ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸಪ್ನ’ದಲ್ಲಿ ಕಾವ್ಯೋತ್ಸವ

ಕವಿತೆಯೇ ಒಂದು ಬಂಡಾಯ: ಜೋಗಿ


ಕವಿತೆಯೇ ಒಂದು ಬಂಡಾಯ. ಪ್ರತಿ ಯೊಂದುಕವಿತೆಯೂ ಪ್ರತಿಭಟನೆ. ಪ್ರತಿಯೊಂದು ಕವಿತೆಯೂ ಯೂನಿವರ್ಸಲ್ ಆಗಿರುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಬರಹಗಾರ ಜೋಗಿ ಅಭಿಪ್ರಾಯ ಪಟ್ಟರು.

‘ಸಪ್ನ ಬುಕ್ ಹೌಸ್’ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ದ ಅಂಗವಾಗಿ ಆಯೋಜಿಸಿದ ‘ರಾಜ್ಯೋತ್ಸವ -ಕಾವ್ಯೋತ್ಸವ’ ಕವಿಗೋಷ್ಟಿಯಲ್ಲಿ ಆಶಯ ನುಡಿಯನ್ನು ಆಡುವ ಸಂದರ್ಭದಲ್ಲಿ ಮಾತನಾಡಿದರು.

ಕಾದಂಬರಿ ಬರೆದರೆ ಮುಗಿಯುತ್ತದೆ. ಆದರೆ ಕವಿತೆ ಮುಗಿಯುವುದಿಲ್ಲ. ನಿರಂತರವಾಗಿರುತ್ತದೆ. ಒಂದು ಕವಿತೆ ಇನ್ನೊಂದರ ತರಹ ಇರುವುದಿಲ್ಲ. ಕವಿಯ ವ್ಯಕ್ತಿತ್ವದ ಗುರುತಾಗಿರುತ್ತದೆ. ಕವಿಯು ಕವಿತೆಯ ಇಡೀ ಸಾರವನ್ನು ತಂದಿರುತ್ತಾನೆ. ಛಂದಸ್ಸು, ಷಟ್ಪದಿ, ಪ್ರಾಸಗಳನ್ನು ದಾಟಿ ಲಯಕ್ಕೆ ಬಂದು ನಿಂತಿರುತ್ತದೆ. ಬರೆದ ಕವಿಗೂ ಮತ್ತು ಓದುಗನಿಗೂ ಬಹಳ ಮಾನಸಿಕ ಸಂಬಂಧವಿರುತ್ತದೆ.ಎಂದರು.

ಕಾವ್ಯೋತ್ಸವ ದ ಅದ್ಯಕ್ಷತೆಯನ್ನು ಕವಿ, ನಾಟಕಕಾರ ಡಾ.ಬೇಲೂರು ರಘುನಂದನ್ ವಹಿಸಿದ್ದರು.

ಸಪ್ನ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥರಾದ ಆರ್ ದೊಡ್ಡೆಗೌಡ ಅವರು ಮಾತನಾಡಿ ಮುಂದಿನ ತಿಂಗಳು 8 ನೇ ತಾರೀಖು ನಗರದ ಗಾಂಧಿ ಭವನದಲ್ಲಿ 68 ನೇ ಕರ್ನಾಟಕ ರಾಜ್ಯೋತ್ಸವ ದ ಅಂಗವಾಗಿ 68 ಪುಸ್ತಕಗಳು ಲೋಕಾರ್ಪಣೆಯಾಗಲಿದೆ. ಈ ಕವಿ ಗೋಷ್ಟಿಯಲ್ಲಿ ವಾಚಿಸಿದ ಎಲ್ಲಾ 24 ಕವಿತೆಯನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಸಪ್ನಬುಕ್ ಹೌಸ್ ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಉಪಸ್ಥಿತರಿದ್ದರು.

‍ಲೇಖಕರು avadhi

28 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading