ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೋಕದ ಸಂತೆ ಅತಿಯಾಯಿತಯ್ಯಾ…

ಲೋಕದ ಸಂತೆ ಅತಿಯಾಯಿತಯ್ಯಾ

The world is too much with us – William Wordsworth
ಅನುವಾದ : ಚಿಂತಾಮಣಿ ಕೊಡ್ಲೆಕೆರೆ

*

ಲೋಕದ ಸಂತೆ ಅತಿಯಾಯಿತಯ್ಯಾ; ಆಗಲೂ ಈಗಲೂ
ಕೂಡುವುದು, ಕಳೆಯುವುದರಲ್ಲೆ ಜನುಮ ದಂಡ!
ನಮ್ಮದೆನಿಸುತ್ತಿಲ್ಲ ಈ ನಿಸರ್ಗದ ಅಂದ
ಬಯಬಯಸಿ ಗಳಿಸಿದ್ದು ಕೆಟ್ಟವರವೊಂದ!

ಉಕ್ಕಿತ್ತು ಕಡಲಿನೆದೆ ಚಂದ್ರನೆದುರು
ಅಬ್ಬರಿಸಿ ಬೀಸಿತ್ತು ಗಾಳಿ ಭೋರ್ಗರೆದು
ಈಗಲೋ – ಮುದುಡಿರುವ ಹೂಗಳಂತಿಹುದು
ಅಪಶ್ರುತಿಯ ಬಾಳು ನಮ್ಮದಾಗಿಹುದು

ದೇವರೇ, ಯಾವುದೂ ನಮ್ಮ ಅಲುಗಾಡಿಸದು
ಇದಕ್ಕಿಂತ ಪೇಗನ್ ಆಗಿಬಿಡಬಹುದು!
ಹಸಿರು ಬಣಿವೆಯ ಮೇಲೆ ನಿಂತು ನಾನು
ನನ್ನ ದುರ್ಗತಿ ದುಗುಡ ಕಳೆದುಕೊಂಡೇನು!

ಕಡಲಿಂದ ಪ್ರೊಟಿಯಸ್ ಬರಬಹುದು ಎದ್ದು
ಕೇಳೀತು ಟ್ರೈಟನ್ ಸುರುಳಿ ಶಂಖದ ಸದ್ದು!

‍ಲೇಖಕರು avadhi

10 March, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading