ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಧೇಂದ್ರ ಕಥಾ ವಾಚನ

ವಸುಧೇಂದ್ರ 

“ನೀನಾಸಂ” ನಲ್ಲಿ ತರಬೇತಿ ಪಡೆದಿರುವ ಹಾನಗಲ್‌ನ ಪುನೀತ್ ಲವಲವಿಕೆಯ ರಂಗನಟ. ಸದ್ಯ ಬೆಂಗಳೂರಿನಲ್ಲಿಯೇ ವಾಸ.

‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಪ್ರಬಂಧವನ್ನು ಆಧರಿಸಿ ಒಂದು ಕಥಾವಾಚನಾಭಿನಯವನ್ನು ಸಿದ್ಧಪಡಿಸಿಕೊಂಡಿದ್ದಾನೆ‌. ನಿಮ್ಮ ಮನೆಯ ಪಡಸಾಲೆಗೆ ಈ ನಾಟಕವನ್ನು ತರುವ ಯೋಜನೆ ಹಾಕಿಕೊಂಡಿದ್ದಾನೆ‌.

ನಾಟಕವನ್ನು ನಿಮ್ಮ ಮನೆಯವರು, ಸ್ನೇಹಿತರು, ಬಂಧು ಬಳಗದವರೆಲ್ಲಾ ಸೇರಿ ವೀಕ್ಷಿಸಬೇಕೆನ್ನುವುದು ಅವನ ಬಯಕೆ. ಅದಕ್ಕಾಗಿ ನೀವು ದೊಡ್ಡ ಮೊತ್ತವನ್ನೂ ಕೊಡಬೇಕಾಗಿಲ್ಲ. ನಾಟಕ ತಲುಪಿಸುವುದು ಅವನ ಉದ್ದೇಶವೇ ಹೊರತು ಹಣ ಗಳಿಕೆಯಲ್ಲ.

ಅದರ ಮೊದಲ ಪ್ರದರ್ಶನವನ್ನು ನಮ್ಮ ಮನೆಯಲ್ಲಿಯೇ ಹಮ್ಮಿಕೊಂಡಿದ್ದ. ಗೆಳೆಯರೆಲ್ಲಾ ನೋಡಿ ಸಂತೋಷ ಪಟ್ಟರು. ನೀವೆಲ್ಲರೂ ಆ ಸಂತೋಷವನ್ನು ನಿಮ್ಮದಾಗಿಸಿಕೊಂಡು, ಈ ಎಳೆಯ ರಂಗಕರ್ಮಿಯನ್ನು ಪ್ರೋತ್ಸಾಹಿಸಬೇಕಾಗಿ ನನ್ನ ಕೋರಿಕೆ. ಅವನಿಗೆ ಕರೆ ಮಾಡಿದರೆ ಉಳಿದ ವಿವರ ತಿಳಿಸುತ್ತಾನೆ.

‍ಲೇಖಕರು avadhi

6 April, 2019

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading