ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂತೆಬೆನ್ನೂರು ಫೈಜ್ನಟ್ರಾಜ್ ಅವರಿಗೆ ವಿಭಾ ಪ್ರಶಸ್ತಿ

2025 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಮಡಿಲ ಕೂಸಿಗೆ ಮಣ್ಣಿನ ಸೆರಗು’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ವಿಮರ್ಶಕರಾದ ಡಾ. ಸಿರಾಜ್ ಅಹಮದ್ ಮತ್ತು ಡಾ. ವಿಜಯಾ ಗುತ್ತಲ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು.

‘ನಮ್ಮ ಈ ಕಾಲದ ಎಲ್ಲ ತಲ್ಲಣ ಮತ್ತು ಆತಂಕಗಳಿಗೆ ಒಂದು ಕ್ರಿಯಾಶೀಲವಾದ ಪ್ರತಿಕ್ರಿಯೆಯಾಗಿ ತುಂಬ ವಿಭಿನ್ನ ನೆಲೆಯ ಕಾವ್ಯಗುಣಗಳನ್ನು ಹೊಂದಿರುವುದರಿಂದ ಮತ್ತು ಪ್ರಸ್ತುತ ಸಮಾಜದಲ್ಲಿ ತಲೆದೋರಿರುವ ಅನೇಕ ವೈರುಧ್ಯಗಳು ವೈಯಕ್ತಿಕ ಅಥವಾ ಸಾಮಾಜಿಕ ಎರಡಕ್ಕೂ ಸಮಾನವಾಗಿ ಸ್ಪಂದಿಸುವ ಗುಣ ಹೊಂದಿರುವುದರಿಂದ ‘ಮಡಿಲ ಕೂಸಿಗೆ ಮಣ್ಣಿನ ಸೆರಗು’ ನಮ್ಮ ಆಯ್ಕೆ’ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ.

ಕವಿ ಪರಿಚಯ :
ಸಂತೆಬೆನ್ನೂರು ಫೈಜ್ನಟ್ರಾಜ್ ಹುಟ್ಟಿದ್ದು 1972 ರಲ್ಲಿ, ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕು ಸಂತೆಬೆನ್ನೂರಿನಲ್ಲಿ. ದಾವಣಗೆರೆಯ ಡಯಟ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕಥೆ, ಕವಿತೆ, ಪ್ರಬಂಧ, ಮಕ್ಕಳ ಸಾಹಿತ್ಯ, ಹೀಗೆ ವಿವಿಧ ಪ್ರಕಾರಗಳಲ್ಲಿ ಆಸಕ್ತಿಯುಳ್ಳವರು. ಈಗಾಗಲೇ 14 ಕೃತಿಗಳು ಹೊರಬಂದಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.

‍ಲೇಖಕರು Admin

26 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading