ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ವಿಳಾಸ ಇಲ್ಲದವರಿಗೆ’ ಸಿರಿಗನ್ನಡ ಸಾಹಿತ್ಯ ಪ್ರಶಸ್ತಿ

ಬೆಳಗಾವಿ: ಕಥೆಗಾರ, ಪತ್ರಕರ್ತ ಗವಿಸಿದ್ಧ ಬಿ. ಹೊಸಮನಿ ಅವರ ಪುಸ್ತಕ  “ವಿಳಾಸ ಇಲ್ಲದವರ ಹುಡುಕುತ್ತ” ಕಥಾ ಸಂಕಲನವು (ಬೆಂಗಳೂರಿನ ಮೇಪ್ಲವರ್ ಪುಸ್ತಕ ಪ್ರಕಾಶನ)

ಬೆಳಗಾವಿಯ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ 2012-13ನೇ ಸಾಲಿನ ಸಿರಿಗನ್ನಡ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.



ಜೊತೆಗೆ ವಚನ ಸಾಹಿತ್ಯಕ್ಕಾಗಿ ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರಿಗೆ, ಮಹಾಕಾವ್ಯಕ್ಕಾಗಿ ಡಾ.ಪ್ರದೀಪಕುಮಾರಹೆಬ್ರಿ ಅವರಿಗೆ, ಮಕ್ಕಳ ಸಾಹಿತ್ಯಕ್ಕಾಗಿ ಎಂ.ಎ.ಸನದಿ ಹಾಗೂ ಸಾಹಿತ್ಯ ಮತ್ತು ಶಿಕ್ಷಣಕ್ಕಾಗಿ ಪುಂಡಲಿಕ ಪಾಟೀಲ ಮತ್ತು ಅನುವಾದಕ್ಕಾಗಿ ದೀಪಿಕಾ ಚಾಟೆ ಅವರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.
ಜೊತೆಗೆ ಸಿರಿಗನ್ನಡ ರಾಷ್ಟ್ರೀಯ ರತ್ನ ಪ್ರಶಸ್ತಿ ಹಾಗೂ ವರ್ಷದ ವ್ಯಕ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಚಲನಚಿತ್ರ ಹಿರಿಯ ಕಲಾವಿದ ಶಿವರಾಂ ಅವರಿಗೆ ಜೀವಮಾನದ ಸಾಧನೆಗಾಗಿ “ಸಿರಿಗನ್ನಡ ರಾಷ್ಟ್ರೀಯ ರತ್ನ” ಪ್ರಶಸ್ತಿ ನೀಡಲಾಗುತ್ತದೆ. ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾನಾ ಸಾಧಕರಿಗೆ “ಸಿರಿಗನ್ನಡ ವರ್ಷದ ವ್ಯಕ್ತಿ” ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಫೆ. 3ರಂದು ನಡೆಯುವ ಸಮಾವೇಶದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ತಿಳಿಸಿದ್ದಾರೆ.

‍ಲೇಖಕರು avadhi-sandhyarani

22 January, 2013

1 Comment

  1. Vithal Dalawai

    Abhinandanegalu geleya gavisidda avarige

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading