ಕರ್ನಾಟಕ ಮಾತ್ರವಲ್ಲ, ಈ ದೇಶ ಕಂಡ ಮಹಾನ್ ಸಂಶೋಧಕ ಷ .ಶಟ್ಟರ ಅವರು ಇನ್ನಿಲ್ಲ ,
ಕಳೆದ ಒಂದು ವಾರದಿಂದ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಇದ್ದ ಅವರು ಚೇತರಿಸುತ್ತಿದ್ದಾರೆನ್ನುವಾಗಲೇ ನಮ್ಮನ್ನು ಅಗಲಿದ್ದಾರೆ.
ಇದು ಇತಿಹಾಸ ಅಧ್ಯಯನ, ಸಂಶೋಧನಾ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ
ಡಾ. ಎಂ.ಎಂ ಕಲಬುರ್ಗಿ ಮತ್ತು ಚಿದಾನಂದಮೂರ್ತಿ ಅವರಂತ ಹೆಸರಾಂತ ಇತಿಹಾಸಜ್ಞರನ್ನು ಕಳೆದುಕೊಂಡ ಕರ್ನಾಟಕ ಇಂದು ಇನ್ನೊಂದು ಮಹಾಚೇತನವನ್ನು ಕಳೆದುಕೊಂಡಿದೆ.
ಶಟ್ಟರ ಸರ್ ಅಧ್ಯಯನ ವ್ಯಾಪ್ತಿ, ಆಳ ಅಪರೂಪವಾದುದು.
ನಾನು ಸುಮ್ಮನೆ ಅವರಿಗೆ ಫೋನ್ ಮಾಡಿ ಸಲ್ಲೇಖನ ವ್ರತದ ಬಗ್ಗೆ ಹಾಗೂ ಸನ್ನತಿ ಶಾಸನಗಳ ಬಗ್ಗೆ ಕೇಳಿದಾಗ ತಾಸುಗಟ್ಟಲೆ ಮಾತಾಡಿ ವಿವರಿಸಿದ್ದರು.
ಜೈನರ ಸಲ್ಲೇಖನದ ಮಾತ್ರವಲ್ಲ ದ್ರಾವಿಡ ಭಾಷೆಗಳ ಬಗ್ಗೆ ಅವರು ಅಧ್ಯಯನ ನಡೆಸಿ ಬರೆದ ಪುಸ್ತಕಗಳು ವಿಶ್ವದ ಗಮನ ಸೆಳೆದಿವೆ.
-ಸನತ್ ಕುಮಾರ್ ಬೆಳಗಲಿ







0 Comments