ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಬುರ್ಗಿ ವಿಶ್ವವಿದ್ಯಾಲಯ ನೀಡುವ ಕಲ್ಯಾಣ ಕರ್ನಾಟಕ ಪ್ರದೇಶದ ಪುಸ್ತಕ ಬಹುಮಾನ ಹಾಗೂ ಲೇಖಕ/ ಪ್ರಕಾಶಕರ ಗೌರವ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ.
‘ಅವಧಿ’ಯ ಲೇಖಕ ವಿಜಯಭಾಸ್ಕರ ರೆಡ್ಡಿ ಅವರ ‘ನೆನಪಿನ ಪಡಸಾಲೆ’ ಕವನ ಸಂಕಲನ ಕಪಿಲ ಪಿ ಹುಮನಾಬಾದೆ ಅವರ ‘ಹಾಣಾದಿ’ ಕಾದಂಬರಿ, ಮಲ್ಲಿಕಾರ್ಜುನ ಕಡಕೋಳ ಅವರ ‘ಯಡ್ರಾಮಿ ಸೀಮೆ ಕಥನಗಳು’ ಗೌರವಕ್ಕೆ ಪಾತ್ರವಾಗಿದೆ ಎಂದು ಕಲಬುರ್ಗಿ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಎಚ್ ಟಿ ಪೋತೆ ಅವರು ತಿಳಿಸಿದರು.
ಕನ್ನಡ ಸೃಜನ, ಸೃಜನೇತರ ಲೇಖಕರ ಕೃತಿಗಳಿಗೆ, ಜೀವನ ಕಥನ ಹಾಗೂ ಕನ್ನಡ ಪುಸ್ತಕ ಪ್ರಕಾಶಕರಿಗೆ, ಅನುವಾದ ಲೇಖಕರ ಕೃತಿಗೆ, ಸಮಾಜ ವಿಜ್ಞಾನ, ಜನಪದ ಕಲಾವಿದರಿಗೆ, ಚಿತ್ರ/ಶಿಲ್ಪಕಲಾವಿದರಿಗೆ, ಹಿಂದಿ, ಮರಾಠಿ, ಇಂಗ್ಲಿಷ ಹಾಗೂ ಉರ್ದು ಭಾಷಾ ಲೇಖಕರಿಗೆ ಗೌರವಧನ ನೀಡಲಾಗುತ್ತದೆ.
ನವೆಂಬರ್ ಕೊನೆಯ ವಾರದಲ್ಲಿ ವಿಶ್ವವಿದ್ಯಾಲಯದ ಕಾರ್ಯಸೌಧದ ‘ಮಹಾತ್ಮಾಗಾಂಧಿ ಸಭಾಂಗಣದಲ್ಲಿ’ ಆಚರಿಸಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕುಲಪತಿಗಳಾದ ಪ್ರೊ. ಚಂದ್ರಕಾಂತ ಯಾತನೂರ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದರು.

2019ರ ಪ್ರಶಸ್ತಿ ವಿಜೇತರು
ಕನ್ನಡ
ಸೃಜನಶೀಲ ವಿಭಾಗ
- ಯಾಕ ಚಿಂತಿ ಮಾಡತಿದಿ ಎಲೆ ಮನವೇ : ಡಾ. ಲಕ್ಷ್ಮಣ ಕೌಂಟೆ
- ಪುಲ್ವಾಮಾ : ಶ್ರೀ ಸುಬ್ರಾವ ಕುಲಕರ್ಣಿ, ಕಲಬುರಗಿ
- ಬೌದ್ಧ ನಾಟಕಗಳು-2 : ಶ್ರೀ ಈಶ್ವರ ಎಂ. ಇಂಗನ್
- ಮೌನದೊಳಗಿನ ಮಾತು : ಡಾ. ಬಸವರಾಜ ಪೂಜಾರ
- ಶಾಹಿರಿ ಮತ್ತು ಗಜಲ್ಗಳು : ಶ್ರೀ ಭೀಮಶೇನ ಎಂ. ಗಾಯಕವಾಡ
- ಹಾಣಾದಿ : ಶ್ರೀ ಕಪಿಲ ಪಿ. ಹುಮನಾಬಾದೆ
- ನೆನಪಿನ ಪಡಸಾಲೆ : ಶ್ರೀ ವಿಜಯಭಾಸ್ಕರ್ ಸೇಡಂ
- ದಿವ್ಯಾಂಗ ದೀಪ್ತಿ : ಡಾ. ಶಿವರಾಜ ಶಾಸ್ತ್ರಿ ಹೇರೂರು
ಸೃಜನೇತರ - ಯಡ್ರಾಮಿ ಸೀಮೆ ಕಥನಗಳು : ಶ್ರೀ ಮಲ್ಲಿಕಾರ್ಜುನ ಕಡಕೋಳ
- ಮೂರು ದೇಶ ನೂರೊಂದು ಅನುಭವ : ಶ್ರೀ ಸಿದ್ಧರಾಮ ಹೊನ್ಕಲ್
- ಪಯಣ : ಶ್ರೀ ವಾದಿರಾಜ ವ್ಯಾಸಮುದ್ರ
ಜಾನಪದ - ಜಾನಪದ ದರ್ಪಣ : ಡಾ. ಚಿ.ಸಿ. ನಿಂಗಣ್ಣ
ಜೀವನ ಕಥನ - ಬಸವಶ್ರೀ ಪೂಜ್ಯ ಸಿದ್ಧರಾಮ ಬೆಲ್ದಾಳ
ಶರಣರು ಮತ್ತು ವಚನ ಸಾಹಿತ್ಯ : ಡಾ. ಗಾಂಧೀಜಿ ಸಿ. ಮೊಳಕೇರಿ - ಶ್ರೀದತ್ತ ಭಾಗವತ : ಶ್ರೀ ಹಣಮಂತಪ್ಪ ವಲ್ಲೇಪುರೆ
ವಚನ ಸಾಹಿತ್ಯ - ಅರಿವೇ ಪ್ರಮಾಣು ಅಕ್ಕನಾಗಮ್ಮ ಜೀವನ ಕಾವ್ಯ : ಶ್ರೀ ಮಹಾಂತಪ್ಪ ನಂದೂರ
ಸಮಾಜ ವಿಜ್ಞಾನ






0 Comments