ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೆಲ್ ಕಂ ಟು ಬ್ಲಾಗಮಂಡಲ

ಕೆ ಪಿ ಈಶಾನ್ಯೆ ಆರ್ಥಾತ್ ಕುಪ್ಪಳ್ಳಿ ಪೂರ್ಣಚಂದ್ರ ತೇಜಸ್ವಿ ಈಶಾನ್ಯೆ ‘ಜೀವ ಜಾಲ’ದ ಮೂಲಕ ಬ್ಲಾಗ್ ಲೋಕ ಪ್ರವೇಶಿಸಿದ್ದಾರೆ. ಈಶಾನ್ಯೆ ಅವರನ್ನು ತೇಜಸ್ವಿ ಮಗಳು ಅಂತ ಪರಿಚಯಿಸುವುದು ಸರಿಯಾ ಗೊತ್ತಿಲ್ಲ. ಆದರೆ ಇಡೀ ಜಗತ್ತನ್ನು ತೇಜಸ್ವಿ ಮೂಲಕವೇ ನೋಡಲು ಇಷ್ಟಪಡುವ ದೊಡ್ಡ ಬಳಗಕ್ಕೆ ಈಶಾನ್ಯೆ ತೇಜಸ್ವಿ ಅವರ ಮಗಳು ಎಂದರೆ ಖಂಡಿತಾ ಖುಷಿಯಾಗುತ್ತದೆ ಅಷ್ಟೇ ಅಲ್ಲ, ಸದಾ ಹೊಸ ಮಾಧ್ಯಮಗಳನ್ನು ಅಭಿವ್ಯಕ್ತಿಗೆ ಬಳಸಿಕೊಳ್ಳಲು ತುಡಿಯುತ್ತಿದ್ದ ತೇಜಸ್ವಿ ಅವರ ಮುಂದುವರಿದ ಭಾಗದಂತೆ ಅನಿಸುತ್ತದೆ.
ಈಶಾನ್ಯೆ ಮತ್ತು ‘ಅವಧಿ’ ಒಡನಾಟ ತುಂಬಾ ಹಿಂದಿನದು. ತೇಜಸ್ವಿ ಕುರಿತ ಗುಜ್ಜಾರ್ ಕಾರ್ಟೂನ್ ಗಳು ‘ಅವಧಿ’ಯಲ್ಲಿ ಕಂಡಾಗ ಈಶಾನ್ಯೆ ಪ್ರತಿಕ್ರಿಯೆ ಬರೆದರು. ಆ ಪ್ರತಿಕ್ರಿಯೆ ಇಲ್ಲಿದೆ. ಅಲ್ಲದೆ ಅವರ ಜೀವಜಾಲ ಬ್ಲಾಗ್ ನಲ್ಲಿ ಬರೆದಿರುವ ಲೇಖನವನ್ನೂ ಪ್ರತ್ಯೇಕವಾಗಿ ಕೊಟ್ಟಿದ್ದೇವೆ- ಅಂದಿನಿಂದ ಇಂದಿನವರೆಗೆ ಈಶಾನ್ಯೆ ಮೌನವಾಗಿಯೇ ‘ಅವಧಿ’ ಬೆಳವಣಿಗೆ ಜೊತೆ ಇದ್ದಾರೆ. ವೆಲ್ ಕಂ ಟು ಬ್ಲಾಗಮಂಡಲ.

ಗುಜ್ಜಾರಪ್ಪ ಬಗ್ಗೆ ಯೋಚಿಸಿದಾಗೆಲ್ಲ ನನಗೆ ನಗು ಉಕ್ಕಿ ಬರುತ್ತದೆ. ಅದಕ್ಕೆ ಕಾರಣ, ನನ್ನ ತಂದೆ ತೇಜಸ್ವಿಯವರ ಕೆಲವು ಅತ್ಯುತ್ತಮ ಕಾರ್ಟೂನ್ ಗಳನ್ನು ಬರೆದವರು ಗುಜ್ಜಾರಪ್ಪ. ಆವುಗಳಲ್ಲಿನ ಪ್ರತಿಯೊಂದು ವಿವರವೂ ತೇಜಸ್ವಿಯವರ ಹೂಬೇಹೂಬು ಎಂಬಷ್ಟು ಖುಷಿ ಬುಗ್ಗೆಯನ್ನು ಚಿಮ್ಮಿಸುವಂಥದ್ದು. ಅವು ಯಾವತ್ತೂ ನನಗೆ ಕಚಗುಳಿಯಡುವಂಥವು. ಇರುವುದನ್ನು ಕಲಾತ್ಮಕ ಬಗೆಯಲ್ಲಿ ಹಾಹಾಗೇ ಅಭಿವ್ಯಕ್ತಿಸುವ ಗುಜ್ಜಾರಪ್ಪ ಚಳಕ ನಿಜಕ್ಕೂ ಅದ್ಭುತ.
-ಕೆ ಪಿ ಈಶಾನ್ಯೆ

‍ಲೇಖಕರು avadhi

3 October, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading