ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಪಾಸು ಪಡೆಯಬೇಕಾಗಿರುವುದು ನಿಬಂಧನೆಗಳನ್ನಲ್ಲ, ಇಡೀ ಯೋಜನೆಯನ್ನು..

ಕುಂಡಲದಲ್ಲಿ ಬೆಳೆಸಿದ ಸಾಹಿತ್ಯ ಮತ್ತು ಸಂಭ್ರಮ


ಅರುಣ್ ಜೋಳದಕೂಡ್ಲಿಗಿ

ದಾರವಾಡದ ಸಾಹಿತ್ಯ ಸಂಭ್ರಮದ ನಿಯಮ ನಿಭಂದನೆಯಗಳನ್ನು ವಾಪಾಸು ಪಡೆಯಲಾಗಿದೆ. ಇದು ಸಂಭ್ರಮವನ್ನು ವಿರೋಧಿಸುವವರ ಜಯಭೇರಿಯೇನಲ್ಲ. ಬದಲಾಗಿ ಸಾಹಿತ್ಯವನ್ನು ಜಾಗತೀಕರಣದ ಸರಕನ್ನಾಗಿ, ಓದುಗ/ಗಿ ಕೇಳುಗ/ಗಿ ವಲಯವನ್ನು ಗಿರಾಕಿಗಳನ್ನಾಗಿ ರೂಪಾಂತರಿಸುವ ಅಪಾಯಕಾರಿ ನಡೆಯನ್ನು ತಡೆಯುವ ಪ್ರಾಮಾಣಿಕ ಕಾಳಜಿ ಎಂದು ನಾನು ತಿಳಿದಿದ್ದೇನೆ. ಇದನ್ನು ಧಾ.ಸಾ.ಸಂ ಅರ್ಥ ಮಾಡಿಕೊಂಡರೆ, ವಾಪಾಸು ಪಡೆಯಬೇಕಾಗಿರುವುದು ನಿಯಮ ನಿಬಂಧನೆಗಳನ್ನಲ್ಲ, ಇಡೀ ಧಾ.ಸಾ.ಸಂ ದ ಕನಸು ಕಲ್ಪನೆ ಯೋಜನೆಯನ್ನು.
ನೋಡಿ, ಸಾಹಿತ್ಯವನ್ನು ಸಂಭ್ರಮ ಎನ್ನುವಲ್ಲಿಯೇ `ಮನೋರಂಜನೆ’ ಎಂಬ ಸ್ಪಷ್ಟನೆಯಿದೆ. ಮನೋರಂಜನೆ ಇರುವಲ್ಲಿ ದುಃಖ ದುಮ್ಮಾನಗಳು ಇರುವಂತಿಲ್ಲ. ಇಲ್ಲಿನ ಚರ್ಚೆಯ ಸಾಹಿತ್ಯದಲ್ಲಿ ನೋವಿರಕೂಡದು, ಸಂಕಟ ಸುಳಿಯಕೂಡದು, ವೇದನೆ ಅಲುಗಾಡದಂತಿರಬೇಕು. ಹಾಗಾದಲ್ಲಿ ಮಾತ್ರ ಸಂಭ್ರಮವಾಗಲು ಸಾದ್ಯವಿದೆ. ಧಾ.ಸಾ.ಸಂ ಆಹ್ವಾನಿಸಿದ ಬಹುಪಾಲು ಸಾಹಿತಿಗಳ ಸಾಹಿತ್ಯವೂ ಕೂಡ ಹೀಗೆ ಮನೋರಂಜನೆಯನ್ನು ಧಾರಾಳವಾಗಿ ಕೊಡುವಂತದ್ದೇ ಆಗಿದೆ. ಕಾರಣ ಕುಂಡಲದಲ್ಲಿ ಬೆಳೆದ ಸಾಹಿತ್ಯ  ಮನೋರಂಜನೆಯನ್ನು ಕೊಡಬಲ್ಲದು. ಜನರ ನೋವುಗಳ ಒಡಲೊಳಗಿಂದ ಹುಟ್ಟಿದ ಸಾಹಿತ್ಯಕ್ಕೆ ನಮ್ಮೊಳಗನ್ನು ತಾಕುವ, ಡಿಸ್ಟ್ರರ್ಬ ಮಾಡುವ ನಮ್ಮನ್ನು ತಲ್ಲಣಗೊಳಿಸುವ ಶಕ್ತಿ ಯಿರುತ್ತದೆ ಹಾಗಾಗಿ ಅದು ಮನೋರಂಜನೆಯನ್ನು ಕೊಡುವಲ್ಲಿ ಸೋಲುತ್ತದೆ. ಇದನ್ನು ನೋಡಿದರೆ, ಸಂಭ್ರಮಿಸುವವರಿಗೆ ದುಃಖದ ನೆಲೆಯ ಬರಹಗಾರರು ಕ್ಲೀಷೆಯಾಗಿ ಕಾಣುತ್ತಾರೆ.

ಪ್ರಜಾವಾಣಿ ಕಥಾ ಸ್ಪರ್ಧೆಯ ತೀರ್ಪುಗಾರರಾದ ಹಿರಿಯ ವಿಮರ್ಶಕರಾದ ಸಿ.ಎನ್.ಆರ್ ಅವರು ಇಂದಿನ ಕಥೆಗಳು ಗ್ರಾಮೀಣ ಪ್ರದೇಶದ ಸುತ್ತಲೇ ಗಿರಿಕಿ ಹೊಡೆಯುತ್ತಿವೆ, ಬದಲಾಗಿ ಕಾರ್ಪೋರೇಟ್ ಜಗತ್ತಿನ ನೋವು ನಲಿವನ್ನು ಹೇಳುವ ಕಥೆಗಳು ಬರಬೇಕಾಗಿದೆ ಎಂದಿದ್ದರು. ವಿಮರ್ಶಕರಾಗಿ ಅವರು ಹೊಸ ಅನುಭವಲೋಕವು ಕಥನ ಸಾಹಿತ್ಯಕ್ಕೆ ಬರಬೇಕು ಎನ್ನುವಲ್ಲಿ ಕಾಳಜಿ ಇದೆ, ಆದರೆ ಆ ಹೊಸ ಅನುಭವದ ಆಧ್ಯತೆ ಯಾವುದು ? ಎಂದು ನೆನಪಿಸಿಕೊಂಡರೆ ಭಯವಾಗುತ್ತದೆ.
ಕಳೆದ ವರ್ಷ ಧಾರವಾಡದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ (ಬೇಂದ್ರೆ ಟ್ರಸ್ಟ್ )ಭಾಗವಹಿಸಿದಾಗ, ನನ್ನ ಇಷ್ಟದ ಕವಿಗಳಲ್ಲೊಬ್ಬರಾದ ಜೀವಯಾನದ ಮಂಜುನಾಥ ಅವರು ಮಾತನಾಡುತ್ತಾ ರಾಜತ್ವವನ್ನು ಕಳೆದುಕೊಂಡ ಮೈಸೂರಿನ ರಾಜವಂಶದ ರಾಜನೂ ಕೂಡ ನೋವನ್ನು ಅನುಭವಿಸುತ್ತಾನೆ’ ಕವಿಯಾದವನು ಇದನ್ನೂ ಗ್ರಹಿಸಬೇಕು ಎಂದಿದ್ದರು. ಆಗಲು ಕವಿ/ಕವಯಿತ್ರಿಯೊಬ್ಬರು ಉಳ್ಳವರ ನೋವನ್ನೂ ಮಾನವೀಯ ನೆಲೆಯಿಂದ ನೋಡುವ ಬಗೆಯೊಂದು ಈ ಮಾತಿನಲ್ಲಿ ಇದ್ದಂತಿತ್ತು. ಆಗ ಕವಿ/ಕವಯಿತ್ರಿ ಯಾರ ನೋವಿಗೆ ಆದ್ಯತೆ ಕೊಡಬೇಕು ಎನ್ನುವ ಪ್ರಶ್ನೆ ನನ್ನ ಎದುರು ನಿಂತಾಗಲೂ ನನಗೆ ಭಯವಾಗಿತ್ತು.
ಧಾ.ಸಾ.ಸಂ ದಲ್ಲಿ ಕಾರ್ಫೊರೇಟ್ ಜಗತ್ತು ಮತ್ತು ಕನ್ನಡ ಸಾಹಿತ್ಯ ಎಂಬ ಗೋಷ್ಠಿಯನ್ನು ಆಯೋಜಿಸುವುದನ್ನು ನೋಡಿದರೆ, ಸದ್ಯ ನಾವು ಬದುಕುತ್ತಿರುವ   ಈ ಕಾಲದಲ್ಲಿ ಸಾಹಿತ್ಯದ ಚರ್ಚೆಯ ಆಧ್ಯತೆ ಯಾವುದಾಗುತ್ತಿದೆ ಎಂದು ನೆನಪಿಸಿಕೊಂಡಾಗಲೂ ಭಯವಾಗುತ್ತದೆ. ಹಾಗಾಗಿ ಮುಕ್ತವಾಗಿರುವ ಕನ್ನಡ ಸಾಹಿತ್ಯ ಪರಂಪರೆಯ ಚರ್ಚೆ ಸಂವಾದವನ್ನು ಒಂದು ಸುವರ್ಣ ಚೌಕಟ್ಟಿನೊಳಗೆ ತರುವ ಈ ಬೆಳವಣಿಗೆ ನಿಜಕ್ಕೂ ಆತಂಕಕಾರಿ. ಈ ಆತಂಕ ಧಾ.ಸಾ.ಸಂ ದ ಸಂಯೋಜಕರಿಗೂ, ಸಂಘಟಕರಿಗೂ ಅರ್ಥವಾಗಬೇಕಷ್ಟೆ.

‍ಲೇಖಕರು avadhi-sandhyarani

20 January, 2013

3 Comments

  1. Omkar

    ನೀವು ಹೇಳೋದು ನೋಡಿದ್ರೆ ಕಾರ್ಪೊರೇಟ್ ಜಗತ್ತಿನಲ್ಲಿರುವವರು ಮನುಷ್ಯರೇ ಅಲ್ಲ …ಅವರ ನೋವು ನಲಿವಿನ ಬಗ್ಗೆ ಬರೆಯೋ ಅಗತ್ಯ ಇಲ್ಲ ಅನ್ನೊ ಥರ ಇದೆ.

    • ದಿವಾಕರ ನಾ

      ಮಾನ್ಯರೆ
      ಕಾರ್ಪೋರೇಟ್ ಜಗತ್ತಿನಲ್ಲಿರುವ ವ್ಯಕ್ತಿಗಳ ವ್ಯಕ್ತಿಗತ ಸಂವೇದನೆಗಳಿಗೂ, ಕಾರ್ಪೋರೇಟ್ ಜಗತ್ತಿನ ಧೋರಣೆಗಳಿಗೂ ಇರುವ ಸೂಕ್ಷ್ಮವ್ಯತ್ಯಾಸಗಳನ್ನು ಗ್ರಹಿಸದೆ ಹೋದರೆ ಇಂತಹ ಸಮೀಕರಣಗಳು ಅನಿವಾರ್ಯವಾಗುತ್ತದೆ. ಕಾರ್ಪೋರೇಟ್ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಮಹನೀಯರು ಲಕ್ಷ ಸಂಖ್ಯೆಯಲ್ಲಿ ಇರಬಹುದು. ಆದರೆ ನವ ಉದಾರವಾದ, ಜಾಗತೀಕರಣ ಮತ್ತು ಹಣಕಾಸು ಬಂಡವಾಳದ ನಿಯಂತ್ರಣದಲ್ಲಿರುವ ಕಾರ್ಪೋರೇಟ್ ಜಗತ್ತು ಮಾನವೀಯ ಸಂವೇದನೆಗಳನ್ನು ಗೌರವಿಸುವುದಿಲ್ಲ ಎನ್ನುವುದು ಸಾರ್ವತ್ರಿಕ ಸತ್ಯ. ಇದು ಇತಿಹಾಸ ನಿರೂಪಿಸಿರುವ ಸತ್ಯವೂ ಹೌದು.
      ನಾ ದಿವಾಕರ

  2. Lingaraju bs

    ಸಾಹಿತ್ಯ ಜನರದ್ದೋ ಇಲ್ಲ ಜನಪರವಾದದ್ದೋ ಎಂಬ ಚಚರ್ೆ ನಡೆಯುತ್ತಿದ್ದಾಗ ನಾನಿನ್ನೂ ಪ್ರೌಢಶಾಲಾ ವಿದ್ಯಾಥರ್ಿ. ನಾನು ಕಾಲೇಜಿಗೆ ಬಂದಾಗ ಅದು, ಸಾಹಿತಿಯು ತನಗೆ ಬೇಕಾದಂತೆ ಬದುಕಬೇಕೆ ಇಲ್ಲಾ ತಾನು ಬರೆದಂತೆ ಬದುಕಬೇಕೋ ಎಂಬ ಹಂತಕ್ಕೆ ತಿರುಗಿತ್ತು. ತಾನು ಬರೆದಿದ್ದನ್ನು ಓದನಬೇಕೆ ಹೊರತು ನೀವು ಹೀಗೆ ಇರಬೇಕು ಎನ್ನುವಂತಿಲ್ಲ ಎಂಬ ಮಾತುಗಳು ತುಸು ಹೆಚ್ಚಾಗಿಯೇ ಕೇಳಿಬಂದಿದ್ದವು. ಆಗ ಸಾಹಿತಿಗಳೆನಿಸಿಕೊಂಡವರ ಬಣ್ಣ ಬಯಲಾಗಿತ್ತು. ಇದರಿಂದ ಆಗ ನನಗನ್ನಿಸಿದ್ದು, ಇಂದು ಬಹುತೇಕ ಕನ್ನಡ ಸಾಹಿತ್ಯ ಎಂಬುದು ಹೃದಯದಿಂದ ಮೂಡದೆ ಕೇವಲ ತಲೆಯಿಂದ ಮಾತ್ರ ಹೊರಬರುತ್ತಿದೆ ಹಾಗೂ ಉದ್ಯೋಗವಾಗುತ್ತಿದೆ ಎಂದು.
    ಹೀಗೆ ನನ್ನ ಯೋಚನೆ ಸಾಗುತ್ತಿರುವಾಗಲೇ ಸಾಹಿತ್ಯವು ಸಂತೆಯಿಂದ ದಿಡೀರನೇ ಸೌಧಕ್ಕೆ ಹೋಗಿದ್ದು ನಮಗೆಲ್ಲಾ ಗಾಬರಿ ಹುಟ್ಟಿಸಿತ್ತು. ಕೆಲ ಸಾಹಿತಿಗಳು ಮಗುವಿನ ಹಸಿವಿನ ಬಗ್ಗೆ ಬರೆದಾಗಲೆಲ್ಲಾ ಬಹುತೇಕ ಸೌಧ ಅಥವಾ ಮಂದಿರ ಸಾಹಿತಿಗಳು ಧನಿಕನೊಬ್ಬ ತೆರಿಗೆ ಕಟ್ಟುವಾಗಿನ ನೋವುಗಳನ್ನು ಬಣ್ಣಿಸತೊಡಗಿದ್ದು ಹಾಗೂ ಇದೇ ಅತ್ಯತ್ಭುತ ಸಾಹಿತ್ಯ ಎಂದು ಕೆಲ ಭಟ್ಟಂಗಿಗಳ ತುತ್ತೂರಿ, ಇದಕ್ಕೆ ನಿಜವಾಗಿಯೂ ಪ್ರತಿಷ್ಠಿತ ಸಮ್ಮಾನ್ ಪ್ರಶಸ್ತಿಗಳು ಬರಬೇಕು ಎಂದು ಕಂಡಕಂಡಲ್ಲೆಲ್ಲಾ ಹೇಳುತ್ತಾ ಹೋಗಿದ್ದು ನಡೆಯುತ್ತಿತ್ತು.
    ಆದರೆ ಇದೆಲ್ಲಾ ಒಂದು ಸೀಮಿತವಾದ ವೃತ್ತದೊಳಗೆ ಇದ್ದಿದ್ದರಿಂದ ಹೆಚ್ಚಾಗಿ ಬಯಲಿಗೆ ಬಂದಿರಲಿಲ್ಲ. ನಂತರ ಇದನ್ನು ಹೇಳಿಕೊಳ್ಳಲು ವೇದಿಕೆಗಳನ್ನು ಸೃಷ್ಟಿಸಿ ಆದೇ ಒಂದು ಆಂದೋಲನವನ್ನಾಗಿಸಲಾಯಿತು. ಆಗ ಹಸಿಉ, ನೋವು ಮಾಯವಾಗಿ ಅದರ ಜಾಗಕ್ಕೆ ಮಹಾರಾಜರ ನೋವು, ಪಿಂಚಣಿ ಕೇಳುವವರಿಗೆ ಅಂಬಾನಿಗೆ ತೆರುಗೆ ಕಟ್ಟುವಾಗ ನೋವಿನ ಆರಿವು ಇರಬೇಕೆಂಬ ಬೋಧನೆ ಮಾಡಲಾಯಿತು. ಅದೇ ಪ್ರಯತ್ನ ಧಾಸಾಸಂ ಅಲ್ಲೂ ಅಗುತ್ತಿತ್ತು. ನಿಮ್ಮ ಕಥೆ, ಕವಿತೆಗಳು ಹೀಗೇ ಇರಬೇಕು, ಹೀಗಿದ್ದರೇ ನಿಮಗೆ ಆಧಿಕಾರ, ಹಣ ಸಿಗುತ್ತದೆ ಎಂಬ ರೆಡಿಮೇಡ್ ತಯಾರಿಗಳು ಆಗುತ್ತಿದ್ದವು.
    ಆದರೆ ಈ ಮಣ್ಣಿನ ಜೀವಾಳವೇ ಪ್ರಜ್ಞಾವಂತಿಕೆ ಎಂಬುದು ಆಮದು ಮಾಡಿಕೊಂಡ ರೀವಾಜುಗಳಿಗೆ ಗೊತ್ತಾಗುವುದು ತಡವಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading