ಮಂಗಳೂರಿನಲ್ಲಿ ನಡೆದ ಹೇಯ ಕೃತ್ಯವನ್ನು ನೋಡಿದಾಗ ಇಟಗಿ ಈರಣ್ಣ ಅವರು “ರಾವೀ ನದಿಯ ದಂಡೆಯ ಮೇಲೆ” ನಾಟಕಕ್ಕೆ ಬರೆದ ಒಂದು ಗಝಲ್ ನೆನಪಿಗೆ ಬಂತು..
– ಧನ೦ಜಯ ಕುಲಕರ್ಣಿ
“ಶಹರ ಶಹರಗಳಲ್ಲಿ ಸಾಲು ಸಾಲಾಗಿ ಸಾಲು ಮನೆಗಳನೆಲ್ಲ ಸುಡಲಾಯಿತು
ಸಂತಸದ ಹಬ್ಬವಿದು, ತಾನಿಂತು ಉಕ್ಕಿ, ಭೋರ್ಗರೆವ ಕಡಲಾಯಿತು
ಒಂದೆಡೆಗೆ ತೂಗಿ ತೊನೆಯುತ್ತಾ ಬಂತು ಋತು ವಸಂತದ ಉಲ್ಲಾಸ
ಒಂದೆಡೆಗೆ ಕಂಡ ಕನಸುಗಳ ಗೂಡಿಗೆ ಉರಿವ ಕೊಳ್ಲಿಗಳ ಇಡಲಾಯಿತು
‘ಶೀಲ-ದೀಪ’ ವ ಹೊತ್ತ ಹಣತೆಗಳ ಕಥೆಯನೆಂತು ಬಣ್ಣಿಸಲಿ ನಾನು?
ನಡುಬೀದಿಯಲ್ಲೇ ಎಣ್ಣೆಯನು ಚೆಲ್ಲಿ, ಕುಡಿಚಿವುಟಿ ಹೊಸಕಿ ಬಿಡಲಾಯಿತು
ಸಣ್ಣ ಮಕ್ಕಳ ಕಣ್ಣುಗಳು ನೋಡಲಾಗದೆ ನಾಚಿ ಮುಚ್ಚಿಕೊಂಡವು ಗೆಳೆಯ
ಅವರ ಆನಂದಗಳ ಹಗಲು ದರೋಡೆಯೇ ನಡೆದು ಕೊಳ್ಲಿಗಳ ರಾಶಿ ಇಡಲಾಯಿತು
ಇಂದಿನ ಈ ಸಮಯದೊಂದಿಗೆ, ಈ ನನ್ನ ಹೆಸರನು ಹೇ ನಾಸಿರ್
ಕಸ ಕಡ್ಡಿ ಕೊಳೆ ಮಾಡಿ, ಕೆಸರಲ್ಲಿ ಹೊಸಕಿ, ಕಾಲುವೆಗೆ ತಳ್ಳಿ ಬಿಡಲಾಯಿತು…”]]>





0 Comments