ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮಾಜಮುಖಿ ಕಥಾ ಪುರಸ್ಕಾರ ಫಲಿತಾಂಶ ಪ್ರಕಟ…

ಸಮಾಜಮುಖಿ ಪ್ರಕಾಶನ ಕನ್ನಡದ ಕಥಾ ಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ಏರ್ಪಡಿಸಿದ್ದ ವಾರ್ಷಿಕ ಕತಾಸ್ಪರ್ಧೆಯಲ್ಲಿ ಸುಮಾರು ಐನೂರು ಕತೆಗಾರರು ಭಾಗವಹಿಸಿದ್ದರು. ನಾಡಿನ ಹೆಸರಾಂತ ಕತೆಗಾರ ಅಮರೇಶ ನುಗಡೋಣಿ ಅವರು ತೀರ್ಪುಗಾರರಾಗಿ ವಿಜೇತರ ಅಂತಿಮ ಆಯ್ಕೆ ಮಾಡಿಕೊಟ್ಟಿದ್ದಾರೆ.  

ತಲಾ ರೂ.5000 ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡ ಸಮಾಜಮುಖಿ ಕತಾ ಪುರಸ್ಕಾರ-2022ಕ್ಕೆ ಆಯ್ಕೆಯಾಗಿರುವ ಐದು ಕತೆ ಮತ್ತು ಕತೆಗಾರರು: ಪ್ರತೀಕಾರ (ಮಲ್ಲಿಕಾರ್ಜುನ ಹೊಸಪಾಳ್ಯ), ಜಾಡು (ಆನಂದ ಕುಂಚನೂರ), ಪುರುಷನ ಬುಟ್ಟಿಯೊಳಿಟ್ಟು (ದಯಾನಂದ), ಕುಂಡದ ಬೇರು (ಎಡೆಯೂರು ಪಲ್ಲವಿ), ಅಕ್ಕರೆಗಾವ ಲಿಂಗ? (ಫಾತಿಮಾ ರಲಿಯಾ).

ಸಮಾಜಮುಖಿ ವಾರ್ಷಿಕ ಕತಾ ಸಂಕಲನದಲ್ಲಿ ಸ್ಥಾನ ಪಡೆದ ಹತ್ತು ಕತೆಗಳು: ರಿಯಾಲಿಟಿ ಶೋ (ಟಿ.ಎಸ್.ಶ್ರವಣ ಕುಮಾರಿ), ಕೊರೋನವೆಂಬ ಕಾಯಿಲೆಯು ನೀರೆಂಬ ಅಮ್ಮಾಜಿಯು (ವಿಜಯಾ ಮೋಹನ್ ಮಧುಗಿರಿ), ಇರುವನೊಬ್ಬನು ಚಂದಿರ (ಡಾ.ಮಿರ್ಜಾ ಬಷೀರ್), ಭೂಮಿತಾಯವ್ವ (ಡಾ.ಸಂಪಿಗೆ ನಾಗರಾಜ), ಕಾಲ ವಶ (ವಿ.ಎನ್.ನೇರಳಕಟ್ಟೆ), ನದಿಯೊಂದು ಕಡಲ ಹುಡುಕುತ್ತಾ… (ಸಂತೆಬೆನ್ನೂರು ಫೈಜ್ನಟ್ರಾಜ್), ಮುರುಗನ ಸಾವು ಮತ್ತೂ… (ದೀಪ್ತಿ ಭದ್ರಾವತಿ), ಮೂರು ಮೊಳ (ಮೆಹಬೂಬ ಮುಲ್ತಾನಿ), ನೆಲದೊಳಗಿಳಿಯದ ನೇಗಿಲು (ಡಾ.ನೂರಂದಪ್ಪ ಪಡಶೆಟ್ಟಿ), ಕಳ್ಳು ಬಳ್ಳಿ (ಮೋದೂರು ತೇಜ).

‍ಲೇಖಕರು Admin

29 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading