ಕರ್ನಾಟಕ ಪ್ರಕಾಶಕರ ಸಂಘ ವಿಶ್ವ ಪುಸ್ತಕ ದಿನದ ಅಂಗವಾಗಿ ನೀಡುವ ಎರಡು ಮಹತ್ವದ ಪ್ರಶಸ್ತಿಗೆ ಮೈಸೂರಿನ ಪುಸ್ತಕ ಪ್ರೇಮಿ ಸಯ್ಯದ್ ಐಸಾಕ್ ಹಾಗೂ ಪ್ರಕಾಶಕಿ ಆರ್ ಪೂರ್ಣಿಮಾ ಅವರನ್ನು ಆಯ್ಕೆ ಮಾಡಲಾಗಿದೆ.
೨೦೨೧ ನೇ ಸಾಲಿನ ಎಂ ಗೋಪಾಲಕೃಷ್ಣ ಅಡಿಗ ಪ್ರಶಸ್ತಿಯನ್ನು ಇತ್ತೀಚಿಗೆ ಮೈಸೂರಿನ ಬೆಂಕಿ ಅನಾಹುತದಲ್ಲಿ ತನ್ನ ಪುಸ್ತಕ ಮಳಿಗೆಯನ್ನು ಕಳೆದುಕೊಂಡ ಸಯ್ಯದ್ ಐಸಾಕ್ ಅವರಿಗೆ ಹಾಗೂ ನಂಜನಗೂಡು ತಿರುಮಲಾಂಬ ಪ್ರಶಸ್ತಿಯನ್ನು ಪತ್ರಕರ್ತೆ ಹಾಗೂ ಪ್ರಕಾಶಕರಾದ ಆರ್ ಪೂರ್ಣಿಮಾ ಅವರಿಗೆ ಘೋಷಿಸಲಾಗಿದೆ.
ಎರಡೂ ಪ್ರಶಸ್ತಿಗಳು ತಲಾ ಐದು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಈ ಎರಡು ಪ್ರಶಸ್ತಿಗಳನ್ನು ಅಂಕಿತ ಹಾಗೂ ಶೃಂಗಾರ ಪ್ರಕಾಶನ ಪ್ರಾಯೋಜಿಸಿದೆ






ಪೂರ್ಣಿಮಾಗೆ ಅಭಿನಂದನೆಗಳು. ಈ ಪ್ರಶಸ್ತಿಯು ಸೈಯದ್ ಐಸಾಕ್ ಅವರ ಮನೋಬಲವನ್ನು ಹೆಚ್ಚಿಸಲಿ
ತುಂಬು ಹೃದಯದ ಆಭಿನಂದನೆ, ಫೂರ್ಣಿಮಾ, ಸಯ್ಯದ್ ಐಸಾಕ್ ಸರ್!