ಅಂಜಲಿ ರಾಮಣ್ಣ ಹಾಗು ನಾಗೇಶ್ ಬೆಟ್ಟಕೋಟೆ ಮುಖ್ಯ ಅತಿಥಿಗಳಾಗಿ ಬಂದಿದ್ದರು.ವಿಜಯನಗರಬಿಂಬದ ಹಳೆಯ ವಿದ್ಯಾರ್ಥಿಗಳು ವಿಜಯನಗರಬಿಂಬದ ೧೭ ವರ್ಷದ ವರಧಿಯನ್ನು ರಂಗರೂಪಕವಾಗಿ ಸೊಗಸಾಗಿ ಅಭಿನಯಿಸಿದರು. ಉದ್ಘಾಟನೆಯನ್ನು ವಿಭಿನ್ನವಾಗಿ ಮಾಡಲಾಯಿತು. ಅಂಜಲಿ ರಾಮಣ್ಣ ಪೋಷಕರಿಗೆ ಕಿವಿಮಾತು ಹೇಳಿದರು ’ಆಸಕ್ತಿಗೂ ಸಾಮರ್ಥ್ಯಕ್ಕೂ ವ್ಯತ್ಯಾಸ ಕಂಡುಕೊಳ್ಳಿ’ ಮಕ್ಕಳೂ ಎಲ್ಲವನ್ನು ಕಲೆಯಬೇಕು, ಎಲ್ಲವನ್ನು ಮಾಡಬೇಕು ಎಂದು ಮಕ್ಕಳಿಗೆ ಒತ್ತಡ ಹಾಕಬೇಡಿ ಎಂದು ಹೇಳಿದರು.ರಂಗಭೂಮಿಯಿಂದ ವ್ಯಕ್ತಿಯ ಸಂವಹನ ಕೌಶಲ್ಯವು ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು. ಮಕ್ಕಳನ್ನು ಸಹಜವಾಗಿ ಬೆಳೆಯಲು ಬಿಡಬೇಕು ಎಂದರು. ವಿಜಯನಗರಬಿಂಬದ ಕಾರ್ಯಕ್ರಮವನ್ನು ನೋಡುತ್ತ ಬಂದಿದ್ದು , ವಿಜಯನಗರಬಿಂಬ ಬಹಳಾ ಉತ್ತಮವಾದ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ ಎಂದು ಪ್ರೋತ್ಸಾಹದಮಾತುಗಳನ್ನಾಡಿದರು. ವಿಜಯನಗರಬಿಂಬಕ್ಕೆ ಸಹಾಯ ಮಾಡಲು ಸದಾ ಸಿದ್ದಾ ಎಂದರು. ನಾಗೇಶ್ ಬೆಟ್ಟಕೋಟೆ ವಿಜಯನಗರಬಿಂಬದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು. ಮಕ್ಕಳರಂಗಭೂಮಿ ಕ್ಶೀಣಿಸಿತ್ತಿದೆ ಎನ್ನುತ್ತಿದ್ದಾಗ ವಿಜಯನಗರಬಿಂಬ ಮಕ್ಕಳರಂಗಭೂಮಿಯಲ್ಲಿ ನಿರಂತರವಾಗಿ ಅದರ ಏಳಿಗೆಗಾಗಿ ದುಡಿಯುತ್ತಿದೆ. ೧೭ ವರ್ಷ ಸತತವಾಗಿ ಮಕ್ಕಳ ರಂಗ ಶಿಬಿರ, ಮಕ್ಕಳ ರಂಗ ಶಾಲೆ ನಡೆಸುವುದು ಸುಲಭದ ಕೆಲಸವಲ್ಲ. ವಿಜಯನಗರಬಿಂಬವು ನಿರಂತತೆಯನ್ನು ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರು. ಬೆಳಿಗ್ಗೆ ೯.೩೦ಕ್ಕೆ ಮಕ್ಕಳು ಶಿಬಿರಕ್ಕೆ ಬಂದಿದ್ದದ್ದು, ಸಂಜೆ ೪.೩೦ರ ವರೆಗೆ ಹಾಡು, ರಂಗಾಟಗಳು, ಎಲ್ಲದರಲ್ಲೂ ಭಾಗವಸಿಯು ಸಹ ಮಕ್ಕಳ ಉತ್ಸಾಹ, ಲವಲವಿಕೆ ಹೆಚ್ಚಾಗುತ್ತಿದ್ದನ್ನು ಕಂಡು ಅಚ್ಚರಿಯಾಯಿತು. ನಮಗೂ ಮಕ್ಕಳಂತೆ energy ಇರುವಂತಾದರೆ ಎಷ್ಟು ಚೆನ್ನ ಎಂದುಕೊಂಡೆ.