ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀಪಾದ್ ಭಟ್ ಅವರ ಈ ನಾಟಕ ಮಿಸ್ ಮಾಡಿಕೊಂಡರೆ ಅದಕ್ಕಿಂತ ದೊಡ್ಡ ನಷ್ಟ ಇನ್ನೊಂದಿಲ್ಲ..

ಪ್ರೀತಿ ನಾಗರಾಜ್ 

’ಕೆಂಪು ಕಣಗಿಲೆ’ ಅಥವಾ Blood Oleanders ಅಥವಾ ಬಂಗಾಲಿ ಮೂಲದ ’ರಕ್ತ ಕೊರೊಬಿ’ ಟ್ಯಾಗೋರರ ನಾಟಕ.

Where the mind is without fear, where the head is held high… (ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ…) ಇದೇ ನಾಟಕದಲ್ಲಿ ಅಳವಡಿಸಲಾದ ಹಾಡು.

ಈ ನಾಟಕ ಬಹಳ ಕ್ಲಿಷ್ಟ ಪ್ರತಿಮೆಗಳಿಂದ ಕೂಡಿರುವುದರಿಂದ ಹಾಗೂ ರಾಜಕೀಯ-ಧರ್ಮ-ವ್ಯವಸ್ಥೆ-ಜನ ಎಲ್ಲ ಬಗೆಯ ಸಂಘರ್ಷಗಳನ್ನು ಬಹಳ ಮೆಟಫರಿಕಲ್ ಆಗಿ ಮುಂದಿಡುತ್ತಾ ಹೋಗುವುದರಿಂದ ಈ ನಾಟಕ ನಿರ್ದೇಶಿಸುವುದು ಎಲ್ಲ ನಿರ್ದೇಶಕರ ಕನಸಾದರೂ ಈ ನಾಟಕವೆಂಬ ಮೋಹಿನಿ ದಕ್ಕುವುದು ಅವಳನ್ನು ಒಲಿಸಿ ಓಲೈಸಿದವರಿಗೆ ಮಾತ್ರ.

ಅವಧಿ ಪ್ರಸ್ತುತಪಡಿಸುವ ಶ್ರೀಪಾದ ಭಟ್ಟರ ನಾಟಕೋತ್ಸವದಲ್ಲಿ ಈ ನಾಟಕ ಮೈಸೂರಿನ ’ನಟನ’ ತಂಡದಿಂದ ಪ್ರದರ್ಶನಗೊಳ್ಳಲಿದೆ.

ಶ್ರೀಪಾದ ಭಟ್ಟರು ನಿರ್ದೇಶಿಸಿರುವ ಈ ನಾಟಕ ನಡೆಯುವುದು ರಂಗದ ಮೇಲಾದರೂ ಅದು ಬೆಳೆದು ಪ್ರತಿದ್ವನಿಸುವುದು ಮಾತ್ರ ಪ್ರೇಕ್ಷಕನ ಎದೆಯಲ್ಲಿ.

ಅದರ ಟೆಕ್ನಿಕಲ್ ರಿಹರ್ಸಲ್ ಇತ್ತು. ಕೆಲವೊಮ್ಮೆ ಹೂವಾಗಿ, ಮತ್ತೊಮ್ಮೆ ಎದೆ ಹೊಕ್ಕು ಕೊಲ್ಲುವ ಗುಂಡಾಗಿ, ಮರುಕ್ಷಣ ಹಾಡಾಗಿ ಮತ್ತೆ ಮತ್ತೆ ಕಾಡುವ ಪ್ರೇಮಿಯಂತೆ ಭಾಸವಾಗುವ ಈ ನಾಟಕ ಯಾಕೋ ಬಹಳ ಆಪ್ತವೆನಿಸಿಬಿಟ್ಟಿತು.

ಸಂಗೀತವಂತೂ ಅಬ್ಬಾ! ಹಾಡುವ ಧ್ವನಿಯ ಗುಂಗು ಇಳಿಯೋದೇ ಇಲ್ಲವೇನೋ ಎನ್ನಿಸುವ ಹಾಗೆ ಇದೆ.

ನಾಟಕದ ಪ್ರತೀ ಅಂಶವೂ ಎಷ್ಟು ರುಚಿಕಟ್ಟಾಗಿದೆ ಅಂದರೆ ಇದನ್ನ ಮಿಸ್ ಮಾಡಿಕೊಂಡರೆ ಅದಕ್ಕಿಂತ ದೊಡ್ಡ ನಷ್ಟ ಇನ್ನೊಂದಿಲ್ಲ.

ಮಂಡ್ಯ ರಮೇಶ್ ಅವರು ಕಟ್ಟಿರುವ ಪ್ರತಿಭಾವಂತರ ತಂಡದ ಜೊತೆ ಶ್ರೀಪಾದ ಭಟ್ಟರ ಇಂಟೆನ್ಸಿಟಿ ಸೇರಿಕೊಂಡು ನಾಟಕ ಹೆಂಗೆ ತಯಾರಾಗಿದೆ ಅಂದ್ರೆ ಹಂಗಿಂಗಲ್ಲ!

ಪ್ಲೀಸ್ ಮಿಸ್ ಮಾಡ್ಕೋಬೇಡಿ. ಬೆಂಗಳೂರಿನಲ್ಲಿ ಅವಧಿ ನಾಟಕೋತ್ಸವದ ಅಂಗವಾಗಿ ಕೆಂಪು ಕಣಗಿಲೆ ಜೂನ್ 16ಕ್ಕೆ ರಂಗಶಂಕರದಲ್ಲಿ ಪ್ರದರ್ಶನವಾಗುತ್ತೆ. ಬಿಟ್ಟದ್ದು ಬಿಟ್ಟು ನಾಟಕ ನೋಡಿ.

‍ಲೇಖಕರು avadhi

8 June, 2017

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading