ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸಾಹಿತ್ಯ ಸಮ್ಮೇಳನದಲ್ಲಿ ನಾನ್ ವೆಜ್ ಯಾಕಿರ್ಬಾರದು?’ ದಿಲಾವರ್ ಕೇಳ್ತಾರೆ

ದಿಲಾವರ್ ರಾಮದುರ್ಗ

ಸಾಹಿತ್ಯ ಸಮ್ಮೇಳನ ಏಕೆ ವೆಜಿಟೇರಿಯನ್? ನಾನ್ ವೆಜ್ಜೀ ಗಳಿಗೆ ಸಾಹಿತ್ಯಾಭಿರುಚಿ ಇರೋದೇ ಇಲ್ಲವೆಂದೋ? ವೆಜ್ಜೀಗಳು ಮಾತ್ರ ಅಂಥ ಅಭಿರುಚಿ ಹೊಂದಿರುತ್ತಾರೆಂದೋ?

ಕುವೆಂಪು ನಾನ್ ವೆಜ್ ತಿನ್ನುತ್ತಿದ್ದರಾ? ನನಗೆ ಗೊತ್ತಿಲ್ಲ. ಕುತೂಹಲ ಅಷ್ಟೇ. ಅವರ ಪುತ್ರ ಪೂಚಂತೇ ಮಾತ್ರ ತಿನ್ನಬಹುದಾದ ಎಲ್ಲ ಮಾಂಸವನ್ನು ತಿಂದವರು ಎಂದು ಕೇಳಿದ್ದೇನೆ. ಬೇಂದ್ರೆ, ಅಡಿಗರ ಬಗ್ಗೆ ಗೊತ್ತಿಲ್ಲ. ಲಂಕೇಶ್, ಅನಂತಮೂರ್ತಿ ಬರಿಯ ವೆಜ್ಜೀಗಳಾ (?). ಮಹಾದೇವ, ಸಿದ್ದಲಿಂಗಯ್ಯ. ನಿಸಾರ್ ಅಹಮದ್, ಎಲ್. ಹನುಮಂತ್ಯ, ಎಸ್.ಜಿ. ಸಿದ್ದರಾಮಯ್ಯ, ಚಂಪಾ, ಬರಗೂರು, ಬಂಜಗೆರೆ, ಸುಬ್ಬು ಹೊಲೆಯಾರ್, ವಿಎಮ್ಮೆಮ್, ಕಾರ್ಪೆಂಟರ್, ಮಂಜುನಾಥ್… ಇವರೆಲ್ಲ ಬರಿಯ ವೆಜ್ಜೀಗಳಾ? ಇವರಲ್ಲಿ ಬಹುತೇಕರು ನಾನ್ ವೆಜ್ಜೀಗಳು ಅಂದುಕೊಂಡಿದ್ದೇನೆ.

* * *

ಬ್ರಾಹ್ಮಣ ಹೊಟೇಲುಗಳ ಪುಳಿಚಾರು ಮತ್ತು ಲಿಂಗಾಯತರ ಸಿದ್ದೇಶ್ವರ/ಬಸಪ್ಪ/ಮಹಾಲಿಂಗೇಶ್ವರ/ಬಸವೇಶ್ವರ ಖಾನಾವಳಿ ಊಟ ಜತೆಗೆ ಆಯಾ ಪ್ರದೇಶದ ಸಿಹಿ (ಉದಾ: ಹೋಳಿಗೆ, ಕಡಬು, ಕಜ್ಜಾಯ ವಗೈರೆ). ಇವಷ್ಟೇ ಸಾಹಿತ್ಯ ಜಾತ್ರೆಗಳಲ್ಲಿ ಊಟದ ಅಧಿಕೃತ ಮೆನ್ಯು.
ವಿಜಾಪುರದಲ್ಲಿ ಲಿಂಗಾಯತ ಖಾನಾವಳಿಗಿಂತ ಬಿರಿಯಾನಿ, ಕಬಾಬ್ ಊಟ ಹೆಚ್ಚು ಜನಪ್ರಿಯ. ಅಲ್ಲಿ ಬಿರಿಯಾನಿ ಏನು ಕನಿಷ್ಠ ಒಂದು ಮೊಟ್ಟೆ ಕೂಡ ಅಧಿಕೃತ ಮೆನ್ಯು ನಲ್ಲಿ ಸೇರಿಕೊಂಡಿರಲಿಲ್ಲ. ಅಲ್ಲಿನ ಮುಸಲ್ಮಾನರಿಗೇನು ಸಾಹಿತ್ಯದ ಗಂಧ ಎನ್ನುವ ತಾತ್ಸಾರವೋ? ನಾನ್ ವೆಜ್ಜೀಗಳಿಗೆ ಯಾವ ಟೇಸ್ಟ್? ಎನ್ನುವ ಉಡಾಫೆಯೋ?
* * *
ಕೊಡವ ನಾಡಿನಲ್ಲಿ ನಡೆಯಲಿರುವ ಸಾಹಿತ್ಯ ಜಾತ್ರೆಗೂ ಇದೇ ಪರಿಸ್ಥಿತಿ. ಅಲ್ಲಿನವರ ಅತ್ಯಂತ ಸಹಜ ಖಾದ್ಯ ಪೋರ್ಕ್ ಅರ್ಥಾತ್ ಹಂದಿ ಊಟ, ಬಾಡೂಟ. ಇದು ಜಾತ್ರೆಯ ಅಧಿಕೃತ ಮೆನ್ಯು ನಲ್ಲಿ ಇರದು ಅಂದುಕೊಂಡಿದ್ದೇನೆ.
ನನ್ನ ಪ್ರಮುಖ ಪ್ರಶ್ನೆ. ಊಟ ಸಂಸ್ಕೃತಿಯ ಭಾಗ ಅಲ್ಲವೇನು? ಬರಿಯ ಅಕ್ಷರಗಳು, ಪದಗಳು, ಕಾವ್ಯ, ಗದ್ಯ, ಪದ್ಯ, ಗಪದ್ಯ, ಛಂದಸ್ಸು, ಷಟ್ಪದಿ ಇದೇ ಕನ್ನಡ ಸಂಸ್ಕೃತಿಯೋ?
ಕನ್ನಡ ಸಾಹಿತ್ಯದಲ್ಲಿ ಜೈನರು, ಬ್ರಾಹ್ಮರು ಮುಂಚೂಣಿ ಪೋಷಿಸಿಕೊಂಡು ಬಂದಿದ್ದಾರೆ. ಹೀಗಾಗಿ ಅವರದೇ ಊಟ, ಆಚಾರ, ವಿಚಾರ ಆಯಾ ಭಾಷೆ ಮತ್ತು ಪ್ರಾಂತದ ಅಧಿಕೃತ ಸಂಸ್ಕೃತಿಯಾಗಬೇಕೇನು? ಅಥವಾ ಸಂಸ್ಕೃತಿ ಅಂದರೇನೇ ವೆಜ್ ಸಂಸ್ಕೃತಿಯೋ?
ಬಹುಸಂಖ್ಯೆಯ ಒಕ್ಕಲಿಗರು, ಕುರುಬರು, ಬೇಡರು, ಮುಸಲ್ಮಾನರು, ಕ್ರೈಸ್ತರು, ದಲಿತರು ಇತ್ಯಾದಿ ನಾನ್ ವೆಜ್ಜೀಗಳಿರುವ ಈ ನಾಡಿನಲ್ಲಿ ಅವರ ಊಟ, ಆಚಾರ, ವಿಚಾರ ಕನ್ನಡ ಸಂಸ್ಕೃತಿಯ ಭಾಗವೇ ಅಲ್ಲವೇನು?
ಕನ್ನಡ ಸಂಸ್ಕೃತಿ ಎಂದರೆ ಪುಳಿಚಾರು/ಲಿಂಗಾಯತ ಖಾನಾವಳಿ ಊಟದಂಥ ಒಂದು ಸೀಮಿತ ಅಭಿರುಚಿಯೇನು?
 

‍ಲೇಖಕರು G

6 January, 2014

10 Comments

  1. 123@gmail.com

    edolle kate ayitu. sahityad bagge matadi adre jana adu bittu bere yella vicharad baggene tale kedskotare

  2. 123@gmail.com

    Tinod edde erate swamy. allu tinodar baggene tale kodsokobedi

  3. Prabhakar Nimbargi

    Haagalla swami, madivantarella 3 dinavaadaroo pure Veg oota maadalee anta!

  4. Harshavardhan S

    bahuteka janaru veg iruttare… veg navarige non veg joteyalle tinnuvavarannu kandare oota serade irabahudu, nonveg tinnuvavaru kooda veg tinnuttaare veg is comman for both annodaste karana.. adu bittu illade hodaddannella taruva avashyakate iila enisuttade..

  5. srinidhi

    ಸಾಹಿತ್ಯ ಸಮ್ಮೇಳನವಿರಲಿ…ಇನ್ನಾವುದೇ ಎಲ್ಲ ರೀತಿಯ ಜನ ಸೇರುವ ಸಮಾರ೦ಭವಿರಲಿ…ಯಾರಿಗೂ ಮನಕೆ ಮುಜುಗರ ಆಗದ೦ತೆ…ವ್ಯವಸ್ಠೆಗಳು ನಡೆದರೆ….ಅದನ್ನು ಆಕ್ಷೇಪಿಸುವುದು ಖ೦ಡಿತ ಸರಿಯಲ್ಲ.

  6. Pradeep

    Simple Non-veggies can have Veg but veggies cant have non-veg, so No mixup. dont link these with Sahithya-Samskrithi etc.. it is not related.

  7. vasanthn

    Madikeri is the place where people don’t mind much of what you eat or drink. Those who are going to attend the program certainly would find a non-veg hotels there easily and can have Kodagu special Pandi (pork)curry.

  8. anonymous

    sir,
    neither veg or non veg is the basic food for human beings in general.
    veg and non veg are basically the ingredients of a common food.
    veg is a common ingredient for both veg and non veg dishes.
    and non veg is an additional ingredient.
    those who love to add non veg to their menu can always go ahead without bothering anybody. if somebody prohibits deliberately not to use meat in their plate we should honestly raise the voice.(some days back few students in bangalore university premises enjoyed cow meat)
    but if somebody wants to raise veg-non veg issue in a sweeping way we keep mute.
    already the sammelana budget has reached 4.5 crores.
    food arrangement should be as economic as possible.
    in this situation veg food is more advisable.
    liquor is also consumed in coorg as a part of coorgi’s traditional rituals. how is the idea to serve liquor to the gathering? those who wish can consume it in the sammelana premises. but it will be foolish if we urge mr. halambi to serve it compusorily.

  9. h a patil

    – ನಾನ್ ವೆಜ್ ಇರಬೇಕು ಯಾಕಿರಬಾರದು ? ನಿಜ ಸಾರ್ ! ಇದು ಸರ್ಕಾರಕ್ಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಬಹಳ ಹೆಚ್ಚಿನ ಹಣಕಾಸಿನ ಹೊರೆ ತರುವುದು ಮಾತ್ರ ಗ್ಯಾರಂಟಿ, ಅಲ್ಲದೆ ನಾನ್ ವೆಜ್ ಊಟದ ಕೌಂಟರ್ ಗಳ ಮುಂದೆ ಉದ್ದನೆಯ ಕ್ಯೂ ಅದನ್ನು ನಿಯಂತ್ರಿಸುವುದೆ ಒಂದು ಹರಸಾಹಸವಾಗಬಹುದು. ಊಟದ ಕೌಂಟರ್ ಭರ್ತಿಯಾಗಿ ಸಾಹಿತ್ಯ ವೇದಿಕೆಗಳು ಖಾಲಿ ಖಾಲಿಯಾದರೆ ಏನು ಮಾಡುವುದು? ಇನ್ನೊಂದು ವಿಷಯ ಜೊತಗೆ ತೀರ್ಥದ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಅಭಿಮಾನಿಗಳು ಹುಯಿಲೆಬ್ಬಿಸಿದರೆ !

  10. ವಿ.ಎನ್.ಲಕ್ಷ್ಮೀನಾರಾಯಣ

    ಅಪ್ಪಟ ಸಸ್ಯಾಹಾರಿಯಾಗಿ ನಿಮ್ಮ ಪ್ರಶ್ನೆಗಳಿಗೆ ನನ್ನ ಸಹಮತವಿದೆ.ಮಂಗಳೂರು, ಕೇರಳದ ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ಬೇಕಿದ್ದವರಿಗೆ ಮಾಂಸಾಹಾರವನ್ನೂ ಬಡಿಸಿದ್ದನ್ನು ನೋಡಿದ್ದೇನೆ. ಗೋವಾದ ಚಿತ್ರೋತ್ಸವದಲ್ಲಿ ಬೇಕಿದ್ದವರಿಗೆ ಎಲ್ಲಬಗೆಯ ಆಹಾರ-ಪಾನೀಯಗಳೂ ಲಭ್ಯವಿದ್ದವು.ಸಾಹಿತ್ಯ ಸಮ್ಮೇಳನಕ್ಕೂ ಸಸ್ಯಾಹಾರಕ್ಕೂ ಇರುವ ನಂಟು ಜೈನ-ಬ್ರಾಹ್ಮಣ ಮೇಲುಗೈ ಪಡೆದ ನೆಲೆಯಿಂದ ಬಂದಿರುವುದು ಎದ್ದುತೋರುತ್ತದೆ. ಆದರೆ ಅದೇ ಹಿನ್ನೆಲೆಯ ನಮ್ಮ ಸಾಹಿತ್ಯಸೃಷ್ಟಿಕರ್ತರಿಗೆ, ಸಾಹಿತ್ಯ ಬಳಕೆದಾರರಿಗೆ ಹೆಂಡ-ತಂಬಾಕು-ಅಡಿಕೆಗಳ ಬಳಕೆಯ ಮಡಿವಂತಿಗೆ ಇದ್ದಂತೇನೂ ತೋರುವುದಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading