ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ರ೦ಗಾಯಣವನ್ನು…’ – ರಾಮಚ೦ದ್ರದೇವ ಬರೆಯುತ್ತಾರೆ

– ರಾಮಚ೦ದ್ರ ದೇವ ಸ್ನೇಹಿತರೊಬ್ಬರು ರಂಗಾಯಣದ ಕೆಲವರನ್ನು ಬೇರೆ ಕಡೆಗೆ ವರ್ಗ ಮಾಡಿರುವುದರ ಬಗ್ಗೆ ಲೇಖನ ಬರೆದು ನಮ್ಮ ಗಮನ ಸೆಳೆದಿದ್ದಾರೆ. ಅದರ ಬಗ್ಗೆ ಪ್ರತಿಭಟನೆ ಸಲ್ಲಿಸಬಹುದು; ಸದ್ಯಕ್ಕೆ ಅದನ್ನು ಬದಲಾಯಿಸುವಂತೆ ಒತ್ತಡ ಹೇರಲೂ ಸಾಧ್ಯವಾಗಬಹುದು. ಆದರೆ ರಂಗಾಯಣದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಿದ್ದರೆ ಅದನ್ನೊಂದು ಥಿಯೇಟರ್ ಯುನಿವರ್ಸಿಟಿಯಾಗಿ ಬೆಳೆಸುವುದು ಹೊರತು ಬೇರೆ ಮಾರ್ಗವಿಲ್ಲ. ಥಿಯೇಟರಿಗೆ ಸಂಬಂಧಪಟ್ಟ ಎಲ್ಲಾ ಸರಕಾರಿ ಸಂಸ್ಥೆಗಳು ಒಟ್ಟುಗೂಡಿ ಅದರ ಜೊತೆ ಸೇರಿ ಕೆಲಸ ಮಾಡುವಂತೆ ಅದನ್ನು ಥಿಯೇಟರ್ ವಿಶ್ವವಿದ್ಯಾನಿಲಯವಾಗಿ ರೂಪಿಸಿ ಬೆಳೆಸಬೇಕು. ಯುನಿವರ್ಸಿಟಿ ಆದ ಕೂಡಲೇ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂದಲ್ಲ. ಬೇರೆ ಯುನಿವರ್ಸಿಟಿಗಳಲ್ಲಿರುವ ಸಮಸ್ಯೆಗಳು ನನಗೆ ಗೊತ್ತಿವೆ. ಆದರೆ ಯುನಿವರ್ಸಿಟಿ ಆದೊಡನೆ ನಾವು ಸಮಸ್ಯೆಗಳ ಪರಿಹಾರಕ್ಕಾಗಿ ಥಿಯೇಟರಿಗೆ ಸಂಬಂಧಪಟ್ಟವರೊಡನೆ ವ್ಯವಹರಿಸಬಹುದು. ಕೊನೆಯ ಪಕ್ಷ ಥಿಯೇಟರ್ ಎಂದರೆ ಏನೆಂದು ಗೊತ್ತಿರುವವರೊಡನೆ ಮಾತಾಡಬಹುದು. ಒಂದು ಸಮಾನ ವೇದಿಕೆ ಸಿಗುತ್ತದೆ. ರಂಗಾಯಣವನ್ನು ಥಿಯೇಟರ್ ಯುನಿವರ್ಸಿಟಿಯಾಗಿ ಮಾಡಿ ಎಂದು ನಾವೀಗ ಒತ್ತಾಯಿಸಬೇಕಿದೆ.]]>

‍ಲೇಖಕರು G

4 June, 2012

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. mahadev

    ರಂಗಾಯಣ ಸರಳವಾಗಿ ರಂಗ ಕಾಯಕ ಮಾಡ್ಕಂಡ ಹೋದರೆ ಸಾಕು…

  2. na.srinivas

    converting it to theatre unversity adds problems further. first they should learn basics of human interaction and leet them identify theatre in this universe- na.srinivas.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading