ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಮತ್ತೆ ಬರೆದ ನೀಲು ಕವಿತೆಗಳು

ಜೋಗಿ 

ಟೀಕೆ-ಟಿಪ್ಪಣಿ
ಅಪ್ಪ ಕಲಿಸಿದ್ದು
ಮೇಷ್ಟರು ಹೇಳಿಕೊಟ್ಟದ್ದು
ಗೆಳತಿ ವಂಚಿಸಿ ಅರಿವಾಗಿಸಿದ್ದನ್ನೆಲ್ಲ
ನೀವು
ಟೀಕೆ ಟಿಪ್ಪಣಿಯ ಮೂಲಕ
ತಾಕಿಸಿದಿರಿ,
ಅಪ್ಪ ಕಾಲವಾದರು, ಮೇಷ್ಟರು ಮರೆತುಹೋದರು.
ಹೊಸ ಗೆಳತಿಗೆ ನಾನೇ ವಂಚಿಸತೊಡಗಿದೆ.
ಈಗ ಟೀಕೆಯಿಲ್ಲ
ಬರೀ ಟಿಪ್ಪಣಿ.

ಪಿ.
ನೀವು ಪಾಳೇಗಾರರ
ಹಾಗೆ ವರ್ತಿಸದೇ ಹೋಗಿದ್ದರೆ
ನಿಮ್ಮ ಇನಿಷಿಯಲ್ಲಿಗೆ
ಅರ್ಥವೇ ಇರುತ್ತಿರಲಿಲ್ಲ.
ಈಗ ಪಾಳೇಗಾರರಿಗೆ
ತಾವಿಲ್ಲ.

ವಿರಹಿ
ನಿಮ್ಮಿಯನ್ನು ಹುಡುಕುತ್ತಾ
ಊರೂರು ಅಲೆಯಲೆ
ಎಂದು ಕೇಳಿಕೊಳ್ಳುವ ಹೊತ್ತಿಗೆ
ನಿಮ್ಮೀ ವೈರಾಗ್ಯದ
ಗುಟ್ಟು ಅವಳೇ ಎಂದು ಗೊತ್ತಾಗಿ
ವಿರಹಿಯಾದೆ.
ನಿಮ್ಮಿ ಮಾಸ್ತಿ
ಕಲ್ಲಾದಳು.
 

ಜಾಣೆ
ಕಸೂತಿಯ
ನಡುವೆ ಹಾಡೊಂದು ಉಕ್ಕಿದರೆ
ಸುಮ್ಮನೆ ಹಾಡಿಬಿಡು
ಅಂದಿದ್ದೇ ತಡ
ನಮ್ಮ ಕನಸಿನಲ್ಲಿ ಬರುತ್ತಿದ್ದವರ ಕೈಯಲ್ಲಿ
ಸೂಜಿ ಮತ್ತು ದಾರ.
ಅವರನ್ನು ಜಾಣೆಯರನ್ನಾಗಿ ಮಾಡಿ
ನಮ್ಮನ್ನೇಕೆ ದಡ್ಡರನ್ನಾಗಿಸಲಿಲ್ಲ?
ಅವರ ವರಸೆಗಳನ್ನು ನಾವು
ನಿರ್ಲಕ್ಷಿಸಿ ಸುಖವಾಗಿರುತ್ತಿದ್ದೆವು.

ಮುಷ್ಟಿ
ನೀವು
ಮುಷ್ಟಿಹಿಡಿದು ಸೇದುತ್ತಿದ್ದ
ಸಿಗರೇಟಿನಂತೆ
ಕಾವ್ಯ ಉರಿಯತೊಡಗಿತ್ತು.
ನಾವು ಹೊಗೆಯನ್ನಷ್ಟೇ
ನೋಡುತ್ತಾ ಆವಿಯಾದೆವು.
ಆ ಮುಷ್ಟಿಯೊಳಗೆ ಇದ್ದದ್ದು
ಗರ್ವ ಎಂದು
ಗುಮಾನಿ.

‍ಲೇಖಕರು avadhi

1 April, 2013

9 Comments

  1. Anjali Ramanna

    iShTa aayitu Jogi sir! 🙂

  2. chalam

    ನೀಲುವನ್ನು ಮತ್ತೆ ನೆನಪಿಸುವ ಸಾಲುಗಳು..

  3. narayan raichur

    thumbaa chennagive – ” pi” “Musti” neelu-ge pratspardhi yennuvaste sashaktavaagive – innastu
    haridu barali !!
    -“neelu nenapina saalu jotege jogi kamaalu,
    hodisidante kavige bechchaneya shalu ”
    narayana raichur

  4. sathish babu

    ನೀವು ಪಾಳೇಗಾರರ
    ಹಾಗೆ ವರ್ತಿಸದೇ ಹೋಗಿದ್ದರೆ
    ನಿಮ್ಮ ಇನಿಷಿಯಲ್ಲಿಗೆ
    ಅರ್ಥವೇ ಇರುತ್ತಿರಲಿಲ್ಲ.
    ಈಗ ಪಾಳೇಗಾರರಿಗೆ
    ತಾವಿಲ್ಲ
    -SUPER..SIR.

  5. GURURAJ KATHRIGUPPE

    GOOD, ‘flavour and smell’ of neelu poems is there in these poems. why dont you try to write neelu ‘thunta padyagalu’. because Lankesh was fan of H S BILIGIRI, we can see the little influence of Biligiri poems,in ‘neelu padyagalu’ any how thanks, keep on writing poems.

  6. prathibha nandakumar

    sakhattaagide jogi

  7. Aravind

    Jogi, Nice ones. You almost relived Neelu in these lines. Hoping for more such surprises.

  8. mohan habbu

    LankEsharannu nenapisuva gatti sAlugaLu. ishtavAdavu.

  9. shammi

    hmm…matte nIlu bandaLaa?? innaShTu pakkaa nIlu tarada kavite barali..salpa tuntatana irali!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading