ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿರಾಜ್ ಆನಂದೂರು ಅವರಿಗೆ ‘ವಿಭಾ ಸಾಹಿತ್ಯ ಪ್ರಶಸ್ತಿ’

೨೦೨೩ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ.

ಕವಿ, ವಿಮರ್ಶಕರಾದ ಡಾ. ಸಬೀಹಾ ಭೂಮಿಗೌಡ ಮತ್ತು ಡಾ. ಚಂದ್ರಶೇಖರ ತಾಳ್ಯ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು.

‘ನಿರೂಪಣೆಯ ಹೊಸತನ, ಸೂಕ್ಷ್ಮ ವ್ಯಂಗ್ಯ. ಕಟಕಿ, ಬೆರಗುಗೊಳಿಸುವ ವಿಪರ್ಯಾಸದ ವಿನ್ಯಾಸಗಳನ್ನು ಹೆಣೆಯುತ್ತಾ ವಿರುದ್ಧ ದಿಕ್ಕಿನಲ್ಲಿ ಸಾಗಿ ಸರಿದಾರಿಗೆ ಬಂದಂತೆ ಮಾಡುವ ಗ್ರಹಿಕೆಯ ಕ್ರಮ, ಗದ್ಯಗಂಧೀ ಲಯದಲ್ಲೇ ಪರವಶಗೊಳಿಸುವಂತಿರುವ ಶೈಲಿ ಗಮನಸೆಳೆಯುವ ಕಾರಣಕ್ಕೆ ‘ಗಂಡಸರನ್ನು ಕೊಲ್ಲಿರಿ’ ನಮ್ಮ ಆಯ್ಕೆ’ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ.

ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ.

ಕವಿ ಪರಿಚಯ :

ಸವಿರಾಜ್ ಆನಂದೂರು ಹುಟ್ಟಿದ್ದು ೧೯೮೭ ರಲ್ಲಿ, ಆಗುಂಬೆ ಸಮೀಪದ ಆನಂದೂರಿನಲ್ಲಿ. ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವೀಧರ. ಹವ್ಯಾಸಿ ತಾಳಮದ್ದಲೆ ಅರ್ಥಧಾರಿ, ರಂಗಭೂಮಿ ಕಲಾವಿದ.

ಪ್ರಸ್ತುತ ಬೆಂಗಳೂರಿನ ಗೋಪಾಲನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆಗಾರರಾಗಿಯೂ ಹಲವು ಕಥಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ‘ಬ್ಲೂಬುಕ್’ ಹಾಗೂ ‘ನಕ್ಷತ್ರಕಡ್ಡಿ’ ಅವರ ಈವರೆಗಿನ ಪ್ರಕಟಿತ ಕೃತಿಗಳು.

‍ಲೇಖಕರು avadhi

26 September, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading