ದೃಷ್ಠಿ-ಸೃಷ್ಠಿ
ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ 18.08.2013
ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಧಾರವಾಡದಲ್ಲಿ ಹವ್ಯಾಸಿ ಛಾಯಾಗ್ರಹಣ ಕಲಾವಿದರು ಮೂರು ದಿನ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಸರಕಾರಿ ಕಲಾ ಶಾಲೆ (ಆರ್ಟ ಗ್ಯಾಲರಿ)ಯಲ್ಲಿ ಏರ್ಪಡಿಸಿದ್ದಾರೆ ಚಿತ್ರಕಲೆ, ಶಿಲ್ಪಕಲೆ ಮತ್ತು ಛಾಯಾಚಿತ್ರಗಳು ನಮ್ಮ ಇತಿಹಾಸದ ಅಧ್ಯಯನದಲ್ಲಿ ತಮ್ಮದೇ ಆದ ಮಹತ್ತರ ಕೊಡುಗೆಯನ್ನು ನೀಡುತ್ತಿವೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಈ ಕಲೆಯನ್ನು ಮತ್ತು ಕಲೆಯನ್ನು ಸವಿಯುವ ರಸಿಕರನ್ನು ಬೆಳೆಸುವ ಆಲೋಚನೆಯಿಂದ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರದರ್ಶನ 18-8-2013 ರಿಂದ ಮೂರು ದಿನಗಳ ಕಾಲ ಸರಕಾರಿ ಆಟರ್್ ಗ್ಯಾಲರಿಯಲ್ಲಿ ಏರ್ಪಡಿಸಿದ್ದು ಶಾಲಾ ಮಕ್ಕಳು ಮತ್ತು ಯುವಕರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀ ರವೀಂದ್ರ ಪಾಟೀಲರವರು ಸಂಗ್ರಹಿಸಿರುವ 50ಕ್ಕೂ ಹೆಚ್ಚು ವಿವಿಧ ಮಾದರಿಯ ಕ್ಯಾಮರಾಗಳನ್ನು ವೀಕ್ಷಿಸುವುದರೊಂದಿಗೆ ಹೆಚ್ಚಿನ ಮಾಹಿತಿಯನ್ನು ಸಹಿತ ಪಡೆದುಕೊಳ್ಳಬಹುದಾಗಿದೆ .
ಈ ಪ್ರದರ್ಶನದಲ್ಲಿ ಹವ್ಯಾಸಿ ಛಾಯಾಚಿತ್ರಗ್ರಾಹಕರಾದ ಶ್ರೀ ಅನಿಲಕುಮಾರ ಕಿತ್ತೂರ, ಶ್ರೀಮತಿ ವಷರ್ಾ ಸ್ಯಾಮುಯೆಲ್, ಶ್ರೀ ಭರತ ಯರಗಟ್ಟಿ, ಶ್ರಿ ರಾಜು ಹಿರೆಮಠ, ಡಾ. ಶ್ರೀನಿವಾಸ ಪೈ, ಶ್ರೀ ಶ್ರೀನಿವಾಸ ಮಾಲಜಿ, ಶ್ರೀ ಪ್ರೀತಮ್ ಮಾಲಜಿ, ನವ್ಯಾ ಕಡಮೆ, ಪ್ರಿಯಾಂಕಾ ಜಮಖಂಡಿ, ರಜನಿ ದಾಸ, ಶ್ರೀ ಹರೀಶ ಆಮೂರ, ಶ್ರೀ ಮಧು ಕದಮ, ಶ್ರೀ ಸಾದಿಕ್ ಇಲಕಲ್, ಇವರ ಛಾಯಾಚಿತ್ರಗಳನ್ನು ಕಾಣಬಹುದಾಗಿದೆ.






0 Comments