ಬಿ ಪೀರ್ ಬಾಷಾ
ಶ್ರೀಸಾಮಾನ್ಯನಿಗೆ ತಲುಪಬೇಕಿದ್ದ ಸಾಹಿತ್ಯವನ್ನು ಕಾರ್ಪೋರೇಟ್ ಮಾರುಕಟ್ಟೆಯಲ್ಲಿಟ್ಟು ಮಾರಲು ಹೊರಟವರನ್ನು ಸಾಹಿತಿಗಳೆನ್ನುವುದಕ್ಕಿಂತ ದಲ್ಲಾಳಿ ಅಥವಾ ಏಜೆಂಟರೆಂದು ಕರೆಯುವುದೇ ಸರಿ. ಒಂದು ಕಾಲಕ್ಕೆ ಸಾಹಿತ್ಯ ವಿಮರ್ಶಕರೆಂದು ಪ್ರಖ್ಯಾತರಾದವರೇ ಈ ಕೆಲಸಕ್ಕಿಳಿದಿರುವುದು ದುರಂತವೇ ಸರಿ. ಅಷ್ಟೇ ಅಲ್ಲ ಇದು ಅಪಾಯ ಕೂಡ.
ಸಾಹಿತ್ಯದ ಹೆಸರಿನಲ್ಲಿ ಟಕೀಟು ಷೋ ಮಾಡಿ ಲಾಭಮಾಡಿಕೊಳ್ಳಬಹುದು ಎಂದು ಒಮ್ಮೆ ಖಾತ್ರಿಯಾದರೆ ಕನ್ನಡ ಸಾಹಿತ್ಯ ದುರಂತದ ಯಾವ ಅತಿರೇಕ ತಲುಪುವುದೋ ಊಹಿಸುವುದು ಕಷ್ಟ. ಸಾಂಸ್ಕೃತಿಕ ಸಜ್ಜನಿಕೆಯ ಪರಂಪರೆಯನ್ನು ಹೊಂದಿರುವ ಜನ ಧಾರವಾಡದ ಘನತೆಗೆ ತಕ್ಕುದಲ್ಲದ ಇಂತಹ ಜನತೆ ಕಾರ್ಯಕ್ರಮಗಳನ್ನು ನಡೆಯಲು ಬಿಡಬಾರದು. ಪ್ರತಿಯೊಬ್ಬರೂ ಪ್ರತಿಭಟಿಸಬೇಕು, ವಿರೋಧಿಸಬೇಕು.
ಧಾರವಾಡದ ಸಂಘ-ಸಂಘಟನೆಗಳು ಈ ಕಾರ್ಯಕ್ರಮ ಆಗದಂತೆ ತಡೆಯಬೇಕು. ಮುಖ್ಯವಾಗಿ ಕನಿಷ್ಟವಾದರೂ ಸಂವೇದನಾಶೀಲತೆ, ವಿಚಾರವಂತಿಕೆ ಇರುವ ಯಾವ ಲೇಖಕರೂ ಈ ಗೋಷ್ಟಿಗಳಲ್ಲಿ ಭಾಗವಹಿಸಬಾರದು. ಈ ಬಗ್ಗೆ ಈ ಹಿರಿಯರು ಈ ಕ್ಷಣದಿಂದ ಯೋಚಿಸುವಂತಾಗಲಿ ಇಲ್ಲವೇ ಸಾಹಿತ್ಯದ ಜನಪರತೆಯನ್ನು ಪ್ರತಿಪಾದಿಸುವ ಓದುಗ ಹಾಗೂ ಲೇಖಕರು ಇವರನ್ನು ತಿರಸ್ಕರಿಸುವಂತಾಗಲಿ.






0 Comments