
ಭಾರತೀಯ ಸಿನೆಮಾಗೆ ನೂರು ವರ್ಷ ಸಂದ ಸಂದರ್ಭದಲ್ಲಿ ಸಂವಾದ ಡಾಟ್ ಕಾಂ ಜಗತ್ತಿನ ನೂರು ಸಿನೆಮಾಗಳ ಕುರಿತ ವಿಮರ್ಶಾ ಸಂಕಲನವನ್ನ ಹೊರತರುತ್ತಿದೆ. ಈ ಸಂಬಂಧ ಬರಹಗಾರರ ಕಮ್ಮಟವನ್ನ ಆಯೋಜಿಸಿದ್ದು ಸಿನೆಮಾ ಬರವಣಿಗೆಯಲ್ಲಿ ಆಸಕ್ತಿ ಇರುವವರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಿನೆಮಾ ವಿಮರ್ಶೆಯ ಕುರಿತು ಬರಹಗಾರರಲ್ಲಿ ಪ್ರಾಥಮಿಕ ಶಿಸ್ತನ್ನ ಬೆಳೆಸುವುದು ಕಮ್ಮಟದ ಮುಖ್ಯ ಉದ್ದೇಶ.
ಸಂಪನ್ಮೂಲ ವ್ಯಕ್ತಿಗಳು :
೧. ಪ್ರಕಾಶ್ ಬೆಳವಾಡಿ, ರಂಗಕರ್ಮಿ, ನಿರ್ದೇಶಕ
೨. ತಾರಕೇಶ್ವರ್, ಪ್ರಾಧ್ಯಾಪಕರು, ಹೈದರಾಬಾದ್ ವಿಶ್ವವಿದ್ಯಾನಿಲಯ
೩. ಬಿ. ಸುರೇಶ್, ಚಲನಚಿತ್ರ, ಧಾರಾವಾಹಿ ನಿರ್ದೇಶಕರು
೪. ಶ್ರೀ ಶೇಖರಪೂರ್ಣ, ಕನ್ನಡ ಸಾಹಿತ್ಯ ಡಾಟ್ ಕಾಂ ಸ್ಥಾಪಕರು
೫. ಶ್ರೀ ಡೇವಿಡ್ ಬಾಂಡ್, ಸಿನಿಮಾ ಇತಿಹಾಸಕಾರರು
ದಿನಾಂಕ: ಜನವರಿ ೧೦,೧೧,೧೨
ಸ್ಥಳ: ಓದೇಕರ್ ಎಸ್ಟೇಟ್, ತುಮಕೂರಿನ ಬಳಿ (ಬೆಂಗಳೂರಿನಿಂದ ೯೦ ಕಿಲೋ ಮೀಟರ್ ಗಳು)
ಶುಕ್ರವಾರ ಸಂಜೆಯಿಂದ ಪ್ರಾರಂಭವಾಗಿ ಭಾನುವಾರ ಮಧ್ಯಾನದವರೆಗೆ ನಡೆಯಲಿರುವ ಶಿಬಿರದಲ್ಲಿ ಊಟೋಪಚಾರ ಹಾಗೂ ವಸತಿ ಖರ್ಚು ಒಬ್ಬ ಅಭ್ಯರ್ಥಿಗೆ ೧೦೦೦/- (ಒಂದು ಸಾವಿರ) ರುಪಾಯಿ. ಐವತ್ತು ಜನರಿಗಷ್ಟೇ ಸ್ಥಳಾವಕಾಶ ಇರುವುದರಿಂದ, ಮೊದಲು ನೊಂದಾಯಿಸಿಕೊಂಡವರಿಗೆ ಆದ್ಯತೆ.
ನೊಂದಾವಣೆಗಾಗಿ ಈ ಕೆಳಗಿನ ಲಿಂಕ್ ನೋಡಿ http://samvaada.com/themes/article/395/hundred-years
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ಕಿರಣ್ ಎಂ. 9731755966 ಸುಪ್ರೀತ್ ಕೆ.ಎಸ್. 7795272199 ಹೇಮಾ ಪವಾರ್ 9916217766





0 Comments