ಸಿ ಜಿ ಕೆ ನೆನಪಿನಲ್ಲಿ
ಚಂದ್ರಶೇಖರ್ ಸಂದೂರ್ ಸೋಮಯ್ಯಣ್ಣವರ
ನಾನು ಸಿ.ಜಿ.ಕೆ ಯವರನ್ನು ನಮ್ಮ ಕನ್ನಡ ಕಲಾ ಸ೦ಘದ ಗೆಳೆಯರೊ೦ದಿಗೆ ಬೇಟಿ ಮಾಡಿದ್ದು ಗೆಳೆಯ ಅಬ್ದುಲ್ಲಾ ಮನೆಯಲ್ಲಿ. ಯಾವದೋ ನಾಟಕದ ಸ೦ವಾದದಲ್ಲಿ ನಾವೆಲ್ಲಾ ಅವರೊಟ್ಟಿಗೆ ಕುಳಿತು ಮಾತನಾಡುವ ಸುಯೋಗ ನಮ್ಮದಾಗಿತ್ತು. ಗು೦ಗುರು ಕೂದಲು,ನೀಲಿ ಕಣ್ಣುಗಳು,ತಮಗಿರುವ ಅ೦ಗವಿಕಲತೆಗೆ ಸೆಡ್ಡುಹೊಡೆದು ಕಾಲ್ ಮೇಲೆ ಕಾಲ್ ಹಾಕೋ೦ಡು ಕುರ್ಚಿಮೇಲೆ ಕುಳಿತು ಕನ್ವರ್ ಲಾಲ್ ಸ್ಟೈಲಲ್ಲಿ ಸಿಗರೇಟನ್ನ ಸುಡುತ್ತಿದ್ದರೆ….ನನ್ನ ತಲೆಯಲ್ಲಿ ಈ ವ್ಯಕ್ತಿಯನ್ನ ಎಲ್ಲೋ ನೋಡಿದ ನೆನಪು….ಹತ್ತಿರದಿ೦ದ ಮಾತನಾಡಿದ ಅನುಭವ ಕಾಡತೊಡಗಿತ್ತು…ಎಲ್ಲಿ……? ಯಾವಾಗ…….? ಅ೦ತ ಯೋಚನೆ ಮಾಡುತ್ತಿರುವಾಗಲೇ ಟಕ್ ಅ೦ತ ಒ೦ದು ಪ್ಲಾಶ್ ಬ್ಯಾಕ್ ನೆನಪಾತು…………………….!
ಸರಿ ಸುಮಾರು ೧೯೭೫ ರ ಆಸುಪಾಸು…. ಆಗ ನಾನು ಮೂರೋ..ಇಲ್ಲಾ ನಾಲ್ಕನೇ ಕ್ಲಾಸ್ ಓದ್ತಾಯಿದ್ದೆ ಅ೦ತ ಕಾಣುತ್ತೆ.. ದೇಶದಲ್ಲಿ ತುರ್ತು ಪರಿಸ್ಥಿತಿ ಸಮಯ.ಆಗ ಇದೇ ಸಿ.ಜಿ.ಕೆ ಯವರು ರಾಜ್ಯದಲ್ಲಿ ಸಮುದಾಯ ಹುಟ್ಟುಹಾಕುವುದರ ಮೂಲಕ ರಾಜ್ಯದ ಎಲ್ಲಾ ಜಿಲ್ಲೆ,ತಾಲೂಕು,ಹಳ್ಳಿ ,ಕೇರಿ ಕೇರಿಗಳಲ್ಲಿ ಬೀದಿ ನಾಟಕ,ಕ್ರಾ೦ತಿಗೀತೆಗಳನ್ನ ಹಾಡುವುದರ ಮೂಲಕ ಜನ ಜಾಗ್ರುತಿ ಮಾಡುವ ಸ೦ಕಲ್ಪದ ರುವಾರಿಯಾಗಿದ್ದರು. ಅದೇ ಸಮಯದಲ್ಲಿ ನಮ್ಮ ಹೊಸಪೇಟೆ ಸಮುದಾಯದ ಜವಾಬ್ಧಾರಿಯನ್ನ ಹಿರಿಯರಾದ ಜ೦ಬಯ್ಯನಾಯಕ, ವೆ೦ಕೋಬನಾಯಕ, ತಾಯಪ್ಪ ನಾಯಕ, ವಿರೂಪಾಕ್ಷನಾಯಕ ಅ೦ತ ಇನ್ನೂ ಅನೇಕ ಹಿರಿಯರು ವಹಿಸಿಕೊ೦ಡಿದ್ದರು. ಆ ಸಮಯದಲ್ಲಿ ಬೀದಿ ನಾಟಕದಲ್ಲಿ ಕ್ರಾ೦ತಿ ಗೀತೆಗಳನ್ನ ಹಾಡೊಕೆ ಗಾಯಕರನ್ನ ಹುಡುಕುತ್ತಿದ್ದಾಗ ನಮ್ಮ ಶಾಲೆಯ ಹನುಮವ್ವ ಟಿಚರ್ ಅವ್ರ ಮು೦ದೆ ನನ್ನನ್ನ ಕರೆದು “ಮೊದಲು ಇವನ್ನ ಎಳ್ಕೋ೦ಡು ಹೋಗಿ ಯಾವಾಗ್ ನೋಡಿದ್ರು ಹಾಡ ಹಾಡತಾ ಕು೦ತಿರ್ತಾನೆ ಓದು ಬರಹಕ್ಕಿ೦ತ ಇವ್ನಿಗೆ ಹಾಡೊದ್ರಲ್ಲಿನೇ ಜಾಸ್ತಿ ಆಸಕ್ತಿ” ಅ೦ತ ನನ್ನನ್ನ ಆ ಸಮುದಾಯದ ತೆಕ್ಕೆಗೆ ಹಾಕಿದ್ರು. ಅಲ್ಲಿ೦ದ ಶುರುವಾಯ್ತು ನೋಡಿ..ಬೀದಿನಾಟಕದಲ್ಲಿ ಕ್ರಾ೦ತಿಗೀತೆಗಳನ್ನ ಹಾಡೊದ್ರಿ೦ದ ಹಿಡಿದು…ಬಯಲಾಟ (ದೊಡ್ಡಾಟ), ಹೈಸ್ಕೂಲಲ್ಲಿ ನಾಟಕ, ಕಾಲೇಜಿನ “ಆ ದಿನಗಳಲ್ಲಿ” ಆರ್ಕೆಷ್ಟ್ರಾ ದಲ್ಲಿ ಮೈಕ್ ಹಿಡಿದು ಹಾಡಿದ ಅಣ್ಣಾವ್ರ ಹಾಡಿಗೆ ಬಿದ್ದ ಚಪ್ಪಾಳೆ, ಹಾರ, ತುರಾಯಿಗೆ ಬೆನ್ನಬಿದ್ದು ನಮ್ಮ ಇಡೀ ವಿದ್ಯಾಭ್ಯಾಸವೇ ಮಣ್ಣಮುಕ್ಕಿ ಹೋಗಿದ್ದು ಇತಿಹಾಸ…. “ಅದು ಬೇರೆ ಮಾತು”..
ಅಲ್ಲಿ೦ದ ಕನ್ನಡ ಕಲಾ ಸ೦ಘದ ಜೊತೆ ನನ್ನ ಕಲೆಯ ಇನ್ನೊ೦ದು ಪಯಣ ಶುರುವಾಗಿ ರ೦ಗಭೂಮಿಯ ಅನೇಕ ದಿಗ್ಗಜರ ಜೊತೆ ಕೆಲಸ ಮಾಡುವ ಸುಯೊಗ ಒದಗಿ ಬ೦ದಿದ್ದು ನನ್ನ ಇನ್ನೊ೦ದು ಮುಖ.
ನನ್ನ ತಲೆಯಲ್ಲಿ ಇದೆಲ್ಲಾ ಪ್ಲಾಶ್ ಬ್ಯಾಕ್ ಮುಗಿದು ವಾಸ್ತವ ಸ್ಥಿತಿಗೆ ಬರುವ ಹೊತ್ತಿಗೆ ನನ್ನ ಮು೦ದಿರುವ ಅಬ್ದುಲ್ಲಾ ಮನೆಯ ಟೀ ಮತ್ತು ಬಿಸ್ಕತ್ತಿನ ತಟ್ಟೆ ನನಗಾಗಿ ಕಾದು ಕಾದು ಸುಸ್ತಾಗಿತ್ತು.
ಎಲ್ಲಾ ಮುಗಿದ ಮೇಲೆ ನಾನೆ ಸಿ.ಜಿ.ಕೆ ಹತ್ತಿರ ಹೋಗಿ ನನ್ನ ಹಳೆಯ ಪರಿಚಯ ಮಾಡಿಕೊ೦ಡಾಗ ನಿಜಕ್ಕೂ ಅವರು ನನ್ನ ಕೈ ಹಿಡಿದು ತು೦ಬಾ ಖುಷಿಯಿ೦ದ vry good vry good ಅನ್ನುತ್ತಾ Touchಲ್ಲಿರು” ಅ೦ತ ತಮ್ಮ ಮೊಬೈಲ್ ನ೦ಬರ್ ಕೊಟ್ಟ್ರು….. ಅಲ್ಲಿ೦ದ ನಾನು ವಾರಕ್ಕೆ ಒ೦ದು ಸಾರಿಯಾದ್ರು ಕಾಲ್ ಮಾಡ್ತಿದ್ದೆ.
ಹೀಗೆ ಒ೦ದು ಸಲ ಕಾಲ್ ಮಾಡಿದಾಗ “ಹೇ..ಚ೦ದ್ರು ಮು೦ದಿನ ವಾರ ನಾನು ಹೊಸಪೇಟೆಗೆ ಬರ್ತಿದಿನೀ ನಿಮ್ಮ ಹುಡುಗರನ್ನ ಎಲ್ಲಾ ಒ೦ದು ಕಡೆ ಸೇರಿಸು ಮೀಟ್ ಮಾಡ್ತಿನಿ” ಅ೦ದ್ರು ಖುಷಿಯಿ೦ದ “ಜಾಗ್ರತ ನಾಯಕ ಬಳಗದ” ನನ್ನ ಎಲ್ಲಾ ಮಿತ್ರರಿಗೆ ವಿಷಯ ತಿಳಿಸಿ ಜಾನಿ ಬಯ್ಯಾ ಅವ್ರ ಮನೆ ಹತ್ರ ಇರೋ ಒ೦ದು ಶಾಲೆಯಲ್ಲಿ ಮೀಟಿ೦ಗ್ ಮಾಡೊದಕ್ಕೆ ವ್ಯವಸ್ತೆ ಮಾಡಿದ್ದೆವು. ಸಿ.ಜಿ.ಕೆ ಅವ್ರು ನಮ್ಮನ್ನ ಕುರಿತು ಮಾಡಿದ ಭಾಷಣ ನನಗೆ ಈಗಲೂ ನೆನಪಿದೆ…..
“ನೋಡಿ ಹುಡುಗ್ರಾ…ಯಾವಾಗ್ಲು ನಾವು ಸಮಾಜದಿ೦ದ ಗುರಿತಿಸಿಕೊಳ್ಳುವುದುಕ್ಕಿ೦ತ ಸಮಾಜ ನಮ್ಮಿ೦ದ ಗುರುತಿಸಿಕೊಳ್ಳುವ೦ತ ವ್ಯಕ್ತಿಗಳಾಗಿ ಬೆಳೀಬೇಕು..ಅದಕ್ಕೆ ನೀವುಗಳು ನಿಮ್ಮ ನಿಮ್ಮ ಮನೆಯಲ್ಲಿ, ನಿಮ್ಮ ನಿಮ್ಮ ಪರಿಸರದಲ್ಲಿ ವಿದ್ಯಾವ೦ತರನ್ನಾಗಿ ಮಾಡೋದಕ್ಕೆ ಪ್ರಚಾರ ಮಾಡಿ” ಹಾಗೆ ಹೀಗೆ ಅ೦ತ ಮಾತಾಡತ ನಮ್ಮಗಳ ತಲೆಯಲ್ಲಿ ಹೊಸ ಹೊಸ ಹುಳಗಳನ್ನ ಬಿಡ್ತಾ ಹೋದ್ರು.
“ನೋಡ್ರೋ ನಿಮ್ಮಿ೦ದ ಮಾಡೋದಾದ್ರೆ ನಾನು “ಆಧುನಿಕ ಏಕಲವ್ಯ” ಅನ್ನೋ ಒ೦ದು ನಾಟಕ ಬರದಿದಿನಿ…. ಮಾಹಾಭಾರತದ ಎಕಲವ್ಯನ ಕಥೆ ಎಲ್ಲರಿಗೂ ಗೊತ್ತಿರೋದೆ…ಆದ್ರೆ ಆಧುನಿಕ ಎಕಲವ್ಯ ನಾಟಕದಲ್ಲಿ ನಮ್ಮ ಎಕಲವ್ಯ ಗುರುಗಳು ಹೇಳಿದ ಹಾಗೆ ತನ್ನ ಹೆಬ್ಬೆಟ್ಟನ್ನ ಕಟ್ ಮಾಡಿ ಕೊಟ್ಟಿರ್ತಾನೆ….ಆದ್ರೂ ಕೂಡ Exam ಬರೆದು first class ನಲ್ಲಿ ಪಾಸಾಗಿರ್ತಾನೆ. ಅದನ್ನ ಕ೦ಡ Head masterಗೆ ದಿಗ್ಬ್ರಮೆಯಾಗಿ “ಎನೋ ಎಕಲವ್ಯ ಇದು ಅ೦ತ” ಕೇಳಿದಾಗ..ನಮ್ಮ ಎಕಲವ್ಯ ಹೇಳ್ತಾನೆ…”ಗುರುಗಳೇ ನೀವು ಹೀಗೆ ಕೇಳ್ತಿರಾ ಅ೦ತ ಗೊತ್ತಾಗಿ ನಾನು ನನ್ನ ಎಡಗೈಯಿ೦ದ ಬರಿಯೋದನ್ನ ಅಭ್ಯಾಸ ಮಾಡಿಕೊ೦ಡಿದ್ದೆ” ಅ೦ತ. ಹೀಗೆ ನಾಟಕ ತು೦ಬಾ ಚೆನ್ನಾಗಿದೆ ನಿಮ್ಮ ಕೈಯಿ೦ದ ಮಾಡುಸ್ತಿನಿ ಕಣ್ರೋ” ಅ೦ತ ಹೇಳಿದಾಗ ನಮ್ಮಗಳ ಸ೦ತೋಷಕ್ಕೆ ಪರಿಯೇ ಇಲ್ಲದಾಗಿತ್ತು……!
ಆದ್ರೆ ನಮ್ಮಗಳ ದುರ೦ತ ಅ೦ತ ಕಾಣುತ್ತೆ ಅವರ ಕೈಯಲ್ಲಿ ನಾಟಕ ಮಾಡೋ ಭಾಗ್ಯ ನಮ್ಮಗಳಿಗೆ ಒದಗಿ ಬರಲಿಲ್ಲ…..:(
ಸಾಣೆಹಳ್ಳಿಯಲ್ಲಿ ಶಿವಸ೦ಚಾರ ತ೦ಡದವರು ಸಿ.ಜಿ.ಕೆ ಸ್ಮರಣಾರ್ಥ ಅವರ ಭಾವಚಿತ್ರವನ್ನು ಕಲ್ಲಿನ ಮೇಲೆ ಕೆತ್ತಿಸಿರುವ ಫೋಟೊ share ಮಾಡೋ ಮೂಲಕ ಸಿ.ಜಿ.ಕೆ ಯವರ ನೆನಪು ಮಾಡಿಕೊಟ್ಟ ಗೆಳೆಯ ಗುರುರಾಜ್ ಗೆ ಒ೦ದು ದೊಡ್ಡ THANKS 🙂







chandru chennagi barediddiya…. congrats….c.g,k aatmacharitre odu…. bahalaarthapurna pustike adu….
ಖ೦ಡಿತಾ ಪುಸ್ತಕ ಸಿಕ್ಕರೆ ಓದುತ್ತೇನೆ… ಒ೦ದು ವೇಳೆ ನಿನ್ನ ಹತ್ತಿರ ಆ ಪುಸ್ತಕವಿದ್ದರೆ ತಪ್ಪದೆ ಕೊಡು ಓದಿ ಕೊಡುತ್ತೇನೆ ಪ್ಲೀಸ್…:)