ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೋಭಾ ದಿನೇಶ್ ಹೊಸ ಕವಿತೆ- ಅವನು ಆತ್ಮ ಬಂಧು

ಶೋಭಾ ದಿನೇಶ್

*

ನಿಲುಕಲೊಲ್ಲದ ಬದುಕಿಗೆ ಬೆನ್ನು ತಿರುಗಿಸಿದಾಗಲೆಲ್ಲ
ಅವನು ಧುತ್ತೆಂದು ಎದುರಾಗಿದ್ದಾನೆ,
ಬದುಕು ಬರೀ ಸಂಕಟಗಳ ಸಂತೆಯಲ್ಲ
ಸಂಭ್ರಮದ ಜಾತ್ರೆಯೂ ಕೂಡಾ ಎಂದು ಉಸುರುತ್ತಾನೆ

ಕಿಕ್ಕಿರಿದ ಮೆಟ್ರೋದಲ್ಲಿ, ತುಂಬಿದ ಚಿತ್ರ ಸಂತೆಯ ಕಾರಿಡಾರುಗಳಲ್ಲಿ
ಕೈ ಹಿಡಿದು ಇನ್ನಿಲ್ಲದ ಧೈರ್ಯ ತುಂಬಿದ್ದಾನೆ
ಬದುಕು ಸವಾಲುಗಳನ್ನು ತಂದೊಡ್ಡಿದ್ದಾಗಲೆಲ್ಲ
“ನಾನಿದ್ದೇನೆ” ಎಂದು ಭರವಸೆಗೈದಿದ್ದಾನೆ

ಅಂದ ಹಾಗೇ ಅವರೆಲ್ಲರೂ ಈ ಸಂಬಂಧಕ್ಕೇನು ಹೆಸರು ಎಂದು ಕೇಳುತ್ತಾರೆ
ಬಳಸಿ ಬಳಸಿ ಸವಕಲಾಗಿರುವ “ಒಳ್ಳೆಯ ಫ್ರೆಂಡ್” ಎಂದು ಬಿಡಲೇ
ಆಗೆಲ್ಲ ನಕ್ಕು ಸುಮ್ಮನಾಗುತ್ತೇನೆ ಮತ್ತು ಬುದ್ದ ಸಹನೆಗೆ ಜಾರುತ್ತೇನೆ
ಸಂಬಂಧಗಳಿಗೆ ಹೆಸರಿಡಲು ಈ ಜಗತ್ತು ತುದಿಗಾಲಿನಲ್ಲಿ ನಿಂತಿದೆ

ಅವನು ಆತ್ಮ ಬಂಧು
ನನ್ನ ತಾಕುವುದಿಲ್ಲ, ತಾಕಿ ಕೊಳೆ ಮಾಡುವುದಿಲ್ಲ
ಹಸಿದವನಂತೆ ಪಹರೆ ತಿರುಗುವುದಿಲ್ಲ
ಬದುಕಿನ ಯಾವುದೋ ಬಿಂದುಗಳಲ್ಲಿ ಇಂತಹ ಆತ್ಮಬಂಧುಗಳು ಸಂಧಿಸುತ್ತಾರೆ.

‍ಲೇಖಕರು avadhi

12 March, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading