಂಸ್ಕೃತಿಗಳು ಅನಾವರಣಗೊಳ್ಳದೆ ಹಾಗೆ ಉಳಿದವು. ಮತ್ತೊಂದು ಸಂಗತಿ : ಮೇಲ್ವರ್ಗದ ಜನಾಂಗಗಳ ಸಂಸ್ಕೃತಿಯೇ ಭಾರತದ ಸಂಸ್ಕೃತಿ ಎಂಬುದನ್ನು ಬಿಂಬಿಸಿದ ಮನು ಸಂಸ್ಕೃತಿಯೇ ಇದಕ್ಕೆಲ್ಲ ಕಾರಣವಾಯಿತು.
‘ಸಾಂಬಾರು’ ಬ್ರಾಹ್ಮಣ ಪದ್ಧತಿನಾ??!!
ಪಾಪ ಗೊತ್ತಿಲ್ಲದವರು ಹಾಗಂತಾರೆ. ಹಿಂದೆ ಹೊತ್ತು ತಂದು ಕೊಲ್ಲುವವರು ಬ್ರಾಹ್ಮಣರೇ ಆಗಿದ್ದರೆಂದು ಬಸವಣ್ಣನವರು ತಮ್ಮ ವಚನಗಳಲ್ಲಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಬಾಡುತಿಂದ ಬ್ರಾಹ್ಮಣರು ಪುಸ್ತಕದಲ್ಲಿ ಬರೆದಿದ್ದಾರೆ.
ಚಿಕನ್ ಕಬಾಬ್,ಮೀನು ತಿನ್ನೋದನ್ನ ಕೆಲವು ಸಿನಿಮಾಗಳಲ್ಲಿ ನೋಡಿದ್ದೇನೆ… ಆದರೆ ಕುರಿ, ಹಂದಿ, ಹಸು ಇವೆಲ್ಲ ನಮ್ಮ ಾಹಾರ ಕ್ರಮದ ಮುಖ್ಯಭಾಗ ಿವುಗಳನ್ನು ಸಿನಿಮಾ.ಟಿವಿಗಳಲ್ಲಿ ತೋರಿಸದೇ ಇರುವುದು ಬ್ರಾಹ್ಮಣತ್ವವೇ ಅನ್ನಿಸುತ್ತ ಅಲ್ವ….
ಸಿಂಹದ ಮರಿ ಸೈನ್ಯ ಚಿತ್ರದಲ್ಲಿ ಮಕ್ಕಳು ಬಾತು ಕೋಳಿ ಒಂದನ್ನು ಹಿಡಿದು ಬಾರ್ಬೇಕ್ಯು ಮಾಡಿ ತಿನ್ನುವುದನ್ನು ತೋರಿಸಲಾಗಿದೆ.
ಕಟ್ಟಿಮನಿ ರಾಯರೆ,
ಅದು ಯಾವುದೋ ಒಂದೆರಡು ಬೆರಳೆಣಿಕೆಯ ಸಿನಿಮಾಗಳಲ್ಲಿ ಮಾತ್ರ !
why people keep hang on to this CASTE always?even d writers ,so called intellectuals keep commenting on socially irrelevant isssues except untouchability which is still a problem,unfortunately practiced by every community.why target only brahmans?Is it just because writer knows how easy to b noticed?or u know that brahminism is d easiest prey/target with no resistance?As pramod rihtly points that taking commercial cinema`s to corelate/discuss seriously…not worthy
ದೀಪಾರವರು ಸರಿಯಾದ ಪ್ರಶ್ನೆಯನ್ನೇ ಕೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಹೇಳುವುದಾದರೆ, ಹೆಚ್ಚಿನ ಚಲನಚಿತ್ರಗಳಲ್ಲಿ ಹೀರೋ ಆದವನು ರಾವ್, ಭಟ್, ಆತ ಸಸ್ಯಹಾರಿ. ಖಳನಾಯಕರು ಹಿಂದುಳಿದ ವರ್ಗದವರು (ಸೋಮ, ಕರಿಯ ಇತ್ಯಾದಿ), ಅವರು ಮಾಂಸಾಹಾರಿಗಳು. ಇವುಗಳಿಗೆ ಒಂದು ಜನಾಂಗೀಯ ಮಗ್ಗುಲು ಕೂಡಾ ಇದೆ. ಹೆಚ್ಚಿನ ಹೀರೋಗಳು (ಫಿಲ್ಮ್ ಗಳಲ್ಲಿ) ಸವರ್ಣೀಯರು ಹಾಗೂ ಸ್ಪೂರುದ್ರೂಪಿಗಳು, ವಿಲನ್ ಗಳು ಬಹುತೇಕವಾಗಿ ಕಪ್ಪು ಚರ್ಮದವರು ಹಾಗೂ ಅವರ ಮುಖ ಭಯೋತ್ಪಾದಿಸುವಂತದ್ದು.
ಜನ ಹೀರೋ ಹೀರೋಯಿನ್ ನೋಡಲು ಬಯಸೋದು ಅಂತವರನ್ನೇ ಅಲ್ವಾ? ಅದಕ್ಕೆ ತೆಗೀತಾರೆ. ಅದಕ್ಕೂ ಜಾತಿ ಜನಾಂಗದ ಬಣ್ಣ ಹಚ್ಚಬೇಕಾ!
ಅಬ್ಬಾ! ಈ ಮಟ್ಟದವರೆಗೂ ಯೋಚಿಸೋ ಜನ ಇರ್ತಾರಾ! ಎಲ್ಲಾ ಹಳ್ಳಿ, ಪಟ್ಟಣದವರೂ ಈಗ ನಗರದವರಂತೇ ಜೀವನ ಸಶೈಲಿ ರೂಢಿಸಿಕೊಳ್ಳುತ್ತಿರುವುದು ಅಥವಾ ಹಾಗೆ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಂತೂ ಗೊತ್ತಿದ್ದೆ. ಅಂದಮೇಲೆ ಸಿನೆಮಾದವರೇನು ಕಮ್ಮಿ.? 🙂