ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮಾಜಮುಖಿ ವಾರ್ಷಿಕ ಕಥಾಸ್ಪರ್ಧೆಗೆ ಆಹ್ವಾನ…

ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ‘ಸಮಾಜಮುಖಿ ವಾರ್ಷಿಕ ಕಥಾಸ್ಪರ್ಧೆ-2023’ ಏರ್ಪಡಿಸಿದೆ. ಸಮಾಜಮುಖಿ ಪುರಸ್ಕಾರಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ ರೂ.5000 ನಗದು ನೀಡಿ ಗೌರವಿಸಲಾಗುವುದು. ಜೊತೆಗೆ ಆಯ್ದ ಹದಿನೈದು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ ಸಂಕಲನದಲ್ಲಿ ಅವಕಾಶ ಸಿಗಲಿದೆ.

ಕಥೆಗಾರರು 2000 ಪದಮಿತಿಯ, ಯಾವ ಮಾಧ್ಯಮದಲ್ಲೂ ಪ್ರಕಟವಾಗದ, ನುಡಿ/ಯುನಿಕೋಡ್ ಲಿಪಿಯಲ್ಲಿರುವ ಕಥೆಯನ್ನು ವರ್ಡ್ ಕಡತದಲ್ಲಿ 15 ಜನೆವರಿ 2023ರೊಳಗೆ ಕಳುಹಿಸಬೇಕಾದ ಇಮೇಲ್ ವಿಳಾಸ: samajamukhi2017@gmail.com

ದಯವಿಟ್ಟು ಈ ಸುದ್ದಿಯನ್ನು ಆದ್ಯತೆ ಮೇರೆಗೆ ಪತ್ರಿಕೆಯ ಎಲ್ಲಾ ಆವೃತ್ತಿಗಳಲ್ಲಿ ಪ್ರಕಟಿಸುವ ಮೂಲಕ ಆಸಕ್ತರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕೆಂದು ವಿನಂತಿಸುತ್ತೇವೆ.

ವಂದನೆಗಳು.

ವಿಶ್ವಾಸದಿಂದ,
ಚಂದ್ರಕಾಂತ ವಡ್ಡು
[ಸಮಾಜಮುಖಿ ಪ್ರಕಾಶನದ ಪರವಾಗಿ]

‍ಲೇಖಕರು Admin

16 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading