ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿದ್ದವನಹಳ್ಳಿ ಕೃಷ್ಣಶರ್ಮ ಪ್ರಶಸ್ತಿಗೆ ಕೃತಿ ಆಹ್ವಾನ

ಪ್ರತಿಷ್ಠಿತ ‘ಸಿದ್ದವನಹಳ್ಳಿ ಕೃಷ್ಣಶರ್ಮ ಪುಸ್ತಕ ಪ್ರಶಸ್ತಿ’ ಗೆ ಕೃತಿಗಳನ್ನು ಆಹ್ವಾನಿಸಲಾಗಿದೆ.

ಖ್ಯಾತ ಪತ್ರಕರ್ತ, ಸಾಹಿತಿ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಸ್ಮಾರಕ ಸಂಸ್ಥೆಯು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.

ಈ ಸಂಸ್ಥೆ ಹಲವಾರು ವರ್ಷಗಳಿಂದ ಗಾಂಧಿ ವಿಚಾರ, ರಾಷ್ಟ್ರ ಚಿಂತನೆ, ಸಾಮಾಜಿಕ ತತ್ವ ಮುಂತಾದ ವಿಷಯಗಳನ್ನಾಧರಿಸಿದ ಪುಸ್ತಕಗಳಿಗೆ ಇಪ್ಪತ್ತು ಸಾವಿರ ರೂಪಾಯಿಗಳ ನಗದು ಮತ್ತು ಫಲಕವನ್ನು ನೀಡುತ್ತಾ ಬಂದಿದೆ.

ಈ ಸಾಲಿನ ಪ್ರಶಸ್ತಿಗಾಗಿ 2014 ಮತ್ತು 2015ರಲ್ಲಿ ಪ್ರಕಟವಾದ ಪುಸ್ತಕಗಳನ್ನು ಆಹ್ವಾನಿಸಿದೆ.

ಆಸಕ್ತರು ಪುಸ್ತಕಗಳ 2 ಪ್ರತಿಗಳನ್ನು ಜೆ. ಕೆ. ಅನಂತರಾಮಯ್ಯ, 106, ರೆನೆಸಾನ್ಸ್ ಪಾರ್ಕ್, 2, ಮಲ್ಲೇಶ್ವರಂ ಪಶ್ಚಿಮ, ಬೆಂಗಳೂರು 55 (ದೂ- 961166738) ಇವರಿಗೆ ಫೆಬ್ರವರಿ 25, 2016ರೊಳಗೆ ಕಳುಹಿಸಿ ಕೊಡಬೇಕು.

ಈ ಪ್ರಶಸ್ತಿಯನ್ನು ಈ ಹಿಂದೆ ಕುಸುಮಾ ಶಾನಭಾಗ್, ಶ್ರೀಧರ ಹೆಗಡೆ ಭದ್ರನ್, ಜಿ ಎನ್  ಮೋಹನ್ ಅವರಿಗೆ ನೀಡಿ ಗೌರವಿಸಲಾಗಿತ್ತು

‍ಲೇಖಕರು Admin

26 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading