ಸಾವಿತ್ರಿ ಬಾಯಿ ಪುಲೆ ಅವರ ಜನ್ಮದಿನ ಶಿಕ್ಷಕರ ದಿನಾಚರಣೆಯಾಗಲಿ
ನಾಗರಾಜ್ ಹೆತ್ತೂರು
ಇಡೀ ರಾಷ್ಟ್ರಕ್ಕೆ ಅಕ್ಷರ ಜ್ಞಾನವನ್ನು ನೀಡಿದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾ ಚರಣೆಯನ್ನಾಗಿ ಆಚರಿಸ ಬೇಕು ಎಂದು ಖ್ಯಾತ ಸಾಹಿತಿ ಹಾಗೂ ದಲಿತಪರ ಚಿಂತಕಿ ಸಮತಾದೇಶಮಾನೆ ಆಗ್ರಹಿಸಿದ್ದಾರೆ. ನಗರದಲ್ಲಿ ದಲಿತ ಸಾಹಿತ್ಯ ಪರಿಷತ್ ಹಾಗೂ ಸಮತಾ ಸೈನಿಕ ದಳ , ನಾಗಭೂಮಿ ವಿವಿದೋದ್ದೇಶ ಅಭಿವೃದ್ದಿ ಸಂಸ್ಥೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘ ನಿಟ್ಟೂರು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪ ಡಿಸಿದ್ದ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನ ಹಾಗೂ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು 19ನೇ ಶತಮಾನದಲ್ಲಿಯೇ ಸಾಮಾಜಿಕ ಹೋರಾಟವ ನ್ನು ನಡೆಸಿದ ದಿಟ್ಟಮಹಿಳೆ ಫುಲೆ. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಗುವನ್ನು ದತ್ತು ತೆಗೆದುಕೊಂಡು ವೈದ್ಯನನ್ನಾಗಿ ಮಾಡಿ ಆರೋಗ್ಯ ಸೇವೆಯನ್ನು ಮಾಡಿದರು ಎಂದು ವಿವರಿಸಿದರು. ಎಲ್ಲಿ ಚಿಂತನೆ ಇಲ್ಲ ಅಲ್ಲಿ ದಲಿತರು ಇಲ್ಲ ಎಲ್ಲಿ ತರ್ಕ ಇಲ್ಲ ಅಲ್ಲಿ ವಿಜ್ಞಾನ ವಿಲ್ಲ ವಿಜ್ಞಾನ ತರ್ಕ ಎರಡು ಇದ್ದಲ್ಲಿ ದಲಿತರು ಇರುತ್ತಾರೆ ಎಂದು ಹೇಳಿದರು. ಸಾವಿತ್ರಿ ಬಾಯಿ ಫುಲೆ ಸಾಮಾಜಿಕ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಹಿಳೆಯರನ್ನು ಬೌದ್ದಿಕವಾಗಿ ಗಟ್ಟಿ ಗೊಳಿಸಿದವರು ಎಂದರು.
ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಸಾಹಿತಿ ಇಂದಿರಾ ಬಿ.ಕೃಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿ ಮಹಿಳಾ ಶಿಕ್ಷಣಕ್ಕೆ ಜೀವನವನ್ನೇ ಮುಡುಪಾಗಿಟ್ಟು ಬ್ರಿಟೀಷ್ ಸರ್ಕಾರ ದಿಂದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಮಹಿಳೆ ಸಾವಿತ್ರಿ ಬಾಯಿಫುಲೆ ಅವರ ಭಾವಚಿತ್ರವನ್ನು ಸರ್ಕಾರಿ ಕಛೇರಿ , ಶಾಲೆ ಕಾಲೇಜುಗಳಲ್ಲಿ ಹಾಕಬೇಕು. ಅವರ ಹುಟ್ಟಿದ ದಿನವನ್ನು ಅಧಿಕೃತವಾಗಿ ದಿನಾಚರಣೆಯಾಗಿ ಆಚರಿಸಬೇಕು. ಫುಲೆ ಅವರ ಜೀವನ ಸಾಧನೆ ಹೋರಾಟದ ಬಗ್ಗೆ ಪ್ರಾಥಮಿಕ ದಿಂದ ಕಾಲೇಜು ಹಂತದಲ್ಲಿಯೂ ಪಠ್ಯ ಅಳವಡಿಸಬೇಕೆಂದು ಒತ್ತಾಯಿಸಿದರು. ಮಹಿಳೆಯರ ಸಬಲೀಕರಣಕ್ಕೆ ಹೋರಾಡಿದ ಮತ್ತು ಅಕ್ಷರ ದೀವಿಗೆಯನ್ನು ನೀಡಿದ ಸಾವಿತ್ರಿಬಾಯಿ ಫುಲೆಯ ಬಗ್ಗೆ ಜನರಿಗೆ ತಿಳಿಯದಿರುವುದು ವಿಷಾದದ ಸಂಗತಿ ಎಂದರು. ಅಂತರರಾಷ್ಟ್ರೀಯ ಚಿತ್ರಕಲಾವಿದರಾದ ಕೆ.ಟಿ.ಶಿವಪ್ರಸಾದ್ ಆಶಯ ನುಡಿಗಳನ್ನಾಡುತ್ತಾ 19ನೇ ಶತಮಾನದಲ್ಲಿ ಶೂದ್ರ ಹಾಗೂ ತಳ ಸಮುದಾಯ ದವರಿಗೆ ಭಾಷೆ ಗೊತ್ತಿತ್ತು ಆದರೆ ಅಕ್ಷರ ಗೊತ್ತಿರಲಿಲ್ಲ ಆಗ ಜನರಲ್ಲಿದ್ದ ಮೌಢ್ಯತೆಯನ್ನು ಹೋಗಲಾಡಿಸಲು ಹೋರಾಟ ಮಾಡಿದವರು ಸಾವಿತ್ರಿ ಬಾಯಿ ಫುಲೆ ಪ್ರಮುಖರು ಎಂದು ಹೇಳಿದರು. ಫುಲೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಇಂದು ನಡೆಯಬೇಕು. ಪ್ರಸ್ತುತ ಸಂಸ್ಕೃತಿಯನ್ನು ಒಡೆಯುವ ಕೆಲಸ ನಡೆಯುತ್ತಿದ್ದು ಮನುಷ್ಯ ಮತ್ತೆ ಮೌಢ್ಯದ ಕಡೆಗೆ ಮುಖ ಮಾಡುತ್ತಿ ದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು. ವಿಶ್ವಕ್ಕೆ ಜ್ಞಾನದ ದೀವಿಗೆ ಹಿಡಿದ ಗೌತಮ ಬುದ್ಧನನ್ನು ಪೂಜಿಸುವ ಬೌದ್ಧ ಬಿಕ್ಕುಗಳು ಅರ್ಥ ವಾಗದ ಪಾಳಿ ಭಾಷೆಯಲ್ಲಿ ಮಂತ್ರ ಪಠಿಸಿ ಬ್ರಾಹ್ಮಣಶಾಹಿ ಆಚರಣೆಗೆ ಇಂಬು ನೀಡುತ್ತಿರುವುದು ದುರಂತ. ತರ್ಕದಮೂಲವೆನಿಸಿದ ಭಾರತೀಯ ನಾಗಾರ್ಜನಿಗೆ ಹೊರ ದೇಶಗಳಲ್ಲಿ ಮನ್ನಣೆ ದೊರೆತಿದ್ದರೂ ಸ್ವದೇಶದಲ್ಲಿ ಆತನ ಬಗ್ಗೆ ಪರಿಚಯವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮಾತನಾಡಿ ಸಮಾಜದಲ್ಲಿ ಪ್ರತಿ ಯೊಬ್ಬರು ಸಮಾನತೆ , ಸಹಬಾಳ್ವೆ ಸಮಾನ ಅವಕಾಶವನ್ನಿಟ್ಟುಕೊಂಡು ಹೆಣ್ಣು ಮಕ್ಕಳನ್ನು ಗೌರವಿಸಬೇಕು . ಇಂದಿನ ಆಧುನಿಕ ಯುಗದಲ್ಲಿಯೂ ಬಾಲ್ಯವಿವಾಹ , ದೇವದಾಸಿ ಪದ್ಧತಿ ಯಂತಹ ಸಾಮಾಜಿಕ ಅನಿಷ್ಟ ಪದ್ದತಿ ಜೀವಂತವಾಗಿರುವುದು ನೋವಿನ ಸಂಗತಿ. ಹೆಣ್ಣುಮಕ್ಕಳ ಮೇಲೆ ಸಾಮೂ ಹಿಕ ಅತ್ಯಾಚಾರಗಳು, ದೌರ್ಜನ್ಯಗಳು ನಡೆಯುತ್ತಿದ್ದು ಇದರ ವಿರುದ್ಧ ಪ್ರತಿಯೊಬ್ಬರು ದನಿ ಎತ್ತಬೇಕು. ಸಾವಿತ್ರಿ ಬಾಯಿಫುಲೆ ಈ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾದುದು ಅವರ ತತ್ವ ಸಿದ್ಧಾಂತ ಮೌಲ್ಯಗಳನ್ನು ಪ್ರತಿಯೊಬ್ಬರು ರೂಢಿಸಿಕೊಂಡು ಸ್ವಾಸ್ಥ್ಯಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು. ಆಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಪುಪ್ಪಲತಾ , ಆಲೂರು ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಿ.ಸುಜಾತ ಪತ್ರಕರ್ತೆ ಇಂದಿರಾ ಹಿರಿಯೂರು ಮಾತನಾಡಿದರು. ನಾಗರಾಜ್ ಹೆತ್ತೂರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಸುವರ್ಣ.ಸಿ. ಪ್ರಾಸ್ತಾವಿಕ ನುಡಿಗಳ ನ್ನಾಡಿ ದರು, ಆರ್. ಪಿ. ಐ ಸತೀಶ್ ಕಾರ್ಯ ಕ್ರಮ ನಿರೂಪಿಸಿದರು, ನಿಟ್ಟೂರು ಸ್ವಾಮಿ ಸ್ವಾಗತಿಸಿದರು, ವೆಂಕಟೇಶ ಬ್ಯಾಕರವಳ್ಳಿ ವಂದಿಸಿದರು.








ಸಾವಿತ್ರಿ ಬಾಯಿ ಫುಲೆಯವರ ಬಗ್ಗೆ ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳಾಗಬೇಕು. ಎಲ್ಲರಿಗೂ ತಿಳಯಬೇಕು. ಒಳ್ಳೆಯ ಉತ್ಸಾಹದ ಸ್ವಾಗತಾರ್ಹ ಕಾರ್ಯಕ್ರಮ