ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶ್ವರೂಪಂ – ನೋಡಲೇಬೇಕಾದ ಚಿತ್ರ!

ವಿಶ್ವ ರೂಪಮ್…… !!!

ಪ್ರಕಾಶ್ ಹೆಗ್ಡೆ

ನಿಜಕ್ಕೂ ನೋಡಬೇಕಾದ ಸಿನೇಮಾ…

 
ಅವನ ಈ ಹಿಂದಿನ ಸಿನೇಮಾ ನನಗೆ ಇಷ್ಟವಾಗಿರಲಿಲ್ಲ…
 
ಸಾಗರ್ ಸಂಗಮ್.. ಸ್ವಾತಿ ಮುತ್ಯಮ್.. ಮೂನ್ರಾಮ್ ಪಿರ್ರೈ..
ನಾಯಕನ್…
ವಾಹ್…. !!
ಅಂದಿನ ಕಮಲ್ ಕಳೆದು ಹೋಗಿದ್ದಾನೆ ಅಂದುಕೊಂಡುಬಿಟ್ಟಿದ್ದೆ….

ಇಲ್ಲ..
ಖಂಡಿತ ಇಲ್ಲ….!
ಆತ ಮತ್ತೆ ಎದ್ದು ಬಂದಿದ್ದಾನೆ… ವಿಶ್ವರೂಪಮ್ ನಲ್ಲಿ… !
 
ಕಮಲ್ ಹಾಸನ ಪ್ರತಿಭೆ..
ಅವನ ಪ್ರಯತ್ನ,,
ಶೃದ್ಧೆ ಪ್ರತಿಯೊಂದು ಪ್ರೇಮಿನಲ್ಲಿ ಎದ್ದು ಕಾಣುತ್ತದೆ… !
 
ಅದರಲ್ಲೂ ತಾಲಿಬಾನಿನ ಚಿತ್ರಣ ಅತ್ಯದ್ಭುತ !!
 
ಸಿನೇಮಾ ಮುಗಿಸಿ ಬಂದಮೇಲೂ ಈ ಸಿನೇಮಾ ಕಾಡುತ್ತದೆ….
 
ಹಿಂಸೆ ಇಲ್ಲದೆ ಈ ಜಗತ್ತು ಇರಲಾರದೆ?
ಇರಬಾರದೆ?
 
ಅಪಘಾನಿಸ್ತಾನಕ್ಕೆ ನಿಜಕ್ಕೂ ಏನು ಬೇಕಾಗಿದೆ?
 
ರಷ್ಯನ್ನರು.. ಅಮೇರಿಕನ್ನರು…
ಕಂಡ ಕಂಡವರೆಲ್ಲ ಆದೇಶದ ಮೇಲೆ ದಾಳಿ ಮಾಡುತ್ತಾರೆ…
 
ಯಾಕೆ ಆದೇಶ ಹಾಗಿದೆ?
 
ಇಂಗ್ಲೀಷ್ ಸಿನೇಮಾದ ಅದ್ದೂರಿತನ ಇಲ್ಲಿ ಎದ್ದು ಕಾಣುತ್ತದೆ…
ಪ್ರತಿಯೊಬ್ಬರ ಅಭಿನಯ ಸೂಪರ್ !!
 
ನಿರ್ದೇಶಕ ಕಮಲ್ ಗೆದ್ದಿದ್ದಾನೆ…
 
ಹಾಗಾದರೆ ಈ ಸಿನೇಮಾದಲ್ಲಿ ದೋಷಗಳೇ ಇಲ್ಲವೆ?
 
ಇದೆ…
 
ಸಿನೇಮಾದ ಆರ್ಭಟಕ್ಕೆ..
ಅದ್ದೂರಿತನಕ್ಕೆ..
ಮುಕ್ತಾಯ ಇನ್ನೂ ಸ್ವಲ್ಪ ಜಬರದಸ್ತ್ ಇರಬೇಕಾಗಿತ್ತು… ಅಂತ ಅನ್ನಿಸಿತು..
 
ನಮ್ಮ ಕಮಲ್ ಗೆ ಭೇಷ್ ಹೇಳಿ ಬನ್ನಿ…
ಅವನ ಪ್ರಯತ್ನಕ್ಕೆ ಜೈ ಎಂದು ಬನ್ನಿ..
 
ಕೊನೆಯಲ್ಲಿ ಒಂದು ಮಾತು …
ಇಲ್ಲಿ ಯಾರಿಗೂ ಮನ ನೋಯಿಸುವಂಥಾದ್ದು ಏನೂ ಇಲ್ಲ….
 
ನಾವು ಅಪಘಾನಿಸ್ತಾನಕ್ಕೆ ಹೋಗುವ ಕನಸು ಕೂಡ ಕಾಣುವದಿಲ್ಲ…
ಒಮ್ಮೆ ಅಪಘಾನಿಸ್ತಾನಕ್ಕೆ ಹೋಗಿಬನ್ನಿ…
ಪುರಾಣದಲ್ಲಿ ಅದು “ಗಾಂಧಾರ” ದೇಶವಾಗಿತ್ತಂತೆ…
(ಗಾಂಧಾರಿಯ ತವರು ಮನೆ…)
ಅಲ್ಲಿನ ಚಿತ್ರಣ ನೋಡಿ ಬನ್ನಿ…
 
ಭಯ ಹುಟ್ಟಿಸುವಂಥಹ
ಅತ್ಯದ್ಭುತ ಚಿತ್ರಣ… ಲೊಕೇಷನ್….
 
ಒಂದು ಅತ್ಯುತ್ತಮ ಸಿನೇಮಾ….

 

‍ಲೇಖಕರು avadhi-sandhyarani

1 February, 2013

10 Comments

  1. Manjula Narayanarao

    Yes it is really nice. Nice review

  2. Gopaal Wajapeyi

    ಸಿನೆಮಾ ವಿಮರ್ಶೆ ಹೀಗಿದ್ದರೆ ಚನ್ನ… ಚಿತ್ರವನ್ನು ನೋಡಬೇಕೆಂಬ ಕುತೂಹಲವನ್ನು ಹೆಚ್ಚಿಸುವಂತಿದೆ ಪ್ರಕಾಶ್ ಜಿ ನಿಮ್ಮ ಬರಹ.

  3. prakash hegde

    ಪ್ರೀತಿಯ ಅವಧಿಗೆ ಜೈ ಹೋ……………….. !!

  4. Pramod

    ಚಿತ್ರ ನೋಡಬೇಕು.
    ಈ ಅಪ್ಘನ್ ನಿ೦ದ ಭಾರತ ತೊ೦ದರೆ ಅನುಭವುಸಿದ್ದು ಪುರಾಣದಿ೦ದಲೇ ಸಾಬೀತಾಗಿದೆ. 🙂

  5. Malathesh Urs Hartimath

    ಮಾತನಾಡುವುದಕ್ಕೆ, ಬರೆಯುವುದಕ್ಕೆ ಎಂಥ ಇದೆ ಮಾರಾಯ್ರೇ…
    ಸೂಪರ್ ಸೂಪರ್ ಸೂಪರ್ ಅನ್ನಬೇಕಷ್ಟ………..

  6. bmbasheer

    ಆಫ್ಘನ್ ದೇಶ ಯಾಕೆ ಹೀಗೆ ? ಆಫ್ಗಾನ್ ದೇಶದ ಮೇಲೆ ಆಗಿರುವ ಭೀಕರ ಗಾಯಗಳನ್ನು ತಿಳಿಯದೆ ಈ ಪ್ರಶ್ನೆಗೆ ಉತ್ತರ ದೊರಕೋದು ಕಷ್ಟ….ಆಫ್ಘಾನ್ನ ಕಾಬುಲ್ ನ್ನು ನಾನು ಮೊದಲು ಪರಿಚಯ ಮಾಡಿಕೊಂಡದ್ದು ಟಾಗೋರರ ಕಾಬೂಲಿವಾಲ ಕತೆಯ ಮೂಲಕ. ಕಾಬೂಲಿವಾಲನ ಹೃದಯವಂತಿಕೆ ನನಗೆ ಕಾಬುಳನ್ನು ಇಷ್ಟವಾಗುವಂತೆ ಮಾಡಿತ್ತು. ಅಂತಹ ಕಾಬೂಲನ್ನು ದೊಚಿದವರು ಒಂದಿಬ್ಬರೇ? ರಷ್ಯನ್ನರು, ಬ್ರಿಟಿಷರು, ಅಮೇರಿಕ…ತನ್ನ ಸ್ವಾತಂತ್ರ್ಯಕ್ಕಾಗಿ ಬದುಕಿನುದ್ಧಕ್ಕೂ ಯುದ್ಧವನ್ನು ನೆಚ್ಚಿಕೊಂಡ ದೇಶ ಹೇಗಿರಬೇಕೋ ಹಾಗೆ ಇದೆ ಆ ದೇಶ….ಎಲ್ಲಿ ಯುದ್ಧ ನಡೆಯುತ್ತಿರುತ್ತದೋ ಅಲ್ಲಿಯ ಮಕ್ಕಳಿಗೆ ಶಸ್ತ್ರ ಬಳಸೋದನ್ನು ಕಳಿಸಬೇಕೆ ಹೊರತು ಅ, ಆ, ಇ, ಈ ಅಲ್ಲ. ಅಲ್ಲಿಯ ಮಕ್ಕಳು ಶಾಸ್ತ್ರದ ಬದಲು ಶಸ್ತ್ರದ ಕುರಿತಂತೆ ಆಸಕ್ತಿ ತೋರಿಸುತ್ತಿದ್ದರೆ ಅದಕ್ಕೆ ಕಾರಣ ಆ ನಾಡನ್ನು ದೋಚಿದ, ದೋಚುತ್ತಿರುವ ಶತ್ರು ದೇಶಗಳೇ ಹೊರತು…ಆಫ್ಗಾನ್ ಅಲ್ಲ….೩೦ರ ದಶಕದಲ್ಲಿ ಫೆಲೆಸ್ತಿನ್ ಕುರಿತಂತೆ ಗಾಂಧೀ ಒಂದು ಮಾತನ್ನು ಹೇಳಿದ್ದರು…”ಯುರೋಪಿಯನ್ನರು ಏಷ್ಯಾದ ಎದೆಯ ಮೇಲೆ ನೆಟ್ಟ ಚೂರಿ ಇಸ್ರೇಲ್… ”
    ಆಫ್ಘಾನ್ ಸ್ಥಿತಿ ಇದಕ್ಕಿಂತ ಭಿನ್ನವೇನು ಅಲ್ಲ….ಚಿತ್ರ ಅಷ್ಟೇನೂ ಚೆನ್ನಾಗಿಲ್ಲ ಎಂದು ನನ್ನ ಸಿನಿಮ ಗೆಳೆಯನೊಬ್ಬ ಹೇಳಿದ ಕಾರಣ, ಬರೆ ವಿವಾದವನ್ನು ಇಟ್ಟುಕೊಂಡು ಸಿನಿಮ ನೋಡೋದು ಬೇಡ ಎಂದು ಬಿಟ್ಟು ಬಿಟ್ಟಿದ್ದೆ….ನೀವೀಗ ಹೇಳಿದ್ದೀರಿ..ಸಿನಿಮ ಚೆನ್ನಾಗಿದೆ ಎಂದು…ಆದುದರಿಂದ ಖಂಡಿತ ನಾನು ನೋಡಬೇಕು.

  7. ಪು. ಸೂ . ಲಕ್ಷ್ಮೀನಾರಾಯಣ ರಾವ್

    ನಮಸ್ತೆ ಪ್ರಕಾಶ್ ,ನಾನು ಸಹ ಕಮಲ್ ರವರ ಅಭಿನಯವನ್ನು ಮೊದಲಿಂದಲು ಇಷ್ಟಪದುತ್ತಿದ್ದೇನೆ . ನಿಮ್ಮ ಬರಹ ಓದಿದ ಮೇಲೆ ಖಂಡಿತ ವಿಶ್ವರೂಪಂ
    ನೋಡಬೆಕೆನಿಸುತ್ತಿದೆ .
    ಬಿ.ಎಂ.ಬಷೀರ್ ರವರ ಪ್ರತಿಕ್ರಿಯೆ ಚೆನ್ನಾಗಿದೆ ,ಮನಕಲಕುವಂತಿದೆ . ಬಷೀರ್ ರವರೆ ಧನ್ಯವಾದಗಳು . ನೋಡಿ ನಾವು ಹೀಗೆ ಎಷ್ಟೋ ವಿಷಯಗಳನ್ನು
    ಸರಿಯಾಗಿ ತಿಳಿದುಕೊಳ್ಳದೆ ಏನೇನೋ ಸಂಶಯಗಳನ್ನು ಬೆಳಸಿಕೊಳ್ಳುತ್ತೇವೆ . ಮತ್ತೊಮ್ಮೆ ನಿಮಗೆ ವಂದನೆ .

  8. Badarinath Palavalli

    ಉತ್ತಮ ಚಿತ್ರಗಳನ್ನು ನೋಈಡುವಂತೆ ಪ್ರೋತ್ಸಾಹಿಸುವ ನಿಮ್ಮ ಪ್ರೀತಿ ಸದಾ ಹೀಗೇ ಇರಲಿ ಸಾರ್.
    ನಾನು ಸಾನು ವರ್ಗೀಸ್ ಅವರ ಛಾಯಾಗ್ರಹಣ ನೋಡಲು ಕಾತರನಾಗಿದ್ದೇನೆ. (ಅವರ ಇನನೊಂದು ಚಿತ್ರ ‘ಕಾರ್ತೀಕ ಕಾಲಿಂಗ್ ಕಾರ್ತಿಕ್’)

  9. G G Hegde Talekeri

    Tumba chennagide vimarshe.

  10. mallikarjuna

    ಕಮಲ್ ನಟರಷ್ಟೇ ಅಲ್ಲ…. ಉತ್ತಮ ಚಿಂತಕರೂ ಕೂಡ ಹೌದು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading